Walking Benefits: ಅಕಾಲಿಕ ಮರಣ ತಪ್ಪಿಸಲು ಪ್ರತಿದಿನ ಎಷ್ಟು ಹೆಜ್ಜೆ ವಾಕ್‌ ಮಾಡಬೇಕು ಗೊತ್ತಾ..?

ಆರೋಗ್ಯ ಪ್ರಯೋಜನಗಳಿಗಾಗಿ ನಾವು ದಿನಕ್ಕೆ ಎಷ್ಟು ಹೆಜ್ಜೆ ನಡೆಯಬೇಕು? ಎಂಬುದನ್ನು ಸಾರ್ವಜನಿಕ ಆರೋಗ್ಯ ಸಂದೇಶಕ್ಕಾಗಿ ಅಥವಾ ವೈದ್ಯ ಮತ್ತು ರೋಗಿಯ ಸಂವಹನಕ್ಕಾಗಿ ತಿಳಿಯುವುದು ಉತ್ತಮ ಎಂದು ಲೇಖಕಿ ಸಲಹೆ ನೀಡುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಡಿಗೆ ದೇಹ ದಂಡಿಸುವ ಒಂದು ಉತ್ತಮ ಕಸರತ್ತು. ಬೆಳಗ್ಗೆ ಅಥವಾ ಸಂಜೆ ವೇಳೆಯಲ್ಲಿ ವಾಕ್ ಮಾಡಿದರೆ ಉತ್ತಮ. ಗಾಳಿ ಸೇವನೆ ಜೊತೆಗೆ ದೇಹವು ಆರೋಗ್ಯ, ಆಹ್ಲಾದಕರವಾಗಿರುತ್ತದೆ ಮತ್ತು ಹಗುರವಾಗಿಸುತ್ತದೆ. ಬೇರೆ ಮಧ್ಯಮ ವಯಸ್ಸಿನ ವ್ಯಕ್ತಿಗಳಿಗೆ ಹೋಲಿಸಿದರೆ ವಾಕಿಂಗ್ ಮಾಡುವ ಮಧ್ಯ ವಯಸ್ಕ ವ್ಯಕ್ತಿಯ ಅಕಾಲಿಕ ಮರಣ ಪ್ರಮಾಣ ಪ್ರತಿಶತ 40 ರಿಂದ 50 ಕಡಿಮೆ ಇರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಅಂದರೆ ದಿನಕ್ಕೆ 7000 ಹೆಜ್ಜೆಗಳನ್ನು ಪೂರೈಸುವ ವ್ಯಕ್ತಿಯು ಅಕಾಲಿಕ ಮರಣ ತಪ್ಪಿಸಬಹುದು ಎಂದು ಹೇಳಿದೆ.ಅಧ್ಯಯನವನ್ನು 'ಜಮಾ ನೆಟ್ವರ್ಕ್ ಓಪನ್' ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ದಿನಕ್ಕೆ 10,000ಕ್ಕಿಂತ ಹೆಚ್ಚು ಹೆಜ್ಜೆಗಳು ನಡೆಯುವುದು ಅಥವಾ ವೇಗವಾಗಿ ನಡೆಯುವುದು ಅಪಾಯವನ್ನು ಮತ್ತಷ್ಟು ಕಡಿಮೆಗೊಳಿಸುವುದಿಲ್ಲ ಎಂದು ಲೇಖಕಿ ಮ್ಯಾಸಚೂಸೆಟ್ಸ್ ಅಮ್ಹೆರ್ಸ್ಟ್ ವಿಶ್ವವಿದ್ಯಾಲಯದ ದೈಹಿಕ ಚಟುವಟಿಕೆಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞೆ ಅಮಂಡಾ ಪಲುಚ್ ಹೇಳುತ್ತಾರೆ.

ದಿನಕ್ಕೆ 10,000 ಹೆಜ್ಜೆಗಳು ವೈಜ್ಞಾನಿಕವಾಗಿ ಸ್ಥಾಪಿತವಾದ ಮಾರ್ಗಸೂಚಿಯಲ್ಲ, ಆದರೆ ಇದು ಜಪಾನಿನ ಪೆಡೋಮೀಟರ್‌ಗಾಗಿ ದಶಕಗಳಷ್ಟು ಹಳೆಯ ಮಾರ್ಕೆಟಿಂಗ್ ಅಭಿಯಾನದ ಭಾಗವಾಗಿ ಹೊರಹೊಮ್ಮಿದೆ ಎಂದು ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಅಂಡ್ ಹೆಲ್ತ್ ಸೈನ್ಸಸ್‍ನ ಕಿನಿಸಿಯಾಲಜಿಯ ಸಹಾಯಕ ಪ್ರಾಧ್ಯಾಪಕ ಪಲುಚ್ ಹೇಳಿದರು.

ಆರೋಗ್ಯ ಪ್ರಯೋಜನಗಳಿಗಾಗಿ ನಾವು ದಿನಕ್ಕೆ ಎಷ್ಟು ಹೆಜ್ಜೆ ನಡೆಯಬೇಕು? ಎಂಬುದನ್ನು ಸಾರ್ವಜನಿಕ ಆರೋಗ್ಯ ಸಂದೇಶಕ್ಕಾಗಿ ಅಥವಾ ವೈದ್ಯ ಮತ್ತು ರೋಗಿಯ ಸಂವಹನಕ್ಕಾಗಿ ತಿಳಿಯುವುದು ಉತ್ತಮ ಎಂದು ಲೇಖಕಿ ಸಲಹೆ ನೀಡುತ್ತಾರೆ.

ಸಂಶೋಧಕರು ಯುವ ವಯಸ್ಕರಲ್ಲಿ ಕೊರೊನರಿ ಆರ್ಟರಿ ರಿಸ್ಕ್ ಡೆವಲಪ್‍ಮೆಂಟ್ (CARDIA) ಅಧ್ಯಯನದಿಂದ ಡೇಟಾ ಸಂಗ್ರಹಿಸಿದರು, ಇದು 1985ರಲ್ಲಿ ಪ್ರಾರಂಭವಾಯಿತು ಮತ್ತು ಈಗಲೂ ನಡೆಯುತ್ತಿದೆ. 2005-06ರಲ್ಲಿ ಭಾಗವಹಿಸಿದ್ದ 38 ರಿಂದ 50ರ ಮಧ್ಯ ವಯಸ್ಸಿನ ಸುಮಾರು 2,100 ಮಂದಿ ಅಕ್ಸೆಲೆರೊಮೀಟರ್ ಧರಿಸಿದ್ದರು. ಅದರ ನಂತರ ಸುಮಾರು 11 ವರ್ಷಗಳ ನಂತರ ಫಲಿತಾಂಶದ ಡೇಟಾವನ್ನು 2020 ಮತ್ತು 2021ರಲ್ಲಿ ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ:UPSC is Hiring: ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ UPSC; ಅರ್ಜಿ ಸಲ್ಲಿಸಲು ಅ.1 ಕೊನೆಯ ದಿನಾಂಕ

ಭಾಗವಹಿಸುವವರನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಕಡಿಮೆ ಪರಿಮಾಣ (ದಿನಕ್ಕೆ 7,000ಕ್ಕಿಂತ ಕಡಿಮೆ), ಮಧ್ಯಮ (7,000-9,999 ನಡುವೆ) ಮತ್ತು ಹೆಚ್ಚಿನ (10,000ಕ್ಕಿಂತ ಹೆಚ್ಚು) ಎಂದು ಪಲುಚ್ ಹೇಳಿದರು.

"7,000 ಮತ್ತು 10,000 ನಡುವೆ ವಾಕಿಂಗ್ ಮಾಡಿದ್ದಲ್ಲಿ ಇದರಿಂದ ಆರೋಗ್ಯ ಪ್ರಯೋಜನಗಳಿವೆ. ಆದರೆ 10,000 ಹೆಜ್ಜೆ ಮೀರಿದರೆ ನಾವು ಹೆಚ್ಚುವರಿ ಪ್ರಯೋಜನವನ್ನು ಕಾಣಲಿಲ್ಲ" ಎಂದು ಪಲುಚ್ ಹೇಳಿದರು. ವಾಕಿಂಗ್ ಮಾಡುವಾಗ 4,000 ದಿಂದ 5,000 ಹೆಜ್ಜೆಯವರೆಗೆ ನಡೆಯುವುದು ಅರ್ಥಪೂರ್ಣವಾಗಿದೆ. 5,000 ದಿಂದ 6,000, 10,000ದವರೆಗೂ ಉತ್ತಮವಾಗಿದ್ದು, ಅಕಾಲಿಕ ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ಪಲುಚ್ ಹೇಳುತ್ತಾರೆ.

ಈ ಅಧ್ಯಯನವು ಹಲವಾರು ವೈಶಿಷ್ಟ್ಯಗಳಿಂದ ಕೂಡಿದ್ದು, ಆಸಕ್ತಿದಾಯಕವಾಗಿದೆ. ಜೊತೆಗೆ ಇದು ತಿಳುವಳಿಕೆಯನ್ನು ನೀಡುತ್ತದೆ. ಒಂದು, ಇದು ಮಧ್ಯವಯಸ್ಸಿನ ಜನರನ್ನು ಒಳಗೊಂಡಿದ್ದು, ಹೆಚ್ಚಿನ ಹಂತದ ಅಧ್ಯಯನಗಳು ಹಿರಿಯ ವಯಸ್ಕರ ಮೇಲೆ ಕೇಂದ್ರೀಕೃತವಾಗಿವೆ. ಸರಾಸರಿ ಜೀವಿತಾವಧಿಗಿಂತ ಮುಂಚಿತವಾಗಿ ಆ ಸಾವುಗಳನ್ನು ತಡೆಯುವುದು ನಿಜವಾಗಿಯೂ ದೊಡ್ಡ ವಿಷಯವೇ ಸರಿ.

ದಿನದ ವಾಕಿಂಗ್ ಕೂಡ ಅಕಾಲಿಕ ಮರಣದೊಂದಿಗೆ ಸಂಬಂಧ ಹೊಂದಬಹುದು ಎಂದು ತೋರಿಸುವುದು ಕ್ಷೇತ್ರಕ್ಕೆ ನೀಡಿದ ಹೊಸ ಕೊಡುಗೆಯಾಗಿದೆ. ಅಧ್ಯಯನಕ್ಕೆ ಕಪ್ಪು, ಬಿಳುಪಿನ ಸಮಾನ ಸಂಖ್ಯೆಯ ಪುರುಷರು ಮತ್ತು ಮಹಿಳೆಯರನ್ನು ಒಳಪಡಿಸಲಾಗಿತ್ತು.

ಇದನ್ನೂ ಓದಿ:Jobs for Women: ಶೀಘ್ರದಲ್ಲೇ 10 ಸಾವಿರ ಮಹಿಳಾ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ ಓಲಾ ಕಂಪನಿ..!

ಹೆಚ್ಚು ಕುಳಿತುಕೊಳ್ಳುವ ಗೆಳೆಯರೊಂದಿಗೆ ಹೋಲಿಸಿದರೆ ದಿನನಿತ್ಯ ಕನಿಷ್ಠ 7,000 ಹೆಜ್ಜೆ ನಡೆಯುತ್ತಿರುವ ಜನರ ಸಾವಿನ ದರವು ಮಹಿಳೆಯರು ಮತ್ತು ಕಪ್ಪು ವರ್ಣೀಯರಲ್ಲಿ ಕಡಿಮೆ ಎಂದು ಅಧ್ಯಯನವು ಹೇಳಿದೆ.
Published by:Latha CG
First published: