ಮಾದಕ ವ್ಯಸನದ ಹಾವಳಿ ಇತ್ತೀಚೆಗೆ ಹೆಚ್ಚುತ್ತಿದೆ. ಅದರಲ್ಲೂ ಯುವ ಜನತೆ ಇದರ ಬಲಿಪಶು ಆಗುತ್ತಿರುವುದು ಬೇಸರದ ಸಂಗತಿ. ಈಗ ಹೊಸ ಅಧ್ಯಯನ ಮತ್ತೊಂದು ಆತಂಕಕಾರಿ ವಿಚಾರ ಹೊರ ಹಾಕಿದೆ. ಅದೇನೆಂದರೆ, ಗಂಡಸರಿಗಿಂತ ಹೆಂಗಸರು ಬಹುಬೇಗ ಡ್ರಗ್ನ ದಾಸರಾಗುತ್ತಾರಂತೆ.
ಮೇಲ್ನೋಟಕ್ಕೆ ಪುರುಷರು ಡ್ರಗ್ಗಳ ಬಲಿಪಶುಗಳಾಗುತ್ತಿರುವುದು ಕಂಡು ಬರುತ್ತದೆ. ಆದರೆ, ವಸ್ತುಸ್ಥಿತಿ ಬೇರೆ ರೀತಿಯಲ್ಲೇ ಇದೆ ಎನ್ನುತ್ತಾರೆ ವೈದ್ಯರು. ಮಹಿಳೆಯರು ಒಮ್ಮೆ ಡ್ರಗ್ ತೆಗೆದುಕೊಂಡರೆ, ಅದರಿಂದ ಹೊರ ಬರುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ವೈದ್ಯರು. ಅದಕ್ಕೆ ಕಾರಣ ಅವರ ಹಾರ್ಮೋನ್ ಸೈಕಲ್.
“ಮಹಿಳೆಯರ ಹಾರ್ಮೋನ್ ಸೈಕಲ್ನಿಂದಾಗಿ ಮಾದಕ ವಸ್ತುಗಳಿಗೆ ಅಂಟಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಒಮ್ಮೆ ಡ್ರಗ್ ತ್ಯಜಿಸಿದರೂ, ಮತ್ತೆ ಮತ್ತೆ ಬೇಕು ಎನ್ನುವ ಹಂಬಲ ಅವರಲ್ಲಿ ಹೆಚ್ಚಾಗಿ ಕಾಡುತ್ತದೆ. ಇದು ತೀರಾ ಅಪಾಯಕಾರಿ. ಇದರಿಂದ ಅವರು ಹೊರ ಬರುವುದು ಕಷ್ಟದ ವಿಚಾರ,” ಎಂಬುದು ತಜ್ಞರ ಅಭಿಪ್ರಾಯ. ಇನ್ನು, ಇಂದಿನ ಯುವಜನತೆ ಸದಾ ಒತ್ತಡದಲ್ಲಿರುತ್ತದೆ. ಡ್ರಗ್ ರಿಲೀಫ್ ನೀಡುತ್ತದೆ ಎನ್ನುವ ತಪ್ಪು ನಂಬಿಕೆ ಕೂಡ ಡ್ರಗ್ಗೆ ಬಲಿಯಾಗಲು ಮುಖ್ಯ ಕಾರಣವಂತೆ.
ಇದನ್ನೂ ಓದಿ: ಈ ಐದು ಕಾರಣಗಳಿಂದ ತಲೆನೋವು ಬರುತ್ತೆ..!
“ಪುರುಷರು ಹಾಗೂ ಮಹಿಳೆಯರು ಡ್ರಗ್ ತೆಗೆದುಕೊಂಡಾಗ ಉಂಟಾಗುವ ಪರಿಣಾಮಗಳಲ್ಲಿ ವ್ಯತ್ಯಾಸವಿದೆ. ಹಾಗಾಗಿ ಇಬ್ಬರಿಗೂ ನೀಡುವ ಚಿಕಿತ್ಸೆಯ ಕ್ರಮ ಬೇರೆ ರೀತಿಯಲ್ಲೇ ಇರಬೇಕು” ಎನ್ನುತ್ತಾರೆ ಈ ಬಗ್ಗೆ ಅಧ್ಯಯನ ನಡೆಸಿದ ವೈದ್ಯರು. ಈ ಬಗ್ಗೆ ತಜ್ಞರು ಇನ್ನೂ ಹೆಚ್ಚಿನ ಅಧ್ಯಯನ ನಡೆಸಲು ನಿರ್ಧರಿಸಿದ್ದಾರಂತೆ. ಅಷ್ಟೇ ಅಲ್ಲ, ಇದನ್ನು ತಡೆಯವುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ