ನೈಟ್​ಶಿಫ್ಟ್​ನಲ್ಲಿ ಕೆಲಸ ಮಾಡ್ತೀರಾ? ಬೆಳಗ್ಗೆ ಲೇಟಾಗಿ ಏಳ್ತೀರಾ?; ಹಾಗಾದರೆ ಇಲ್ಲಿದೆ ಆಘಾತಕಾರಿ ಸುದ್ದಿ

ದಿನಕ್ಕೆ 8 ಗಂಟೆಗಿಂತ ಹೆಚ್ಚುಕಾಲ ನಿದ್ರಿಸುವವರಿಗೆ ಮತ್ತು ಬೆಳಗ್ಗೆ ತಡವಾಗಿ ಏಳುವ ಅಭ್ಯಾಸ ಇರುವವರಲ್ಲಿ ಸ್ತನ ಕ್ಯಾನ್ಸರ್​ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಎನ್ನುತ್ತದೆ ಇಂಗ್ಲೆಂಡ್​ನ ಬ್ರಿಸ್ಟೋಲ್ ಯುನಿವರ್ಸಿಟಿಯ ಅಧ್ಯಯನ.

Sushma Chakre | news18
Updated:June 28, 2019, 3:48 PM IST
ನೈಟ್​ಶಿಫ್ಟ್​ನಲ್ಲಿ ಕೆಲಸ ಮಾಡ್ತೀರಾ? ಬೆಳಗ್ಗೆ ಲೇಟಾಗಿ ಏಳ್ತೀರಾ?; ಹಾಗಾದರೆ ಇಲ್ಲಿದೆ ಆಘಾತಕಾರಿ ಸುದ್ದಿ
ಸಾಂದರ್ಭಿಕ ಚಿತ್ರ
  • News18
  • Last Updated: June 28, 2019, 3:48 PM IST
  • Share this:
ಈಗಷ್ಟೇ ಮಲಗಿದ ನೆನಪು... ಅಷ್ಟರಲ್ಲಾಗಲೇ ಯಾರೋ ಮನೆಯ ಮುಂದೆ ನೀರು ಹಾಕಿ ಪೊರಕೆಯಿಂದ ಬರ್​ ಬರ್​ ಎಂದು ಗುಡಿಸುವ ಸದ್ದಾಯಿತು. ಇದೇನಿದು ಈ ಮಧ್ಯರಾತ್ರಿ ಯಾರದು ಕಸ ಗುಡಿಸೋರು? ಇವರಿಗೆ ಮಾಡೋಕೇನೂ ಕೆಲಸವಿಲ್ವ? ಯಾಕೆ ನಮ್ಮ ನಿದ್ರೆ ಹಾಳು ಮಾಡ್ತಾರೋ ಎಂದು ಮನಸಿನಲ್ಲೇ ಗೊಣಗಿಕೊಂಡು ಮಲಗಿದ್ದಾಯ್ತು. ಮತ್ತೆ ಸ್ವಲ್ಪ ಹೊತ್ತಿನಲ್ಲಿ ಈಚೆ ಮನೆಯಲ್ಲಿ ಕುಕ್ಕರ್​ ಕೂಗುವ ಸದ್ದು. ನಿಧಾನಕ್ಕೆ ಮುಖದಿಂದ ಹೊದಿಕೆ ಸರಿಸಿ ಮೊಬೈಲ್ ನೋಡಿದರೆ ಆಗಲೇ 7 ಗಂಟೆಯಾಗಿತ್ತು.

ಅಯ್ಯೋ! 7 ಗಂಟೆಯಾಗಿಹೋಯ್ತ? ಅಂತ ದಢಕ್ಕನೆ ಎದ್ದು ಕೂತವಳಿಗೆ ಹಾಸಿಗೆಯ ಸೆಳೆತ ಜೋರಾಗಿತ್ತು. ಇನ್ನು ಸ್ವಲ್ಪ ಹೊತ್ತು ಮಲಗಿ ಆಮೇಲೆ ಆಫೀಸಿಗೆ ರೆಡಿ ಆದರಾಯಿತು ಎಂದುಕೊಂಡು ಮಲಗಿದವಳು ಆ ದಿನವೂ ಆಫೀಸಿಗೆ ಲೇಟು. ಇದು ದಿನನಿತ್ಯ ನಡೆಯುವ ಪದ್ಧತಿ. ಇದು ಯಾರೋ ಒಬ್ಬರ ಕತೆಯಲ್ಲ; ಉದ್ಯೋಗಕ್ಕೆ ಹೋಗುವ ಬಹುತೇಕ ಜನರ ಕತೆಯೂ ಇದೇ. ಹಾಗೇ ಕಾಲೇಜಿಗೆ ಹೋಗುವವರ ಪರಿಸ್ಥಿತಿಯೂ ಇದಕ್ಕೆ ಹೊರತೇನೂ ಅಲ್ಲ. ರಾತ್ರಿ ಎಷ್ಟು ಹೊತ್ತಾದರೂ ಮಲಗಿರುವ ನಾವು ಬೆಳಗ್ಗೆ ಬೇಗ ಏಳಬೇಕೆಂದರೆ ಮುಖ ಕಿವುಚುತ್ತೇವೆ. ಬೆಳಗಿನ ಜಾವದವರೆಗೆ ಬೇಕಿದ್ದರೂ ಓದಲು ರೆಡಿ. ಆದರೆ, ಬೆಳಗೆ ಬೇಗ ಎದ್ದು ಓದಿದರೆ ವಿದ್ಯೆ ತಲೆಗೆ ಹತ್ತುತ್ತದೆ ಎನ್ನುವ ಅಮ್ಮನ ಮೇಲೆ ಇನ್ನಿಲ್ಲದ ಕೋಪ.

ನಿಮ್ಮ ಹೆಂಡತಿ ಅಥವಾ ಗರ್ಲ್​ಫ್ರೆಂಡ್​ ಅನ್ನು ಮೆಚ್ಚಿಸಲು ಹೀಗೆ ಮಾಡಿದ್ರೆ ಸಾಕಂತೆ..!

ನಮ್ಮ ದಿನಚರಿ ಬದಲಾದಂತೆ ಜೀವನಶೈಲಿಯಲ್ಲೂ ಸಾಕಷ್ಟು ಬದಲಾವಣೆಯಾಗುತ್ತಿದೆ. 6 ಗಂಟೆಗೆ ಎದ್ದು ಆಫೀಸಿಗೆ ಹೊರಡಬೇಕೆಂದರೂ ಅದು ಮಹಾ ದೊಡ್ಡ ಸಾಧನೆಯೇ. ನಮ್ಮ ಹಿಂದಿನ ಪೀಳಿಗೆಯವರು ಬೆಳಗೆ ಸೂರ್ಯ ಹುಟ್ಟುವ ಮೊದಲೇ ಎದ್ದು ಕೊಟ್ಟಿಗೆ, ಮನೆಯ ಕೆಲಸ ಶುರುಮಾಡಿರುತ್ತಿದ್ದರು. 7 ಗಂಟೆಯೊಳಗೆ ತಿಂಡಿಯೂ ಆಗಿರುತ್ತಿತ್ತು. ಈಗ ಬೆಂಗಳೂರಿನಂತಹ ಮಹಾನಗರಗಳಲ್ಲಿ ಮುಂಜಾನೆ ಬೀದಿಗಳೆಲ್ಲ ಖಾಲಿಖಾಲಿ. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಜಾಗಿಂಗ್​ ಮಾಡುತ್ತಿರುತ್ತಾರೆ.

Woman sleeping on the bed

ನಮ್ಮ ದಿನಚರಿಯೇ ಹೀಗೆ ಅಂತ ನಾವು ಸಮರ್ಥನೆ ಮಾಡಿಕೊಳ್ಳಬಹುದು. ಆದರೆ, ವಿಷಯ ಬೇರೆಯೇ ಇದೆ. ಬೆಳಗ್ಗೆ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳುವುದರಿಂದ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಉತ್ತಮ ಪರಿಣಾಮಗಳಾಗುತ್ತವೆ ಎಂದು ಸಮೀಕ್ಷೆಯೇ ಹೇಳಿದೆ. ಬೆಳಗ್ಗೆ ಬೇಗ ಎದ್ದು ಒಂದು ಸ್ವಲ್ಪ ಹೊತ್ತು ವ್ಯಾಯಾಮವನ್ನೋ, ಯೋಗಾಸನವನ್ನೋ ಮಾಡುವ ಅಭ್ಯಾಸವನ್ನು ನೀವು ರೂಢಿಸಿಕೊಂಡಿದ್ದರೆ ನಿಮಗೆ ಸಿಹಿಸುದ್ದಿಯಿದೆ. ಒಂದುವೇಳೆ ನೀವು ತಡವಾಗಿ ಏಳುವವರಾಗಿದ್ದರೆ ನಾಳೆಯಿಂದಲೇ ಬೇಗ ಏಳುವುದನ್ನು ರೂಢಿ ಮಾಡಿಕೊಳ್ಳಿ!

ಹುಡುಗೀರು ಡೇಟಿಂಗ್ ಹೋಗೋದ್ಯಾಕೆ?; ಅಧ್ಯಯನದಲ್ಲಿ ಬಹಿರಂಗವಾಯ್ತು ಅಚ್ಚರಿಯ ಸಂಗತಿ!ಇತ್ತೀಚೆಗೆ ಇಂಗ್ಲೆಂಡ್​ನ ಬ್ರಿಸ್ಟೋಲ್ ಯೂನಿವರ್ಸಿಟಿ ನಡೆಸಿರುವ ಅಧ್ಯಯನದಲ್ಲಿ ಕುತೂಹಲಕಾರಿ ಅಂಶವೊಂದು ಬಯಲಾಗಿದ್ದು, ಬೇಗ ಏಳುವುದರಿಂದ ಸ್ತನ ಕ್ಯಾನ್ಸರ್​ ನಿಯಂತ್ರಿಸಬಹುದು. ದಿನಕ್ಕೆ 8 ಗಂಟೆಗಿಂತ ಹೆಚ್ಚುಕಾಲ ನಿದ್ರಿಸುವವರಿಗೆ ಮತ್ತು ಬೆಳಗ್ಗೆ ತಡವಾಗಿ ಏಳುವ ಅಭ್ಯಾಸ ಇರುವವರಲ್ಲಿ ಸ್ತನ ಕ್ಯಾನ್ಸರ್​ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಎನ್ನುತ್ತದೆ ಅಧ್ಯಯನ.ನಿದ್ರೆ ನಮ್ಮ ಆರೋಗ್ಯದ ಮೇಲೆ ಅತಿಹೆಚ್ಚು ಪ್ರಭಾವ ಬೀರುತ್ತದೆ. ಹಾಗಾಗಿಯೇ ರಾತ್ರಿ ವೇಳೆ ಪಾರ್ಟಿಗಳನ್ನು ಹೆಚ್ಚು ಇಷ್ಟಪಡುವ, ನೈಟ್​ ಶಿಫ್ಟ್​ನಲ್ಲಿ ಕೆಲಸ ಮಾಡುವವರಲ್ಲಿ ಸ್ತನ್ ಕ್ಯಾನ್ಸರ್​ ಲಕ್ಷಣಗಳು ಹೆಚ್ಚು. ರಾತ್ರಿ ವೇಳೆ ಪೌಷ್ಠಿಕಾಂಶವಿರುವ ಆಹಾರವನ್ನು ಸೇವಿಸುವವರು ಕಡಿಮೆ. ರಾತ್ರಿ ಪಾಳಿಯಲ್ಲಿರುವವರಿಗೆ ಉತ್ತಮ ಆಹಾರದ ಸಮಸ್ಯೆಯ ಜೊತೆಗೆ ನಿದ್ರೆಯ ಕೊರತೆಯಿಂದ ಒತ್ತಡ ಹೆಚ್ಚುತ್ತದೆ. ಇದರಿಂದ ಎಸಿಡಿಟಿಯಂತಹ ಸಮಸ್ಯೆಯೂ ತಲೆದೋರುತ್ತದೆ. ಉತ್ತಮ ಆಹಾರ ಪದ್ಧತಿಯಿಲ್ಲದೆ ದೇಹ ಊದಿಕೊಂಡಂತೆಲ್ಲ ಡಯೆಟ್​ ಮಾಡುವವರ ಸಂಖ್ಯೆಯೂ ಹೆಚ್ಚುತ್ತದೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆ ಮತ್ತು ಸ್ತನ ಕ್ಯಾನ್ಸರ್​ ತೊಂದರೆ ಕಾಣಿಸಿಕೊಳ್ಳುತ್ತದೆ ಎಂದು ಅಧ್ಯಯನ ತಿಳಿಸಿದೆ.

ಮಳೆಗಾಲದ ಆರಂಭದಲ್ಲೇ ಎಚ್ಚರಿಕೆ ವಹಿಸದಿದ್ದರೆ ಅನಾರೋಗ್ಯಕ್ಕೆ ತುತ್ತಾಗುವಿರಿ ಹುಷಾರ್..!ಮಹಿಳೆಯಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್​ನಲ್ಲಿ ಸ್ತನ ಕ್ಯಾನ್ಸರ್​ ಅತ್ಯಂತ ಸಾಮಾನ್ಯ ಎನಿಸಿಕೊಂಡಿದೆ. ಜಗತ್ತಿನಲ್ಲಿ ಪ್ರತಿವರ್ಷ 21 ಲಕ್ಷ ಜನರು ಕ್ಯಾನ್ಸರ್​ ಮತ್ತು ಕ್ಯಾನ್ಸರ್​ ಸಂಬಂಧಿ ಸಮಸ್ಯೆಗಳಿಂದ ಸಾವನ್ನಪ್ಪುತ್ತಿದ್ದಾರೆ. ಹಾಗಾಗಿ, ರಾತ್ರಿ ಬೇಗ ಮಲಗಿ ಬೇಗ ಏಳುವುದು ಮತ್ತು 6ರಿಂದ 8 ಗಂಟೆ ನಿದ್ರೆ ಮಾಡುವುದು ಅತ್ಯಂತ ಮುಖ್ಯ. ಇದಕ್ಕಿಂತ ಹೆಚ್ಚು ನಿದ್ರೆ ಮಾಡಿದರೂ ಸಮಸ್ಯೆ, ನಿದ್ರಾಹೀನತೆಯಿಂದಲೂ ಸಮಸ್ಯೆ ತಲೆದೋರುತ್ತದೆ. ನಿದ್ರೆಯಲ್ಲಿ ಅಸಮತೋಲನವಾಗುವುದರಿಂದ ದೇಹದ ಎಲ್ಲ ಪ್ರಕ್ರಿಯೆಯೂ ತಾಳ ತಪ್ಪುತ್ತದೆ. ಆಲ್ಕೋಹಾಲ್​ ಸೇವನೆಯೂ ಸ್ತನ ಕ್ಯಾನ್ಸರ್​ಗೆ ಮತ್ತೊಂದು ಮುಖ್ಯ ಕಾರಣ. ನಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಂಡು ಊಟ, ತಿಂಡಿ, ನಿದ್ರೆಗೆ ಒಂದೇ ಸಮಯವನ್ನು ನಿಗದಿಪಡಿಸಿಕೊಂಡರೆ ಆರೋಗ್ಯಕ್ಕೂ ಒಳ್ಳೆಯದು, ಇದರಿಂದ ಮನಸಿನ ಒತ್ತಡವೂ ಕಡಿಮೆಯಾಗುತ್ತದೆ.

 

First published: June 28, 2019, 3:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading