Cervical Cancer: ಮಹಿಳೆಯರನ್ನು ಸಾವಿನ ಕೂಪಕ್ಕೆ ತಳ್ಳುವ ಗರ್ಭಕಂಠದ ಕ್ಯಾನ್ಸರ್! ಲಕ್ಷಣಗಳ ಬಗ್ಗೆ ಎಚ್ಚರಿಕೆ ವಹಿಸಿ

ಗರ್ಭಕಂಠದ ಕ್ಯಾನ್ಸರ್ ಎಂಬುದು ಮಹಿಳೆಯರಲ್ಲಿ ಗರ್ಭಕಂಠದಲ್ಲಿ ಉಂಟಾಗುವ ಕಾಯಿಲೆ ಆಗಿದೆ. ಇದು ಯೋನಿ, ಮೂತ್ರಕೋಶ ಗುದನಾಳದಿಂದ ಶ್ವಾಸಕೋಶಕ್ಕೆ ಬಹುಬೇಗ ಹರಡುತ್ತದೆ. ಗರ್ಭಕಂಠವು ಖಾಸಗಿ ಭಾಗದ ಪ್ರಮುಖ ಭಾಗವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಭಾರತದಲ್ಲಿ (India) ಪ್ರತಿ 53 ಮಹಿಳೆಯರಲ್ಲಿ (Women) ಒಬ್ಬರಿಗೆ ಗರ್ಭಕಂಠದ ಕ್ಯಾನ್ಸರ್ (Cervical Cancer ) ಉಂಟಾಗುತ್ತದೆ ಎಂದು NCBI ವರದಿ ಹೇಳುತ್ತದೆ. ಇದರ ಪ್ರಕಾರ, ಮಹಿಳೆಯರಲ್ಲಿ ಕಂಡು ಬರುವ ಗರ್ಭಕಂಠದ ಕ್ಯಾನ್ಸರ್, ಇದು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ (Country) ಎರಡು ಪಟ್ಟು ಹೆಚ್ಚು ಕಾಣಿಸಿಕೊಳ್ಳುತ್ತದೆ ಎಂದು ಹೇಳಿದೆ. ಇಲ್ಲಿ ಒಂದು ನೂರು ಮಹಿಳೆಯರಲ್ಲಿ ಒಬ್ಬ ಮಹಿಳೆ  ಗರ್ಭಕಂಠದ ಕ್ಯಾನ್ಸರ್ ಅನ್ನು ಎದುರಿಸಬೇಕಾಗುತ್ತದೆ ಎಂದು ಎನ್ ಸಿಬಿಐ ಹೇಳಿದೆ. 30 ರಿಂದ 69 ವರ್ಷ ವಯಸ್ಸಿನ ಮಹಿಳೆಯರ ಸಾವಿನಲ್ಲಿ ಗರ್ಭಕಂಠದ ಕ್ಯಾನ್ಸರ್ ಪ್ರಮಾಣ ಶೇಕಡಾ 17 ರಷ್ಟು ಪಾಲು ಹೊಂದಿದೆ.

    ಗರ್ಭಕಂಠದ ಕ್ಯಾನ್ಸರ್

    ಹಾಗಾದರೆ ಮಹಿಳೆಯರನ್ನು ಸಾವಿನ ಕೂಪಕ್ಕೆ ತಳ್ಳುವ ಗರ್ಭಕಂಠದ ಕ್ಯಾನ್ಸರ್ ಎಂದರೇನು ಎಂಬ ಬಗ್ಗೆ ಮಾಹಿತಿ ಇಲ್ಲಿ ತಿಳಿಯೋಣ. ಗರ್ಭಕಂಠದ ಕ್ಯಾನ್ಸರ್ ಎಂಬುದು ಮಹಿಳೆಯರಲ್ಲಿ ಗರ್ಭಕಂಠದಲ್ಲಿ ಉಂಟಾಗುವ ಕಾಯಿಲೆ ಆಗಿದೆ. ಇದು ಯೋನಿ, ಮೂತ್ರಕೋಶ, ಗುದನಾಳದಿಂದ ಶ್ವಾಸಕೋಶಕ್ಕೆ ಬಹುಬೇಗ ಹರಡುತ್ತದೆ.

    ಗರ್ಭಕಂಠವು ಖಾಸಗಿ ಭಾಗದ ಪ್ರಮುಖ ಭಾಗವಾಗಿದೆ. ಇದು ಯೋನಿಯನ್ನು ಗರ್ಭಾಶಯದ ಮೇಲಿನ ಭಾಗಕ್ಕೆ ಸಂಪರ್ಕ ಕಲ್ಪಿಸಲು ಸಹಾಯ ಮಾಡುತ್ತದೆ. ಈ ಭಾಗದಲ್ಲಿ ಕ್ಯಾನ್ಸರ್ ಅಪಾಯವು ಮೂವತ್ತು ವರ್ಷ ದಾಟಿದ ಮಹಿಳೆಯರಲ್ಲಿ ಹೆಚ್ಚಾಗುತ್ತ ಹೋಗುತ್ತದೆ.

    ಇದನ್ನೂ ಓದಿ: ಹೊಟ್ಟೆಯ ಬೊಜ್ಜು ಕರಗಿಸಲು ಬೆಳಗಿನ ಉಪಹಾರ, ರಾತ್ರಿಯ ಊಟವನ್ನು ಹೇಗೆ? ಯಾವಾಗ ಮಾಡ್ಬೇಕು?

    ಹ್ಯೂಮನ್ ಪ್ಯಾಪಿಲೋಮವೈರಸ್ (HPV)

    ಕೆಲವು ರೀತಿಯ ಹ್ಯೂಮನ್ ಪ್ಯಾಪಿಲೋಮ ವೈರಸ್ (HPV) ಯೊಂದಿಗೆ ದೀರ್ಘಕಾಲದ ಸೋಂಕು ಗರ್ಭಕಂಠದ ಕ್ಯಾನ್ಸರ್‌ ಉಂಟಾಗಲು ಮುಖ್ಯ ಕಾರಣ ಆಗಿದೆ. ಅಂದ ಹಾಗೇ ಈ HPV ಎಂಬುದು ಲೈಂಗಿಕ ಸಮಯದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಮಾನ್ಯ ವೈರಸ್ ಆಗಿದೆ. ಸ್ಕ್ರೀನಿಂಗ್ ಪರೀಕ್ಷೆ ಮತ್ತು HPV ಲಸಿಕೆ ಹಾಕುವ ಮೂಲಕ ಗರ್ಭಕಂಠದ ಕ್ಯಾನ್ಸರ್ ಉಂಟಾಗುವುದನ್ನು ತಡೆಯಬಹುದು.

    21 ವರ್ಷ ವಯಸ್ಸಿನ ನಂತರ, ದಿನನಿತ್ಯದ ತಪಾಸಣೆ ಮಾಡುವ ಮೂಲಕ ಆರಂಭಿಕ ಹಂತದಲ್ಲಿ ಎಚ್ ಪಿವಿ ರೋಗದ ಬಗ್ಗೆ ನಿರ್ಣಯ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಈ ವೇಳೆ ಜೀವಕ್ಕೆ ಅಪಾಯ ಕಡಿಮೆ. ಇದು ದೀರ್ಘಾಯುಷ್ಯ ಮತ್ತು ಉತ್ತಮ ಜೀವನದ ಸಾಧ್ಯತೆಯನ್ನು ಹೆಚ್ಚು ಮಾಡುತ್ತದೆ.

    ತೀವ್ರವಾದ ಬೆನ್ನು ನೋವು

    ಬೆನ್ನು ನೋವು ಮಹಿಳೆಯರಲ್ಲಿ ತುಂಬಾ ಸಾಮಾನ್ಯ ಸಮಸ್ಯೆ ಆಗಿದೆ. ನಿಮ್ಮ ದೈಹಿಕ ಚಟುವಟಿಕೆಯೂ ಬೆನ್ನು ನೋವಿಗೆ ಕಾರಣವಾಗಬಹುದು. ಕೆಲವೊಮ್ಮೆ ಕುಳಿತುಕೊಳ್ಳುವ ಭಂಗಿ ಸರಿಯಿಲ್ಲದಿದ್ದಾಗಲೂ ಬೆನ್ನು ನೋವು ಉಂಟಾಗಬಹುದು.

    ಆದರೆ ಯಾವುದೇ ಕಾರಣವಿಲ್ಲದೆ ದೀರ್ಘಕಾಲ ಬೆನ್ನು ನೋವು ಕಾಣಿಸಿಕೊಂಡರೆ ಅದು ಕ್ಯಾನ್ಸರ್ ನ ಲಕ್ಷಣ ಆಗಿರಬಹುದು. ಈ ನೋವು ಕೆಳ ಬೆನ್ನಿನಲ್ಲಿ ಕಂಡು ಬರುತ್ತದೆ. ಇದು ವಿಸ್ತರಿಸಿದ ಗೆಡ್ಡೆಯ ಒತ್ತಡದಿಂದ ಅಥವಾ ಅಸಹಜ ಬೆಳವಣಿಗೆಯಿಂದ ಆಗಿರುವ ಸಾಧ್ಯತೆ ಇದೆ.

    ಹೊಕ್ಕುಳ ಕೆಳಗೆ ನಿರಂತರ ನೋವು

    ಶ್ರೋಣಿ ಕುಹರದ ನೋವು ಗರ್ಭಕಂಠದ ಲಕ್ಷಣವಾಗಿರಬಹುದು. ಇದು ನಿಮ್ಮ ಹೊಕ್ಕುಳ ಕೆಳಗೆ ಇರುವ ಹೊಟ್ಟೆಯಲ್ಲಿ ಮಂದ ನೋವು ಅಥವಾ ಒತ್ತಡ ಉಂಟು ಮಾಡುತ್ತದೆ. ಈ ನೋವು ನಿರಂತರವಾಗಿ ಇರಬಹುದು. ಅಥವಾ ಸ್ವಲ್ಪ ಸಮಯ ಉಂಟಾಗಬಹುದು.

    ಅಸಹಜ ಯೋನಿ ರಕ್ತಸ್ರಾವ

    ಶ್ರೋಣಿಯ ಮತ್ತು ತೊಡೆಸಂದು ನೋವು ಹಾಗೂ ಗರ್ಭಕಂಠದ ಕ್ಯಾನ್ಸರ್, ಅಸಹಜ ಯೋನಿ ರಕ್ತಸ್ರಾವ ಉಂಟುಮಾಡುತ್ತದೆ. ಇದು ಸಾಮಾನ್ಯ. ಮಹಿಳೆಯರಲ್ಲಿ ಲೈಂಗಿಕತೆಯ ನಂತರ, ಮುಟ್ಟಿನ ಸಮಯದಲ್ಲಿ ರಕ್ತಸ್ರಾವ ಸಹಜವಾಗಿ ಉಂಟಾಗುತ್ತದೆ. ಆದರೆ ಅಸಹಜವಾಗಿ ರಕ್ತಸ್ರಾವ ಉಂಟಾದರೆ ತಕ್ಷಣವೇ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿ.

    ಲೈಂಗಿಕ ಸಮಯದಲ್ಲಿ ನೋವು

    ಗರ್ಭಕಂಠದ ಇತರ ಲಕ್ಷಣಗಳಲ್ಲಿ ಲೈಂಗಿಕ ಸಮಯದಲ್ಲಿ ತೀವ್ರವಾದ ನೋವು ಉಂಟಾಗುವುದು ಕೂಡ ಒಂದಾಗಿದೆ. ಸಂಗಾತಿಯೊಂದಿಗೆ ದೈಹಿಕ ಸಂಬಂಧ ಹೊಂದಿರುವಾಗ ನೀವು ಅಂತಹ ನೋವು ಕಾಣಿಸಿದರೆ, ಖಾಸಗಿ ಚಲನೆಗೆ ಅಡ್ಡಿಯಾದರೆ ಇದು ಗರ್ಭಕಂಠದ ಕ್ಯಾನ್ಸರ್‌ನ ಲಕ್ಷಣ ಆಗಿರಬಹುದು.

    ಇದನ್ನೂ ಓದಿ: ಥೈರಾಯ್ಡ್ ನಿಯಂತ್ರಣಕ್ಕೆ ಆಯುರ್ವೇದ ವಿಧಾನ! ಇದು ಅತ್ಯಂತ ಪ್ರಯೋಜನಕಾರಿ

    ಒಂದಕ್ಕಿಂತ ಹೆಚ್ಚು ಲೈಂಗಿಕತೆ ಹೊಂದಿರುವವರಲ್ಲಿ ಅಪಾಯ

    ಒಂದಕ್ಕಿಂತ ಹೆಚ್ಚು ವ್ಯಕ್ತಿಗಳ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದರೆ ಗರ್ಭಕಂಠದ ಕ್ಯಾನ್ಸರ್ ಅಪಾಯವು ದ್ವಿಗುಣಗೊಳ್ಳುತ್ತದೆ. ಚಿಕ್ಕ ವಯಸ್ಸಿನಲ್ಲಿ ದೈಹಿಕ ಸಂಬಂಧ ಹೊಂದಿದ್ದರೆ ಇದು ಗರ್ಭಕಂಠದ ಕ್ಯಾನ್ಸರ್ ಅಪಾಯಕ್ಕೆ ಕಾರಣವಗುತ್ತದೆ.
    Published by:renukadariyannavar
    First published: