World Blood Donor Day 2022: ರಕ್ತದಾನ ಮಹಾದಾನ, ಬ್ಲಡ್​ ಡೊನೇಟ್​ ಮಾಡೋದಿಂದ್ರ ಎಷ್ಟೆಲ್ಲಾ ಲಾಭ ಇದೆ ನೋಡಿ

World Blood Donor Day 2022: ರಕ್ತದಾನ ಮಾಡುವುದರಿಂದ ನಿಮ್ಮ ದೇಹದಲ್ಲಿನ ಕಬ್ಬಿಣದ ಪ್ರಮಾಣವನ್ನು ಕಡಿಮೆ ಮಾಡಬಹುದು. ಇದರಿಂದ ಹೃದ್ರೋಗದ ಅಪಾಯವನ್ನು ತಡೆಯಬಹುದು. ದಿನದಿಂದ ದಿನಕ್ಕೆ ಹೆಚ್ಚುವರಿ ಕಬ್ಬಿಣ ಕಬ್ಬಿಣದ ಸೇವನೆಯು ಕೆಲವರಿಗೆ ಒಳ್ಳೆಯದಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರತಿ ವರ್ಷ ಜೂನ್‌ 14 ರಂದು ವಿಶ್ವ ರಕ್ತದಾನಿಗಳ ದಿನವನ್ನಾಗಿ (World Blood Donor Day 2022 ) ಆಚರಿಸುತ್ತಾ ಬರಲಾಗಿದೆ. 2005ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯುವ (World Health Organization) ಪ್ರತಿ ವರ್ಷ ಈ ದಿನವನ್ನು ರಕ್ತದಾನದ ಕುರಿತು ವಿಶ್ವ ಜಾಗತಿಕ ಕಾರ್ಯಕ್ರಮವನ್ನಾಗಿ ಘೋಷಿಸಿತು. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ರಕ್ತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾ ಬರಲಾಗಿದೆ. ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ ಎಂದು ಹೇಳಲಾಗುತ್ತದೆ. ಆದರೂ ಸಹ ಇಂದು ಸಾಕಷ್ಟು ಕಡೆ ರಕ್ತದ (Blood) ಅಭಾವ ಕಾಡುತ್ತಿದೆ. ರಕ್ತದಾನ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎನ್ನುವುದನ್ನು ಜನರಿಗೆ ಅರಿವು ಮೂಡಿಸುವ ಕೆಲಸ ತಳಮಟ್ಟದಿಂದ ಆಗಬೇಕು. ರಕ್ತದಾನದಿಂದ ಆಗುವ ಪ್ರಯೋಜನದ ಬಗ್ಗೆ ಫೋರ್ಟಿಸ್‌ ಆಸ್ಪತ್ರೆಯ ಟ್ರಾನ್ಸ್‌ಫ್ಯೂಷನ್‌ ಮೆಡಿಸಿನ್‌ನ ಮುಖ್ಯಸ್ಥೆ ಡಾ. ತಪತಿ ಮಹಾಪಾತ್ರ ಅವರು ವಿವರಿಸಿದ್ದಾರೆ.

ಯಾರಿಗೆಲ್ಲಾ ರಕ್ತದ ಅವಶ್ಯಕತೆ ಇದೆ?
ಸಾಮಾನ್ಯವಾಗಿ ರಕ್ತದ ಅವಶ್ಯಕತೆ ಯಾರಿಗೆ ಬೇಕಾದರೂ ಬೀಳಬಹುದು, ಗರ್ಭಿಣಿಯರು, ಅಪೌಷ್ಠಿಕತೆಯಿಂದ ತೀವ್ರ ರಕ್ತಹೀನತೆಯಿಂದ ಬಳಲುತ್ತಿರುವವರು, ಮಕ್ಕಳು, ಅಪಘಾತಕ್ಕೆ ಸಿಲುಕಿದವರಿಗೆ, ಮೂಳೆ, ಮಜ್ಜೆ, ಮತ್ತು ಅನುವಂಶಿಕ ಹಿಮೋಗ್ಲೋಬಿನ್‌ ಅಸ್ವಸ್ಥತೆ, ರೋಗನಿರೋಧಕರ ಶಕ್ತಿ ಕಡಿಮೆ ಇರುವವರಿಗೆ, ಕ್ಯಾನ್ಸರ್‌ ರೋಗಿಗಳು ಸೇರಿದಂತೆ ಸಾಕಷ್ಟು ಚಿಕಿತ್ಸೆಗೆ ರಕ್ತದ ಅವಶ್ಯಕತೆ ಅತ್ಯಂತ ಅಗತ್ಯ. ಎಲ್ಲಾ ರಕ್ತದ ಗುಂಪಿನವರೂ ಸಹ ರಕ್ತದಾನ ಮಾಡುವ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು.

ತಿಳಿದುಕೊಳ್ಳಬೇಕಾದ ಕೆಲವು ಅಂಶಗಳು
ವಿಶ್ವದಲ್ಲಿ ಪ್ರತಿ 2 ಸೆಕೆಂಡುಗಳಿಗೊಮ್ಮೆ ರಕ್ತದ ಅವಶ್ಯಕತೆ ಕಂಡು ಬರುತ್ತಿದೆ
ಪ್ಲೇಟ್‌ಲೆಟ್‌ಗಳನ್ನ ದಾನ ಮಾಡಲು 90 ನಿಮಿಷಗಳು ಬೇಕಾಗುತ್ತದೆ,
ರಕ್ತದಾನ ಮಾಡಲು 10-15 ನಿಮಿಷಗಳು ತೆಗೆದುಕೊಳ್ಳಲಿದೆ.
ರಕ್ತದಾನ ಮಾಡುವುದರಿಂದ ಕಾಯಿಲೆ ಅಥವಾ ಸೋಂಕು ಬರುವುದು ಕಡಿಮೆ
ರಕ್ತದಾನ ಮಾಡಿದ ಬಳಿಕ ರಕ್ತ ಕೂಡಲು ಹಾಗೂ ಮತ್ತೊಮ್ಮೆ ರಕ್ತದಾನ ಮಾಡಲು 90 ದಿನಗಳು ಬೇಕಾಗುತ್ತದೆ
ಪ್ರತಿ ವರ್ಷ 1 ಮಿಲಿಯನ್ ಜನರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ.
ಪ್ರತಿದಿನ 38 ಸಾವಿರ ರಕ್ತದಾನಿಗಳ ಅವಶ್ಯಕತೆ ಇದೆ.
ವಿಶ್ವದಲ್ಲಿ ಇರುವ ಜನಸಂಖ್ಯೆಯ ಪೈಕಿ ಕೇವಲ ಶೇ.2 ರಷ್ಟು ಜನ ಮಾತ್ರ ರಕ್ತದಾನ ಮಾಡುತ್ತಿದ್ದಾರೆ.

ಇದನ್ನೂ ಓದಿ: ಲೈಂಗಿಕ ನಿರಾಸಕ್ತಿಗೆ ಶುಂಠಿ ರಾಮಬಾಣವಂತೆ, ಇದು ಉತ್ಸಾಹವನ್ನು ಹೆಚ್ಚಿಸುತ್ತೆ

ರಕ್ತದಾನದ ಅಭಿಯಾನದ ಅವಶ್ಯಕತೆ
ಇಂದು ಸಾಕಷ್ಟು ಜನರಲ್ಲಿ ರಕ್ತದಾನದ ಬಗ್ಗೆ ಅರಿವಿದೆ. ಬ್ಲಡ್‌ಬ್ಯಾಂಕ್‌ ಸೇರಿದಂತೆ ಹಲವು ಕಡೆ ಆಗಾಗ್ಗೇ ರಕ್ತದಾನದ ಶಿಬಿರಗಳನ್ನು ನಡೆಸುತ್ತಾ ಬರಲಾಗಿದೆ. ಆದರೂ ಸಹ ಇಂದು ದೇಶದಲ್ಲಿ ರಕ್ತದ ಕೊರತೆ ಕಾಡುತ್ತಿದೆ. ಅದರಲ್ಲೂ ನೆಗೆಟಿವ್ ಬ್ಲಡ್‌ ಗ್ರೂಪ್‌ನ ರಕ್ತದ ಕೊರತೆ ಹೆಚ್ಚಾಗಿದೆ. ಅಪರೂಪದ ಬ್ಲಡ್‌ಗ್ರೂಪ್‌ ಇರುವವರು ಅವಶ್ಯಕವಾಗಿ ರಕ್ತದಾನ ಮಾಡಬೇಕು. ಏಕೆಂದರೆ, ಈ ಅಪರೂಪದ ರಕ್ತದ ಗುಂಪು ಹೊಂದಿರುವವರಿಗೆ ಬೇರಾವುದೇ ರಕ್ತ ಹೊಂದಿಕೆಯಾಗುವುದಿಲ್ಲ. ಅವರ ಜೀವ ಉಳಿಸಲು ಅಪರೂಪದ ರಕ್ತದಗುಂಪು ಹೊಂದಿರುವವರು ರಕ್ತದಾನ ಮಾಡುವ ಹವ್ಯಾಸವಿಟ್ಟುಕೊಂಡರೆ ಒಳಿತು.

ರಕ್ತದಾನದ ಪ್ರಯೋಜನವೇನು?
ರಕ್ತದಾನ ಮಾಡುವುದರಿಂದ ನೀವು ಮತ್ತೊಬ್ಬರ ಜೀವ ಉಳಿಸುವ ಜೊತೆಗೆ, ನಿಮಗೆ ಭವಿಷ್ಯದಲ್ಲಿ ಬರಬಹುದಾದ ಕಾಯಿಲೆಯನ್ನು ತಪ್ಪಿಸಲು ನೆರವಾಗುತ್ತದೆ. ರಕ್ತದಾನ ಮಾಡಿದ ನಂತರ, ನಿಮ್ಮ ರಕ್ತವನ್ನು ಕೆಂಪು ರಕ್ತ ಕಣಗಳು, ಪ್ಲೇಟ್ಲೆಟ್ಗಳು ಮತ್ತು ಪ್ಲಾಸ್ಮಾಗಳಾಗಿ ವಿಂಗಡಿಸಲಾಗಿದೆ. ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಯಾರಿಗಾದರೂ ರಕ್ತ ವರ್ಗಾವಣೆ ಅಥವಾ ಪೂರಕಗಳು ಬೇಕಾಗಬಹುದು. ಆದ್ದರಿಂದ ಆ ಸಮಯದಲ್ಲಿ ನಿಮ್ಮ ರಕ್ತವನ್ನು ಅವರಿಗಾಗಿ ಬಳಸಬಹುದು. ನಿಮ್ಮ ಸಮಯ ಮತ್ತು ರಕ್ತವನ್ನು ಅಗತ್ಯವಿರುವವರಿಗೆ ದಾನ ಮಾಡುತ್ತಿದ್ದೀರಿ ಎಂದು ನಿಮಗೆ ತಿಳಿದಾಗ ಅದು ಶಾಂತಿಯನ್ನು ನೀಡುತ್ತದೆ.

ರಕ್ತದಾನ ಮಾಡುವುದರಿಂದ ನಿಮ್ಮ ದೇಹದಲ್ಲಿನ ಕಬ್ಬಿಣದ ಪ್ರಮಾಣವನ್ನು ಕಡಿಮೆ ಮಾಡಬಹುದು. ಇದರಿಂದ ಹೃದ್ರೋಗದ ಅಪಾಯವನ್ನು ತಡೆಯಬಹುದು. ದಿನದಿಂದ ದಿನಕ್ಕೆ ಹೆಚ್ಚುವರಿ ಕಬ್ಬಿಣ ಕಬ್ಬಿಣದ ಸೇವನೆಯು ಕೆಲವರಿಗೆ ಒಳ್ಳೆಯದಲ್ಲ.

ಇದನ್ನೂ ಓದಿ: ನೀವು ತುಂಬಾ ಬ್ಯುಸಿನಾ? ಐದೇ ನಿಮಿಷಗಳಲ್ಲಿ ರೆಡಿ ಮಾಡಿ ಈ ಟೇಸ್ಟಿ ಫುಡ್

ರಕ್ತದಾನ ಮಾಡುವ ಮೂಲಕ, ನೀವು ನಿಮ್ಮ ಕಬ್ಬಿಣದ ಮಟ್ಟವನ್ನು ಕಡಿಮೆ ಮಾಡಬಹುದು ಮತ್ತು ನಿಮ್ಮ ದೇಹದಲ್ಲಿ ಹೊಸ ರಕ್ತದ ರಚನೆಗೆ ಸಹಾಯವಾಗುತ್ತದೆ. ದೇಹದಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣವು ಯಕೃತ್ತಿನ ಮೇಲೂ ಪರಿಣಾಮ ಬೀರುತ್ತದೆ. ರಾಸ್ಮುಸ್ಸೆನ್ ವಿಶ್ವವಿದ್ಯಾನಿಲಯದ ಇತ್ತೀಚಿನ ವರದಿಯು ಮದ್ಯಪಾನವು ಪಿತ್ತಜನಕಾಂಗದ ಕಾಯಿಲೆಯ ಅಪಾಯವನ್ನು ಹೆಚ್ಚಿಸಬಹುದು ಎಂದು ಸಾಬೀತು ಮಾಡಿದೆ
Published by:Sandhya M
First published: