• Home
 • »
 • News
 • »
 • lifestyle
 • »
 • Heart Attack: ಹುಷಾರಿಲ್ಲದೆ ಇದ್ದಾಗ ಜಿಮ್‌ಗೆ ಹೋಗಿ ವರ್ಕೌಟ್ ಮಾಡುವುದು ತುಂಬಾನೇ ಡೇಂಜರ್, ಎಚ್ಚರ!

Heart Attack: ಹುಷಾರಿಲ್ಲದೆ ಇದ್ದಾಗ ಜಿಮ್‌ಗೆ ಹೋಗಿ ವರ್ಕೌಟ್ ಮಾಡುವುದು ತುಂಬಾನೇ ಡೇಂಜರ್, ಎಚ್ಚರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮಗೆ ಜ್ವರವಿದ್ದಾಗ ಜಿಮ್ ಗೆ ಹೋಗಿ ವರ್ಕ್ಔಟ್ ಮಾಡುವುದು ದೇಹವನ್ನು ಇನ್ನಷ್ಟು  ನಿರ್ಜಲೀಕರಣಗೊಳಿಸುತ್ತದೆ. ದೇಹದಲ್ಲಿ ನೀರು ಕಡಿಮೆ ಆಗುವುದರಿಂದ ಜ್ವರವು ಇನ್ನಷ್ಟು ಹೆಚ್ಚಾಗಬಹುದು.

 • Share this:

  ಇತ್ತೀಚೆಗೆ ನಾವು ತುಂಬಾ ಜನರು ಬೆಳಿಗ್ಗೆ ಈ ಜಿಮ್ ಗೆ ವರ್ಕ್ಔಟ್ (Gym Workout) ಮಾಡಲು ಹೋಗಿ ಅಲ್ಲಿಯೇ ಎದೆ ನೋವು (Chest Pain) ಕಾಣಿಸಿಕೊಂಡು ಕುಸಿದು ಬಿದ್ದಿರುವಂತಹ ಘಟನೆಗಳ ಬಗ್ಗೆ ತುಂಬಾನೇ ಕೇಳಿದ್ದೇವೆ. ಹೀಗೆ ಬಿದ್ದಾಗ ಕೆಲವರನ್ನು ಅದೃಷ್ಟವಶಾತ್ ಬೇಗನೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿರುತ್ತದೆ. ಆದರೆ ಇನ್ನೂ ಕೆಲವರಿಗೆ ಆ ಒಂದು ಅವಕಾಶ ಮತ್ತು ಸಮಯ ಸಹ ಸಿಕ್ಕಿರದೆ ಪ್ರಾಣ ಬಿಟ್ಟವರ ಬಗ್ಗೆಯೂ ನಾವು ಕೇಳಿದ್ದೇವೆ.


  ಜಿಮ್ ಗೆ ಹೋಗುವ ಮುಂಚೆ ನಟನ ಆರೋಗ್ಯ ಚೆನ್ನಾಗಿರಲಿಲ್ಲವಂತೆ..


  ಇತ್ತೀಚೆಗೆ ಎಂದರೆ ನವೆಂಬರ್ 11 ರಂದು ಹಿಂದಿ ಸೀರಿಯಲ್ ಗಳಲ್ಲಿ ನಟಿಸುವ ನಟ ಸಿದ್ಧಾಂತ್ ಸೂರ್ಯವಂಶಿ ಅವರು ಜಿಮ್ ಗೆ ಹೋಗುವ ಮೊದಲು ಅಸ್ವಸ್ಥರಾಗಿದ್ದರಂತೆ. ಆದರೂ ಹಾಗೆಯೇ ವರ್ಕ್ಔಟ್ ಮಾಡಲು ಜಿಮ್ ಗೆ ಹೋಗಿದ್ದು, ಅಲ್ಲಿ ಬೆಂಚ್ ಪ್ರೆಸ್ ವ್ಯಾಯಾಮ ಮಾಡುತ್ತಿರುವಾಗ ಹೃದಯ ಸ್ತಂಭನದಿಂದ ಕುಸಿದು ಬಿದ್ದು ನಿಧನರಾದ ದುರದೃಷ್ಟಕರ ಘಟನೆ ನಡೆಯಿತು. ನಟ ಸಿದ್ಧಾಂತ್ ನಿಜವಾಗಿಯೂ ಜಿಮ್ ಗೆ ಹೋಗುವ ಮೊದಲು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ವರದಿಗಳು ತಿಳಿಸಿವೆ.


  ಜನಪ್ರಿಯ ಹಿಂದಿ ಸೀರಿಯಲ್ ಗಳಲ್ಲಿ ನಟಿಸಿದ್ರು ಈ ನಟ..


  ಯಾರಪ್ಪಾ ಈ ನಟ ಅಂತ ನಿಮಗೆ ಚೆನ್ನಾಗಿ ಅರ್ಥವಾಗಬೇಕು ಎಂದರೆ ಇವರು ನಟಿಸಿದ್ದಂತಹ 'ಕುಸುಮ್' ಮತ್ತು 'ಕಸೌತಿ ಜಿಂದಗಿ ಕೇ' ಅಂತಹ ಎರಡು ಜನಪ್ರಿಯ ಧಾರವಾಹಿಗಳ ಹೆಸರು ಹೇಳಿದರೆ ಸಾಕು, ಅವರ ಮುಖ ನಿಮ್ಮ ಕಣ್ಮುಂದೆ ಬರುತ್ತದೆ ಅಂತ ಹೇಳಬಹುದು. ಈ ನಟನಿಗೆ ಕೇವಲ 46 ವರ್ಷ ವಯಸ್ಸಾಗಿತ್ತು.
  ಇಂತಹ ಘಟನೆಗಳು ಜಿಮ್ ವರ್ಕೌಟ್ ಗಳನ್ನು ಯಾವಾಗ ಮಾಡಬಾರದು ಎಂಬ ಅಂಶಗಳ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತವೆ ಎಂದು ಹೇಳಬಹುದು. ಜಿಮ್ ವರ್ಕ್ಔಟ್ ಗಳು ತೀವ್ರವಾದ ದೈಹಿಕ ಚಟುವಟಿಕೆಗಳಾಗಿದ್ದು, ಅವುಗಳನ್ನು ಮಾಡುವಾಗ ಕೆಲವು ವಿಷಯಗಳ ಬಗ್ಗೆ ತುಂಬಾ ಜಾಗರೂಕರಾಗಿರಬೇಕು.


  ಜಿಮ್ ವರ್ಕ್ಔಟ್ ಆರೋಗ್ಯಕ್ಕೆ ಒಳ್ಳೆಯದು, ಆದರೆ ಕೆಲವು ಮಿತಿಗಳಿವೆ


  ಈ ಜಿಮ್ ನಲ್ಲಿ ಮಾಡುವ ತಾಲೀಮಿನ ಒಳ್ಳೆಯ ಒಂದು ಮಗ್ಗುಲನ್ನು ನಾವೆಲ್ಲರೂ ನೋಡಿದ್ದೇವೆ. ಅದರಿಂದ ದೇಹದಲ್ಲಿನ ತೂಕ ಕಡಿಮೆ ಆಗುತ್ತದೆ, ಅಲ್ಲದೆ ಈ ಸೆಲೆಬ್ರಿಟಿಗಳಿಗೆ ದೇಹವನ್ನು ಫಿಟ್ ಆಗಿ ಇರಿಸಿಕೊಳ್ಳುವುದು ಸಹ ತುಂಬಾನೇ ಮುಖ್ಯವಾಗುತ್ತದೆ ಮತ್ತು ಅದು ಅವರ ಆತ್ಮವಿಶ್ವಾಸವನ್ನು ಸಹ ಹೆಚ್ಚಿಸುತ್ತದೆ.


  ಆದರೆ ತಾಲೀಮಿನ ನಕಾರಾತ್ಮಕ ಮಗ್ಗುಲುಗಳನ್ನು ನೋಡಿದಾಗ ಬಹುತೇಕರಿಗೆ ಇದರ ಬಗ್ಗೆ ಇನ್ನೂ ತುಂಬಾ ಜ್ಞಾನ ಅಥವಾ ಅರಿವಿನ ಅವಶ್ಯಕತೆ ಇದೆ ಅಂತ ಹೇಳಬಹುದು. ನೀವು ಯಾವಾಗ ಈ ರೀತಿ ಜಿಮ್ ಗಳಿಗೆ ಹೋಗಿ ಕಠಿಣವಾದ ತಾಲೀಮು ಮಾಡಬಾರದು ಎಂಬುದನ್ನು ಇಲ್ಲಿ ತಜ್ಞರು ಹಂಚಿಕೊಂಡಿದ್ದಾರೆ ನೋಡಿ.


  1. ಜ್ವರ ಬಂದಾಗ ವ್ಯಾಯಾಮ ಮಾಡಲೇಬೇಡಿ


  ನಿಮಗೆ ಜ್ವರವಿದ್ದಾಗ ಜಿಮ್ ಗೆ ಹೋಗಿ ವರ್ಕ್ಔಟ್ ಮಾಡುವುದು ದೇಹವನ್ನು ಇನ್ನಷ್ಟು  ನಿರ್ಜಲೀಕರಣಗೊಳಿಸುತ್ತದೆ. ದೇಹದಲ್ಲಿ ನೀರು ಕಡಿಮೆ ಆಗುವುದರಿಂದ ಜ್ವರವು ಇನ್ನಷ್ಟು ಹೆಚ್ಚಾಗಬಹುದು.


  ಇದಲ್ಲದೆ, ಜ್ವರವು ದೇಹದಲ್ಲಿನ ಸ್ನಾಯು ಬಲ ಮತ್ತು ಸಹಿಷ್ಣುತೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಈ ಸಮಯದಲ್ಲಿ ವ್ಯಾಯಾಮ ಮಾಡುವುದರಿಂದ ಸ್ನಾಯುಗಳು ಗಾಯಕ್ಕೆ ಒಳಗಾಗುತ್ತವೆ ಮತ್ತು ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು ಎಂದು ಆರೋಗ್ಯ ವರದಿಗಳು ಹೇಳುತ್ತವೆ. ಆದ್ದರಿಂದ ಜ್ವರ ಬಂದಾಗ ಜಿಮ್ ಗೆ ಹೋಗಬೇಡಿ.
  2. ಕೆಮ್ಮು ಇದ್ದಾಗಲೂ ಸಹ ವ್ಯಾಯಾಮ ಮಾಡಬೇಡಿ


  ಕೆಮ್ಮು ಒಬ್ಬರಿಂದ ಇನ್ನೊಬ್ಬರಿಗೆ ರೋಗಕಾರಕಗಳನ್ನು ಹರಡುತ್ತದೆ, ಆದ್ದರಿಂದ ಜಿಮ್ ನಲ್ಲಿರುವ ಇತರರನ್ನು ಸಹ ನಿಮ್ಮ ಕೆಮ್ಮು ಅಪಾಯಕ್ಕೆ ಸಿಲುಕಿಸಬಹುದು. ನಿರಂತರ ಕೆಮ್ಮು ನಿಮಗೆ ಅನಾನುಕೂಲವನ್ನುಂಟು ಮಾಡುತ್ತದೆ ಮತ್ತು ಕೆಲವು ವ್ಯಾಯಾಮಗಳನ್ನು ಮಾಡುವ ನಿಮ್ಮ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ.


  ಇದು ವ್ಯಾಯಾಮದ ಹರಿವನ್ನು ಸಹ ಅಡ್ಡಿಪಡಿಸಬಹುದು, ಇದರಿಂದಾಗಿ ನಿಮ್ಮ ದೇಹಕ್ಕೆ ಹೆಚ್ಚಿನ ಅಪಾಯವಾಗುವ ಅವಕಾಶಗಳಿರುತ್ತವೆ.


  3. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವಾಗ ವ್ಯಾಯಾಮ ಮಾಡಬೇಡಿ


  ವಾಕರಿಕೆ, ವಾಂತಿ ಮತ್ತು ಅತಿಸಾರ ರೋಗಿಗಳು ಜಿಮ್ ಗೆ ಹೋಗಬಾರದು. ಹೊಟ್ಟೆಯ ದೋಷಗಳು ದೇಹವನ್ನು ದುರ್ಬಲಗೊಳಿಸುತ್ತವೆ. ಈ ಸಮಯದಲ್ಲಿ ಕಠಿಣವಾದ ವ್ಯಾಯಾಮಗಳನ್ನು ಮಾಡುವುದರಿಂದ ದೇಹವು ಇನ್ನಷ್ಟು ನಿರ್ಜಲೀಕರಣಗೊಳ್ಳುತ್ತದೆ ಮತ್ತು ಆದ್ದರಿಂದ ತೊಡಕುಗಳು ಉಲ್ಬಣಗೊಳ್ಳುತ್ತವೆ.


  Study reveals why most women avoid going to the gym stg asp
  ಸಾಂಕೇತಿಕ ಚಿತ್ರ


  4. ವಾರ್ಮ್-ಅಪ್ ಸೆಷನ್ ಗೂ ಮೊದಲು ವ್ಯಾಯಾಮ ಪ್ರಾರಂಭಿಸಬೇಡಿ


  ದೇಹದ ಶಕ್ತಿ ಮತ್ತು ತ್ರಾಣವನ್ನು ತೀವ್ರವಾದ ತಾಲೀಮಿನ ಕಡೆಗೆ ಹರಿಸುವುದು ಬಹಳ ಮುಖ್ಯ. ಇದ್ದಕ್ಕಿದ್ದಂತೆ ಟ್ರೆಡ್ ಮಿಲ್ ಮೇಲೆ ಓಡುವ ಬದಲು, ಕಡಿಮೆ ತೀವ್ರತೆಯ ವ್ಯಾಯಾಮಗಳೊಂದಿಗೆ ಪ್ರಾರಂಭಿಸುವುದು ಒಳ್ಳೆಯದು.


  ನಮ್ಮ ದೇಹವು ಹೆಚ್ಚಾಗಿ ತೀವ್ರವಾದ ವ್ಯಾಯಾಮಗಳಿಗೆ ಒಗ್ಗಿಕೊಳ್ಳುವುದಿಲ್ಲ, ಅದಕ್ಕಾಗಿಯೇ ನಾವು ಜಿಮ್ ಗೆ ಹೋಗುತ್ತೇವೆ. ದೇಹದ ಮೇಲೆ ಭಾರಿ ಒತ್ತಡವನ್ನು ಹೇರುವುದು ಕೆಲವೊಮ್ಮೆ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡುತ್ತದೆ, ಅದು ಸಾವು ಕೂಡ ಆಗಿರಬಹುದು.


  ನಿಮ್ಮ ದೇಹದ ತಾಪಮಾನವನ್ನು ಹೆಚ್ಚಿಸುವ ಮೂಲಕ ಮತ್ತು ನಿಮ್ಮ ಸ್ನಾಯುಗಳಿಗೆ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ವಾರ್ಮ್ ಅಪ್ ಕ್ರಮೇಣ ನಿಮ್ಮ ಹೃದಯ ರಕ್ತನಾಳದ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುತ್ತದೆ. ವಾರ್ಮ್ ಅಪ್ ಸ್ನಾಯು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

  Published by:Kavya V
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು