• Home
  • »
  • News
  • »
  • lifestyle
  • »
  • World Bicycle Day 2021: ಪ್ರತಿದಿನ ಸೈಕಲ್ ತುಳಿಯುವುದರಿಂದ ಸಿಗುವ ಲಾಭಗಳೆಷ್ಟು ಗೊತ್ತಾ?

World Bicycle Day 2021: ಪ್ರತಿದಿನ ಸೈಕಲ್ ತುಳಿಯುವುದರಿಂದ ಸಿಗುವ ಲಾಭಗಳೆಷ್ಟು ಗೊತ್ತಾ?

ಸೈಕ್ಲಿಂಗ್

ಸೈಕ್ಲಿಂಗ್

ಸೈಕ್ಲಿಂಗ್ ನಮ್ಮ ಮಾನಸಿಕ ಆರೋಗ್ಯ ವೃದ್ಧಿಸಲು ಸಹಕಾರಿಯಾಗಿದೆ. ಮಾನಸಿಕ ಒತ್ತಡ, ಖಿನ್ನತೆ ಮತ್ತು ಆತಂಕದ ಭಾವನೆಗಳನ್ನು ನಿವಾರಿಸಿ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ. ಸೈಕಲ್ ತುಳಿಯುವಾಗ ನಮ್ಮ ಮನಸು ರಸ್ತೆಯ ಕಡೆ ಕೇಂದ್ರೀಕೃತವಾಗುವುದರಿಂದ ನಮ್ಮಲ್ಲಿ ಏಕಾಗ್ರತೆ ಹೆಚ್ಚಲು ಸಹಕಾರಿಯಾಗುತ್ತದೆ.

ಮುಂದೆ ಓದಿ ...
  • Share this:

    ನವದೆಹಲಿ(ಜೂ.03): ಇಂದು ವಿಶ್ವ ಬೈಸಿಕಲ್ ದಿನ. ವಿಶ್ವಸಂಸ್ಥೆಯು ಜೂನ್​ 3ನ್ನು ಈ ಬೈಸಿಕಲ್ ದಿನವನ್ನಾಗಿ ಗೊತ್ತುಪಡಿಸಿತು. ಅಂದಿನಿಂದ ಪ್ರತೀ ವರ್ಷ ಜೂನ್ 3ನ್ನು ಜಗತ್ತಿನಾದ್ಯಂತ ಬೈಸಿಕಲ್ ದಿನವನ್ನಲಾಗಿ ಆಚರಿಸಲಾಗುತ್ತದೆ. ಎಲ್ಲಾ ವಯಸ್ಸಿನ ಜನರು ಸೈಕಲ್ ತುಳಿಯುವುದರಿಂದ ಆರೋಗ್ಯದ ಲಾಭವನ್ನು ಪಡೆದುಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ. ಈ ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಹಾಗೂ ವಿಶ್ವ ಪರಿಸರ ದಿನ(ಜೂನ್ 5) ಆಚರಣೆಯ ಮುನ್ನ ಸೈಕ್ಲಿಂಗ್​ನ ಮಹತ್ವವನ್ನು ಸಾರುವುದು ಅತೀ ಮುಖ್ಯವಾಗಿದೆ. ಸೈಕಲ್ ಒಂದು ಉತ್ತಮ ಸಾರಿಗೆಯಾಗಿದೆ ಎಂದು ಮತ್ತೊಮ್ಮೆ ಸಾಬೀತಾಗಿದೆ. ಸೈಕ್ಲಿಂಗ್​ ಕೈಗೆಟಕುವ, ಪರಿಸರ ಸ್ನೇಹಿ ಮತ್ತು ಆರೋಗ್ಯದಾಯಕ ಸಾರಿಗೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು, ವಾಕಿಂಗ್(ನಡೆಯುವುದು) ಮತ್ತು ಸೈಕ್ಲಿಂಗ್​​ ಆರೋಗ್ಯವನ್ನು ಕಾಪಾಡುತ್ತದೆ ಎಂದು ಹೇಳಿದೆ.


    ಸೈಕ್ಲಿಂಗ್​ ಆರೋಗ್ಯಕ್ಕೂ ಉತ್ತಮವಾಗಿದ್ದು, ಸೈಕಲ್ ತುಳಿಯುವುದರಿಂದ ನಾವು ಅನೇಕ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ.


    1.ತೂಕ ಕಳೆದುಕೊಳ್ಳಲು ಸಹಕಾರಿ


    ನಿಯಮಿತವಾಗಿ ಸೈಕಲ್ ತುಳಿಯುವುದರಿಂದ ನಮ್ಮ ದೇಹದ ತೂಕವನ್ನು ನಿರ್ವಹಣೆ ಮಾಡಿಕೊಳ್ಳಬಹುದು. ತೂಕ ಹೆಚ್ಚಾಗದ ರೀತಿ ಹಾಗೂ ಕಡಿಮೆಯಾಗದ ರೀತಿ ಸಮತೋಲದಲ್ಲಿರುವ ಹಾಗೆ ನೋಡಿಕೊಳ್ಳಬಹುದು. ಸ್ನಾಯುಗಳು ಬಲಗೊಳ್ಳಲು ಸಹಕಾರಿಯಾಗಿದೆ. ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಜೊತೆಗೆ ನಮ್ಮ ದೇಹದ ಕೊಬ್ಬನ್ನು ಕರಗಿಸಲು ಸೈಕ್ಲಿಂಗ್ ಉತ್ತಮ ಮಾರ್ಗವಾಗಿದೆ.


    ಇದನ್ನೂ ಓದಿ:Karnataka: KSRTC ಅಂದ್ರೆ ಇನ್ಮೇಲೆ ಕರ್ನಾಟಕ ಸಾರಿಗೆ ಅಲ್ಲ, ಕೇರಳ ಸಾರಿಗೆ


    2. ಕಾಲುಗಳಿಗೆ ಹೆಚ್ಚಿನ ಶಕ್ತಿ ಸಿಗುತ್ತದೆ


    ಸೈಕ್ಲಿಂಗ್​ ಸದೃಢ ದೇಹವನ್ನು ಹೊಂದಲು ಸಹಕರಿಸುತ್ತದೆ. ಜೊತೆಗೆ ಸೈಕಲ್ ತುಳಿಯುವುದರಿಂದ ಕಾಲುಗಳಿಗೆ ಹೆಚ್ಚಿನ ಶಕ್ತಿ ಲಭ್ಯವಾಗುತ್ತದೆ. ಅತಿಯಾದ ಒತ್ತಡವಿಲ್ಲದೆ ನಮ್ಮ ಕಾಲಿನ ಸ್ನಾಯುಗಳನ್ನು ಬಲಪಡಿಸಿಕೊಳ್ಳಬಹುದಾಗಿದೆ. ಹೀಗಾಗಿ ನಿಯಮಿತವಾಗಿ ಸೈಕ್ಲಿಂಗ್ ಅಭ್ಯಾಸವನ್ನು ರೂಢಿಸಿಕೊಳ್ಳಿ.


    3. ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ


    ಸೈಕಲ್ ತುಳಿಯುವುದರಿಂದ ಹೃದಯದ ಆರೋಗ್ಯವನ್ನು ಕಾಡಿಕೊಳ್ಳಬಹುದು. ಹೃದಯದ ರಕ್ತನಾಳಗಳ ಫಿಟ್​ನೆಸ್​ ಕಾಪಾಡಲು ಸಹಕಾರಿಯಾಗುತ್ತದೆ. ನಮ್ಮ ಹೃದಯ ಆರೋಗ್ಯವಾಗಿರಬೇಕೆಂದರೆ ಸೈಕ್ಲಿಂಗ್ ಮಾಡಿ.


    ಇದನ್ನೂ ಓದಿ:Morning Digest: ಇಂದು ಮೆಹುಲ್​ ಚೋಕ್ಸಿ ವಿಚಾರಣೆ, ಗಗನಕ್ಕೇರಿದ ಚಿನ್ನದ ಬೆಲೆ; ಪ್ರಮುಖ ಸುದ್ದಿಗಳಿವು


    4. ಲೈಂಗಿಕ ಜೀವನ ಸುಧಾರಣೆ


    ಸೈಕಲ್ ತುಳಿಯುವುದರಿಂದ ನಮ್ಮ ಲೈಂಗಿಕ ಜೀವನ ಉತ್ತಮವಾಗುತ್ತದೆ. ಸೆಕ್ಸ್​ ಜೀವನದ ಒಂದು ಭಾಗ. ಇದು ಆರೋಗ್ಯಕ್ಕೂ ಒಳ್ಳೆಯದು ಎಂಬ ವಿಷಯ ಎಷ್ಟೋ ಮಂದಿಗೆ ತಿಳಿದಿಲ್ಲ. ಸೈಕ್ಲಿಂಗ್ ಮಾಡುವುದರಿಂದ ಸೆಕ್ಸ್​​ ಜೀವನ ಸುಧಾರಿಸುತ್ತದೆ.


    5. ಉತ್ತಮ ನಿದ್ರೆಗೆ ಸಹಕಾರಿ


    ನಿದ್ರೆ ಜೀವನದ ಅತೀ ಮುಖ್ಯ ಭಾಗ. ಸರಿಯಾಗಿ ನಿದ್ದೆ ಮಾಡಿದೆ ಅನೇಕ ರೋಗಗಳಿಗೆ ಗುಡ್ ಬೈ ಹೇಳಬಹುದಾಗಿದೆ. ಸೈಕ್ಲಿಂಗ್ ಮಾಡುವುದರಿಂದ ಉತ್ತಮ ನಿದ್ರೆ ಬರುತ್ತದೆ. 40-60 ವರ್ಷದೊಳಗಿನ ಜನರಿಗೆ ಹೃದ್ರೋಗ ಸಮಸ್ಯೆಗಳು ಹೆಚ್ಚು. ನಿದ್ರಾಹೀನತೆಯಿಂದ ಹೃದಯ ಸಮಸ್ಯೆಗಳು ಹೆಚ್ಚಾಗುತ್ತವೆ ಎಂದು ತಜ್ಞರು ಹೇಳುತ್ತಾರೆ.


    6. ಕ್ಯಾನ್ಸರ್​ ರೋಗಿಗಳಿಗೆ ಸೈಕ್ಲಿಂಗ್ ಉತ್ತಮ


    ಕ್ಯಾನ್ಸರ್​ ಪೀಡಿತರಿಗೆ ಸೈಕ್ಲಿಂಗ್​ ಉತ್ತಮ ಸಾಧನವಾಗಿದೆ. ಕ್ಯಾನ್ಸರ್ ಬಂದು ಚೇತರಿಸಿಕೊಳ್ಳುತ್ತಿದ್ದರೆ ಸೈಕ್ಲಿಂಗ್​ ಮಹತ್ವದ ಆಯ್ಕೆಯಾಗಿದೆ. ಸೈಕಲ್ ತುಳಿಯುವುದರಿಂದ ನಮ್ಮ ದೇಹ ಸದೃಢವಾಗುವುದರ ಜೊತೆಗೆ ತೂಕ ಇಳಿಸಿಕೊಳ್ಳಬಹುದು. ಇದು ಸ್ತನ ಕ್ಯಾನ್ಸರ್ ಮತ್ತಿತರ ರೋಗಗಳು ಬರದಂತೆ ತಡೆಗಟ್ಟುತ್ತದೆ. ಅಪಾಯದ ಪ್ರಮಾಣವನ್ನು ತಗ್ಗಿಸುತ್ತದೆ. 2019ರ ಸಂಶೋಧನೆಯ ಪ್ರಕಾರ, ನಿಮಗೆ ಸ್ತನ ಕ್ಯಾನ್ಸರ್​ ಇದ್ದರೆ, ನಿಯಮಿತವಾಗಿ ಸೈಕಲ್ ತುಳಿಯುವುದರಿಂದ ಅಪಾಯದ ಮಟ್ಟವನ್ನು ಕಡಿಮೆ ಮಾಡಬಹುದು. ಜೀವನ ಮಟ್ಟವನ್ನು ಸುಧಾರಿಸಬಹುದು ಎಂದು ಹೇಳಿದೆ.


    7. ಮಾನಸಿಕ ಆರೋಗ್ಯ ವೃದ್ಧಿ


    ಸೈಕ್ಲಿಂಗ್ ನಮ್ಮ ಮಾನಸಿಕ ಆರೋಗ್ಯ ವೃದ್ಧಿಸಲು ಸಹಕಾರಿಯಾಗಿದೆ. ಮಾನಸಿಕ ಒತ್ತಡ, ಖಿನ್ನತೆ ಮತ್ತು ಆತಂಕದ ಭಾವನೆಗಳನ್ನು ನಿವಾರಿಸಿ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ. ಸೈಕಲ್ ತುಳಿಯುವಾಗ ನಮ್ಮ ಮನಸು ರಸ್ತೆಯ ಕಡೆ ಕೇಂದ್ರೀಕೃತವಾಗುವುದರಿಂದ ನಮ್ಮಲ್ಲಿ ಏಕಾಗ್ರತೆ ಹೆಚ್ಚಲು ಸಹಕಾರಿಯಾಗುತ್ತದೆ.


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆ. ಆದರೂ, ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

    Published by:Latha CG
    First published: