ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಯೂರೋಪ್ ಮತ್ತು ಉತ್ತರ ಅಮೆರಿಕದ ಮಹಿಳೆಯರು ಬೆಳಗಿನ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗಿಂತ ಶೇ. 19ರಷ್ಟು ಹೆಚ್ಚು ಸ್ತನ ಕ್ಯಾನ್ಸರ್ಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ತಿಳಿಸಿದೆ.
ಇದೇ ಪರಿಣಾಮ ಆಸ್ಟ್ರೇಲಿಯಾ ಮತ್ತು ಏಷ್ಯಾ ಮಹಿಳೆಯರ ಮೇಲೂ ಆಗುತ್ತಿದೆಯಾ ಎಂಬ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ ಎಂದು ಕ್ಯಾನ್ಸರ್ ಎಪಿಡೆಮಿಯಾಲಜಿ, ಬಯೋಮಾರ್ಕರ್ಸ್ ಮತ್ತು ಪ್ರಿವೆಂನ್ಷನ್ ಜರ್ನಲ್ ಮೆಟಾ ವಿಶ್ಲೇಷಣೆ ತಿಳಿಸಿದೆ.
ಬಾಳೆ ಹಣ್ಣಿನ ಸಿಪ್ಪೆಯಿಂದ ಇಷ್ಟೆಲ್ಲಾ ಪ್ರಯೋಜನ ಇದೆ ಎಂದರೆ ನಂಬಲೇಬೇಕು!
`ನಮ್ಮ ಅಧ್ಯಯನದ ಪ್ರಕಾರ, ರಾತ್ರಿ ಪಾಳಿ ಮಾಡುವ ಮಹಿಳೆಯರಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚಿದೆ. ರಾತ್ರಿ ಪಾಳಿ ಕೆಲಸದಿಂದ ಕ್ಯಾನ್ಸರ್ ಸಾಧ್ಯತೆ ಹೆಚ್ಚು ಕಂಡುಬಮದಿರುವುದು ನಿಜಕ್ಕೂ ನನಗೆ ಅಚ್ಚರಿ ಎನಿಸುತ್ತಿದೆ ಪಶ್ಚಿಮ ಚೀನಾದ ಸಿಷುಯಾನ್ ಮೆಡಿಕಲ್ ಸೆಂಟರ್ ಪ್ರಾಧ್ಯಾಪಕ ಷಿಯೋಲೆ ಮಾ ಅಭಿಪ್ರಾಯಪಟ್ಟಿದ್ದಾರೆ.
ಉತ್ತರ ಅಮೆರಿಕ ಮತ್ತು ಯೂರೋಪ್ ಮಹಿಳೆಯೆರಲ್ಲಿ ಸೆಕ್ಸ್ ಹಾರ್ಮೋನ್ ಮಟ್ಟ ಹೆಚ್ಚಿರುವುದರಿಂದ ಹಾರ್ಮೋನ್ ಸಂಬಂಧಿತ ಸ್ತನ ಕ್ಯಾನ್ಸರ್ ಆಗುತ್ತಿರಬಹುದು ಎಂದು ಪ್ರಾಧ್ಯಾಪಕರು ಅಭಿಪ್ರಾಯಪಟ್ಟಿದ್ದಾರೆ.
ಈ ವಯಸ್ಸಿನಲ್ಲಿ ಗಂಡಸು ತಂದೆಯಾದರೆ ಒಳ್ಳೆಯದು; ಸಂಶೋಧನೆ
ಉತ್ತರ ಅಮೆರಿಕ ಮತ್ತು ಯೂರೋಪ್ನ 3.9 ಮಿಲಿಯನ್ ಜನರನ್ನ ಬಳಸಿಕೊಂಡು ತಯಾರಿಸಲಾದ 61 ಅಧ್ಯಯನಗಳ ಆಧಾರದ ಮೇಲೆ ಈ ಅಭಿಪ್ರಾಯಕ್ಕೆ ಬರಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ