Women Health Care: ಮಹಿಳೆಯರು ಈ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕರಕ

ದೇಹಕ್ಕೆ ಪ್ರಯೋಜನಕಾರಿ ಆಹಾರಗಳ ಪಟ್ಟಿ ದೊಡ್ಡದಿದೆ. ಅದರ ಜೊತೆಗೆ ಹಾನಿಕಾರಕ ಆಹಾರಗಳ ಪಟ್ಟಿಯೂ ಇದೆ. ಮಹಿಳೆಯರ ತಿನ್ನುವ ಮತ್ತು ಕುಡಿಯುವ ಆಹಾರದ ಬಗ್ಗೆ ಗಮನಹರಿಸಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಆರೋಗ್ಯಕ್ಕೆ (Health) ಕೆಲವು ಆಹಾರ (Food) ಪದಾರ್ಥಗಳು ಒಳ್ಳೆಯದು (Good) ಮತ್ತು ಕೆಲವು ಆಹಾರ ಪದಾರ್ಥಗಳು ಕೆಟ್ಟ ಪರಿಣಾಮ (Bad Effects) ಬೀರುತ್ತವೆ ಎಂದು ಪರಿಗಣಿಸಲಾಗಿದೆ. ಹೀಗಾಗಿ ತಜ್ಞರು (Experts ಯಾವಾಗಲೂ  ಕೆಲವು ಆಹಾರವನ್ನು ತಿನ್ನಲು ಮಾತ್ರ ಶಿಫಾರಸು ಮಾಡುತ್ತಾರೆ. ಅದು ದೇಹಕ್ಕೆ (Body) ಪ್ರಯೋಜನ ನೀಡುತ್ತದೆ. ಜೊತೆಗೆ ಆರೋಗ್ಯವನ್ನು ಸರಿಯಾಗಿ ಇಡುತ್ತದೆ. ದೇಹಕ್ಕೆ ಪ್ರಯೋಜನಕಾರಿ ಆಹಾರಗಳ ಪಟ್ಟಿ ದೊಡ್ಡದಿದೆ. ಅದರ ಜೊತೆಗೆ ಹಾನಿಕಾರಕ ಆಹಾರಗಳ ಪಟ್ಟಿಯೂ ಇದೆ. ಮಹಿಳೆಯರ ತಿನ್ನುವ ಮತ್ತು ಕುಡಿಯುವ ಆಹಾರದ ಬಗ್ಗೆ ಮಾತನಾಡಿದರೆ, ತಜ್ಞರು ಕೆಲವು ಆಹಾರಗಳನ್ನು ತಿನ್ನದಂತೆ ಮಹಿಳೆಯರಿಗೆ ಸಲಹೆ ನೀಡುತ್ತಾರೆ.

    ಈ ಆಹಾರಗಳು ಮಹಿಳೆಯರ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗಿದೆ. ಹಾಗಾಗಿ ಮಹಿಳೆಯರು ಈ ಆಹಾರಗಳನ್ನು ಸೇವನೆ ಮಾಡದಿರುವುದು ಒಳಿತು.

    ಕೊಬ್ಬು ರಹಿತ ಮೊಸರು ಸೇವನೆ ಬೇಡ

    ಮಹಿಳೆಯರು ಮೊಸರು ತಿನ್ನಲು ಇಷ್ಟ ಪಡುತ್ತಾರೆ. ಅದರಲ್ಲೂ ಕೊಬ್ಬು ರಹಿತ ಮೊಸರು ತಿನ್ನಲು ಬಯಸುತ್ತಾರೆ. ಆದರೆ ಮಾರುಕಟ್ಟೆಯ ಕೊಬ್ಬಿನಂಶವಿಲ್ಲದ ಮೊಸರಿನಲ್ಲಿ ಸಕ್ಕರೆ ಪ್ರಮಾಣವು ಹೆಚ್ಚಿಗೆ ಇರುತ್ತದೆ. ಹೀಗಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಇನ್ಸುಲಿನ್ ಹೆಚ್ಚಾಗುತ್ತದೆ.

    ಇದನ್ನೂ ಓದಿ: ಬೇಸಿಗೆಯಲ್ಲಿ ದೇಹದ ಕಾಳಜಿಗಾಗಿ ಅಡುಗೆ ಮನೆಯಲ್ಲೇ ಇವೆ ಅಗತ್ಯ ವಸ್ತುಗಳು

    ಹ್ಯೂಮನ್ ರಿಪ್ರೊಡಕ್ಷನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳನ್ನು ಹೆಚ್ಚು ಸೇವಿಸುವ ಮಹಿಳೆಯರ ಅಂಡೋತ್ಪತ್ತಿ ಬಂಜೆತನದ 85 ಪ್ರತಿಶತ ಹೆಚ್ಚಿನ ಅಪಾಯ ಹೊಂದಿದ್ದಾರೆ. ಹಾಗಾಗಿ ಪೂರ್ಣ ಕೊಬ್ಬಿನ ಸಾದಾ ಮೊಸರು ಅಥವಾ ಗ್ರೀಕ್ ಮೊಸರು ಸೇವಿಸುವುದು ಆರೋಗ್ಯಕ್ಕೆ ಉತ್ತಮ.

    ಬಿಳಿ ಬ್ರೆಡ್ ಸೇವನೆ ಬೇಡ

    ಬಿಳಿ ಬ್ರೆಡ್ ಸಂಸ್ಕರಿಸಿದ ಕಾರ್ಬ್ ನಿಂದ ಕೂಡಿದೆ. ನಮ್ಮ ದೇಹವು ಸಕ್ಕರೆಯಂತೆ ಸಂಸ್ಕರಿಸಿದ ಕಾರ್ಬ್ ಅನ್ನು ತೆಗೆದುಕೊಳ್ಳುತ್ತದೆ. ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ‌ಗಳು ಫೈಬರ್ ಹೊಂದಿರುವುದಿಲ್ಲ. ಅಂತಹ ಕಾರ್ಬೋಹೈಡ್ರೇಟ್‌ಗಳು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುತ್ತವೆ.

    ಜೊತೆಗೆ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತವೆ. ಇದು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಅಥವಾ ಪಿಸಿಓಎಸ್ ನಿಂದ ಬಳಲುತ್ತಿರುವ ಮಹಿಳೆಯರಿಗೆ ಸಮಸ್ಯೆ ಉಂಟು ಮಾಡುತ್ತದೆ.

    ಡಯಟ್ ಸೋಡಾ ಸೇವನೆ ಬೇಡ

    ಡಯಟ್ ಸೋಡಾ ಕ್ಯಾಲೋರಿ ಕಡಿಮೆ ಇರುತ್ತದೆ. ಆದರೆ ರಾಸಾಯನಿಕ ಮತ್ತು ಸಂರಕ್ಷಕಗಳು ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇವೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.

    ಜರ್ನಲ್ ಆಫ್ ದಿ ಅಮೇರಿಕನ್ ಜೆರಿಯಾಟ್ರಿಕ್ಸ್ ಸೊಸೈಟಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನಿಯಮಿತವಾಗಿ ಡಯಟ್ ಸೋಡಾ ಸೇವನೆ ಮಾಡುವ ಜನರಲ್ಲಿ 9 ವರ್ಷಗಳ ಅವಧಿಯಲ್ಲಿ ಸೋಡಾ ಕುಡಿಯದವರಿಗಿಂತ 3 ಪಟ್ಟು ಹೆಚ್ಚು ಹೊಟ್ಟೆಯ ಬೊಜ್ಜು ಹೊಂದಲು ಕಾರಣವಾಗಿತ್ತು.

    ಅಧಿಕ ಹಣ್ಣಿನ ರಸ ಸೇವನೆ ಬೇಡ

    ಹಣ್ಣಿನ ರಸವು ಆರೋಗ್ಯಕರ. ಆದರೆ ಇದು ಬಹಳಷ್ಟು ಸಕ್ಕರೆ ಪ್ರಮಾಣವನ್ನು ಹೊಂದಿದೆ. ಪ್ರತಿ 4 ಮಹಿಳೆಯರಲ್ಲಿ ಒಬ್ಬರು ಹೃದಯ ಸಂಬಂಧಿ ಕಾಯಿಲೆಯಿಂದ ಸಾಯುತ್ತಾರೆ. ಮಹಿಳೆಯರು ಹೆಚ್ಚು ಹಣ್ಣಿನ ರಸ ಸೇವನೆ ಮಾಡುವುದನ್ನು ತಪ್ಪಿಸಬೇಕು.

    ನ್ಯಾನೊ ಹೆಲ್ತ್ ಅಸೋಸಿಯೇಟ್ಸ್‌ನ ಕ್ಲಿನಿಕಲ್ ಕಾರ್ಡಿಯಾಲಜಿಸ್ಟ್ ಮತ್ತು ಸಹ-ಸಂಸ್ಥಾಪಕ ಆಡಮ್ ಸ್ಪ್ಲೇವರ್ ಪ್ರಕಾರ, ಗ್ಲೂಕೋಸ್, ಫ್ರಕ್ಟೋಸ್ ಅಥವಾ ಯಾವುದೇ ರೀತಿಯ ಸಕ್ಕರೆ ಒಳಗೊಂಡಿರುವ ಪದಾರ್ಥಗಳ ಸೇವನೆ ನಿಮ್ಮ ಹೃದಯಕ್ಕೆ ಹಾನಿಕಾರಕವಾಗಿದೆ ಎನ್ನುತ್ತಾರೆ.

    ಕಾಫಿಯ ಮೇಲಿನ ಬಿಳಿ ಕೆನೆ ಅಂದರೆ ಕಾಫಿ ಕ್ರೀಮರ್ ಸೇವನೆ ಬೇಡ

    ಮಾರುಕಟ್ಟೆಯಲ್ಲಿ ಕಾಫಿಯ ಮೇಲೆ ಬಿಳಿ ಕೆನೆ ಹಾಕಿ ಕೊಡಲಾಗುತ್ತದೆ. ಇದು ರುಚಿ ಹೆಚ್ಚಿಸುತ್ತದೆ. ಈ ಕಾಫಿ ಕ್ರೀಮರ್ ಟ್ರಾನ್ಸ್ ಕೊಬ್ಬಿನ ಮೂಲವಾಗಿದೆ. ಇದರ ತಯಾರಿಕೆಯಲ್ಲಿ ಹೈಡ್ರೋಜನ್ ಎಣ್ಣೆ ಬಳಕೆ ಮಾಡುತ್ತಾರೆ. ಈ ಸಂಸ್ಕರಿಸಿದ ಪದಾರ್ಥದಲ್ಲಿನ ಟ್ರಾನ್ಸ್ ಕೊಬ್ಬಿನ ಪ್ರಮಾಣ ಹೃದಯಕ್ಕೆ ಹಾನಿ ಮಾಡುತ್ತದೆ.

    ಜರ್ನಲ್ ಆಫ್ ಆಲ್ಕೋಹಾಲ್ ಎಪಿಡೆಮಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ದಿನಕ್ಕೆ ಕನಿಷ್ಠ 1 ಗ್ಲಾಸ್ ಆಲ್ಕೋಹಾಲ್ ಸೇವಿಸುವ ಮಹಿಳೆಯರು ಆಲ್ಕೊಹಾಲ್ ಸೇವಿಸದ ಮಹಿಳೆಯರಿಗಿಂತ 50 ಪ್ರತಿಶತದಷ್ಟು ಬಂಜೆತನದ ಅಪಾಯ ಹೊಂದಿರುತ್ತಾರೆ.

    ಇದನ್ನೂ ಓದಿ: ಕೂದಲು ಉದುರಿ ನೆತ್ತಿ ಕಾಣುತ್ತಿದೆಯೇ ಹಾಗಿದ್ದರೆ ಇಂದಿನಿಂದಲೇ ಈ ಸಲಹೆ ಪಾಲಿಸಿ

    ಕೆಂಪು ಮಾಂಸ ಸೇವನೆ ಬೇಡ

    ಮಹಿಳೆಯರು ಪ್ರತಿದಿನ ಕೆಂಪು ಮಾಂಸ ಸೇವನೆ ಮಾಡಿದರೆ ಗರ್ಭಿಣಿಯಾಗುವ ಸಾಮರ್ಥ್ಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಂಶೋಧಕರ ಪ್ರಕಾರ, ಹೆಚ್ಚು ಪ್ರಾಣಿ ಪ್ರೋಟೀನ್ ಸೇವಿಸಿದ ಮಹಿಳೆಯರಲ್ಲಿ ಹೆಚ್ಚು ಫಲವತ್ತತೆ ಸಮಸ್ಯೆ ಕಂಡು ಬಂದಿದೆ ಎಂದಿದೆ. ಹಾಗಾಗಿ ಮಹಿಳೆಯರು ಕೆಂಪು ಮಾಂಸ ಸೇವನೆ ಕಡಿಮೆ ಮಾಡಬೇಕು.
    Published by:renukadariyannavar
    First published: