ಸೌದಿ ಅರೇಬಿಯಾ ಮಹತ್ವ ನಿರ್ಧಾರ : ಮಹಿಳೆಯರ ಕನಸಿನ ಕಾರಿನ ಚಾಲನೆ

news18
Updated:June 25, 2018, 3:56 PM IST
ಸೌದಿ ಅರೇಬಿಯಾ ಮಹತ್ವ ನಿರ್ಧಾರ : ಮಹಿಳೆಯರ ಕನಸಿನ ಕಾರಿನ ಚಾಲನೆ
news18
Updated: June 25, 2018, 3:56 PM IST
-ನ್ಯೂಸ್ 18 ಕನ್ನಡ

ರಿಯಾದ್ : ಜೂನ್ 24 ಸೌದಿ ಅರೇಬಿಯಾ ದೇಶದ ಮಹಿಳೆಯರ ಪಾಲಿನ ಐತಿಹಾಸಿಕ ದಿನ. ಬಹುಕಾಲದ ಸೌದಿ ಮಹಿಳೆಯರ ಡ್ರೈವಿಂಗ್ ಕನಸಿಗೆ ಭಾನುವಾರ ಮುಕ್ತಿ ಸಿಕ್ಕಿದೆ.

ಸೌದಿ ದೊರೆ ಮುಹಮ್ಮದ್ ಬಿನ್ ಸಲ್ಮಾನ್ 2017 ರ ಸೆಪ್ಟಂಬರ್‌ನಲ್ಲಿ ದೇಶದ ಮಹಿಳೆಯರಿಗೆ ವಾಹನ ಚಾಲನೆಗೆ ಅವಕಾಶ ನೀಡುವ ಐತಿಹಾಸಿಕ ನಿರ್ಧಾರವನ್ನು ಘೋಷಿಸಿದ್ದರು .

ಇದಾದ ಬಳಿಕ ಸೌದಿ ದೇಶದಲ್ಲಿ ಮಹಿಳೆಯರಿಗೆ ವಾಹನ ಚಾಲನಾ ತರಬೇತಿಗಳು ಪ್ರಾರಂಭಿಸಲಾಗಿತ್ತು. ಈ ಹೊಸ ಕಾನೂನಿನಂತೆ ಭಾನುವಾರ ಸೌದಿ ಮಹಿಳೆಯರು ವಾಹನ ಚಲಾಯಿಸುವ ಅವಕಾಶ ಮಾಡಿಕೊಡಲಾಗಿದೆ.

ಮಹಿಳಾ ಸಬಲೀಕರಣ ಕುರಿತು ಮಹತ್ವದ ಹೆಜ್ಜೆ  ಇಟ್ಟಿರುವ ಸೌದಿ ಅರೇಬಿಯಾ ಸರ್ಕಾರ ಮಹಿಳೆಯರಿಗೆ ವಾಹನ ಚಾಲನೆ ನಿಷೇಧ ರದ್ದುಗೊಳಿಸಿದ ಕೊನೆಯ ದೇಶವಾಗಿದೆ. ಸಂಪ್ರದಾಯವನ್ನು ಬದಿಗೊತ್ತಿ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಪ್ರಪಂಚದಾದ್ಯಂತ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ಈ ಮಹತ್ವದ ತೀರ್ಮಾನದಿಂದ ಸೌದಿಯ 1.51 ಮಹಿಳೆಯರು ವಾಹನ ಚಲಾಯಿಸುವ ಅವಕಾಶ ಪಡೆಯಲಿದ್ದಾರೆ.

ದೇಶದ ಅಭಿವೃದ್ದಿ ದೃಷ್ಟಿಯಿಂದ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ ಮಿಷನ್ 2030 ಎಂಬ ಯೋಜನೆ ರೂಪಿಸಿದ್ದು, ಮಹಿಳಾ ವಾಹನ ಚಾಲಾನೆ ಪರವಾನಗಿ ಕೂಡ ಈ ಯೋಜನೆಯ ಮಹತ್ವದ ತೀರ್ಮಾನವಾಗಿದೆ. ಆದರೆ, ಸರ್ಕಾರದ ಈ ನಿರ್ಧಾರದಿಂದ ಸೌದಿಯಲ್ಲಿ ಕಾರ್ಯ ನಿರ್ವಹಿಸುವ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ವಾಹನ ಚಾಲಕರು ಉದ್ಯೋಗ ಕಳೆದುಕೊಳ್ಳಲಿದ್ದಾರೆ.

ಜೂನ್ 24 ರಂದು ವಾಹನ ಚಾಲನೆಗೆ ಅಧಿಕೃತವಾಗಿತ್ತಾದರೂ, ಜೂ.23 ಶನಿವಾರ ರಾತ್ರಿಯಿಂದಲೇ ಸೌದಿ ಮಹಿಳೆಯರು ತಮ್ಮ ಹೊಸ ಸ್ವಾತಂತ್ರ್ಯವನ್ನು ಆಚರಿಸಿಕೊಂಡಿದ್ದು ವಿಶೇಷವಾಗಿತ್ತು.
First published:June 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ