Marriage Problem: ವಯಸ್ಸಾದ ನಂತರ ಮದುವೆಯಾಗುವುದು ಮಹಿಳೆಯರಿಗೆ ಯಾವೆಲ್ಲಾ ತೊಂದರೆ ಉಂಟಾಗುತ್ತದೆ?

ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ತಡವಾಗಿ ಮದುವೆಯಾಗಲು ಇಷ್ಟ ಪಡುತ್ತಿದ್ದಾರೆ. ಅದಕ್ಕೆ ಒಳ್ಳೆಯ ವಿದ್ಯಾಭ್ಯಾಸ, ಉದ್ಯೋಗ ಮತ್ತು ವೃತ್ತಿಯ ಕಾರಣ ಇರಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕಾಲ (Tense) ಉರುಳಿದಂತೆ ಸಾಕಷ್ಟು ವಿಷಯಗಳು (Things) ಬದಲಾಗುತ್ತಾ (Changes) ಹೋಗುತ್ತವೆ. ಮನುಷ್ಯ (Human) ಹುಟ್ಟಿನಿಂದ ಸಾಯುವವರೆಗೆ ಹಲವು ಹಂತಗಳನ್ನು (Steps) ದಾಟುತ್ತಾನೆ. ಹುಟ್ಟಿದ ಮನುಷ್ಯ ಹಲವು ಹಂತಗಳಲ್ಲಿ ಹಲವು ವರ್ತನೆ, ಬದುಕು ಕಂಡುಕೊಳ್ಳುತ್ತಾನೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವಿಷಯಗಳು ಈಗ ಬದಲಾಗಲು ಪ್ರಾರಂಭಿಸಿವೆ. ಅದರಲ್ಲಿ ಆಧುನಿಕ ಯುಗದ ಭರಾಟೆ ಈಗ ಸಾಕಷ್ಟು ಸ್ವಾತಂತ್ರ್ಯ ನೀಡಿದೆ. ನಾವು ಭಾರತದಲ್ಲಿ ಹೆಣ್ಣುಮಕ್ಕಳ ಮದುವೆ ವಿಚಾರವಾಗಿ ಮಾತನಾಡಿದರೆ ಹಿಂದಿನ ಕಾಲದಲ್ಲಿ ಹುಡುಗಿಯರನ್ನು ಬಹಳ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಿ ಕೊಡುತ್ತಿದ್ದರು. ಆದರೆ ಈಗ ಅದು ಹಾಗಲ್ಲ. ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ತಡವಾಗಿ ಮದುವೆಯಾಗಲು ಇಷ್ಟ ಪಡುತ್ತಿದ್ದಾರೆ.  

    ಅದಕ್ಕೆ ಒಳ್ಳೆಯ ವಿದ್ಯಾಭ್ಯಾಸ, ಉದ್ಯೋಗ ಮತ್ತು ವೃತ್ತಿಯ ಕಾರಣ ಇರಬಹುದು. ಅನೇಕ ಬಾರಿ ಮಹಿಳೆಯರು ವಯಸ್ಸಾಗುತ್ತಾ ಹೋದಂತೆ ತುಂಬಾ ವಯಸ್ಸಿನ ನಂತರ ಮದುವೆ ಆಗುವುದರಿಂದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇಂದು ನಾವು ಆ ಸಮಸ್ಯೆಗಳ ಬಗ್ಗೆ ಇಲ್ಲಿ ನೋಡೋಣ.

    ಸಂಗಾತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟ

    ಸಂಗಾತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟ. ಚಿಕ್ಕ ವಯಸ್ಸಿನಲ್ಲೇ ಮದುವೆಯಾದರೆ ಆಗುವ ಒಂದು ಅನುಕೂಲವೆಂದರೆ ಅವರು ಚಿಕ್ಕವರಿದ್ದಾಗ ಸಂಗಾತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ.

    ಇದನ್ನೂ ಓದಿ: ಸರಿಯಾಗಿ ನೆನಪಿಡಿ, ನೀವು ಮಾಡೋ ಈ ತಪ್ಪುಗಳು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಿಸುತ್ತೆ

    ಆದರೆ ನೀವು ದೀರ್ಘಕಾಲ ಏಕಾಂಗಿಯಾಗಿ ಮತ್ತು ಸ್ವತಂತ್ರವಾಗಿದ್ದಾಗ. ನಂತರ ವಯಸ್ಸಾದ ಮೇಲೆ ಮದುವೆಯಾದರೆ ನಂತರ, ಗಂಡನ ಇಷ್ಟ- ಕಷ್ಟ ಮತ್ತು ಅಗತ್ಯಗಳೊಂದಿಗೆ ಹೆಜ್ಜೆ ಇಡುವುದು ಸ್ವಲ್ಪ ಕಷ್ಟ. ಹಾಗೆ ಮಾಡದೇ ಇರುವುದು ಸಂಬಂಧ ಬಿರುಕು ಬಿಡಲು ಕಾರಣವಾಗುತ್ತದೆ.

    ಜವಾಬ್ದಾರಿಗಳ ಮಧ್ಯೆ ಕಳೆದು ಹೋಗುವುದು

    ಚಿಕ್ಕ ವಯಸ್ಸಿನಲ್ಲೇ ಹುಡುಗಿಯರು ಅನೇಕ ಹವ್ಯಾಸಗಳನ್ನು ಹೊಂದಿರುತ್ತಾರೆ. ವಯಸ್ಸಾದಂತೆ, ಉತ್ಸಾಹ ಕಡಿಮೆ ಆಗುತ್ತದೆ. ಈ ಕಾರಣದಿಂದ ಒಂದು ವಯಸ್ಸಿನಲ್ಲಿ ಮಹಿಳೆಯರ ಗಮನವು ಜವಾಬ್ದಾರಿಗಳ ಮೇಲೆ ಹೆಚ್ಚು ಇರುತ್ತದೆ. ಪ್ರಯಾಣ ಅಥವಾ ವಿಷಯಗಳನ್ನು ಅನ್ವೇಷಿಸುತ್ತ ಅವರು ಕೂರುವುದಿಲ್ಲ. ಆದರೆ ವಿಷಯಗಳನ್ನು ಅನ್ವೇಷಿಸುವ ಮೂಲಕ ಮತ್ತು ಸುತ್ತಾಡಲು ಮನಸ್ಸು ಸರಿಯಿರುತ್ತದೆ.

    ಗರ್ಭಾವಸ್ಥೆಯಲ್ಲಿ ತೊಂದರೆ

    ಮಹಿಳೆಯರ ಫಲವತ್ತತೆ ವಯಸ್ಸಾದಂತೆ ಕಡಿಮೆಯಾಗುತ್ತದೆ. ಹೆಚ್ಚುತ್ತಿರುವ ವಯಸ್ಸಿನ ಕಾರಣ ಆರೋಗ್ಯವಂತ ಮಗುವಿಗೆ ಜನ್ಮ ನೀಡುವುದು ಪುರುಷರು ಮತ್ತು ಮಹಿಳೆಯರು ಇಬ್ಬರೂ ಅನೇಕ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಸಂಶೋಧನೆ ಹೇಳಿದೆ. ಇದಲ್ಲದೆ, ಹೆಚ್ಚುತ್ತಿರುವ ವಯಸ್ಸಿನಿಂದ ಮಹಿಳೆಯರು ಗರ್ಭಿಣಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

    ಗರ್ಭಪಾತ ಮತ್ತು ಹೆರಿಗೆಯಲ್ಲಿ ತೊಂದರೆಗಳು ಉಂಟಾಗುತ್ತವೆ. ವಯಸ್ಸಾದ ಪೋಷಕರಿಗೆ ಜನಿಸಿದ ಮಕ್ಕಳು ಡೌನ್ ಸಿಂಡ್ರೋಮ್ (ಮಾನಸಿಕ ಮತ್ತು ದೈಹಿಕ ಅಸ್ವಸ್ಥತೆ) ಮತ್ತು ಇತರ ದೈಹಿಕ ಸಮಸ್ಯೆಗಳ ಹೆಚ್ಚಿನ ಅಪಾಯ ಹೆಚ್ಚು ಹೊಂದಿರುತ್ತಾರೆ.

    ಸಂಗಾತಿ ಆಯ್ಕೆ ಮಾಡಲು ತೊಂದರೆ

    ಮಹಿಳೆಯರಾಗಲಿ ಅಥವಾ ಪುರುಷರಾಗಲಿ, ವಯಸ್ಸು ಹೆಚ್ಚಾದಂತೆ ಸಂಗಾತಿ ಆಯ್ಕೆ ಮಾಡಿಕೊಳ್ಳುವ ಆಯ್ಕೆ ಕಡಿಮೆಯಾಗುತ್ತವೆ. ನಿಗದಿತ ಸಮಯಕ್ಕೆ ಮದುವೆಯಾಗದಿದ್ದರೆ ಅನೇಕ ಬಾರಿ ಕುಟುಂಬ ಸದಸ್ಯರ ಒತ್ತಡಕ್ಕೆ ಮಣಿದು ಹುಡುಗಿಯರು ಮದುವೆಯಾಗುತ್ತಾರೆ.

    ಇದು ಪತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಕಷ್ಟು ತೊಂದರೆ ಉಂಟು ಮಾಡುತ್ತದೆ. ಪರಸ್ಪರ ಒಪ್ಪಂದವಿರಲ್ಲ. ಮತ್ತು ಇಬ್ಬರ ಆಲೋಚನೆಯು ಸಾಕಷ್ಟು ಭಿನ್ನವಾಗಿರುತ್ತದೆ.

    ಇದನ್ನೂ ಓದಿ: ಹಾರ್ಟ್​ ಫೇಲ್ ತಡೆಗೆ ವೈದ್ಯರು ಸೂಚಿಸಿದ ಪ್ರಮುಖ ಸಲಹೆಗಳು! ತಿಳಿದಿರುವುದು ಅಗತ್ಯ

    ದೈಹಿಕ ಅನ್ಯೋನ್ಯತೆ ಕೊರತೆ

    ತಡವಾಗಿ ಮದುವೆಯಾದರೆ ದಂಪತಿ ಲೈಂಗಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಯುವ ದಂಪತಿ ಹೆಚ್ಚಿನ ಉತ್ಸಾಹ ಹೊಂದಿರುತ್ತಾರೆ. ಕಡಿಮೆ ವಯಸ್ಸಿನ ಕಾರಣ ಮಗುವಿನ ಬಗ್ಗೆ ಆರಂಭದಲ್ಲಿ ಯಾವುದೇ ಒತ್ತಡ ಹೊಂದಿರುವುದಿಲ್ಲ. ವಯಸ್ಸಾಗಿ ಮದುವೆಯಾದರೆ ಮಕ್ಕಳು ಮಾಡಿಕೊಳ್ಳುವ ಒತ್ತಡ ಅನುಭವಿಸುತ್ತಾರೆ.
    Published by:renukadariyannavar
    First published: