Sleep Tips: ಪುರುಷರಿಗಿಂತ ಮಹಿಳೆಯರು ಹೆಚ್ಚು ಸಮಯ ನಿದ್ದೆ ಮಾಡಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿದ್ಯಂತೆ!

ಅನೇಕ ಅಧ್ಯಯನಗಳು ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚಿನ ನಿದ್ದೆಯ ಅವಶ್ಯಕತೆಯಿದೆ ಎಂಬುದನ್ನು ದೃಢಪಡಿಸಿವೆ. ಮಹಿಳೆಯರ ಜೈವಿಕ ಕ್ರಿಯೆಯ ಆಧಾರದ ಮೇಲೆ ಮಹಿಳೆಯರಿಗೆ ನಿದ್ದೆ ಹೆಚ್ಚು ಬೇಕು ಎಂಬುದನ್ನು ತಿಳಿಸಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನಮ್ಮ ದೈನಂದಿನ (everyday) ಬದುಕಿನಲ್ಲಿ ವ್ಯಾಯಾಮ (exercise) ಎಷ್ಟು ಮುಖ್ಯವೋ ಅಷ್ಟೇ ನಿದ್ದೆಯೂ ಕೂಡ ಮುಖ್ಯ. ನಾವು ಸದೃಢವಾಗಿ, ಆ್ಯಕ್ಟೀವ್ ಆಗಿರಬೇಕಾದರೆ ಒಳ್ಳೆಯ ನಿದ್ದೆ (sleep) ಮಾಡಲೇಬೇಕು. ಆದರೆ ಇತ್ತೀಚಿನ ದಿನಮಾನಗಳಲ್ಲಿ  ಮನುಷ್ಯ ನಿದ್ದೆ ಮಾಡುವ ಸಮಯದಲ್ಲಿ ಸಾಕಷ್ಟು ವ್ಯತ್ಯಾಸಗಳಾಗುತ್ತಿರುವುದನ್ನು ಕಾಣುತ್ತೇವೆ. ಅದಕ್ಕೆ ನಮ್ಮ ದೈನಂದಿನ ಚಟುವಟಿಕೆಗಳೂ ಕಾರಣವಾಗುತ್ತವೆ. ಮೊಬೈಲ್, ಕೆಲಸದ ಒತ್ತಡ ಸೇರಿದಂತೆ ಇನ್ನಿತರೆ ಕಾರಣಗಳಿಂದ ನಿದ್ದೆಬಾರದೇ ವ್ಯಕ್ತಿ ತೊಳಲಾಡುತ್ತಾನೆ. ಅಷ್ಟೇ ಅಲ್ಲ.. ಪುರುಷರಿಗಿಂತ (men) ಮಹಿಳೆಯರು (women) ಸರಿಯಾಗಿ ನಿದ್ದೆ ಮಾಡದೇ ಹೋದರೆ ಸಾಕಷ್ಟು ಅಡ್ಡಪರಿಣಾಮಗಳಿಗೆ (side effects) ಮತ್ತು ಕಾಯಿಲೆಗಳಿಗೆ ತುತ್ತಾಗುತ್ತಾರೆ ಎಂಬುದನ್ನ 2014ರಲ್ಲಿ ನಡೆದ ಅಧ್ಯಯನವಾದ ‘ಎಕ್ಸ್ಪ್ಲೋರಿಂಗ್ ಸೆಕ್ಸ್ ಆ್ಯಂಡ್ ಜೆಂಡರ್ ಡಿಫರೆನ್ಸಸ್ ಇನ್ ಸ್ಲೀಪ್ ಹೆಲ್ತ್’ ಮಹಿಳಾ ಆರೋಗ್ಯ ಸಂಶೋಧನಾ (researches) ವರದಿ ತಿಳಿಸಿದೆ. ಇದನ್ನು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸನ್ ವರದಿಯನ್ನು ಪ್ರಸಾರ ಮಾಡಿದೆ.

  ನಿದ್ದೆ ನಮ್ಮ ದೈಹಿಕ ಮತ್ತು ಮಾನಸಿಕ , ಭಾವನಾತ್ಮಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೊರೊನಾ ನಂತರದ ಈಗಿನ ಸನ್ನಿವೇಶದಲ್ಲಿ ಪುರುಷರು ಮತ್ತು ಮಹಿಳೆಯರು ವರ್ಕ್ ಫ್ರಂ ಹೋಮ್ ಗೆ ಮೊರೆ ಹೋಗಿದ್ದಾರೆ. ಇದು ಪುರುಷರಿಗಿಂತ ಮಹಿಳೆಯರ ಕಡಿಮೆ ನಿದ್ದೆಗೆ ಕಾರಣವಾಗುತ್ತಿರೋದು ಸತ್ಯ ಸಂಗತಿ.

  ಒಂದು ಕಡೆ ಮನೆ ಕೆಲಸ, ತಾಯಿಯಾಗಿದ್ದರೆ ಮಗುವಿನ ಆರೈಕೆ ಮತ್ತು ಆಫೀಸ್ ಕೆಲಸದ ಜವಾಬ್ದಾರಿಯೂ ಹೆಚ್ಚುತ್ತದೆ. ಕುಳಿತೇ ಕೆಲಸ ಮಾಡುವುದರಿಂದ ಮೊಣಕಾಲು, ಸಂಧಿವಾತ, ನಿದ್ರಾಹೀನತೆಗೆ ಗುರಿಯಾಗುವ ಅಪಾಯವಿದೆ. ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚಿನ ನಿದ್ದೆಯ ಅವಶ್ಯಕತೆಯಿದೆ. ಕೆಟ್ಟ ನಿದ್ದೆಯ ಚಕ್ರವು ಮಹಿಳೆಯರಲ್ಲಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಡಾ. ಸಿಬಾಶಿಶ್ ಡೇ ತಿಳಿಸಿದ್ದಾರೆ.

  ಏಷಿಯಾ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ವೈದ್ಯಕೀಯ ವ್ಯವಹಾರಗಳ ಮುಖ್ಯಸ್ಥರಾಗಿರುವ ಡಾ. ಸಿಬಾಶಿಶ್ ಡೇ, ರೆಸ್ಮೆಡ್, ಕಾನ್ಕ್ಯೂರ್ಸ್ ಅಧ್ಯಯನದ ಮೂಲಕ ಪುರುಷರಿಗಿಂತ ಮಹಿಳೆಯರಿಗೆ ನಿದ್ದೆ ಹೆಚ್ಚು ಯಾಕೆ ಬೇಕು ಎಂಬುದನ್ನು ತಿಳಿಸಿದ್ದಾರೆ. ನಿದ್ದೆಯಿಲ್ಲದಿದ್ದರೆ ಆಗುವ ಅಡ್ಡ ಪರಿಣಾಮಗಳು ಮತ್ತು ನಿದ್ದೆಯ ಅಭಾವವನ್ನು ಸರಿಪಡಿಸಿಕೊಳ್ಳಲು ಮಹಿಳೆಯರಿಗೆ ಬೇಕಾದ ಸಲಹೆಗಳನ್ನು ನೀಡಿದ್ದಾರೆ.

  ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ನಿದ್ದೆ ಯಾಕೆ ಬೇಕು..?

  ಅನೇಕ ಅಧ್ಯಯನಗಳು ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚಿನ ನಿದ್ದೆಯ ಅವಶ್ಯಕತೆಯಿದೆ ಎಂಬುದನ್ನು ದೃಢಪಡಿಸಿವೆ. ಮಹಿಳೆಯರ ಜೈವಿಕ ಕ್ರಿಯೆಯ ಆಧಾರದ ಮೇಲೆ ಮಹಿಳೆಯರಿಗೆ ನಿದ್ದೆ ಹೆಚ್ಚು ಬೇಕು ಎಂಬುದನ್ನು ತಿಳಿಸಿವೆ. ಸಂಶೋಧನೆಯ ಪ್ರಕಾರ ಮಹಿಳೆ ಮತ್ತು ಪುರುಷ ತಮ್ಮ ದಿನವನ್ನು ಹೇಗೆ ಕಳೆಯುತ್ತಾರೆ..? ಅವರ ದುಡಿಮೆ, ಕೆಲಸ, ಸಾಮಾಜಿಕ ಜವಾಬ್ದಾರಿ, ಮನೆ, ಕುಟುಂಬದ ಕಾಳಜಿ ಇವೆಲ್ಲದಕ್ಕೆ ಪುರುಷ ಮತ್ತು ಮಹಿಳೆಯಲ್ಲಿ ಯಾರು ಹೆಚ್ಚಿನ ಸಮಯ ವ್ಯಯಿಸುತ್ತಾರೆ ಎಂಬುದು ಮಹಿಳೆಯರಿಗೆ ನಿದ್ದೆ ಹೆಚ್ಚು ಬೇಕು ಎಂಬುದನ್ನು ಸೂಚಿಸುತ್ತದೆ ಎಂದು ಡಾ.ಡೇ , ಇಂಡಿಯನ್ ಎಕ್ಸ್ಪ್ರೆಸ್ ಡಾಟ್ ಕಾಂ ಗೆ ತಿಳಿಸಿದ್ದಾರೆ.

  ಇದನ್ನೂ ಓದಿ: ಸರಿಯಾಗಿ ನಿದ್ದೆ ಬರ್ತಿಲ್ಲ ಅನ್ನೋರು ಒಮ್ಮೆ ಈ 4 ಡ್ರಿಂಕ್ಸ್ ಟ್ರೈ ಮಾಡಿ ನೋಡಿ, ಉತ್ತಮ ನಿದ್ರೆ ನಿಮ್ಮದಾಗುತ್ತೆ

  ಪುರುಷರು ಒಳ್ಳೆಯ ನಿದ್ದೆ ಮಾಡುತ್ತಾರೆ

  ಮಹಿಳೆಯರಿಗಿಂತ ಪುರುಷರು ಚೆನ್ನಾಗಿ ನಿದ್ದೆ ಮಾಡುತ್ತಾರೆ. ಇನ್ನು ಮಹಿಳೆಯರು 11 ರಿಂದ 13 ನಿಮಿಷ ಪುರುಷರಿಗಿಂತ ಹೆಚ್ಚು ನಿದ್ದೆ ಮಾಡಬೇಕು ಎಂದು ಡಾ. ಡೇ ಹೇಳಿದ್ದಾರೆ. ಮಹಿಳೆಯರು ರಾತ್ರಿ ವೇಳೆ ಏಳುವುದು, ಕುಟುಂಬದ ಸದಸ್ಯರ ಬಗ್ಗೆ ಕಾಳಜಿ ತೆಗೆದುಕೊಳ್ಳುವುದು, ಬೆಳಗ್ಗೆ ಬೇಗ ಎದ್ದು ಮನೆಗೆಲಸವನ್ನೂ ಮಾಡುವುದು ಇದೆಲ್ಲದರಿಂದ ಮಹಿಳೆಯರಿಗೆ ನಿದ್ದೆಯ ಅಭಾವ ಉಂಟಾಗುತ್ತದೆ. ಆದರೆ ಪುರುಷರು ಯಾವುದೇ ತೊಂದರೆ ಇಲ್ಲದೆ ಚೆನ್ನಾಗಿ ನಿದ್ದೆ ಮಾಡುತ್ತಾರೆ ಎಂದಿದ್ದಾರೆ.

  ‘ಹೆಚ್ಚಿನ ಮಹಿಳೆಯರು ಮಧ್ಯಾಹ್ನದ ವೇಳೆ ನಿದ್ದೆ ಮಾಡುವುದರಿಂದ ಸಂಪೂರ್ಣ ನಿದ್ದೆಯ ಸಮಯ ಹದಗೆಡುತ್ತದೆ. ರಾತ್ರಿ ಕಡಿಮೆ ನಿದ್ದೆ ಮಾಡುವುದು ಮಹಿಳೆಯರನ್ನು ವಿಶ್ರಾಂತಿಯಿಲ್ಲದಂತೆ ಮಾಡುತ್ತದೆ’ ಎಂದಿದ್ದಾರೆ.

  ಮಹಿಳೆಯರಿಗೆ ಹೆಚ್ಚು ನಿದ್ದೆ ಬೇಕು ಎಂಬುದಕ್ಕೆ ಕಾರಣಗಳು

  ನಿದ್ರಾಹೀನತೆ:

  40 ಪರ್ಸೆಂಟ್ ಗಿಂತ ಹೆಚ್ಚಿನ ಮಹಿಳೆಯರಿಗೆ ಸಂಧಿವಾತ, ಮೊಣಕಾಲು ನೋವಿನಂತ ಕಾಯಿಲೆಗಳು ಬಾಧಿಸುತ್ತವೆ. ಇದರಿಂದ ಕೈಕಾಲುಗಳಿಗೆ ಆರಾಮ ಸಿಗದೇ, ನೋವಿನಿಂದಾಗಿ ರಾತ್ರಿ ನಿದ್ದೆಬಾರದಾಗುತ್ತದೆ. ನಿದ್ದೆ ಮಾಡದೇ ಕಳೆದ ಸಮಯವನ್ನು ಸರಿದೂಗಿಸಲು ಮಹಿಳೆಯರಿಗೆ ಸ್ವಲ್ಪ ಹೆಚ್ಚು ನಿದ್ದೆ ಬೇಕು.

  ಹಾರ್ಮೋನುಗಳಲ್ಲಿ ವ್ಯತ್ಯಾಸ:

  ಮಹಿಳೆಯರಲ್ಲಿ ಬಹುವಾಗಿ ಆಗುವ ಹಾರ್ಮೋನುಗಳ ವ್ಯತ್ಯಾಸ, ಮುಟ್ಟಾಗುವ ಸಮಯದಲ್ಲಿ ವ್ಯತ್ಯಾಸ, ತಾಯಿಯಾದ ನಂತರದ ಸಮಯದಲ್ಲಿ ಮಗುವಿನ ಆರೈಕೆ ಇವೆಲ್ಲ ಕಾರಣಗಳಿಂದಾಗಿ ಮಹಿಳೆಯರಲ್ಲಿ ನಿದ್ದೆಯ ಅಭಾವ ಕಾಡುತ್ತದೆ. ಹೀಗಾಗಿ ಸ್ವಲ್ಪ ಹೆಚ್ಚು ಸಮಯ ನಿದ್ದೆ ಬೇಕು.

  ಮಾನಸಿಕ ಆರೋಗ್ಯ:

  ಪುರುಷರಿಗಿಂತ ಮಹಿಳೆಯರು ಹೆಚ್ಚಿ ಒತ್ತಡ, ಖಿನ್ನತೆಗೆ ಒಳಗಾಗುತ್ತಾರೆ. ವೃತ್ತಿಪರ ಬದ್ಧತೆ, ಸಾಮಾಜಿಕ ಮತ್ತು ಕುಟುಂಬದ ಜವಾಬ್ದಾರಿ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಮಹಿಳೆಯರನ್ನು ಕುಗ್ಗಿಸುತ್ತದೆ. ಚಿಂತೆ ಮತ್ತು ಒತ್ತಡ ಮಾನಸಿಕ ಆರೋಗ್ಯವನ್ನು ಹದಗೆಡಿಸಿ, ನಿದ್ದೆಯಿಲ್ಲದಂತೆ ಮಾಡುತ್ತವೆ. ಆದ್ದರಿಂದ ಮಹಿಳೆಯರಿಗೆ ಹೆಚ್ಚು ನಿದ್ದೆ ಬೇಕು.

  ವೈಯಕ್ತಿಕ ಜೀವನಶೈಲಿ ಮತ್ತು ಫಿಟ್ನೆಸ್:

  ಒಳ್ಳೆಯ ನಿದ್ದೆ ಮನುಷ್ಯನ ದೇಹವನ್ನು ಸದೃಢವಾಗಿಸುತ್ತದೆ. ಮೂಳೆಗಳನ್ನು ಬಲಪಡಿಸುತ್ತದೆ. ವ್ಯಾಯಾಮ, ಕೆಲಸ, ಕಸರತ್ತು ಮಾಡಲು ಶಕ್ತಿ ನೀಡುತ್ತದೆ. ದಿನದ ಕಠಿಣ ಚಟುವಟಿಕೆಗಳು ಮತ್ತು ಟಾಸ್ಕ್ಗಳನ್ನು ಪೂರ್ತಿಗೊಳಿಸಲು ಸಹಾಯ ಮಾಡುತ್ತದೆ. ಯು.ಕೆಯ ಲೋಹ್ಬೋರೋ ಯುನಿವರ್ಸಿಟಿ ಸಂಶೋಧನೆಯೂ ಕೂಡ ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ಸಮಯ ನಿದ್ದೆ ಬೇಕು ಎಂಬುದನ್ನು ತಿಳಿಸಿದೆ.

  ಇದನ್ನೂ ಓದಿ: 40ರ ಬಳಿಕ ನಿಮ್ಮ ಆರೋಗ್ಯದ ಬಗ್ಗೆ ಇರಲಿ ಕಾಳಜಿ

  ನಿದ್ರಾಹೀನತೆ ಮಹಿಳೆಯರಲ್ಲಿ ಆಯಾಸ, ಮೂಡ್ ಸ್ವಿಂಗ್ಸ್, ಪಿಸಿಒಎಸ್ ಹಸಿವಾಗದಿರುವುದು ಅಥವಾ ಹೆ್ಚು ತಿನ್ನುವುದು, ಮುಟ್ಟಿನ ಚಕ್ರದಲ್ಲಿ ಬದಲಾವಣೆ, ಗರ್ಭಧಾರಣೆ ಸಮಸ್ಯೆ ಹೀಗೆ ಹಲವು ಸಮಸ್ಯೆಗೆ ಈಡು ಮಾಡುತ್ತವೆ. ಮಹಿಳೆಯರು ಏಳು ಗಂಟೆ ಸರಿಯಾಗಿ ನಿದ್ದೆ ಮಾಡದಿದ್ದರೆ ಶೇ. 15 ರಷ್ಟು ಗರ್ಭಧರಿಸಲು ಸಮಸ್ಯೆ ಉಂಟು ಮಾಡುತ್ತದೆ.

  ಮಹಿಳೆಯರಿಗೆ ಎಷ್ಟು ಹೆಚ್ಚು ಸಮಯ ನಿದ್ದೆ ಬೇಕು..?

  ಹಾಗಿದ್ದರೆ ಪುರುಷರಿಗಿಂತ ಮಹಿಳೆಯರಿಗೆ ಎಷ್ಟು ಹೆಚ್ಚಿನ ಸಮಯ ನಿದ್ದೆ ಬೇಕು ಎಂಬುದನ್ನು ಅಧ್ಯಯನಗಳು ಹೀಗೆ ಹೇಳಿವೆ. ಮಹಿಳೆಯರು 20 ರಿಂದ 30 ನಿಮಿಷ ಪುರುಷರಿಗಿಂತ ಹೆಚ್ಚು ನಿದ್ದೆ ಮಾಡಬೇಕು. ಕೆಲಸದ ಒತ್ತಡಗಳಿಂದ ಕಳೆದು ಹೋದ ಸಮಯವನ್ನು ನಿದ್ದೆಯ ಮೂಲಕ ದೇಹಕ್ಕೆ ಆರಾಮ ನೀಡುವಂತೆ ಮಾಡಬೇಕು ಎಂದು ಹೇಳಲಾಗಿದೆ.

  ಇನ್ನು ತಾಯಿಯಾದ ಮತ್ತು ತಾಯಿಯಾಗುತ್ತಿರುವವರು ನಿದ್ದೆಯ ಸಮಯವನ್ನು ಸರಿಯಾಗಿ ಸೆಟ್ ಮಾಡಿಟ್ಟುಕೊಳ್ಳಬೇಕು. ತಾಯಿಯಾಗುತ್ತಿರುವವರಿಗೆ ನಿದ್ದೆಯ ಅಭಾವ ಡಯಾಬಿಟಿಸ್, ಒತ್ತಡ, ಕೈಕಾಲುಗಳ ನೋವು, ತೂಕ ಹೆಚ್ಚಳದಂತ ಸಾಕಷ್ಟು ಕೆಟ್ಟ ಪರಿಣಾಮ ಎದುರಿಸುವಂತೆ ಮಾಡುತ್ತದೆ.

  ಮಹಿಳೆಯರೇ ನಿಮ್ಮ ನಿದ್ದೆಯ ಸಮಯ ಹೀಗಿರಲಿ…

  • ಮಲಗಿ ಏಳುವ ನಿಮ್ಮ ಸಮಯದಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಿ. ರಾತ್ರಿ 10 ಗಂಟೆಗೆ ಮಲಗುವ ಹಾಗೂ 7 ಗಂಟೆಯೊಳಗೆ ಏಳುವುದನ್ನು ರೂಢಿಸಿಕೊಳ್ಳಿ. ಏಳು ಗಂಟೆ ಸರಿಯಾದ ನಿದ್ದೆ ಮಾಡುವುದನ್ನು ರೂಢಿಸಿಕೊಳ್ಳಿ.

  • ಮಧ್ಯಾಹ್ನದ ನಿದ್ದೆಯನ್ನು ಕಡಿತಗೊಳಿಸಿ. ಕಾಫಿ, ಆಲ್ಕೋಹಾಲ್, ನಿಕೋಟಿನ್ ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿ.

  • ರಾತ್ರಿ ಹೆಚ್ಚು ಊಟ ಮಾಡುವುದನ್ನು ನಿಯಂತ್ರಿಸಿ. ರಾತ್ರಿ ಊಟದ ನಂತೆ 15 ನಿಮಿಷ ನಡೆದಾಡಿರಿ.ರಾತ್ರಿ ಮಲಗುವ ಮೊದಲು ಹೆಚ್ಚು ನೀರು ಕುಡಿಯಬೇಡಿ.

  • ನೀವು ಮಲಗುವ ಕೋಣೆ ಶಾಂತವಾದ ವಾತಾವರಣ, ಕತ್ತಲು, ಗದ್ದಲರಹಿತವಾಗಿರುವಂತೆ ನೋಡಿಕೊಳ್ಳಿ.

  • ರಾತ್ರಿ ಮಲಗುವ ಮೊದಲು ಬಿಸಿನೀರಿನ ಸ್ನಾನ ಮಾಡಿದರೆ ಒಳ್ಳೆಯ ನಿದ್ದೆ ಬರುತ್ತದೆ. ನೀವು ಗರ್ಭವತಿಯಾಗಿದ್ದರೆ ಬಿಸಿ ನೀರನ್ನು ಬಳಸುವುದರ ಬಗ್ಗೆ ಹೆಚ್ಚು ನಿಗಾವಹಿಸಿ.

  • ಯೋಗ, ಧ್ಯಾನ ಮಾಡಿ.


  ಈ ಮೂಲಕ ಒಳ್ಳೆಯ ನಿದ್ದೆ ಮಾಡಿ, ಆರೋಗ್ಯ ಕಾಯ್ದುಕೊಳ್ಳಿ.
  Published by:renukadariyannavar
  First published: