Menopause: ಋತುಬಂಧದ ವೇಳೆ ಮಹಿಳೆಯರಿಗೆ ಎದುರಾಗುವ ಸಮಸ್ಯೆ ನಿವಾರಿಸಲು ಹೀಗೆ ಮಾಡಿ

ಋತುಬಂಧದ ಸಮಯದಲ್ಲಿ ಸಾಕಷ್ಟು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಾಳೆ. ದುಃಖ,ಆತಂಕ, ನಿದ್ರಾಹೀನತೆ ಮತ್ತು ಬಳಲಿಕೆಯಂತಹ ಮಾನಸಿಕ ಅಡ್ಡ ಪರಿಣಾಮಗಳಿಗೆ ಮಹಿಳೆಯರು ಹೆಚ್ಚು ಒಳಗಾಗುತ್ತಾರೆ. ಅದರಲ್ಲೂ ಮುಖ್ಯವಾಗಿ ಮೂಡ್ ಸ್ವಿಂಗ್ ಎಂದು ಹೇಳುವ ಸ್ಥಿತಿ ಹೆಚ್ಚಾಗಿ ಅವಳ ಭಾವನೆಯನ್ನು ಕೆರಳಿಸುತ್ತದೆ. ಈ ಸಮಯದಲ್ಲಿ ಭಾವನಾತ್ಮಕವಾಗಿ ಮಹಿಳೆಯರು ಕುಗ್ಗುತ್ತಾರೆ. ಆದ್ದರಿಂದ, ಋತುಬಂಧದ ಅವಧಿಯಲ್ಲಿ ಭಾವನಾತ್ಮಕವಾಗಿ ಹೇಗೆ ಸದೃಢವಾಗುವುದು ಮತ್ತು ಭಾವನೆಗಳ ಮೇಲೆ ಹೇಗೆ ನಿಯಂತ್ರಣ ಸಾಧಿಸುವುದು ಹೇಗೆ ಎಂಬುದಕ್ಕೆ ಕೆಲವು ಕ್ರಮಗಳು ಹೀಗಿವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:

ಋತುಚಕ್ರ (Menstrual cycle) ಹೇಗೋ ಅದೇ ರೀತಿ ಋತುಬಂಧ (Menopause) ಕೂಡ ನೈಸರ್ಗಿಕವಾಗಿ ಮಹಿಳೆಯರಲ್ಲಿ (Women) ಉಂಟಾಗುವ ಕ್ರಿಯೆ. ಅಂದರೆ ಋತುಬಂಧ ಎನ್ನುವುದು ಮಹಿಳೆಯ ಜೀವನದಲ್ಲಿ ಇನ್ನು ಮುಂದೆ ಸಂತಾನೋತ್ಪತ್ತಿ ಮಾಡಲು ಸಾಧ್ಯವಾಗದ ಸಮಯ ಮತ್ತು ಆಕೆಯ ಋತುಚಕ್ರವು ಕೊನೆಗೊಳ್ಳುವ ಸಮಯವಾಗಿದೆ. ವಿಶ್ವದಲ್ಲಿ ಋತುಬಂಧಕ್ಕೊಳಗಾದ ಮಹಿಳೆಯರ ಸಂಖ್ಯೆಯು 2030ರ ವೇಳೆಗೆ 1.2 ಶತಕೋಟಿಗೆ ತಲುಪುವ ನಿರೀಕ್ಷೆಯಿದೆ ಮತ್ತು ಪ್ರತಿ ವರ್ಷ 47 ಮಿಲಿಯನ್ ಹೊಸ ಸದಸ್ಯರು ಈ ಗುಂಪಿಗೆ ಸೇರಿಕೊಳ್ಳುತ್ತಾರೆ ಎಂದು ಅಂಕಿಅಂಶಗಳು (Statistics) ತಿಳಿಸಿವೆ. ಭಾರತದಲ್ಲಿ, ಪಾಶ್ಚಿಮಾತ್ಯ ರಾಷ್ಟ್ರಗಳ ಮಹಿಳೆಯರ ವಯಸ್ಸು 51ಕ್ಕೆ ಹೋಲಿಸಿದರೆ ಸಾಮಾನ್ಯವಾಗಿ ಭಾರತದಲ್ಲಿ 46 ನೇ ವಯಸ್ಸಿನಲ್ಲಿ (Age) ಮಹಿಳೆಯರಲ್ಲಿ ಋತುಬಂಧ ಸಂಭವಿಸುತ್ತದೆ.


ತನ್ನ ಕೊನೆಯ ಮುಟ್ಟಾದ ದಿನಾಂಕದಿಂದ ಒಂದು ವರ್ಷದವರೆಗೆ ಮುಟ್ಟಾಗದಿದ್ದರೆ ಅದನ್ನು ಋತುಬಂಧ ಅಥವಾ ಮೆನೋಪಾಸ್ ಎಂದು ಕರೆಯಲಾಗುತ್ತದೆ. ಈ ಋತುಬಂಧ ಸ್ಥಿತಿ ಮಹಿಳೆಯರ ಆರೋಗ್ಯ, ಯೋಗಕ್ಷೇಮ ಮತ್ತು ಸಾಮಾನ್ಯ ಜೀವನದ ಗುಣಮಟ್ಟದ ಮೇಲೆ ಹೆಚ್ಚು ಪರಿಣಾಮ ಬೀರುವಂತದ್ದು.


ಋತುಬಂಧದ ಸಮಯದಲ್ಲಿ ಮನಸ್ಥಿತಿ ಹೇಗೆ ಏರು ಪೇರಾಗುತ್ತದೆ?
ಋತುಬಂಧವು ಒಂದು ರೋಗವಲ್ಲ. ಇದು ನೈಸರ್ಗಿಕ ಪ್ರಕ್ರಿಯೆ. ಆದಾಗ್ಯೂ ಈ ಪ್ರಕ್ರಿಯೆಯ ಅವಧಿಯು ಒಬ್ಬ ಮಹಿಳೆಯಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತದೆ ಮತ್ತು ಈ ಸಮಯದಲ್ಲಿ ಆಕೆ ಸಾಕಷ್ಟು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಾಳೆ. ದುಃಖ,ಆತಂಕ, ನಿದ್ರಾಹೀನತೆ ಮತ್ತು ಬಳಲಿಕೆಯಂತಹ ಮಾನಸಿಕ ಅಡ್ಡ ಪರಿಣಾಮಗಳಿಗೆ ಮಹಿಳೆಯರು ಹೆಚ್ಚು ಒಳಗಾಗುತ್ತಾರೆ. ಅದರಲ್ಲೂ ಮುಖ್ಯವಾಗಿ ಮೂಡ್ ಸ್ವಿಂಗ್ ಎಂದು ಹೇಳುವ ಸ್ಥಿತಿ ಹೆಚ್ಚಾಗಿ ಅವಳ ಭಾವನೆಯನ್ನು ಕೆರಳಿಸುತ್ತದೆ. ಈ ಸಮಯದಲ್ಲಿ ಭಾವನಾತ್ಮಕವಾಗಿ ಮಹಿಳೆಯರು ಕುಗ್ಗುತ್ತಾರೆ. ಆದ್ದರಿಂದ, ಋತುಬಂಧದ ಅವಧಿಯಲ್ಲಿ ಭಾವನಾತ್ಮಕವಾಗಿ ಹೇಗೆ ಸದೃಢವಾಗುವುದು ಮತ್ತು ಭಾವನೆಗಳ ಮೇಲೆ ಹೇಗೆ ನಿಯಂತ್ರಣ ಸಾಧಿಸುವುದು ಹೇಗೆ ಎಂಬುದಕ್ಕೆ ಕೆಲವು ಕ್ರಮಗಳು ಹೀಗಿವೆ.


1.ಮುಕ್ತವಾಗಿ ಮಾತನಾಡಿ
ನಿಮ್ಮ ಋತುಬಂಧದ ಗುಣಲಕ್ಷಣಗಳ ಬಗ್ಗೆ ಕುಟುಂಬ ಅಥವಾ ಸ್ನೇಹಿತರೊಂದಿಗೆ ಮುಕ್ತವಾಗಿ ಮಾತನಾಡಿ. ನೀವು ಅನುಭವಿಸುತ್ತಿರುವ ಸ್ಥಿತಿ ಬಗ್ಗೆ ಕುಟುಂಬದವರೊಂದಿಗೆ ಮನಬಿಚ್ಚಿ ಮಾತಾಡಿ. ಹೀಗೆ ಮಾಡುವುದರಿಂದ ನಿಮ್ಮ ಮನಸ್ಥಿತಿ ಸದೃಢವಾಗುತ್ತದೆ. ಅದಕ್ಕಿಂತ ಹೆಚ್ಚಾಗಿ, ನಿಮ್ಮ ಕುಟುಂಬವು ಅನೇಕ ವಿಧಗಳಲ್ಲಿ ನಿಮಗೆ ಬೆಂಬಲ ನೀಡಲು ಸಹಕಾರಿಯಾಗುತ್ತದೆ.


2. ನಿಮ್ಮ ಮಾನಸಿಕ ಆರೋಗ್ಯದ ಕಡೆ ಗಮನವಹಿಸಿ
ಋತುಬಂಧವು ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆಗಳು, ಪ್ರೇರಣೆಯ ಕೊರತೆ, ಒತ್ತಡ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಮೂಲಕ ಹೆಚ್ಚಿನ ಪ್ರಭಾವವನ್ನು ಬೀರಬಹುದು. ಋತುಬಂಧಕ್ಕೆ ಮುಂಚಿತವಾಗಿ, ಮಹಿಳೆಯರಲ್ಲಿ ಹಾರ್ಮೋನುಗಳ ಬದಲಾವಣೆಗಳು ಸಾಮಾನ್ಯವಾಗಿ ಅವರ 40ರ ದಶಕದಲ್ಲಿ ಪ್ರಾರಂಭವಾಗುತ್ತವೆ. ಈ ಅವಧಿಯು ಗಮನಾರ್ಹವಾಗಿ ಮಾನಸಿಕ ಆರೋಗ್ಯದ ಮಲೆ ಪರಿಣಾಮ ಬೀರುತ್ತದೆ. ಹೀಗಾಗಿ ಈ ಪರಿವರ್ತನೆಯ ಸಮಯದಲ್ಲಿ, ಖಿನ್ನತೆಯ ಸಂಭವವು ದ್ವಿಗುಣಗೊಳ್ಳುತ್ತದೆ ಮತ್ತು ಮಹಿಳೆಯರು ಆತಂಕ, ಒತ್ತಡವನ್ನು ಅನುಭವಿಸುವ ಸಾಧ್ಯತೆಯಿದೆ.ಮಹಿಳೆಯರಲ್ಲಿ ಈ ಸ್ಥಿತಿಯ ಪರಿಣಾಮ ಹೆಚ್ಚಾದಲ್ಲಿ ತಜ್ಞರ ಸಲಹೆ ಪಡೆಯಲು ಶಿಫಾರಸ್ಸು ಮಾಡಲಾಗುತ್ತದೆ. ತಜ್ಞರ ಸಲಹೆಯ ಮೇರೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ.


ಇದನ್ನೂ ಓದಿ: Working Women: ಒತ್ತಡವಿಲ್ಲದೆ ಮಹಿಳೆಯರು ಕೆಲಸ ಮಾಡುವುದು ಹೇಗೆ? ಈ ಕೆಲವು ಟಿಪ್ಸ್ ಮರೆಯಬೇಡಿ

ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಾಮಾನ್ಯ ಚಿಕಿತ್ಸಾ ವಿಧಾನಗಳೆಂದರೆ ಸಮಾಲೋಚನೆ ಮತ್ತು ಅರಿವಿನ ವರ್ತನೆಯ ಚಿಕಿತ್ಸೆ. ಈ ವಿಧಾನ ಋತುಬಂಧಕ್ಕೆ ಸಂಬಂಧಿಸಿದ ಆತಂಕವನ್ನು ನಿರ್ವಹಿಸಲು ಮಹಿಳೆಯರಿಗೆ ಸಹಾಯ ಮಾಡುತ್ತದೆ. ಮಹಿಳೆಯರು ಈ ಸಂದರ್ಭದಲ್ಲಿ ಒತ್ತಡದ ಮಟ್ಟವನ್ನು ನಿರ್ವಹಿಸಲು, ಸಾವಧಾನತೆ ಧ್ಯಾನ ಸೇರಿದಂತೆ ವಿಶ್ರಾಂತಿ ತಂತ್ರಗಳನ್ನು ರೂಢಿ ಮಾಡಿಕೊಳ್ಳಬೇಕು.


3. ಕೆಲಸದ ಸ್ಥಳದಲ್ಲಿ ಸಂಭಾಷಣೆಯನ್ನು ಪ್ರಾರಂಭಿಸಿ
ಋತುಬಂಧದ ಸಮಯದಲ್ಲಿ, 45 ಪ್ರತಿಶತ ಮಹಿಳೆಯರು ಕಡಿಮೆ ಉತ್ಪಾದಕತೆಯಿಂದಾಗಿ ಕೆಲಸದಲ್ಲಿ ಕಷ್ಟಪಡುತ್ತಾರೆ. ನೀವು ಪ್ರತ್ಯೇಕತೆ, ನಿರ್ಲಿಪ್ತ ಅಥವಾ ಪ್ರೇರಣೆಯ ಕೊರತೆಯನ್ನು ಅನುಭವಿಸುತ್ತಿದ್ದರೆ, ನಿಮ್ಮ ಸಹೋದ್ಯೋಗಿಗಳು ಮತ್ತು ಗೆಳೆಯರೊಂದಿಗೆ ಮಾತನಾಡುವುದರಿಂದ ನೀವು ಕೆಲಸ ಮಾಡುವಾಗ ಹೆಚ್ಚು ನಿರಾಳವಾಗಿರಬಹುದು. ನಿಮ್ಮಂತೆ ಇತರೆ ಮಹಿಳೆಯರು ಇದೇ ರೀತಿಯ ಅನುಭವ ಹೊಂದಿದ್ದರೆ ಅವರು ಇದನ್ನು ಹೇಗೆ ನಿರ್ವಹಿಸಿದರು ಎಂಬುದನ್ನು ನೀವು ಅವರ ಜೊತೆ ಕೇಳಿ ತಿಳಿಯಬಹುದು.


4. ಸಮುದಾಯದ ಬೆಂಬಲ ಪಡೆಯಿರಿ
ಋತುಬಂಧಕ್ಕೆ ಒಳಗಾದ ಮಹಿಳೆಯರ ಜೊತೆ ಚರ್ಚಿಸುವುದರಿಂದ ನಿಮಗೆ ಹಲವಾರು ಪ್ರಯೋಜನಗಳು ಲಭಿಸುತ್ತವೆ. ಮಹಿಳೆಯರು ಋತುಬಂಧದಂತಹ ಸ್ಥಿತಿಗಳನ್ನು ನಿರ್ವಹಿಸಲು ಸಹಾಯ ಮಾಡಲೆಂದೇ ಅಬಾಟ್‌ನಂತಹ ಹಲವು ವೇದಿಕೆಗಳಿವೆ. ಇದರಲ್ಲಿ ನೀವು ಎದುರಿಸುತ್ತಿರುವ ಸಮಸ್ಯೆ, ಲಕ್ಷಣಗಳನ್ನು ಹಂಚಿಕೊಂಡು ಸಲಹೆ ಪಡೆಯಬಹುದು.


"ಋತುಬಂಧದ ಪರಿವರ್ತನೆಯು ಮಹಿಳೆಯರಿಗೆ ಅತ್ಯಂತ ಸವಾಲಿನ ಸಮಯವಾಗಿದೆ. ಅಬಾಟ್‌ನಲ್ಲಿ, ನಮ್ಮ ಆರೋಗ್ಯ ರಕ್ಷಣೆಯ ಪರಿಹಾರಗಳ ಮೂಲಕ ಮತ್ತು ಸಮಗ್ರ ಆರೈಕೆಗಾಗಿ ರೋಗಿಯ ಕೇಂದ್ರಿತ ಉಪಕ್ರಮಗಳನ್ನು ಮುನ್ನಡೆಸುವ ಮೂಲಕ ಜೀವನವನ್ನು ಉತ್ತಮವಾಗಿ ಪರಿವರ್ತಿಸಲು ನಾವು ಬದ್ಧರಾಗಿದ್ದೇವೆ. ಆದ್ದರಿಂದ ಮಹಿಳೆಯರು ತಮ್ಮ ಜೀವನದ ಈ ಹಂತವನ್ನು ಸಂಪೂರ್ಣವಾಗಿ ಸ್ವೀಕರಿಸಲು ಮತ್ತು ಅದನ್ನು ಸಂಪೂರ್ಣವಾಗಿ ಬದುಕಲು ಸಶಕ್ತರಾಗಬಹುದು" ಎಂದು ಅಬಾಟ್‌ನ ವೈದ್ಯಕೀಯ ವ್ಯವಹಾರಗಳ ನಿರ್ದೇಶಕ ಡಾ ಜೆಜೋ ಕರಣ್ ಕುಮಾರ್ ಹೇಳಿದರು.


ಇದನ್ನೂ ಓದಿ:  Synthetic Embryo: ವೀರ್ಯ, ಅಂಡಾಣು ಇಲ್ಲದೇ ಭ್ರೂಣ ಸೃಷ್ಟಿ! ಪ್ರಯೋಗ ಯಶಸ್ವಿ

ಇಷ್ಟು ಮಾತ್ರವಲ್ಲದೇ ಮಹಿಳೆಯರು ಉತ್ತಮ ಆಹಾರ, ನಿದ್ರೆ, ವಿಶ್ರಾಂತಿ, ವೈದ್ಯರ ಸಲಹೆಗಳನ್ನು ನಿರಂತರವಾಗಿ ಪಡೆಯುವ ಮೂಲಕವೂ ಋತುಬಂಧ ಸಮಯದಲ್ಲಿ ಉಂಟಾಗುವ ಭಾವನಾತ್ಮಕ ಸಮಸ್ಯೆಗಳನ್ನು ಹಿಮ್ಮೆಟ್ಟಿಸಿ ಸದೃಢರಾಗಬಹುದು.

Published by:Ashwini Prabhu
First published: