ನೀವು ತೂಕ ಕಳೆದು ಕೊಳ್ಳಬೇಕೆ ? ಪ್ರತಿ ದಿನ ಹೀಗೆ ಮಾಡಿ’, ಸಂಜನಾ ಫಿಟ್ನೆಸ್ ಮಂತ್ರ

G Hareeshkumar | news18
Updated:October 6, 2018, 8:13 PM IST
ನೀವು ತೂಕ ಕಳೆದು ಕೊಳ್ಳಬೇಕೆ ? ಪ್ರತಿ ದಿನ ಹೀಗೆ ಮಾಡಿ’, ಸಂಜನಾ ಫಿಟ್ನೆಸ್ ಮಂತ್ರ
  • Advertorial
  • Last Updated: October 6, 2018, 8:13 PM IST
  • Share this:
ನ್ಯೂಸ್ 18 ಕನ್ನಡ

ಸದ್ಯ ತೆಲುಗು ಕಿರುತೆರೆಯ ಪೌರಾಣಿಕ ಧಾರವಾಹಿಯಲ್ಲಿ ಬ್ಯಸಿಯಾಗಿರುವ ನಟಿ ಸಂಜನಾ ಗಲ್ರಾನಿ ಹೆಚ್ಚು ಸಮಯವನ್ನು ಯೋಗ ಹಾಗೂ ಜಿಮ್ ನಲ್ಲಿ ಕಳೆಯುತ್ತಾರೆ. ತಮ್ಮ ಫಿಟ್ನೆಸ್​ ಸೀಕ್ರೆಟ್​ ಏನು ಎಂದು ಕೇಳಿದರೆ ಸಂಜನಾ ಯಾವಾಗಲೂ ಹೇಳುವುದು ಯೋಗ ಹಾಗೂ ಜಿಮ್ ಎಂದು.

ಸದಾ ತನ್ನ ದೇಹವನ್ನು ಫಿಟ್ನೆಸ್​ ಬಗ್ಗೆ ಕಾಳಜಿ ಹೊಂದಿರುವ ಸಂಜನಾ ಇತ್ತೀಚೆಗೆ ತಮ್ಮ ಫೇಸ್​ಬುಕ್​ ಪೇಜ್ ನಲ್ಲಿ ತಮ್ಮ ಫಿಟ್ನೆಸ್​ ಮಂತ್ರ ಜಪಿಸಿದ್ದಾರೆ. ನೀವು ತೂಕ ಕಳೆದುಕೊಳ್ಳಬೇಕೆ? ಹಾಗಿದ್ದರೇ ಒಂದು ತಿಂಗಳ ಕಾಲ ಪ್ರತಿ ದಿನ ಜಸ್ಟ್ ಹೀಗೆ ಮಾಡಿ ಅಂತಾ ವರ್ಕೌಟ್ ವಿಡಿಯೋ ಹಾಕಿದ್ದಾರೆ.

ಇದರಲ್ಲಿ ತಾವು ಹೇಗೆಲ್ಲಾ ವರ್ಕೌಟ್ ಮಾಡಿ, ಬೆವರಿಳಿಸಿ ದೇಹಸಿರಿ ಕಾಪಾಡಿಕೊಳ್ಳತ್ತಾ ಇದಿನಿ ಎಂದು ಹೇಳಿದ್ದಾರೆ. ಈ ಹಿಂದೆ ಸಂಜನಾ ಹೈದ್ರಾಬಾದ್​ನಲ್ಲಿ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮದಲ್ಲೂ ಯೋಗಾಸನ ಮಾಡಿ ಗಮನ ಸೆಳೆದಿದ್ದರು. ಯೋಗಾಸನ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿತ್ತು.

ದೈಹಿಕ ಕಸರತ್ತಿಗಾಗಿ ಜಿಮ್​ನ ಮೊರೆ ಹೊದ ನಟಿ ಸಂಜನಾ ಗಲ್ರಾನಿ

First published:October 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ