• Home
  • »
  • News
  • »
  • lifestyle
  • »
  • World Arthritis Day 2021: ಈ ಸರಳ ಟಿಪ್ಸ್ ಅನುಸರಿಸಿದ್ರೆ ಸಂಧಿವಾತ ನಿಮ್ಮ ಹತ್ತಿರಕ್ಕೂ ಸುಳಿಯಲ್ಲ

World Arthritis Day 2021: ಈ ಸರಳ ಟಿಪ್ಸ್ ಅನುಸರಿಸಿದ್ರೆ ಸಂಧಿವಾತ ನಿಮ್ಮ ಹತ್ತಿರಕ್ಕೂ ಸುಳಿಯಲ್ಲ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Ways to treat Arthritis: ಮೂಳೆ ಸಂಧುಗಳಲ್ಲಿ ಉರಿ, ಮಡಚಲು ಆಗದೇ ಇರುವುದು, ಗಂಟುಗಳು, ಊದಿಕೊಳ್ಳುವುದು, ಆ ಭಾಗದ ಚರ್ಮ ಕೆಂಪಾಗುವುದು, ಕೈಕಾಲುಗಳನ್ನು ಹಿಂದಿನಂತೆ ಪೂರ್ಣವಾಗಿ ಸೆಳೆಯಲು ಸಾಧ್ಯವಾಗದೇ ಇರುವುದು ಸೇರಿದಂತೆ ಹಲವು ರೀತಿಯ ಸಮಸ್ಯೆಗಳನ್ನು ಸಂಧಿವಾತದಿಂದ ಎದುರಿಸಬೇಕಾಗುತ್ತದೆ.

ಮುಂದೆ ಓದಿ ...
  • Share this:

Tips to Stay away from Arthritis: ಬದಲಾಗುತ್ತಿರುವ ಜೀವನ ಶೈಲಿಯಿಂದ ಮನುಷ್ಯರು ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಲ್ಲೂ ಬಹಳಷ್ಟು ಮಂದಿಗೆ ಸಂಧಿವಾತ ಸಮಸ್ಯೆ ಸಾಮಾನ್ಯವಾಗಿ ಹೋಗಿದೆ. ಸಣ್ಣ ವಯಸ್ಕರಲ್ಲಿಯೂ ಸಂಧಿವಾತ (Arthritis in young people) ಕಾಣಿಸಿಕೊಳ್ಳುತ್ತಿದೆ. ಸಂಧಿವಾತ ಹೆಚ್ಚಾಗಿ ಮಹಿಳೆಯರನ್ನು ಬಾಧಿಸುತ್ತಿದೆ. ಸಂಧಿವಾತಕ್ಕೆ ಯಾವುದೇ ಶಾಶ್ವತ ಚಿಕಿತ್ಸೆ (Permanent Cure)ಇಲ್ಲ. ಆದರೆ, ಅದರ ನೋವಿನಿಂದ ಹೊರಬರಲು ಹಾಗೂ ಸಂಧಿವಾತ ಬಾರದಂತೆ ಮುನ್ನಚ್ಚೆರಿಕೆ (Prevention) ವಹಿಸಿ ನಿಯಂತ್ರಿಸಬಹುದು. ಸಂಧಿವಾತ ಎನ್ನುವುದು ಕೀಲುಗಳಲ್ಲಿ ಉರಿಯೂತವಾಗಿ ಕ್ರಮೇಣ ಇದು ಬಾವು ಮತ್ತು ಗಡುಸಾಗುವಿಕೆಯಾಗುತ್ತದೆ. ಇದರಿಂದ ಅಸಾಧ್ಯ ನೋವು ಕಾಣಿಸಿಕೊಳ್ಳುತ್ತಾ ಇರುತ್ತದೆ. ಹಾಗಾಗಿ ಸಂಧಿವಾತ ಮತ್ತು ಮಸ್ಕ್ಯುಲೋ ಸ್ಕೆಲಿಟಲ್ ರೋಗಗಳ (Musculoskeletal) ಅಸ್ತಿತ್ವ ಮತ್ತು ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ 12ರಂದು ವಿಶ್ವ ಸಂಧಿವಾತ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. ಸಂಧಿವಾತದಿಂದ ಆಗುವ ಆರೋಗ್ಯ ಸಮಸ್ಯೆ ಹಾಗೂ ಚಿಕಿತ್ಸೆ ಬಗ್ಗೆ ಫೋರ್ಟಿಸ್ ಆಸ್ಪತ್ರೆ ಮೂಳೆ ತಜ್ಞ ಡಾ ರಘು ನಾಗರಾಜ್ ವಿವರಿಸಿದ್ದಾರೆ.


ಆರ್ಥರೈಟಿಸ್ ಅಥವಾ ಸಂಧಿವಾತದ ರೋಗಲಕ್ಷಣಗಳೇನು?


ಸಂಧಿವಾತದಲ್ಲಿ 100ಕ್ಕೂ ಹೆಚ್ಚು ವಿಧದ ಉಪರೋಗಗಳಿವೆ. ಮೂಳೆ ಸಂಧುಗಳಲ್ಲಿ ಉರಿ, ಮಡಚಲು ಆಗದೇ ಇರುವುದು, ಗಂಟುಗಳು, ಊದಿಕೊಳ್ಳುವುದು, ಆ ಭಾಗದ ಚರ್ಮ ಕೆಂಪಾಗುವುದು, ಕೈಕಾಲುಗಳನ್ನು ಹಿಂದಿನಂತೆ ಪೂರ್ಣವಾಗಿ ಸೆಳೆಯಲು ಸಾಧ್ಯವಾಗದೇ ಇರುವುದು ಸೇರಿದಂತೆ ಹಲವು ರೀತಿಯ ಸಮಸ್ಯೆಗಳನ್ನು ಸಂಧಿವಾತದಿಂದ ಎದುರಿಸಬೇಕಾಗುತ್ತದೆ. ಇಂಥ ನೋವುಗಳು ಕಂಡು ಬಂದರೆ ನಿಮಗೆ ಸಂಧಿವಾತದ ಸಮಸ್ಯೆ ಇರುವುದು ಖಚಿತ. ಇದನ್ನು ಪ್ರಾರಂಭದಲ್ಲಿಯೇ ಶಮನ ಮಾಡುವುದರಿಂದ ಮುಂದಾಗುವ ಅತಿಯಾದ ನೋವು ಹಾಗೂ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಇಲ್ಲವಾದರೆ, ಇದು ಸಹ ಮುಂದೆ ಇತರೆ ಕಾಯಿಲೆಗಳಿಗೆ ಆಹ್ವಾನ ನೀಡಲಿದೆ.


ಸಕ್ಕರೆ ಅಂಶವಿರುವ ಆಹಾರ ನಿಯಂತ್ರಿಸಿ


ಸಕ್ಕರೆ ಆರೋಗ್ಯಕ್ಕೆ ಶತ್ರು ಎನ್ನುವುದು ಈಗಾಗಲೇ ತಿಳಿದ ವಿಷಯ. ಸಂಧಿವಾತದ ಸಮಸ್ಯೆ ಎದುರಿಸುತ್ತಿರುವವರು ಸಕ್ಕರೆ ಅಂಶ ಇರುವ ಆಹಾರ ಸೇವನೆಯಿಂದ ದೂರ ಇರಬೇಕು. ಜಂಕ್ ಫುಡ್‌ ಸೇವನೆಯಿಂದಲೂ ಮೂಳೆಗಳ ಮೇಲೆ ಪ್ರಭಾವ ಬೀರಿ ಮೂಳೆ ಸಂಧು ಉಂಟಾಗಬಹುದು.


ಇದನ್ನೂ ಓದಿ: Health Tips: ಬೆನ್ನು ನೋವು ಕಾಣಿಸಿಕೊಳ್ಳುತ್ತಿದ್ದರೆ, ಈ ವಿಷಯಗಳತ್ತ ಹೆಚ್ಚಿನ ಗಮನಹರಿಸಿ..!


ಪೌಷ್ಠಿಕ ಆಹಾರ ಸೇವನೆ


ಸಂಧಿವಾತಕ್ಕೆ ವಿಟಮಿನ್ ಸಿ. ರಾಮಬಾಣ. ಹೀಗಾಗಿ ಹೆಚ್ಚು ವಿಟಮಿನ್ ಸಿ ಇರುವ ಹಣ್ಣು, ತರಕಾರಿಗಳನ್ನು ಹೆಚ್ಚು ಸೇವಿಸಿ. ಇದು ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಜೊತೆಗೆ ಕಬ್ಬಿಣಾಂಶವನ್ನು ಹೀರಿಕೊಳ್ಳುವುದನ್ನು ಹೆಚ್ಚಿಸುತ್ತದೆ. ಉರಿಯೂತದ ಸಂಧಿವಾತವನ್ನು ತಡೆಯಲು ವಿಟಮಿನ್ ಸಿ ಪರಿಣಾಮಕಾರಿಯಾಗಿದೆ. ಇನ್ನು, ಮಾಂಸಹಾರ ಸೇವನೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವದರಿಂದ ದೇಹದಲ್ಲಿ ಬೊಜ್ಜು ಶೇಖರಣೆಯನ್ನು ತಡೆಯಬಹುದು.


ವ್ಯಾಯಾಮ ಅಗತ್ಯ


ಪ್ರತಿ ನಿತ್ಯ ಕನಿಷ್ಠ 30 ನಿಮಿಷಗಳ ವ್ಯಾಯಾಮ ಮಾಡುವುದರಿಂದ ಸಂಧಿವಾತ ಬರುವ ಮುನ್ನವೇ ನಿಯಂತ್ರಿಸಬಹುದು. ವ್ಯಾಯಮ ಮಾಡುವುದರಿಂದ ಕೀಲುಗಳ ಸುತ್ತಲಿನ ಸ್ನಾಯುಗಳನ್ನು ಬಲಗೊಳಿಸುತ್ತದೆ. ಅದರಲ್ಲೂ ಸ್ಟ್ರೆಚಿಂಗ್, ವಾಕಿಂಗ್, ಪಲಾಟೆಸ್, ಸೈಕ್ಲಿಂಗ್ ಮಾಡುವುದು ಹೆಚ್ಚು ಪರಿಣಾಮಕಾರಿ. ಮಹಿಳೆಯರು ಯೋಗ ಮಾಡುವುದರಿಂದ ಇಡೀ ದೇಹಕ್ಕೆ ಸಂಪೂರ್ಣ ವ್ಯಾಯಾಮ ಸಿಗಲಿದೆ. ಪ್ರತಿ ಸ್ನಾಯುಗಳಿಗೂ ವ್ಯಾಯಾಮವಾಗಲಿದ್ದು, ಶೀಘ್ರವೇ ಸಂಧಿವಾತ ನಿಯಂತ್ರಣಕ್ಕೆ ಬರುತ್ತದೆ. ಯಾವುದೇ ಕಾರಣಕ್ಕೂ ದೇಹದಲ್ಲಿ ಬೊಜ್ಜು ಸಂಗ್ರಹವಾಗಲು ಬಿಡಬೇಡಿ. ದೇಹದ ತೂಕ ಸಮತೋಲನದಿಂದ ಕಾಪಾಡಿಕೊಳ್ಳುವುದು ಬಹಳ ಮುಖ್ಯ.


ಇದನ್ನೂ ಓದಿ: ಯಾತನೆ ನೀಡುವ ಹೊಟ್ಟೆ ನೋವಿಗೆ ಇಲ್ಲಿವೆ ಮನೆಮದ್ದಿನ ಪರಿಹಾರಗಳು..!


ಚಿಕಿತ್ಸೆ ಏನು?


ಸಂಧಿವಾತಕ್ಕೆ ಸೂಕ್ತ ಚಿಕಿತ್ಸೆ ಎಂದರೆ ಈಗಿನ ದಿನಗಳಲ್ಲಿ ಲಭ್ಯವಿರುವ ಉತ್ತಮ ಪರಿಣಾಮಕಾರಿ ಮಾತ್ರೆಗಳು. ಈ ಔಷದಗಳನ್ನು ತೆಗೆದುಕೊಳ್ಳುವುದರಿಂದ ಕೀಲುಗಳಲ್ಲಿರುವ ನೋವನ್ನು ನಿಧಾನವಾಗಿ ಕಡಿಮೆ ಮಾಡುತ್ತಾ ಬರಲಿದೆ. ಜೊತೆಗೆ ಸಂಧಿವಾತದಿಂದ ಉಂಟಾಗಬಹುದಾದ ಶಾಶ್ವತ ಆರೋಗ್ಯ ಸಮಸ್ಯೆಯನ್ನು ಸಹ ತಪ್ಪಿಸಲು ನೆರವಾಗುತ್ತದೆ. ಜೊತೆಗೆ ಪ್ರೆಡ್ನಿಸೋನ್ ಮತ್ತು ಇತರೆ ಕಾರ್ಟಿಕೋ ಸ್ಟೆರಾಯ್ಡ್ ಔಷಧಗಳು ಉರಿಯೂತ ಮತ್ತು ನೋವನ್ನು ಶೀಘ್ರ ಕಡಿಮೆ ಮಾಡುತ್ತವೆ. ಮೆಂಥಾಲ್ ಮತ್ತು ಕ್ಯಾಪ್ಸೈಸಿನ್ ಎಂಬ ಕ್ರೀಮ್‌ಗಳನ್ನು ನೋಯುತ್ತಿರುವ ಕೀಲುಗಳಿಗೆ ಹಚ್ಚುವುದರಿಂದಲೂ ಆ ಕ್ಷಣದಲ್ಲಿ ನೋವು ಕಡಿಮೆ ಮಾಡುತ್ತದೆ. ಕೆಲವೊಮ್ಮೆ ಕುತ್ತಿಗೆ ಕೆಳಗಿನ ಮೂಳೆಸಂಧುಗಳಲ್ಲಿ ಅತಿಯಾದ ನೋವು ಕಾಣಿಸಿಕೊಳ್ಳುತ್ತಿರುತ್ತದೆ. ಇದಕ್ಕೆ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯುವುದು ಸೂಕ್ತ.

Published by:Soumya KN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು