Health Tips: ಮೊಬೈಲಿನಿಂದ ಮಹಿಳೆಯರಿಗೆ ಹೆಚ್ಚಾಗುತ್ತಿದೆ ಸ್ತನ ಕ್ಯಾನ್ಸರ್ - ಅತಿಯಾಗಿ ಮೊಬೈಲ್ ಬಳಸುವ ಹೆಣ್ಣು ಮಕ್ಕಳೇ ಹುಷಾರ್

Breast Cancer: ಮಂಡ್ಯದ ನಗರ ಸಭೆಯ ಧರಣಪ್ಪ ಸಭಾಂಗಣದಲ್ಲಿ ಪೌರ ಕಾರ್ಮಿಕರಿಗೆ ಅಂತ ಆರೋಗ್ಯ ಶಿಬಿರ ಆಯೋಜನೆ ಮಾಡಲಾಗಿತ್ತು. ಈ ಶಿಬಿರದಲ್ಲಿ ಆರೋಗ್ಯ ತಪಾಸಣೆಗೆ ಬಂದ ಅನೇಕ ಮಹಿಳೆಯರು ತಮ್ಮ ಮೊಬೈಲ್ ಅನ್ನು ಎದೆಯ ಭಾಗದಲ್ಲಿ ಇಟ್ಟುಕೊಂಡಿದ್ದರು‌.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಂಡ್ಯ: ಆಧುನಿಕ ಜಗತ್ತು ಬೆಳೆದಷ್ಟು ಅದರಿಂದ ಆಗುವ ಉಪಕಾರಗಳ‌ ಜೊತೆಗೆ ನಮಗರಿವಿಲ್ಲದಂತೆ ಅಪಕಾರಗಳು ಆಗ್ತಿವೆ. ಅದರಲ್ಲಿ ಬಹು ಮುಖ್ಯವಾಗಿ ಉದಾಹರಣೆಗೆ ತೆಗೆದುಕೊಂಡ್ರೆ ಮೊಬೈಲ್ (Mobile) ಮೊದಲನೆ ಸ್ಥಾನವನ್ನ ಅಲಂಕರಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮನುಷ್ಯನ ಅವಿಭಾಜ್ಯ ಅಂಗ ಅಂದರು ತಪ್ಪಾಗಲಾರದು ಎಂಬಷ್ಟು ಗಟ್ಟಿಯಾಗಿ ಮೊಬೈಲ್ ಮನುಷ್ಯರನ್ನ ಆಕ್ರಮಿಸಿಕೊಂಡಿದೆ. ಇಂತ ಮೊಬೈಲ್ ನಿಂದ ಎದುರಾಗುವ ಅದೆಷ್ಟೋ ಸಮಸ್ಯೆಗಳ ಬಗ್ಗೆ ನಾವು ಈಗಾಗಲೇ ಹಲವು ವಿಚಾರಗಳನ್ನ ತಿಳಿದುಕೊಂಡಿದ್ದೇವೆ‌. ಆದ್ರೆ ಈಗ ಮೊಬೈಲಿನಿಂದಾಗುವ ಮತ್ತೊಂದು ಅಪಾಯಕಾರಿ (Side Effects) ಅಂಶ ಬೆಳಕಿಗೆ ಬಂದಿದೆ.   

    ಎದೆಯ ಭಾಗದಲ್ಲಿ ಮೊಬೈಲ್ ಇಟ್ಟುಕೊಳ್ಳುವ ಹೆಣ್ಣು ಮಕ್ಕಳೆ ಎಚ್ಚೆತ್ತಕೊಳ್ಳಿ

    ಸಹಜವಾಗಿ ಹಳ್ಳಿ ಹೆಣ್ಣು ಮಕ್ಕಳು ವಿಧ ವಿಧವಾದ ಪರ್ಸ್ ಅಥವಾ ವ್ಯಾನಿಟಿ ಬ್ಯಾಗ್ ಗಳನ್ನ ಉಪಯೋಗಿಸುವ ಗೋಜಿಗೆ ಹೋಗೋದಿಲ್ಲ. ಅಂತವರು ಮೊಬೈಲ್ ಬಳಿಸಿದ ನಂತರ ತಮ್ಮ ಎದೆಯ ಭಾಗದಲ್ಲಿ ಇಟ್ಟುಕೊಳ್ತಾರೆ. ಆದ್ರೆ ಇದು ಅವರಿಗೆ ಮಾರಕ ಅನ್ನೋ ವಿಚಾರ ಎಷ್ಟೋ ಮಹಿಳೆಯರಿಗೆ ತಿಳಿದಿಲ್ಲ.

    ಮೊಬೈಲಿನಿಂದ ಮಹಿಳೆಯರಿಗೆ ಹೆಚ್ಚಾಗುತ್ತಿದೆ ಸ್ತನ ಕ್ಯಾನ್ಸರ್

    ಮಹಿಳೆಯರು ತಮ್ಮ‌ ಎದೆಯ ಭಾಗದಲ್ಲಿ ಮೊಬೈಲ್ ಇಟ್ಟುಕೊಳ್ಳೊದ್ರಿಂದ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ ಅಂತ ಮಂಡ್ಯದ ಖ್ಯಾತ ವೈದ್ಯೆ ಡಾ, ವಸುಮತಿ ರಾವ್ ಅಭಿಪ್ರಾಯ ಪಟ್ಟಿದ್ದಾರೆ. ಮೊಬೈಲ್‌ಗಳು ರೇಡಿಯೇಷನ್ ಹೊರ ಹೊಮ್ಮಿಸುವುದರಿಂದ ಅದನ್ನು ಸಾಧ್ಯವಾದಷ್ಟು ದೇಹದ ಯಾವುದೇ ಭಾಗಗಳಿಗೂ ಸ್ಪರ್ಶವಾಗದಂತೆ ದೂರವಿಡಬೇಕು.

    ಇದನ್ನೂ ಓದಿ: ಮಹಿಳೆಯರೇ ಈ ಸಮಸ್ಯೆ ಕಂಡ್ರೆ ತಕ್ಷಣವೇ ಡಾಕ್ಟರ್​ ಬಳಿ ಹೋಗಿ

    ಅಷ್ಟೇ ಅಲ್ಲದೇ ಈಗಾಗಲೇ ನಮಗೆ ಗೊತ್ತೇ ಇಲ್ಲದಂತೆ ನಮ್ಮ ಸುತ್ತಲಿನ ರೇಡಿಯೇಷನ್ಸ್ ಹೆಚ್ಚಾಗಿದೆ. ಹೀಗಿರುವಾಗ ಮೊಬೈಲ್‌ನ್ನು ಮಹಿಳೆಯರು ಎದೆಯ ಭಾಗದಿಂದ ದೂರವಿಡುವುದೇ ಉತ್ತಮ ಅಂತಿದ್ದಾರೆ ಡಾ, ವಸುಮತಿ ರಾವ್.

    ಸಕ್ಕರೆ ನಾಡಿನಲ್ಲಿ ಹೆಚ್ಚಾಗುತ್ತಿವೆ ಸ್ತನ ಕ್ಯಾನ್ಸರ್ ಪ್ರಕರಣ

    ಮಂಡ್ಯ ಜಿಲ್ಲೆ ಸ್ವಾತಂತ್ರ್ಯ ಪೂರ್ವದಲ್ಲೆ ಜಿಲ್ಲೆಯಾಗಿ ಘೋಷಣೆಗೊಂಡರೂ, ಈ ಜಿಲ್ಲೆ ಇನ್ನು ದೊಡ್ಡ ಹಳ್ಳಿಯಾಗೆ ಉಳಿದಿದೆ‌‌. ಹೀಗಾಗಿ ಇಲ್ಲಿನ ಬಹು ಪಾಲು ಗ್ರಾಮೀಣ ಪ್ರದೇಶಗಳಲ್ಲಿನ ಮಹಿಳೆಯರು ಇಂದಿಗೂ ಕೂಡ ತಮ್ಮ ರವಿಕೆಗಳನ್ನ ಜೇಬುಗಳಾಗಿ  ಬಳಸುತ್ತಿದ್ದಾರೆ. ಅದ್ರಲ್ಲೂ ಮೊಬೈಲ್ ಬಂದ ಮೇಲೆ ಮೊಬೈಲ್ಗಳನ್ನ ಎದೆಯ ಭಾಗದಲ್ಲಿ ಇಟ್ಟುಕೊಳ್ಳುವುದು ಅವರಿಗೆ ತುಂಬಾ ಸುಲಭವಾಗಿದೆ. ಹೀಗಾಗಿ ಬಹು ಪಾಲು ಮಹಿಳೆಯರು ಮೊಬೈಲ್ ರೆಡಿಯೇಷನ್ ನಿಂದ ಸ್ತನ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ.

    ಸ್ತನ ಕ್ಯಾನ್ಸರ್ ಆರೋಗ್ಯ ಶಿಬಿರಕ್ಕೆ ಬಂದಿದ್ದ ಮಹಿಳೆಯರ ಮೊಬೈಲ್ ಇತ್ತು ಅವರ ರವಿಕೆ ಒಳಗೆ

    ಮಂಡ್ಯದ ನಗರ ಸಭೆಯ ಧರಣಪ್ಪ ಸಭಾಂಗಣದಲ್ಲಿ ಪೌರ ಕಾರ್ಮಿಕರಿಗೆ ಅಂತ ಆರೋಗ್ಯ ಶಿಬಿರ ಆಯೋಜನೆ ಮಾಡಲಾಗಿತ್ತು. ಈ ಶಿಬಿರದಲ್ಲಿ ಆರೋಗ್ಯ ತಪಾಸಣೆಗೆ ಬಂದ ಅನೇಕ ಮಹಿಳೆಯರು ತಮ್ಮ ಮೊಬೈಲ್ ಅನ್ನು ಎದೆಯ ಭಾಗದಲ್ಲಿ ಇಟ್ಟುಕೊಂಡಿದ್ದರು‌.

    ಇದನ್ನೂ ಓದಿ: ಈ ಪಾನೀಯಗಳಲ್ಲಿದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ರಹಸ್ಯ

    ಈ ಸಂದರ್ಭ ಇದನ್ನ ಕಂಡ ವೈದ್ಯೆ ಡಾ. ವಸುಮತಿ ರಾವ್, ಮೊಬೈಲ್ ನಿಂದ ಮಹಿಳೆಯರಿಗೆ ಆಗುವ ಅನಾನುಕೂಲ ಮತ್ತು ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದ್ರು. ಹೀಗಾಗಿ ಮಹಿಳೆಯರು ಇನ್ಮುಂದೆ ಬ್ಯಾಗ್ ಅಥವಾ ಪರ್ಸ್ ಗಳಲ್ಲಿ ಮೊಬೈಲ್ ಕ್ಯಾರಿ ಮಾಡಿದ್ರೆ ಸ್ತನ ಕ್ಯಾನ್ಸರ್ ನಿಂದ ದೂರ ಇರಬಹುದಾಗಿದೆ.

    ವರದಿ - ಸುನೀಲ್ ಗೌಡ, ಮಂಡ್ಯ.
    Published by:Sandhya M
    First published: