Side Effects Of Sanitary Pads: ಸ್ಯಾನಿಟರಿ ಪ್ಯಾಡ್​ ಬಳಕೆ ಮಾಡುವಾಗ ಈ ವಿಚಾರಗಳನ್ನು ನೆನಪಿನಲ್ಲಿಡಿ..

Dangers of Using a Sanitary Pad: ಆದರೆ ತಜ್ಞರ ಪ್ರಕಾರ, ಸ್ಯಾನಿಟರಿ ಪ್ಯಾಡ್‌ಗಳು ತುಂಬಾ ಸುರಕ್ಷಿತವಾಗಿದೆ. ಆದರೆ ಜನನಾಂಗದ ಕ್ಯಾನ್ಸರ್ ಸ್ಯಾನಿಟರಿ ಪ್ಯಾಡ್‌ಗಳಿಂದ ಉಂಟಾಗುತ್ತದೆ ಎಂದು ಕೆಲವು ವರದಿಗಳು ಬಂದಿವೆ. ಏಕೆಂದರೆ ಇದನ್ನು ತಯಾರಿಸಲಿ  ಡಯಾಕ್ಸಿನ್ ಮತ್ತು ಸೂಪರ್-ಹೀರಿಕೊಳ್ಳುವ ಪಾಲಿಮರ್‌ಗಳಂತಹ ಹೀರಿಕೊಳ್ಳುವ ‘ಅಂಶಗಳನ್ನು ಬಳಸುತ್ತಾರೆ. ಇದರಿಂದ ಡಯಾಕ್ಸಿನ್ ಗಳು ದೇಹದಲ್ಲಿ ಶೇಖರಣೆಯಾಗಬಹುದು,

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಟ್ಯಾಂಪೂನ್ (Tampons)ಮತ್ತು ಕಪ್‌ಗಳಂತಹ ಹಲವು ಆಯ್ಕೆಗಳಿದ್ದರೂ, ಹೆಚ್ಚಿನ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‌ಗಳು(Sanitary Pads) ಮಾತ್ರ ಮೊದಲ ಆಯ್ಕೆಯಾಗಿದೆ.  ಪ್ರತಿ ಮಹಿಳೆಯು ತನ್ನ ಮುಟ್ಟಿನ  ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಮತ್ತು ಟ್ಯಾಂಪೂನ್ಗಳನ್ನು ಅವಲಂಬಿಸುತ್ತಾರೆ. ಆದರೆ ಈ ಉತ್ಪನ್ನಗಳು ಎಷ್ಟು ಸುರಕ್ಷಿತ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಟ್ಯಾಂಪೂನ್ ಅಥವಾ ಪ್ಯಾಡ್ ಗಳು ಆರೋಗ್ಯಕರವೇ? ಅವು ಹೇಗೆ ಅಪಾಯಕಾರಿ ಎಂಬುದರ ಅರಿವು ಇರಬೇಕು. ಹೌದು, ಪ್ಯಾಡ್​ಗಳು ಹೆಚ್ಚು ಅಪಾಯಕಾರಿಯಾಗಬಹುದು.  

ಸ್ಯಾನಿಟರಿ ಪ್ಯಾಡ್‌ಗಳು ಸುರಕ್ಷಿತವೇ?

ಬಳಸಿದ ಸ್ಯಾನಿಟರಿ ಪ್ಯಾಡ್‌ಗಳು ಮತ್ತು ಟ್ಯಾಂಪನ್‌ಗಳು ಪರಿಸರಕ್ಕೆ ದೊಡ್ಡ ಅಪಾಯವನ್ನುಂಟುಮಾಡುತ್ತವೆ ಎಂದು ಪರಿಸರವಾದಿಗಳು ಪದೇ ಪದೇ ಒತ್ತಿ ಹೇಳಿದ್ದಾರೆ. ಇದು ಮುಖ್ಯವಾಗಿ ಅವುಗಳಲ್ಲಿರುವ ರಾಸಾಯನಿಕಗಳಿಂದಾಗಿ. ಅವು ಪರಿಸರಕ್ಕೆ ಹಾನಿಕಾರಕವಾಗಿದ್ದರೆ, ಅವು ನಿಮಗೆ ಹೇಗೆ ಒಳ್ಳೆಯದಾಗುತ್ತದೆ.

ಆದರೆ ತಜ್ಞರ ಪ್ರಕಾರ, ಸ್ಯಾನಿಟರಿ ಪ್ಯಾಡ್‌ಗಳು ತುಂಬಾ ಸುರಕ್ಷಿತವಾಗಿದೆ. ಆದರೆ ಜನನಾಂಗದ ಕ್ಯಾನ್ಸರ್ ಸ್ಯಾನಿಟರಿ ಪ್ಯಾಡ್‌ಗಳಿಂದ ಉಂಟಾಗುತ್ತದೆ ಎಂದು ಕೆಲವು ವರದಿಗಳು ಬಂದಿವೆ. ಏಕೆಂದರೆ ಇದನ್ನು ತಯಾರಿಸಲಿ  ಡಯಾಕ್ಸಿನ್ ಮತ್ತು ಸೂಪರ್-ಹೀರಿಕೊಳ್ಳುವ ಪಾಲಿಮರ್‌ಗಳಂತಹ ಹೀರಿಕೊಳ್ಳುವ ‘ಅಂಶಗಳನ್ನು ಬಳಸುತ್ತಾರೆ. ಇದರಿಂದ ಡಯಾಕ್ಸಿನ್ ಗಳು ದೇಹದಲ್ಲಿ ಶೇಖರಣೆಯಾಗಬಹುದು, ಇದು ಸಂತಾನೋತ್ಪತ್ತಿ ಅಂಗಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಕ್ಯಾನ್ಸರ್ ಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ನಿಮಗೆ ಮೈಗ್ರೇನ್ ಇದ್ದರೆ ಅಪ್ಪಿ ತಪ್ಪಿಯೂ ಈ ಆಹಾರಗಳನ್ನು ಸೇವನೆ ಮಾಡಬೇಡಿ..

ಡಯಾಕ್ಸಿನ್ ಎಂದರೇನು? 

ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಬಿಳಿಯಾಗಿ ಕಾಣುತ್ತವೆ ಏಕೆಂದರೆ ನೀವು  ಅದರಲ್ಲಿ ಬಳಸಿರುವ ಹತ್ತಿ ಬಿಳಿಯಾಗಿರುತ್ತದೆ ಎಂದು ನೀವು ಭಾವಿಸಿದ್ದರೆ, ಅದು ತಪ್ಪು.  ಹತ್ತಿಯು ಬಣ್ಣದ ಛಾಯೆಯನ್ನು ಹೊಂದಿರುತ್ತದೆ  ಹೊರತು ಬಿಳಿಯಾಗಿರುವುದಿಲ್ಲ. ಪ್ಯಾಡ್‌ಗಳನ್ನು ಬ್ಲೀಚ್ ಮಾಡಲು ಮತ್ತು ಅವುಗಳನ್ನು ಬಿಳಿಯಾಗಿಸಲು ತಯಾರಕರು ಡಯಾಕ್ಸಿನ್ ಎಂಬ ರಾಸಾಯನಿಕವನ್ನು ಬಳಸುತ್ತಾರೆ. ಅದು ನಿಮ್ಮ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ರಾಸಾಯನಿಕ ನಮ್ಮ ಚರ್ಮದ ಮೇಲೆ ಮಾತ್ರವಲ್ಲದೇ, ವಿವಿಧ ರೋಗಗಳನ್ನು ಉಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

ಡಯಾಕ್ಸಿನ್ ಒಂದು ಕಾರ್ಸಿನೋಜೆನ್ ಆಗಿದೆ. ಅಂದರೆ, ಇದು ದೇಹದಲ್ಲಿ ಕ್ಯಾನ್ಸರ್ ಕೋಶಗಳ ರಚನೆಯನ್ನು ಉತ್ತೇಜಿಸುತ್ತದೆ.. ಡಯಾಕ್ಸಿನ್ ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಇದು ರೋಗ ಬರುವ ಅಪಾಯವನ್ನು ಹೆಚ್ಚಿಸುತ್ತದೆ. ಈ ಡಯಾಕ್ಸಿನ್ ನ ಲೈಂಗಿಕ ಹಾರ್ಮೋನ್ ಆಗಿರುವ ಈಸ್ಟ್ರೊಜೆನ್ ನಂತಹ ಸಂತಾನೋತ್ಪತ್ತಿ ಹಾರ್ಮೋನುಗಳ ಉತ್ಪಾದನೆಯ ಮೇಲೂ ಪರಿಣಾಮ ಬೀರುತ್ತದೆ. ಇದು  ಗರ್ಭದ ಸಮಸ್ಯೆಗಳನ್ನು ಉಂಟುಮಾಡಬಹುದು.

ಕೀಟನಾಶಕಗಳು

ಅವುಗಳನ್ನು ನೇರವಾಗಿ ಪ್ಯಾಡ್‌ಗಳಿಗೆ ಸಿಂಪಡಿಸಲಾಗುವುದಿಲ್ಲ.  ಕೀಟನಾಶಕಗಳು ಸ್ಯಾನಿಟರಿ ಪ್ಯಾಡ್‌ಗಳಿಗೆ ಕಂಡುಬರಲು ಕಾರಣ   ಹತ್ತಿ ಬೆಳೆಗಾರರು.  ಹೌದು,ಹತ್ತಿ ಬೆಳೆಗಾರರು ಗಿಡದ ಬೆಳವಣಿಗಾಗಿ ಕೀಟನಾಶಕಗಳನ್ನು  ಸಿಂಪಡಿಸುತ್ತಾರೆ.

ಹಾಗಾದ್ರೆ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು?  

1. ನೀವು ಸ್ಯಾನಿಟರಿ ಪ್ಯಾಡ್‌ಗಳನ್ನು ಆಗಾಗ ಬದಲಾಯಿಸಿ. ಪ್ರತಿ 3 ರಿಂದ 4 ಗಂಟೆಗಳಿಗೊಮ್ಮೆ ಬದಲಾಯಿಸುವುದು ಅವಶ್ಯಕ.

2. ಮೂತ್ರದ ಸೋಂಕಿನ (ಯುಟಿಐ) ಸಾಧ್ಯತೆಗಳನ್ನು ಕಡಿಮೆ ಮಾಡಲು ಪಿರಿಯಡ್ಸ್ ಸಮಯದಲ್ಲಿ ಹೈಡ್ರೇಟೆಡ್ ಆಗಿರಿ. ಹೆಚ್ಚು ನೀರು ಕುಡಿಯಿರಿ.

3. ಪೆರಿನಿಯಲ್ ಸ್ವಚ್ಛತೆ  ಕಾಪಾಡಿಕೊಳ್ಳಲು ಯಾವಾಗಲೂ ಸ್ವಚ್ಛ ಮತ್ತು ಒಣ ಒಳ ಉಡುಪು ಧರಿಸಿ.

4. ಸ್ವಚ್ಛವಾದ ಸಾವಯವ ಪ್ಯಾಡ್ ಗಳನ್ನು ಆಯ್ಕೆ ಮಾಡುವುದು ಉತ್ತಮ.

5. ಪರಿಮಳಯುಕ್ತ ಪ್ಯಾಡ್‌ಗಳನ್ನು ಆಯ್ಕೆ ಮಾಡಬೇಡಿ

6. ಸಾರ್ವಜನಿಕ ಶೌಚಾಲಯಗಳನ್ನು ಬಳಸುವುದನ್ನು ತಪ್ಪಿಸಿ.

ಇದನ್ನೂ ಓದಿ: ತೂಕ ಇಳಿಸಿಕೊಳ್ಳಬೇಕಾ? ಹಾಗಾದ್ರೆ ಈ Dash Diet ಟ್ರೈ ಮಾಡಿ..

7. ಮರುಬಳಕೆ ಮಾಡಬಹುದಾದ ಪ್ಯಾಡ್‌ಗಳನ್ನು ಸರಿಯಾಗಿ ಸ್ವಚ್ಛ ಮಾಡಿ.

8. ನಿಮ್ಮ ಯೋನಿಯ ಅಂದರೆ ಜನನಾಂಗದ ಸುತ್ತ ಯಾವುದೇ ಸೋರಿಯಾಸಿಸ್ ಅಥವಾ ತುರಿಕೆ ಕಂಡಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
Published by:Sandhya M
First published: