World Asthma Day 2022: ಅಸ್ತಮಾದ ಬಗ್ಗೆ ನಿರ್ಲಕ್ಷ್ಯ ಬೇಡ - ಈ ಲಕ್ಷಣಗಳು ಕಂಡರೆ ಎಚ್ಚರ

World Asthma Day 2022: ನೀವು ತೀವ್ರವಾದ ಅಸ್ತಮಾದಿಂದ ಬಳಲುತ್ತಿದ್ದರೆ ನಿಮ್ಮ ತುಟಿಗಳ ಸುತ್ತಲೂ ನೀಲಿ ಬಣ್ಣಕ್ಕೆ ತಿರುಗುತ್ತಾ ಹೋಗುತ್ತದೆ, ಇದನ್ನು "ಸೈನೋಸಿಸ್" ಎಂದು ಕರೆಯಲಾಗುತ್ತದೆ, ಇದು ನಿಮ್ಮ ರಕ್ತವು ಆಮ್ಲಜನಕ ಪೂರೈಕೆಗೆ ಹೆಚ್ಚು ಬಳಕೆಯಾಗಿ ರಕ್ತದ ಕೊರತೆ ಉಂಟಾಗುತ್ತಿದೆ ಎಂಬುದರ ಸಂಕೇತವಾಗಿರುತ್ತದೆ. ಇದು ಅತ್ಯಂತ ಅಪಾಯಕಾರಿ ಲಕ್ಷಣ, ಈ ಸಂದರ್ಭದಲ್ಲಿ ವೈದ್ಯರನ್ನು ಭೇಟಿ ಮಾಡುವುದು ಅನಿವಾರ್ಯ.

ವಿಶ್ವ ಅಸ್ತಮಾ ದಿನ

ವಿಶ್ವ ಅಸ್ತಮಾ ದಿನ

  • Share this:
ಇಂದು ವಿಶ್ವ  ಅಸ್ತಮಾ ದಿನ (World Asthma Day 2022). ಇಂದು ಬದಲಾದ ಜೀವನಶೈಲಿಯಿಂದ ಮಕ್ಕಳು, ವಯಸ್ಕರು ಹಾಗೂ ವಯಸ್ಸಾದವರಲ್ಲೂ ಅಸ್ತಮಾ ಸಾಮಾನ್ಯ ಕಾಯಿಲೆಗಳಲ್ಲಿ ಒಂದಾಗಿದೆ. ಅದರಲ್ಲೂ ಮೆಟ್ರೋಪಾಲಿಟಿಕಲ್‌ ಸಿಟಿಯಲ್ಲಿ ಬದುಕುತ್ತಿರುವ ಜನರಲ್ಲಿಯೇ ಅಸ್ತಮಾ (Asthma) ಹೆಚ್ಚಾಗಿ ಉಲ್ಭಣಗೊಳ್ಳುತ್ತಿದೆ. ಇದಕ್ಕೆ ವಾತಾವರಣದಲ್ಲಿನ ಪ್ರದೂಷಣೆ ಪ್ರಮುಖ ಕಾರಣ. ಕೋವಿಡ್‌ (Corona) ಮೊದಲ ಹಾಗೂ ಎರಡನೇ ಅಲೆಯಿಂದ ಇಡೀ ವಿಶ್ವವೇ ಲಾಕ್‌ಡೌನ್‌ನ (Lockdown) ಮೊರೆ ಹೋಗಿತ್ತು. ಈ ಸಂದರ್ಭದಲ್ಲಿ ಅಸ್ತಮಾ ನಿರೀಕ್ಷೆ ಮೀರಿ ಕಡಿಮೆ ಆಗಿತ್ತು ಎಂದು ಕೆಲ ಅಧ್ಯಯನಗಳು ತಿಳಿಸಿದ್ದವು. ಆದರೀಗ, ಇಡೀ ವಿಶ್ವವೇ ಮೊದಲಿನ ಸ್ಥಿತಿಗೆ ಮರಳುತ್ತಿದೆ. ಎಲ್ಲಾ ಕಂಪನಿಗಳು ಕಚೇರಿಗೆ ಬರಲು ಸೂಚನೆ ನೀಡಿದ್ದು, ರಸ್ತೆ ಮೇಲೆ ಸಾಕಷ್ಟು ವಾಹನಗಳು ಓಡಾಡುತ್ತಿವೆ. ಪರಿಣಾಮ ವಾತಾವರಣದಲ್ಲಿ ಧೂಳಿನ ಪ್ರಮಾಣ ಹೆಚ್ಚಳವಾಗಿದೆ. ಅದರಲ್ಲೂ ಬೇಸಿಗೆ ಕಾಲವಾದ್ದರಿಂದ ಧೂಳು, ಪ್ರದೂಷಣೆ ತೀವ್ರವಾಗಿರುತ್ತದೆ. ಇಂಥ ವಾತಾವರಣದಲ್ಲಿ ಓಡಾಡುವುದರಿಂದ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ಅಸ್ತಮ, ಶ್ವಾಸಕೋಶ ಸಮಸ್ಯೆ ಉಂಟಾಗುವುದರಲ್ಲಿ ಅನುಮಾನವಿಲ್ಲ. ಅಸ್ತಮದ ಪ್ರಮುಖ ಲಕ್ಷಣಗಳೇನು ಅದಕ್ಕೆ ಚಿಕಿತ್ಸಾ ವಿಧಾನವೇನು ಎಂಬುದನ್ನು ಫೋರ್ಟಿಸ್‌ ಆಸ್ಪತ್ರೆ ಶ್ವಾಸಕೋಶಶಾಸ್ತ್ರ ನಿರ್ದೇಶಕ ಡಾ. ವಿವೇಕ್‌ ಆನಂದ್‌ ಪಡೆಗಲ್‌ ಕೆಲ ಸಲಹೆ ನೀಡಿದ್ದಾರೆ.

ಅಸ್ತಮಾದ ಲಕ್ಷಣಗಳು ಇವು:
ವಿಪರೀತ ಕೆಮ್ಮು ಅದರಲ್ಲೂ ರಾತ್ರಿ ಹೊತ್ತು ಹೆಚ್ಚಳವಾಗಲಿದೆ, ಉಸಿರಾಟದ ಸಮಸ್ಯೆ ಕಾಡುವುದು, ಉಬ್ಬಸ, ಎದೆ ಬಿಗಿತ, ಹೆಚ್ಚು ಆಯಾಸ ಆಗುವುದು, ದೇಹದಲ್ಲಿ ಕೆಲ ದೌರ್ಬಲ್ಯ ಮೂಡುವುದು, ವ್ಯಾಯಾಮ ಮಾಡುವಾಗ ಉಸಿರು ಕಟ್ಟುವಂತಾಗುವುದು, ಕಿರಿಕಿರಿ, ಮುಂಗೋಪ, ಶ್ವಾಸಕೋಶ ಸರಿಯಾಗಿ ಕಾರ್ಯ ನಿರ್ವಹಿಸದಿರುವುದು, ಅಲರ್ಜಿ, ಶೀತದ ಲಕ್ಷಣಗಳು, ಗಂಟಲು ಕಟ್ಟವುದು, ನಿದ್ರಿಸುವಾಗ ಗೊರಕೆ. ತಲೆ ನೋವು ಸೇರಿದಂತೆ ಇತರೆ ಲಕ್ಷಣಗಳು ನಿಮ್ಮನ್ನ ಬಾಧಿಸುತ್ತವೆ. ಕೆಲವರಲ್ಲಿ ಅಸ್ತಮಾದ ಲಕ್ಷಣಗಳು ಭಯಾನಕವಾಗಿರುತ್ತದೆ. ಉದಾಹರಣೆಗೆ ಶ್ವಾಸಕೋಶಕ್ಕೆ ಸರಿಯಾಗಿ ಗಾಳಿ ಪೂರೈಕೆ ಆಗದೇ ಆ ಭಾಗದಲ್ಲಿ ಊದಿಕೊಂಡ ಅನುಭವವಾಗುತ್ತದೆ. ಶ್ವಾಸಕೋಶ ಊದಿಕೊಳ್ಳುವುದರಿಂಧ ಆ ಮಾರ್ಗವು ಕಿರಿದಾಗಿ, ಉರಿಯಲು ಪ್ರಾರಂಭವಾಗುತ್ತದೆ. ಇದು ಉಸಿರಿನ ಸರಾಗ ಪ್ರಕ್ರಿಯೆ ನಿಲ್ಲುವುದರಿಂದ ನಿಮಿಗೆ ಉಸಿರು ಕಟ್ಟಿದಂತಾಗಲಿದೆ. ಈ ಅವಧಿ ತಲುಪುವ ಮೊದಲೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು,

ಅಸ್ತಮಕ್ಕೆ ಪ್ರಮುಖ ಕಾರಣಗಳು ಇವು:
ಅಸ್ತಮಾ ಎಲ್ಲರಿಗೂ ಅಚಾನಕ್ಕಾಗಿ ಆಗಿ ಸಂಭವಿಸುವುದಿಲ್ಲ. ಧೂಮಪಾನ ಹೊಗೆ ಸೇವನೆಯಿಂದ, ಧೂಳಿನ ಕಣಗಳು, ವಾಯು ಮಾಲಿನ್ಯ, ಜಿರಳೆ ಸ್ಪ್ರೇ, ಸಾಕುಪ್ರಾಣಿಗಳ ಸೂಕ್ಷ್ಮ ರೋಮಗಳು, ಮರ ಅಥವಾ ಹುಲ್ಲಿನ ಸುಡುವಿಕೆಯಿಂದ ಎದ್ದೇಳುವ ಹೊಗೆ, ಅತಿಯಾದ ಜ್ವರದಿಂದಲೂ ಅಸ್ತಮಾ ಬರುವ ಸಾಧ್ಯತೆ ಇದೆ. ಪ್ರಾರಂಭದಲ್ಲಿ ಇದು ಅಸ್ತಮಾ ಅಲ್ಲದಿದ್ದರೂ, ಪ್ರದೂಷಣೆಯಿಂದ ಶ್ವಾಸಕೋಶದಲ್ಲಿ ಅಲರ್ಜಿ ಸಂಭವಿಸಲಿದ್ದು, ಇದು ವೀಸಿಂಗ್‌ಗೆ ತಿರುಗುವ ಸಾಧ್ಯತೆ ಇದೆ. ಇದರ ಚಿಕಿತ್ಸೆ ಸೂಕ್ತ ರೀತಿಯಲ್ಲಿ ಆಗದಿದ್ದಾಗ ವೀಸಿಂಗ್‌ ಅಸ್ತಮಕ್ಕೆ ತಿರುಗಲಿದೆ.

ಇದನ್ನೂ ಓದಿ: ತೂಕ ಇಳಿಸಲು ವ್ಯಾಯಾಮ ಮಾಡ್ತಿದ್ದೀರಾ? ಹಾಗಿದ್ರೆ ಎಷ್ಟು ಸಮಯ ವ್ಯಾಯಾಮ ಮಾಡ್ಬೇಕು ಗೊತ್ತಾ?

ಚಿಕಿತ್ಸೆಯ ಆಯ್ಕೆಗಳು ಯಾವುವು?
ಅಸ್ತಮಾದ ಮೊದಲ ಚಿಕಿತ್ಸೆಯೇ ಇನ್‌ಹೇಲರ್‌. ಬಹಳಷ್ಟು ಜನರಿಗೆ ಇನ್‌ಹೇಲರ್‌ ರಾಮಭಾಣದಂತೆ ಕೆಲಸ ಮಾಡುತ್ತದೆ. ಇನ್‌ಹೇಲರ್‌ನನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳಿ, ವೀಸಿಂಗ್‌ ಸಮಸ್ಯೆ ಇರುವ ಎಲ್ಲರಿಗೂ ಇನ್‌ಹೇಲರ್‌ನನ್ನೇ ಸಲಹೆ ನೀಡುವುದಿಲ್ಲ. ಇದಕ್ಕೆ ಇತರೆ ಚಿಕಿತ್ಸೆಗಳಿವೆ. ಹೀಗಾಗಿ ವೀಸಿಂಗ್‌ ಅಥವಾ ಅಸ್ತಮಾದ ಸಮಸ್ಯೆ ಕಂಡು ಬಂದರೆ ನಿರ್ಲಕ್ಷಿಸದೇ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು. ಒಂದು ವೇಳೆ ಅಸ್ತಮಾವನ್ನು ನಿರ್ಲಕ್ಷಿಸಿದರೆ ನಿಮ್ಮ ಉಸಿರಾಟ ಕ್ಷೀಣೀಸುವ ಸಾಧ್ಯತೆ ಹೆಚ್ಚು, ಇದರಿಂದ ಉಬ್ಬಸ ಬರಬಹುದು. ಇದು ಅಪಾಯ.

ಇದನ್ನೂ ಓದಿ: ಈ ಅಕ್ಷಯ ತೃತೀಯಾಗೆ ಕಡಿಮೆ ಬೆಲೆಯಲ್ಲಿ ಬ್ಯೂಟಿಫುಲ್ ಚಿನ್ನಾಭರಣಗಳು

ನೀವು ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು?
ನೀವು ತೀವ್ರವಾದ ಅಸ್ತಮಾದಿಂದ ಬಳಲುತ್ತಿದ್ದರೆ ನಿಮ್ಮ ತುಟಿಗಳ ಸುತ್ತಲೂ ನೀಲಿ ಬಣ್ಣಕ್ಕೆ ತಿರುಗುತ್ತಾ ಹೋಗುತ್ತದೆ, ಇದನ್ನು "ಸೈನೋಸಿಸ್" ಎಂದು ಕರೆಯಲಾಗುತ್ತದೆ, ಇದು ನಿಮ್ಮ ರಕ್ತವು ಆಮ್ಲಜನಕ ಪೂರೈಕೆಗೆ ಹೆಚ್ಚು ಬಳಕೆಯಾಗಿ ರಕ್ತದ ಕೊರತೆ ಉಂಟಾಗುತ್ತಿದೆ ಎಂಬುದರ ಸಂಕೇತವಾಗಿರುತ್ತದೆ. ಇದು ಅತ್ಯಂತ ಅಪಾಯಕಾರಿ ಲಕ್ಷಣ, ಈ ಸಂದರ್ಭದಲ್ಲಿ ವೈದ್ಯರನ್ನು ಭೇಟಿ ಮಾಡುವುದು ಅನಿವಾರ್ಯ.
Published by:Sandhya M
First published: