World Brain Tumor Day: ಬ್ರೈನ್‌ ಟ್ಯೂಮರ್​ನಿಂದ ಬಚಾವ್​ ಆಗಲು ಈ ಅಂಶಗಳ ಬಗ್ಗೆ ತಿಳಿಯಲೇಬೇಕು

ಬ್ರೈನ್‌ ಟ್ಯೂಮರ್‌ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ಅಂಶಗಳನ್ನು ಫೋರ್ಟಿಸ್‌ ಆಸ್ಪತ್ರೆ ಮೆದುಳು ಮತ್ತು ಬೆನ್ನೆಲುಬು ನ್ಯೂರೋ ಎಂಡೋವಾಸ್ಕುಲರ್‌ ಸರ್ಜರಿ ಹಿರಿಯ ಸಲಹೆಗಾರ ಡಾ. ಗಣೇಶ್‌ ವೀರಭದ್ರಯ್ಯ ವಿವರಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇತ್ತೀಚಿನ ದಿನಗಳಲ್ಲಿ ಬ್ರೈನ್‌ಟ್ರೈಮರ್‌ (Brain Tumor) ಸಾಮಾನ್ಯ ಕಾಯಿಲೆಗಳಲ್ಲಿ ಒಂದಾಗಿದೆ. ಸಾಕಷ್ಟು ಜನರಿಗೆ ಮೆದುಳು ಗಡ್ಡೆ ಬಗ್ಗೆ ಸೂಕ್ತ ರೀತಿಯ ಜಾಗೃತಿ ಇಲ್ಲದ ಕಾರಣ ಇದರ ಲಕ್ಷಣಗಳನ್ನು ನಿರ್ಲಕ್ಷಿಸಿ (Ignore) ಕೊನೆ ಹಂತದವರೆಗೂ ವೈದ್ಯರನ್ನು ಕಾಣುವುದಿಲ್ಲ. ಇದು ಸಾವಿಗೆ ಕಾರಣವಾಗಬಹುದು. ಹೀಗಾಗಿ ಬ್ರೈನ್‌ ಟ್ಯೂಮರ್‌ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಲೇ ಬೇಕು. ಬ್ರೈನ್‌ ಟ್ಯೂಮರ್‌ನಲ್ಲಿ ಸಾಕಷ್ಟು ಬಗೆಗಳಿವೆ. ಕೆಲವು ಪ್ರಾಣಕ್ಕೆ ಮಾರಕವಾದರೆ, ಇನ್ನೂ ಕೆಲವು ಚಿಕಿತ್ಸೆಯಿಂದ (Treatment) ಗುಣಪಡಿಸಬಹುದಾಗಿದೆ. ಪ್ರತಿ ಜೂನ್‌ 8 ರಂದು ವಿಶ್ವ ಆರೋಗ್ಯ ಸಂಸ್ಥೆಯು ಮೆದುಳು ಗಡ್ಡೆ ಬಗ್ಗೆ ಜಾಗೃತಿ (Awareness) ಮೂಡಿಸಲು ಈ ದಿನವನ್ನು ಸ್ಮರಿಸುತ್ತದೆ.

ಬ್ರೈನ್‌ ಟ್ಯೂಮರ್‌ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ಅಂಶಗಳನ್ನು ಫೋರ್ಟಿಸ್‌ ಆಸ್ಪತ್ರೆ ಮೆದುಳು ಮತ್ತು ಬೆನ್ನೆಲುಬು ನ್ಯೂರೋ ಎಂಡೋವಾಸ್ಕುಲರ್‌ ಸರ್ಜರಿ ಹಿರಿಯ ಸಲಹೆಗಾರ ಡಾ. ಗಣೇಶ್‌ ವೀರಭದ್ರಯ್ಯ ವಿವರಿಸಿದ್ದಾರೆ.

ಬ್ರೈನ್‌ಟ್ಯೂಮರ್‌ ಬೆಳವಣಿಗೆ ಹೇಗೆ?

ಮೆದುಳಿನ ಕೋಶಗಳು ಇದ್ದಕ್ಕಿದ್ದಂತೆ ಅಸಹಜ ಬೆಳವಣಿಗೆ ಹೊಂದಿ, ಒಂದೇ ಕಡೆ ಶೇಖರಣೆಯಾಗಿ ಮೆದುಳಿನ ಕಾರ್ಯಕ್ಷಮತೆಯನ್ನು ಮತ್ತು ನರಮಂಡಲ ವ್ಯವಸ್ಥೆಯ ಪ್ರತಿ ದಿನದ ಕಾರ್ಯಾಚರಣೆ ಕುಂಠಿತಗೊಳಿಸುತ್ತದೆ. ಇದೊಂದು ಗಡ್ಡೆಯ ರೂಪದಲ್ಲಿ ಉಂಟಾಗಿ ಮೆನಿಂಗ್ಸ್, ಕ್ರೇನಿಯಲ್ ನರ ಮಂಡಲ, ಪಿಟ್ಯುಟರಿ ಗ್ರಂಥಿ ಅಥವಾ ಪೀನಿಯಲ್ ಗ್ರಂಥಿಗಳನ್ನು ಒಳಗೊಂಡು ಮನುಷ್ಯನ ಆರೋಗ್ಯದ ಮೇಲೆ ತೀರಾ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ.

ಸಂಶೋಧಕರು ಇದನ್ನು ಯಾವ ರೀತಿ ಉಂಟಾಗುತ್ತದೆ ಎಂಬ ಅಧ್ಯಯನ ಕೈಗೊಂಡ ನಂತರ ಅವರು ಬಹಿರಂಗ ಪಡಿಸಿದ ಒಂದು ಅಚ್ಚರಿಯ ವಿಷಯ ಎಂದರೆ ಮೆದುಳಿನ ಸಾಮಾನ್ಯ ಕೋಶಗಳಲ್ಲಿ ಡಿಎನ್ಎ ರೂಪಾಂತರವಾಗಿ ಈ ಪ್ರಕ್ರಿಯೆ ಉಂಟಾಗುತ್ತದೆ.

ಇದನ್ನೂ ಓದಿ: World Food Safety Day 2022: ಈ ದಿನದ ಇತಿಹಾಸ, ಮಹತ್ವ ಹಾಗೂ ಸಂದೇಶದ ಕುರಿತು ನೀವೂ ತಿಳಿದುಕೊಳ್ಳಿ

ಮೆದುಳಿನ ಟ್ಯೂಮರ್‌ನನ್ನು ಎರಡು ಬಗೆಗಳಲ್ಲಿ ವಿಂಗಡಿಸಲಾಗಿದೆ. ಮ್ಯಾಲಿಗ್ನನ್ಟ್ ಟ್ಯುಮರ್ ಮತ್ತು ಬೆನಿಗ್ನ್ ಟ್ಯೂಮರ್. ಮ್ಯಾಲಿಗ್ನನ್ಟ್ ಟ್ಯುಮರ್ ಕ್ಯಾನ್ಸರ್ ಕಾರಕವಾಗಿದ್ದು ಜೀವಕ್ಕೆ ಹಾನಿ ಉಂಟು ಮಾಡುತ್ತದೆ. ಬೆನಿಗ್ನ್ ಟ್ಯೂಮರ್ ಕೂಡ ಜೀವಕ್ಕೆ ಮಾರಕ ಎಂದು ಪರಿಗಣಿಸಲಾಗಿದೆ. ಎರಡು ಪ್ರಕರಣಗಳಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆ ತೆಗೆದುಕೊಳ್ಳದೆ ಹೋದರೆ ರೋಗ ಲಕ್ಷಣಗಳು ವಿಪರೀತಗೊಳ್ಳುತ್ತವೆ.

ಬ್ರೈನ್‌ಟ್ಯೂಮರ್‌ನ ಲಕ್ಷಣವೇನು?

ಮೆದುಳುಗಡ್ಡೆಯ ರೋಗಲಕ್ಷಣಗಳು ಅದರ ಬೆಳವಣಿಗೆ ಹಾಗೂ ಸ್ಥಳದ ಮೇಳೆ ಲಕ್ಷಣಗಳು ಗೋಚರಿಸುತ್ತವೆ. ಅದರಲ್ಲಿ ಸಾಮಾನ್ಯ ಲಕ್ಷಣಗಳೆಂದರೆ

• ದೀರ್ಘಕಾಲದ ತೀವ್ರ ತಲೆನೋವು
• ಅಸಾಧ್ಯ ವಾಕರಿಕೆ ಅಥವಾ ವಾಂತಿ
• ಮಸುಕು ಅಥವಾ ದೃಷ್ಟಿ ಕಳೆದುಕೊಳ್ಳುವುದು
• ತೋಳು ಅಥವಾ ಕಾಲಿ ಜೀವಸತ್ವ ಕಳೆದುಕೊಳ್ಳುವುದು
• ಮಾತನಾಡುವಾಗ ತೊದಲುವುದು
• ಹಲವು ರೋಗಗಳು ಬರುವ ಸಾಧ್ಯತೆ

ಮೆದುಳು ಗಡ್ಡೆಗೆ ಕಾರಣಗಳಿವು

• ಮೆದುಳು ಕ್ಯಾನ್ಸರ್‌ನ ಕುಟುಂಬದ ಇತಿಹಾಸ
• ದೀರ್ಘಕಾಲದ ಧೂಮಪಾನ
• ಕೀಟನಾಶಕಗಳು, ಸಸ್ಯನಾಶಕಗಳು ಮತ್ತು ರಸಗೊಬ್ಬರಗಳ ಬಳಕೆ ಮಾಡುವಾಗ ತೆಗೆದುಕೊಳ್ಳದ ಮುನ್ನೆಚ್ಚರಿಕೆಗಳು
• ಸೀಸ, ಪ್ಲಾಸ್ಟಿಕ್, ರಬ್ಬರ್, ಪೆಟ್ರೋಲಿಯಂ ಮತ್ತು ಕೆಲವು ಬಟ್ಟೆಗಳಂತಹ ಕ್ಯಾನ್ಸರ್-ಉಂಟುಮಾಡುವ ಪದಾರ್ಥಗಳೊಂದಿಗೆ ಕೆಲಸ ಮಾಡುವುದು
• ಮಾನೋನ್ಯೂಕ್ಲಿಯೊಸಿಸ್ ಅಥವಾ ಎಪ್ಸ್ಟೀನ್-ಬಾರ್ ವೈರಸ್ ಸೋಂಕನ್ನು ಹೊಂದಿರುವುದು

ಮೆದುಳಿಗೆ ವರ್ಗಾವಣೆಯಾಗುವ ಬ್ರೈನ್‌ಟ್ಯೂಮರ್‌ ಬಗ್ಗೆ ಎಚ್ಚರವಿರಲಿ

ಕೆಲವು ಕ್ಯಾನ್ಸರ್‌ಗಳು ದೇಹದ ಇನ್ನೊಂದು ಭಾಗದಲ್ಲಿ ಪ್ರಾರಂಭವಾಗಿ, ಕ್ರಮೇಣ ಅದರ ಬೆಳವಣಿಗೆ ಮೆದುಳಿಗೆ ವರ್ಗಾವಣೆಯಾಗಬಹುದು. ಇದನ್ನು ದ್ವಿತೀಯಾ ಮೆದುಳಿನ ಗಡ್ಡೆ ಎಂದು ಕರೆಯಲಾಗುವುದು. ಸ್ತನ, ಮೂತ್ರಪಿಂಡ, ಶ್ವಾಸಕೋಶ ಹಾಗೂ ಇತರೆ ಕ್ಯಾನ್ಸರ್‌ಗಳು ಮೆದುಳಿಗೆ ಚೆಲಿಸಬಹುದು. ಈ ಬಗ್ಗೆ ಆಗಾಗ್ಗೇ ಪರೀಕ್ಷೆಗೆ ಒಳಗಾಗುವುದು ಉತ್ತಮ.

ಇದನ್ನೂ ಓದಿ:  Health Care: ದೇಹಕ್ಕೆ ಬಿ 12 ಏಕೆ ಬೇಕು? ಇದರ ಕೊರತೆ ಯಾವ ತೊಂದರೆ ಉಂಟು ಮಾಡುತ್ತದೆ?

ಮೆದುಳಿನ ಗೆಡ್ಡೆಯನ್ನು ಪತ್ತೆ ಹಚ್ಚುವ ವಿಧಾನ

• CT ಸ್ಕ್ಯಾನ್ - ಮೆದುಳು ಪರೀಕ್ಷಿಸಲು
• MRI ಸ್ಕ್ಯಾನ್ - ನಿಖರವಾದ ಸ್ಥಳ ಮತ್ತು ಹರಡುವಿಕೆಯನ್ನು ತಿಳಿಯಲು
• MR ಸ್ಪೆಕ್ಟ್ರೋಸ್ಕೋಪಿ - ಅದರ ಸ್ವಭಾವವನ್ನು ಅರ್ಥಮಾಡಿಕೊಳ್ಳಲು
• ಪಿಇಟಿ ಸ್ಕ್ಯಾನ್ - ಸೆಕೆಂಡರಿಗಳನ್ನು ತಿಳಿಯಲು
• ಆಂಜಿಯೋಗ್ರಾಮ್ - ಮೆದುಳಿನ ನಾಳಗಳನ್ನು ನೋಡಲು
• ಬಯಾಪ್ಸಿ

ಬ್ರೈನ್‌ಟ್ಯೂಮರ್‌ನ ಚಿಕಿತ್ಸೆಗಳಿವು

• ವಿಕಿರಣ ಚಿಕಿತ್ಸೆ- ಈ ಚಿಕಿತ್ಸೆಯು ಗೆಡ್ಡೆಯ ಕೋಶಗಳನ್ನು ತೊಡೆದುಹಾಕಲು ಕ್ಷ-ಕಿರಣಗಳು ಅಥವಾ ಇತರ ಕಣಗಳನ್ನು ಬಳಸುತ್ತದೆ.
• ಕೀಮೋಥೆರಪಿ- ಇದು ಗೆಡ್ಡೆಯ ಕೋಶಗಳನ್ನು ಬೆಳೆಯುವುದರಿಂದ, ವಿಭಜಿಸುವುದರಿಂದ ಮತ್ತು ಹೊಸದನ್ನು ಉತ್ಪಾದಿಸುವುದನ್ನು ತಡೆಯುವ ಮೂಲಕ ಅವುಗಳನ್ನು ನಾಶಮಾಡಲು ಸಹಾಯಕವಾಗಿದೆ.
• ರೇಡಿಯೊಫ್ರೀಕ್ವೆನ್ಸಿ ಟ್ಯೂಮರ್ ಟ್ರೀಟಿಂಗ್ ಫೀಲ್ಡ್ಸ್ (ಟಿಟಿಎಫ್)- ಸೌಮ್ಯವಾದ ವಿದ್ಯುತ್ ವಿಕಿರಣಗಳನ್ನು ಕಳುಹಿಸಿ ಕ್ಯಾನ್ಸರ್ ಕೋಶಗಳ ಬೆಳವಣಿಗೆ ಮತ್ತು ವಿಭಜಿಸುವ ಸಾಮರ್ಥ್ಯವನ್ನು ಅಡ್ಡಿಪಡಿಸುತ್ತದೆ.
• ಕ್ಯಾವಿಟ್ರಾನ್ ಅಲ್ಟ್ರಾಸಾನಿಕ್ ಸರ್ಜಿಕಲ್ ಆಕಾಂಕ್ಷೆ
• ನ್ಯೂರೋನಾವಿಗೇಶನ್, ನ್ಯಾವಿಗೇಟ್ ಟ್ಯೂಮರ್‌ನಲ್ಲಿ ಜಿಪಿಆರ್‌ಎಸ್‌ನಂತೆಯೇ
• ಅವೇಕ್ ಕ್ರಾನಿಯೊಟೊಮಿ (ಗೆಡ್ಡೆಯನ್ನು ನಿಖರವಾಗಿ ಛೇದಿಸಲು)
• ಇಂಟರ್ವೆನ್ಷನಲ್ MRI (ನೈಜ-ಸಮಯದ ಶಸ್ತ್ರಚಿಕಿತ್ಸೆ)
• ನ್ಯೂರೋಎಂಡೋಸ್ಕೋಪಿ
• ಶಸ್ತ್ರಚಿಕಿತ್ಸೆಗೆ ಮುನ್ನ ಎಂಬೋಲೈಸೇಶನ್ (ರಕ್ತಸ್ರಾವವನ್ನು ಕಡಿಮೆ ಮಾಡಲು ಎಂಡೋವಾಸ್ಕುಲರ್)
• ಸ್ಟೆರೊಟ್ಯಾಕ್ಸಿ
Published by:Pavana HS
First published: