ಮಹಿಳೆಯರನ್ನು ಸೆಳೆಯುವ ಪುರುಷರ ಆ ಗುಣಗಳು ಯಾವುದು ಗೊತ್ತಾ?

ಪುರುಷರಲ್ಲಿ ಅಡಗಿರುವ ಚಿಕ್ಕ ಸಂಗತಿಗಳು ಮಹಿಳೆಯರನ್ನು ಬೇಗ ಸೆಳೆದುಕೊಳ್ಳುತ್ತವೆ. ಪುರುಷರ ಮಾತನಾಡುವ ರೀತಿ ಕೆಲ ಮಹಿಳೆಯರಿಗೆ ಇಷ್ಟವಾದರೆ, ಇನ್ನೂ ಕೆಲವರಿಗೆ ಪುರುಷರ ಹೇರ್​ ಸ್ಟೈಲ್​, ನಗು ಮಹಿಳೆಯರನ್ನು ಆಕರ್ಷಿತರಾಗುವಂತೆ ಮಾಡುತ್ತದೆ.

news18-kannada
Updated:December 17, 2019, 6:47 PM IST
ಮಹಿಳೆಯರನ್ನು ಸೆಳೆಯುವ ಪುರುಷರ ಆ ಗುಣಗಳು ಯಾವುದು ಗೊತ್ತಾ?
.
  • Share this:
ಆಕರ್ಷಣೆ ಎನ್ನುವುದು ಯಾರಲ್ಲಿ, ಯಾವಾಗ ಹುಟ್ಟಿಕೊಳ್ಳುತ್ತದೆ ಎಂದು ಹೇಳಲಾಗದು. ಪ್ರತಿಯೊಬ್ಬರಲ್ಲೂ ಆಕರ್ಷಣೆ ಎನ್ನುವುದು ಇದ್ದೇ ಇರುತ್ತದೆ. ಹಾಗೆಂದ ಮಾತ್ರಕ್ಕೆ ಎಲ್ಲಾ ಪುರುಷರೂ ಮಹಿಳೆಯರಿಂದ ಆಕರ್ಷಣೆ ಒಳಗಾಗಲಾರರು. ಆದರೆ, ಪುರುಷರ ಕೆಲವೊಂದು ಗುಣಗಳು, ಹವ್ಯಾಸಗಳು ಮಹಿಳೆಯೆಡೆಗೆ ಸೆಳೆಯುವಂತೆ  ಮಾಡುತ್ತದೆ.

ಪುರುಷರಲ್ಲಿ ಅಡಗಿರುವ ಚಿಕ್ಕ ಸಂಗತಿಗಳು ಮಹಿಳೆಯರನ್ನು ಬೇಗ ಸೆಳೆದುಕೊಳ್ಳುತ್ತವೆ. ಪುರುಷರ ಮಾತನಾಡುವ ರೀತಿ ಕೆಲ ಮಹಿಳೆಯರಿಗೆ ಇಷ್ಟವಾದರೆ, ಇನ್ನೂ ಕೆಲವರಿಗೆ ಪುರುಷರ ಹೇರ್​ ಸ್ಟೈಲ್​, ನಗು ಮಹಿಳೆಯರನ್ನು ಆಕರ್ಷಿತರಾಗುವಂತೆ ಮಾಡುತ್ತದೆ.  • ಪುರುಷರು ಸನ್​ಗ್ಲಾಸ್​​ ಹಾಕಿದಾಗ ಹೆಚ್ಚು ಆಕರ್ಷಕವಾಗಿ ಕಾಣುತ್ತಾರೆ. ಹಾಗಾಗೀ, ಸನ್​ಗ್ಲಾಸ್​ ಧರಿಸಿದ ಪುರುಷರು ಮಹಿಳೆಯರಿಗೆ ಹೆಚ್ಚು ಇಷ್ಟವಾಗುತ್ತಾರೆ.

  • ಅನೇಕ ಹುಡುಗಿಯರು, ಹುಡುಗರ ಪಾದವನ್ನು ನೋಡಿ ಇಷ್ಟಪಡುತ್ತಾರೆ. ಹುಡುಗರ ನೀಳವಾದ ಮತ್ತು ಅಗಲವಾದ ಪಾದ ಹುಡುಗಿಯರಿಗೆ ಹೆಚ್ಚು ಇಷ್ಟವಂತೆ.

  • ಹುಡುಗರು ನಿದ್ದೆಗಣ್ಣಿನಲ್ಲಿ ಫೋನ್​ ಬಂದಾಗ ತೊದಲು ಮಾತಾನಾಡುತ್ತಾರೆ. ಹುಡುಗರ ಈ ತೊದಲು ನುಡಿಯ ಮಾತು ಹುಡುಗಿಯರಿಗೆ ಹೆಚ್ಚು ಇಷ್ಟವಾಗುತ್ತದೆ.
  • ಜೀನ್ಸ್​ ಟೀ ಶರ್ಟ್​ ಧರಿಸಿದ ಹುಡುಗರಿಗಿಂತ ಫಾರ್ಮಲ್​ ಆಗಿ ಡ್ರೆಸ್​ ಮಾಡಿರುವ ವ್ಯಕ್ತಿಯನ್ನು ನೋಡಿದಾಗ ಮಹಿಳೆಯರಿಗೆ ಬೇಗ ಇಂಪ್ರಸ್​​ ಆಗುತ್ತದೆ.

  • ಹುಡುಗರ ನಗುವನ್ನುನೋಡಿ ಹುಡುಗಿಯರು ಪ್ರೀತಿ ಬೀಳುತ್ತಾರೆ. ಗುಳಿ ಕೆನ್ನೆಯ ಹುಡಗನ ನಗು ಹುಡುಗಿಯರಿಗೆ ಬೇಗ ಇಷ್ಟವಾಗುತ್ತದೆ.


ಇದನ್ನೂ ಓದಿ: ವಿಜಯ್ ದೇವರಕೊಂಡ ‘ಫೈಟರ್‘​​ ನಲ್ಲಿ ಬಾಲಿವುಡ್​ ನಟಿ: ಈಕೆಯ ಸಂಭಾವನೆ ಎಷ್ಟು ಗೊತ್ತಾ?

ಇದನ್ನೂ ಓದಿ: ಶೀಘ್ರವೇ ನಿಮ್ಮ ಮನೆಯಲ್ಲಿರುವ ಕೊಳೆತ ತರಕಾರಿಗಳಿಂದಲೂ ಬೈಕ್​ ಓಡಿಸಬಹುದು!

 

First published: December 17, 2019, 6:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading