• Home
  • »
  • News
  • »
  • lifestyle
  • »
  • Women’s Health: ಮಹಿಳೆಯರು ಯೋನಿಯ ಆರೋಗ್ಯ ಕಾಪಾಡಲು ಸಸ್ಯಾಹಾರ ಡಯಟ್ ಬೆಸ್ಟ್ ಅಂತಾರೆ ತಜ್ಞರು!

Women’s Health: ಮಹಿಳೆಯರು ಯೋನಿಯ ಆರೋಗ್ಯ ಕಾಪಾಡಲು ಸಸ್ಯಾಹಾರ ಡಯಟ್ ಬೆಸ್ಟ್ ಅಂತಾರೆ ತಜ್ಞರು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಾವು ತಿನ್ನುವ ಆಹಾರ ಯೋನಿಯ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಯೋನಿಯ ಆರೋಗ್ಯ ಕಾಪಾಡಲು ಸಸ್ಯಾಧಾರಿತ ಆಹಾರ ಅಂದರೆ ಸಸ್ಯಾಹಾರವು ತುಂಬಾ ಪ್ರಯೋಜನ ನೀಡುತ್ತದೆ ಅಂತಾರೆ ತಜ್ಞರು. ಇದು ಹಾರ್ಮೋನುಗಳ ಸಮತೋಲನಕ್ಕೆ ಸಹಾಯ ಮಾಡುತ್ತದೆ. ಸಸ್ಯಾಹಾರ ಸೇವನೆ ಯೋನಿಯನ್ನು ಹೈಡ್ರೇಟ್ ಮಾಡುತ್ತದೆ.

ಮುಂದೆ ಓದಿ ...
  • Share this:

    ಮನೆಯಲ್ಲಿ (Home) ಎಲ್ಲರ ಆರೋಗ್ಯ (Health) ಕಾಪಾಡುವ ಮಹಿಳೆಯು (Women) ತನ್ನ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಯಾಕಂದ್ರೆ ತಾನು ಆರೋಗ್ಯವಾಗಿದ್ದಾಗ ಮಾತ್ರ ಆಕೆ ಮನೆಯ ಸದಸ್ಯರ ಆರೋಗ್ಯ ಕಾಪಾಡಲು ಸಾಧ್ಯ. ಮಹಿಳೆ ತನ್ನ ಎಲ್ಲಾ ಅಂಗಗಳಿಗೆ (Parts) ಆರೈಕೆ (Care) ಮತ್ತು ಆರೋಗ್ಯ ಕಾಪಾಡುವಂತೆ ಖಾಸಗಿ ಅಂಗ ಯೋನಿಯ (Vagina) ಆರೋಗ್ಯ ಕಾಪಾಡುವುದು ತುಂಬಾ ಅತ್ಯಗತ್ಯ ಆಗಿದೆ. ಯಾಕಂದ್ರೆ ನಾವು ತಿನ್ನುವ ಆಹಾರ ನಮ್ಮ ದೇಹದ ಇತರೆ ಅಂಗಗಳ ಮೇಲೆ ಎಷ್ಟು ಉತ್ತಮ ಮತ್ತು ಕೆಟ್ಟ ಪರಿಣಾಮ ಬೀರುತ್ತದೆಯೋ, ಹಾಗೆಯೇ ಯೋನಿಯ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.


    ಮಹಿಳೆಯರ ಯೋನಿಯ ಆರೋಗ್ಯಕ್ಕೆ ಸಸ್ಯಾಹಾರ ಡಯಟ್ ಬೆಸ್ಟ್ ಆಯ್ಕೆ


    ಯೋನಿಯ ಆರೋಗ್ಯ ಕಾಪಾಡಲು ಸಸ್ಯಾಧಾರಿತ ಆಹಾರ ಅಂದರೆ ಸಸ್ಯಾಹಾರವು ತುಂಬಾ ಪ್ರಯೋಜನ ನೀಡುತ್ತದೆ ಅಂತಾರೆ ತಜ್ಞರು. ಇದು ಹಾರ್ಮೋನುಗಳ ಸಮತೋಲನಕ್ಕೆ ಸಹಾಯ ಮಾಡುತ್ತದೆ. ಸಸ್ಯಾಹಾರ ಸೇವನೆ ಯೋನಿಯನ್ನು ಹೈಡ್ರೇಟ್ ಮಾಡುತ್ತದೆ.




    ಸಸ್ಯ ಆಧಾರಿತ ಆಹಾರದಲ್ಲಿ ಹಣ್ಣು ಮತ್ತು ತರಕಾರಿ ಸೇವನೆ, ಹಸಿರು ಸೊಪ್ಪುಗಳ ಸೇವನೆ ಯೋನಿ ಪ್ರದೇಶದ ಜೊತೆಗೆ ಅದರ ಸುತ್ತಮುತ್ತಲಿನ ಪ್ರದೇಶಕ್ಕೂ ಪೋಷಣೆ ನೀಡುತ್ತದೆ.


    ಗರ್ಭಕಂಠ ಮತ್ತು ಸಂಪೂರ್ಣ ಸಂತಾನೋತ್ಪತ್ತಿ ವ್ಯವಸ್ಥೆ ಆರೋಗ್ಯವಾಗಿರಲು ಸಸ್ಯಾಹಾರ ಸೇವನೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಮೂತ್ರನಾಳದ ಸೋಂಕು, ದುರ್ವಾಸನೆ, ದಪ್ಪ ದ್ರವ ಅಥವಾ ಯೋನಿಯಿಂದ ಅತಿಯಾದ ಸ್ರಾವ, ಸೆಳೆತ, ಶುಷ್ಕತೆ, ನೋವಿನ ಲೈಂಗಿಕ ಸಮಸ್ಯೆ ದೂರ ಮಾಡುತ್ತದೆ.


    ಸಸ್ಯಾಹಾರಿ ಆಹಾರ ಯೋನಿಯಲ್ಲಿ ರಕ್ತ ಪರಿಚಲನೆಗೆ ಸಹಕಾರಿ


    ಕೆನಡಾದ ಸಂಶೋಧಕಿ ಸಾರಾ ಕ್ರೀಬಿ ಅವರು ಸಾಂಕ್ರಾಮಿಕ ರೋಗಗಳ ಜರ್ನಲ್‌ ನಲ್ಲಿ ನಡೆಸಿರುವ ಸಂಶೋಧನೆ ಪ್ರಕಾರ, ಹೆಚ್ಚಾಗಿ ಸಂಸ್ಕರಿಸಿದ ಆಹಾರ ಸೇವನೆ ಮಾಡುವುದು ದೇಹವನ್ನು ಕಾರ್ಬೋಹೈಡ್ರೇಟ್‌, ಪಿಷ್ಟ ಮತ್ತು ಕ್ಯಾಲೊರಿಗಳಿಂದ ತುಂಬಿಸುತ್ತದೆ. ಇದು ದೇಹದಲ್ಲಿ ಅತಿಯಾದ ಕೊಬ್ಬು ಹೆಚ್ಚಳಕ್ಕೆ ಕಾರಣವಾಗುತ್ತದೆ.


    ಜೀವಕೋಶಗಳು ಮತ್ತು ಅಪಧಮನಿಗಳ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಹಾರ್ಮೋನ್ ಸ್ರವಿಸುವಿಕೆಗೆ ಅಡ್ಡಿ ಮಾಡುತ್ತದೆ ಎಂದು ಹೇಳಲಾಗಿದೆ. ಸಸ್ಯ-ಆಧಾರಿತ ಆಹಾರವು ರಕ್ತ ಪರಿಚಲನೆ ಸುಧಾರಿಸುತ್ತದೆ. ಮತ್ತು ಜೀವಕೋಶಗಳು ಮತ್ತು ಅಪಧಮನಿಗಳಲ್ಲಿ ಸುಗಮ ರಕ್ತದ ಹರಿವಿಗೆ ಸಹಕಾರಿ ಆಗಿದೆ. ಇದು ಅನೇಕ ಸಮಸ್ಯೆಗಳ ನಿವಾರಣೆಗೆ ಲಾಭಕಾರಿ.


    ಸೋಂಕನ್ನು ತಡೆಯಲು ಸಸ್ಯಾಹಾರ ಸೇವನೆ ಸಹಕಾರಿ


    ಹೆಚ್ಚು ಜಂಕ್ ಫುಡ್ ಅಥವಾ ಸಂಸ್ಕರಿಸಿದ ಆಹಾರ ಸೇವನೆ ಮಾಡಿದರೆ ರೋಗ ನಿರೋಧಕ ಶಕ್ತಿ ಕಡಿಮೆ ಮಾಡುತ್ತದೆ. ದುರ್ಬಲ ರೋಗ ನಿರೋಧಕ ಶಕ್ತಿಯು ಸಕ್ಕರೆ ತಿನ್ನುವ ಬ್ಯಾಕ್ಟೀರಿಯಾಗಳು ದೇಹದಲ್ಲಿ ಬೆಳೆಯುತ್ತವೆ. ಇದು ಡಿಸ್ಬಯೋಸಿಸ್ ಉಂಟು ಮಾಡುತ್ತದೆ. ಇದು ಕರುಳಿನಲ್ಲಿ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳ ಅಸಮತೋಲನ ಉಂಟು ಮಾಡುತ್ತದೆ.


    ಹಾಗೆಯೇ ಮಹಿಳೆಯರ ಯೋನಿಯಲ್ಲೂ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳಿವೆ. ಇದನ್ನು ಮೈಕ್ರೋಬಯೋಮ್ ಎಂದು ಕರೆಯುತ್ತಾರೆ. ಸಸ್ಯ-ಆಧಾರಿತ ಆಹಾರ ಯೋನಿಯ ಸ್ವಯಂ-ಶುದ್ಧೀಕರಣಕ್ಕೆ ಸಹಕಾರಿ. ಡಿಸ್ಬಯೋಸಿಸ್ ಆದಾಗ ಸಸ್ಯ ಮೂಲದ ಆಹಾರಗಳು ಅಸಮತೋಲನ ಸರಿಪಡಿಸಲು ಮತ್ತು ಸೋಂಕಿನಿಂದ ಯೋನಿಯನ್ನು ರಕ್ಷಿಸುತ್ತವೆ.


    ದೀರ್ಘಕಾಲದ ಕಾಯಿಲೆ, ಸೋಂಕುಗಳ ಅಪಾಯ ಕಡಿಮೆ ಮಾಡುತ್ತದೆ ಸಸ್ಯಾಹಾರ


    ಮಾಂಸಾಹಾರ ಸೇವನೆಯಿಂದ ಪ್ರತಿಜೀವಕಗಳು ಮತ್ತು ಕೃತಕ ಹಾರ್ಮೋನುಗಳು ದೇಹವನ್ನು ಪ್ರವೇಶಿಸುತ್ತವೆ. ಇದು ಹಾರ್ಮೋನ್ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಲೈಂಗಿಕ ಹಾರ್ಮೋನ್ ಈಸ್ಟ್ರೊಜೆನ್ ಅನ್ನು ನಿರ್ಬಂಧಿಸುತ್ತದೆ. ಹಾಗೂ ಸೋಂಕಿನ ಅಪಾಯಕ್ಕೆ ಕಾರಣವಾಗುತ್ತದೆ. ಸಸ್ಯಾಹಾರ ಸೇವನೆ ದೀರ್ಘಕಾಲದ ಕಾಯಿಲೆ ಮತ್ತು ಸೋಂಕು ಅಪಾಯ ಕಡಿಮೆ ಮಾಡುತ್ತದೆ. ಯೋನಿಯ ಆರೋಗ್ಯಕ್ಕೆ ಪ್ರಯೋಜನಕಾರಿ.


    ಸಸ್ಯ ಆಧಾರಿತ ಯಾವ ಆಹಾರಗಳು ಯೋನಿಯ ಆರೋಗ್ಯಕ್ಕೆ ಉತ್ತಮ?


    ಯೋನಿಯ ಆರೋಗ್ಯಕ್ಕೆ ವಿಟಮಿನ್ ಎ ಸಮೃದ್ಧ ಹಸಿರು ಎಲೆಗಳ ಸೊಪ್ಪು, ಸಿಹಿ ಗೆಣಸು, ಕ್ಯಾರೆಟ್, ಬೀಟ್ರೂಟ್ ಮತ್ತು ದಾಳಿಂಬೆ, ಅನಾನಸ್, ಕ್ಯಾಪ್ಸಿಕಂ, ಸ್ಟ್ರಾಬೆರಿ, ಆವಕಾಡೊ,


    ಇದನ್ನೂ ಓದಿ: ತೂಕ ಇಳಿಕೆಗೆ ಜಪಾನಿ ಮಹಿಳೆಯರ ಆಹಾರ ಪದ್ಧತಿ ಫಾಲೋ ಮಾಡಿ


    ವಾಲ್‌ನಟ್ಸ್, ಬೀನ್ಸ್‌ನಂತಹ ವಿಟಮಿನ್ ಸಿ ಸಮೃದ್ಧ ಹಣ್ಣುಗಳು ಮತ್ತು ತರಕಾರಿಗಳ ಸೇವನೆ ಮಾಡಿ. ಒಮೆಗಾ 3 ಕೊಬ್ಬಿನಾಮ್ಲ ಪಡೆಯಲು ಅಗಸೆ ಬೀಜ, ಚಿಯಾ ಬೀಜ, ಕುಂಬಳಕಾಯಿ ಬೀಜ ಸೇವಿಸಿ.

    Published by:renukadariyannavar
    First published: