• Home
  • »
  • News
  • »
  • lifestyle
  • »
  • Women’s Health: ಮಹಿಳೆಯರ ಅದೆಷ್ಟೋ ಆರೋಗ್ಯ ಸಮಸ್ಯೆಗಳನ್ನು ಬಾಳೆಹಣ್ಣು ನಿವಾರಿಸುತ್ತೆ, ಗೊತ್ತೇ?

Women’s Health: ಮಹಿಳೆಯರ ಅದೆಷ್ಟೋ ಆರೋಗ್ಯ ಸಮಸ್ಯೆಗಳನ್ನು ಬಾಳೆಹಣ್ಣು ನಿವಾರಿಸುತ್ತೆ, ಗೊತ್ತೇ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಹವನ್ನು ಆಂತರಿಕವಾಗಿ ಆರೋಗ್ಯವಾಗಿಡಲು ನೀವು ದಿನವೂ ಒಂದಾದ್ರೂ ಬಾಳೆಹಣ್ಣು ಸೇವನೆ ಮಾಡುವುದು ಪ್ರಯೋಜನಕಾರಿ ಆಗಿದೆ. ಚರ್ಮದ ಆರೈಕೆಗೆ ನೀವು ಬಾಳೆಹಣ್ಣನ್ನು ಮನೆಮದ್ದಾಗಿಯೂ ಬಳಕೆ ಮಾಡಬಹುದು. ಹಾಗೆಯೇ ಮಹಿಳೆಯರು ಬಾಳೆಹಣ್ಣನ್ನು ಸೇವಿಸಿದರೆ ಅನೇಕ ಸಮಸ್ಯೆ ತೊಡೆದು ಹಾಕಲು ಇದು ಸಹಾಯ ಮಾಡುತ್ತದೆ.

ಮುಂದೆ ಓದಿ ...
  • Share this:

    ಬಾಳೆಹಣ್ಣು (Banana) ಸೇವನೆ ಸಾಕಷ್ಟು ಆರೋಗ್ಯ ಸಮಸ್ಯೆ (Health Problem) ನಿವಾರಿಸಲು ಸಹಕಾರಿ ಆಗಿದೆ. ಬಾಳೆ ಹಣ್ಣಿನಲ್ಲಿ ಹಲವು ವಿಧಗಳಿವೆ. ಬಾಳೆಹಣ್ಣು ಸಾಕಷ್ಟು ಪೋಷಕಾಂಶಗಳಿಂದ (Nutrients) ಸಮೃದ್ಧವಾಗಿದೆ. ಬಾಳೆಹಣ್ಣು ವರ್ಷಪೂರ್ತಿ ಮಾರುಕಟ್ಟೆಯಲ್ಲಿ (Market) ಸಿಗುವ ಹಣ್ಣು (Fruit) ಇದಾಗಿದೆ. ಹೊಟ್ಟೆಯ ಸಮಸ್ಯೆಯಿಂದ ಹಿಡಿದು ಬಾಯಿ ಹುಣ್ಣು ಸೇರಿದಂತೆ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಬಾಳೆಹಣ್ಣು ರಾಮಬಾಣ ಆಗಿದೆ. ಜೊತೆಗೆ ಚಿಕ್ಕ ಮಕ್ಕಳಿಗೆ ಬಾಳೆಹಣ್ಣು ತಿನ್ನಿಸಿ ಅವರ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಲಹೆ ನೀಡಲಾಗುತ್ತದೆ. ಇದು ಪರೀಕ್ಷೆ ಸ್ಟ್ರೆಸ್ ಕಡಿಮೆ ಮಾಡಲು ಸಹಕಾರಿ ಆಗಿದೆ. ಬಾಳೆ ಹಣ್ಣು ನಿಮ್ಮ ಕೂದಲು ಮತ್ತು ತ್ವಚೆಗೆ ಸಹ ಪ್ರಯೋಜನ ನೀಡುತ್ತದೆ.


    ಮಹಿಳೆಯರ ಆರೋಗ್ಯ ವೃದ್ಧಿಗೆ ಬಾಳೆಹಣ್ಣು ಸಹಕಾರಿ


    ದೇಹವನ್ನು ಆಂತರಿಕವಾಗಿ ಆರೋಗ್ಯವಾಗಿಡಲು ನೀವು ದಿನವೂ ಒಂದಾದ್ರೂ ಬಾಳೆಹಣ್ಣು ಸೇವನೆ ಮಾಡುವುದು ಪ್ರಯೋಜನಕಾರಿ ಆಗಿದೆ. ಚರ್ಮದ ಆರೈಕೆಗೆ ನೀವು ಬಾಳೆಹಣ್ಣನ್ನು ಮನೆಮದ್ದಾಗಿಯೂ ಬಳಕೆ ಮಾಡಬಹುದು. ಹಾಗೆಯೇ ಮಹಿಳೆಯರು ಬಾಳೆಹಣ್ಣನ್ನು ಸೇವಿಸಿದರೆ ಅನೇಕ ಸಮಸ್ಯೆ ತೊಡೆದು ಹಾಕಲು ಇದು ಸಹಾಯ ಮಾಡುತ್ತದೆ.


    ಡಯಟ್ ಮತ್ತು ವೆಲ್‌ನೆಸ್ ಕ್ಲಿನಿಕ್ ಮತ್ತು ಅಕಾಡೆಮಿಯ ನ್ಯೂಟ್ರಿಫೈ ನಿರ್ದೇಶಕಿ ಪೂನಂ ದುನೇಜಾ ಅವರು ಬಾಳೆಹಣ್ಣು ಮಹಿಳೆಯರಿಗೆ ಹೇಗೆ ಪ್ರಯೋಜನಕಾರಿ ಎಂದು ಹೇಳಿದ್ದಾರೆ.


    ಇದನ್ನೂ ಓದಿ: ಮಹಿಳೆಯರ ಆರೋಗ್ಯಕ್ಕೆ ಸಮಸ್ಯೆಯಂತೆ ಈ ಮಧ್ಯಂತರ ಉಪವಾಸ


    ಮಹಿಳೆಯರ ರಕ್ತದೊತ್ತಡ ನಿಯಂತ್ರಿಸುತ್ತದೆ


    ಬಾಳೆಹಣ್ಣಿನಲ್ಲಿ ಎಲ್ಲಾ ಪೋಷಕಾಂಶಗಳು ಹೇರಳವಾಗಿವೆ. ಇದು ಮಹಿಳೆಯರ ಆರೋಗ್ಯಕ್ಕೆ ಬಹಳ ಮುಖ್ಯ. ಡಯೆಟಿಷಿಯನ್ ಪೂನಂ ದುನೇಜಾ ಹೇಳುವ ಪ್ರಕಾರ, ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಇದೆ. ಇದು ರಕ್ತದೊತ್ತಡ ನಿವಾರಣೆಗೆ ಪ್ರಯೋಜನಕಾರಿ ಆಗಿದೆ. ಆಹಾರದಲ್ಲಿ ಬಾಳೆಹಣ್ಣನ್ನು ಸೇರಿಸಿದರೆ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಪ್ರಯೋಜನಕಾರಿ ಎಂದು ಹೇಳಿದ್ದಾರೆ.


    ಚರ್ಮದ ಕಪ್ಪು ಕಲೆಗಳನ್ನು ತೆಗೆದು ಹಾಕುತ್ತದೆ


    ಆರೋಗ್ಯದ ಜೊತೆಗೆ ಬಾಳೆಹಣ್ಣು ಮಹಿಳೆಯ ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ. ಹಾಗಾಗಿ ಬಾಳೆಹಣ್ಣನ್ನು ಶತಮಾನಗಳಿಂದ ಮನೆಮದ್ದುಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಡಾ.ಪೂನಂ ದುನೇಜಾ ಅವರ ಪ್ರಕಾರ, ಬಾಳೆಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ರೆಟಿನಾಲ್ ಇದೆ. ಚರ್ಮದ ಆರೋಗ್ಯಕ್ಕೆ ಅವಶ್ಯಕವಾಗಿದೆ. ಇದರ ಸೇವನೆ ಮುಖದ ಮೇಲಿನ ಕಪ್ಪು ಕಲೆ ಕಡಿಮೆ ಮಾಡುತ್ತದೆ ಎಂದಿದ್ದಾರೆ.


    ವ್ಯಾಯಾಮದ ಮೊದಲು ಮತ್ತು ನಂತರದಲ್ಲಿ ಸಹಕಾರಿ


    ತಾಲೀಮು ಮೊದಲು ಮತ್ತು ನಂತರ ಊಟದಲ್ಲಿ ಬಾಳೆಹಣ್ಣು ಸೇರಿಸಿದರೆ ಉತ್ತಮ ಅಂತಾರೆ ತಜ್ಞರಾದ ಪೂನಂ ದುನೇಜಾ. ಬಾಳೆಹಣ್ಣು ದೇಹದ ಗ್ಲೂಕೋಸ್ ಮಟ್ಟ ಕಾಪಾಡಲು ಸಹಕಾರಿ ಆಗಿದೆ. ವರ್ಕ್ ಔಟ್ ಊಟದಲ್ಲಿ ಇದನ್ನು ಸೇರಿಸುವುದು ಉತ್ತಮ ಆಯ್ಕೆ ಆಗಿದೆ.


    ವಯಸ್ಸಾದ ವಿರೋಧಿ ಗುಣ ಹೊಂದಿದೆ


    ದೇಹ ಮತ್ತು ಚರ್ಮವನ್ನು ನಿರ್ವಿಷಗೊಳಿಸಲು ಹಣ್ಣುಗಳ ಸೇವನೆ ಸಹಕಾರಿ. ಬಾಳೆಹಣ್ಣು ಕೂಡ ವಯಸ್ಸಾದ ವಿರೋಧಿ ಗುಣ ಹೊಂದಿರುವ ಹಣ್ಣು ಆಗಿದೆ ಎಂದು ಹೇಳ್ತಾರೆ. ಇದು ಕಪ್ಪು ಕಲೆಗಳನ್ನು ಹೋಗಲಾಡಿಸುವ ಜೊತೆಗೆ ದೇಹದ ಜೀವಕೋಶಗಳನ್ನು ಹೈಡ್ರೇಟ್ ಆಗಿ ಇಡಲು ಸಹಾಯ ಮಾಡುತ್ತದೆ. ದೇಹ ಮತ್ತು ಚರ್ಮದ ಮೇಲೆ ಬಾಹ್ಯವಾಗಿ ಗೋಚರಿಸುತ್ತದೆ. ಸರಿಯಾದ ಪ್ರಮಾಣದಲ್ಲಿ ಬಾಳೆಹಣ್ಣು ಸೇವಿಸಿದರೆ ಕಲೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.


    ಹೃದಯದ ಆರೋಗ್ಯಕ್ಕೆ ಉತ್ತಮ


    ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬಾಳೆಹಣ್ಣು ಮೆಗ್ನೀಸಿಯಮ್, ಜೀವಸತ್ವ ಮತ್ತು ಪೊಟ್ಯಾಸಿಯಮ್ ಹೊಂದಿವೆ. ಸರಿಯಾದ ಪ್ರಮಾಣದ ಹೃದಯ-ಆರೋಗ್ಯಕರ ಪೋಷಕಾಂಶ ಹೊಂದಿವೆ. ಇದು ಹೃದಯದ ಆರೋಗ್ಯಕ್ಕೆ ಇದು ಪ್ರಯೋಜನಕಾರಿ ಆಗಿದೆ. ಆಂಟಿ-ಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇದನ್ನು ಸಲಾಡ್‌ನಂತೆ ತಿನ್ನಬಹುದು.


    ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಈ ಒಂದು ಮೂಲಿಕೆ ಪರಿಣಾಮಕಾರಿ!


    ಫೇಸ್ ಮಾಸ್ಕ್ ಗೆ ಬಳಸಬಹುದು.


    ಬಾಳೆಹಣ್ಣನ್ನು ಉತ್ಕರ್ಷಣ ನಿರೋಧಕವಾಗಿದೆ. ಇದನ್ನು ಫೇಸ್ ಮಾಸ್ಕ್ ಆಗಿ ಬಳಕೆ ಮಾಡಬಹುದು. ಬಾಳೆಹಣ್ಣಿನ ಸಿಪ್ಪೆಯನ್ನು ಮುಖದ ಮೇಲೆ ಹಚ್ಚುವುದು ಸೂಕ್ಷ್ಮ ರೇಖೆಗಳು ಮತ್ತು ಸುಕ್ಕು ಕಡಿಮೆ ಮಾಡುತ್ತದೆ.

    Published by:renukadariyannavar
    First published: