ಮಹಿಳೆಯರು (Women’s) ತಮ್ಮ ಆರೋಗ್ಯವನ್ನು (Health) ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಇಡೀ ಕುಟುಂಬದ (Family) ಜವಾಬ್ದಾರಿ (Responsibility) ಹೊರುವ ಮಹಿಳೆ ತನ್ನ ಆರೋಗ್ಯದತ್ತ ಗಮನ ಹರಿಸಲು ಆಕೆಗೆ ಸಮಯವೇ ಸಿಗುವುದಿಲ್ಲ. ಮನೆಯ ಎಲ್ಲ ಸದಸ್ಯರ ಊಟ, ತಿಂಡಿ, ಅವಶ್ಯಕತೆಗಳ ಬಗ್ಗೆ ಕಾಳಜಿ ವಹಿಸುತ್ತಾ ತನ್ನನ್ನೇ ತಾನು ತಾನು ಮರೆತು ಬಿಡುತ್ತಾಳೆ. ಹೀಗಾಗಿ ಎಷ್ಟೋ ಬಾರಿ 30 ವರ್ಷ ದಾಟುತ್ತಿದ್ದಂತೆ ಮೂಳೆ ನೋವು, ಬೆನ್ನು ನೋವು, ಹೊಟ್ಟೆ ನೋವಿನಂತ ಆರೋಗ್ಯ ಸಮಸ್ಯೆ ಅವಳನ್ನು ಸುತ್ತುವರಿಯುತ್ತದೆ. ಸರಿಯಾಗಿ ನಿದ್ದೆ ಮಾಡದಿರುವುದು, ಸಮಯಕ್ಕೆ ಸರಿಯಾಗಿ ಊಟ ಮಾಡದೇ ಇರುವುದು ಸಮಸ್ಯೆ ತಂದೊಡ್ಡುತ್ತದೆ.
ಮಹಿಳೆಯರಲ್ಲಿ ಉಂಟಾಗುವ ಕೆಲವು ಕಾಯಿಲೆ ಮತ್ತು ಸಮಸ್ಯೆಗಳು
ತನ್ನ ಅನಾರೋಗ್ಯದ ಬಗ್ಗೆ ಯಾರ ಬಳಿಯೂ ಹೇಳದೇ ಅಲಕ್ಷ್ಯ ಮಾಡುವುದು ಆಕೆಯನ್ನು ಮತ್ತಷ್ಟು ಅನಾರೋಗ್ಯಕ್ಕೆ ತಳ್ಳುತ್ತದೆ. ಪುರುಷರಿಗಿಂತ ಮಹಿಳೆಯರು ಕೆಲವು ಕಾಯಿಲೆ ಮತ್ತು ಸಮಸ್ಯೆಗಳಿಗೆ ಹೆಚ್ಚು ಗುರಿಯಾಗುತ್ತಾರೆ. ರಕ್ತಹೀನತೆ, ಮುಟ್ಟು, ಗರ್ಭಧಾರಣೆಯ ಸಂಬಂಧಿ ಅಸ್ವಸ್ಥತೆ ಮತ್ತು ಗರ್ಭಕಂಠದ ಕ್ಯಾನ್ಸರ್ ಹೆಚ್ಚಿನ ಮಹಿಳೆಯರನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದು, ಗಂಭೀರ ಸಮಸ್ಯೆಗಳಾಗಿವೆ.
ಗರ್ಭಧಾರಣೆ ಮತ್ತು ಹೆರಿಗೆಗೆ ಸಂಬಂಧಿತ ಅಸ್ವಸ್ಥತೆಯಿಂದ ಪ್ರಾಣ ಕಳೆದುಕೊಳ್ಳುತ್ತಾರೆ
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಸುಮಾರು 40 ಪ್ರತಿಶತ ಗರ್ಭಿಣಿಯರು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪ್ರತಿ ವರ್ಷ 810 ಮಹಿಳೆಯರು ಗರ್ಭಧಾರಣೆ ಮತ್ತು ಹೆರಿಗೆಗೆ ಸಂಬಂಧಿತ ಅಸ್ವಸ್ಥತೆಯಿಂದ ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ತೋರಿಸುತ್ತದೆ.
ಇದನ್ನೂ ಓದಿ: ಬಾದಾಮಿ ತಿಂದು ಸಿಪ್ಪೆ ಎಸೆಯೋ ಮುನ್ನ ಅದರ ಪ್ರಯೋಜನ ತಿಳಿಯಿರಿ!
ಇಷ್ಟೇ ಅಲ್ಲ, 2018ರಲ್ಲಿ ಗರ್ಭಕಂಠದ ಕ್ಯಾನ್ಸರ್ನಿಂದ 311000 ಮಹಿಳೆಯರು ಸಾವನ್ನಪ್ಪಿದ್ದಾರೆ. ಇನ್ನೂ ಅನೇಕ ಸಣ್ಣ ಮತ್ತು ದೊಡ್ಡ ಸಮಸ್ಯೆಗಳಿವೆ. ಮಹಿಳೆಯರು ದಿನನಿತ್ಯ ಒಂದಿಲ್ಲೊಂದು ಸಮಸ್ಯೆ ಅನುಭವಿಸುತ್ತಾರೆ. ವೈದ್ಯಕೀಯದಲ್ಲಿ ಮಹಿಳೆಯರ ಅಸ್ವಸ್ಥತೆ ಮತ್ತು ಅವರ ಉತ್ತಮ ಆರೋಗ್ಯಕ್ಕಾಗಿ ವಿವಿಧ ಚಿಕಿತ್ಸೆ ಮತ್ತು ಪರಿಹಾರಗಳು ಲಭ್ಯ ಇವೆ.
ಮೇ 28 ರಂದು ಅಂತರಾಷ್ಟ್ರೀಯ ಮಹಿಳಾ ಆರೋಗ್ಯ ದಿನ
ಮೇ 28 ರಂದು ಅಂತರಾಷ್ಟ್ರೀಯ ಮಹಿಳಾ ಆರೋಗ್ಯ ದಿನವನ್ನು ಆಚರಿಸುತ್ತಾರೆ. ಈ ವೇಳೆ ಫಿಟ್ನೆಸ್ ಗುರು ಮತ್ತು ಸಮಗ್ರ ತಜ್ಞ ಮಿಕ್ಕಿ ಮೆಹ್ತಾ, ಮಹಿಳೆಯರ ಕೆಲವು ಸಮಸ್ಯೆಗಳಿಗೆ ಆಯುರ್ವೇದ ಪರಿಹಾರ ಹೇಳಿದ್ದಾರೆ. ಇವುಗಳು ಸಾಕಷ್ಟು ಪರಿಣಾಮಕಾರಿ ಕ್ರಮಗಳಾಗಿವೆ. ಇದನ್ನು ಫಾಲೋ ಮಾಡಿದ್ರೆ ಮಹಿಳೆ ತನ್ನ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು.
ಬೆಲ್ಲ ಮತ್ತು ದಾಲ್ಚಿನ್ನಿ ಮಿಶ್ರಣದ ಚಹಾ ಸೇವನೆ
ಬೆಲ್ಲ ಮತ್ತು ದಾಲ್ಚಿನ್ನಿ ಮಿಶ್ರಣದಿಂದ ತಯಾರಿಸಿದ ಗಿಡಮೂಲಿಕೆ ಚಹಾವನ್ನು ಬೆಳಿಗ್ಗೆ ನೀವು ಸೇವನೆ ಮಾಡಬೇಕು. ಇದು ಉತ್ತಮ ರೋಗ ನಿರೋಧಕ ಶಕ್ತಿ ಒದಗಿಸಲು ಅವಶ್ಯಕವಾಗಿದೆ. ನಂತರ ನೀವು ಕಸ್ತೂರಿ ಕಲ್ಲಂಗಡಿ, ದಾಳಿಂಬೆ, ತೆಂಗಿನ ನೀರು (ಬೇಸಿಗೆಗೆ) ಇತ್ಯಾದಿ ಹಸಿ ಹಣ್ಣುಗಳನ್ನು ಸೇವಿಸಬೇಕು. 6:30 ಕ್ಕೆ ರಾತ್ರಿ ಊಟ ಮಾಡಬೇಕು.
ಸಂಸ್ಕರಿಸಿದ ಆಹಾರವನ್ನು ತಪ್ಪಿಸಬೇಕು
ನೀವು ಆರೋಗ್ಯವಾಗಿ ಮತ್ತು ಫಿಟ್ ಆಗಿರಲು ಬಯಸಿದರೆ, ಸಂರಕ್ಷಿತ, ಸುವಾಸನೆ, ಕೃತಕ, ಬಣ್ಣ ಮತ್ತು ಸಂಸ್ಕರಿಸಿದ ಆಹಾರ ಸೇವನೆ ತಪ್ಪಿಸಬೇಕು. ಈ ಅಂಶಗಳು ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲಗೊಳಿಸುತ್ತವೆ ಮತ್ತು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ: ನೀವು ಬಳಸುವ ಟೂತ್ ಪೇಸ್ಟ್ ನಿಮ್ಮ ಹಲ್ಲುಗಳಿಗೆ ಎಷ್ಟು ಉತ್ತಮ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ
ಪ್ರತಿದಿನ ಯೋಗ ಮತ್ತು ಧ್ಯಾನ ಮಾಡಿ
ನೀವು ಮನೆಯಲ್ಲಿರಲಿ ಅಥವಾ ಕೆಲಸಕ್ಕೆ ಹೋಗಲಿ, ಆರೋಗ್ಯವಾಗಿ ಮತ್ತು ಚಟುವಟಿಕೆಯಿಂದ ಇರಲು ಪ್ರತಿದಿನ ಯೋಗ ಮಾಡಬೇಕು. ನೀವು ಭುಜಂಗಾಸನ, ಭದ್ರಾಸನ, ಪವನ್ ಮುಕ್ತಾಸನ, ನೌಕಾಸನ, ಬಾಲಾಸನ, ಉಸ್ತ್ರಾಸನ ಇತ್ಯಾದಿ ಮಾಡಬಹುದು. ಪ್ರತಿದಿನ ಶಾಂತ ಚಿತ್ತರಾಗಿ ಧ್ಯಾನ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ