• Home
  • »
  • News
  • »
  • lifestyle
  • »
  • Women Health: ಮಾನಸಿಕ ಸಮಸ್ಯೆ ಇರುವ ಮಹಿಳೆಗೆ ಸಿಸೇರಿಯನ್‌ ಮಾಡಿಸಬಹುದಾ? ಈ ಬಗ್ಗೆ ಕೋರ್ಟ್ ಹೇಳಿದ್ದೇನು?

Women Health: ಮಾನಸಿಕ ಸಮಸ್ಯೆ ಇರುವ ಮಹಿಳೆಗೆ ಸಿಸೇರಿಯನ್‌ ಮಾಡಿಸಬಹುದಾ? ಈ ಬಗ್ಗೆ ಕೋರ್ಟ್ ಹೇಳಿದ್ದೇನು?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇತ್ತೀಚಿನ ವರ್ಷಗಳಲ್ಲಿ ಸಿ-ಸೆಕ್ಷನ್ ಡೆಲಿವರಿ ಅಧಿಕವಾಗಿದೆ. ಕೆಲವರು ಬಯಸಿ ಸಿ-ಸೆಕ್ಷನ್‌ ಡೆಲಿವರಿ ಮಾಡಿಸಿದರೆ ಇನ್ನು ಕೆಲವರಿಗೆ ಸಹಜ ಹೆರಿಗೆಯಾಗುವುದು ಕಷ್ಟವಾದಾಗ ಸಿಸೇರಿಯನ್ ಮಾಡಬೇಕಾಗುತ್ತದೆ. ಆದರೆ ಗರ್ಭಿಣಿ ಮಾನಸಿಕ ರೋಗಿಯಾಗಿದ್ದರೆ ಏನು ಮಾಡಬೇಕು?

  • Share this:

ಮಹಿಳೆಯರಿಗೆ (Women) ಗರ್ಭಾವಸ್ಥೆ ಎಂಬುದು ಬಹಳ ಪ್ರಮುಖ ಘಟ್ಟವಾಗಿದೆ. ಈ ಹಂತದಲ್ಲಿ ಪ್ರತಿ ದಿನವೂ ಮಹಿಳೆಯೂ ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಲೇಬೇಕು. ಇಲ್ಲದಿದ್ದರೆ ಅವರು ಹೆರಿಗೆಯ ಸಮಯದಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು (Health Problem) ಎದುರಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಸಿ-ಸೆಕ್ಷನ್ ಡೆಲಿವರಿ ಅಧಿಕವಾಗಿದೆ. ಕೆಲವರು ಬಯಸಿ ಸಿ-ಸೆಕ್ಷನ್‌ ಡೆಲಿವರಿ ಮಾಡಿಸಿದರೆ ಇನ್ನು ಕೆಲವರಿಗೆ ಸಹಜ ಹೆರಿಗೆಯಾಗುವುದು ಕಷ್ಟವಾದಾಗ ಸಿಸೇರಿಯನ್ (Cesarean) ಮಾಡಬೇಕಾಗುತ್ತದೆ. ಮಗುವಿನ ತೂಕ ಹೆಚ್ಚು ಇದ್ದಾಗ , ಕರುಳ ಬಳ್ಳಿ ಸುತ್ತಿದಾಗ ಅಥವಾ ಮತ್ತಿತರ ಕ್ಲಿಷ್ಟಕರ ಸಂದರ್ಭದಲ್ಲಿ ತಾಯಿ-ಮಗುವಿನ (Mother- Baby) ಸುರಕ್ಷತೆಗೆ ಸಿಸೇರಿಯನ್‌ ಮಾಡಬೇಕಾಗುತ್ತದೆ.


ಸಹಜ ಹೆರಿಗೆಗೆ ಹೋಲಿಸಿದರೆ ಸಿಸೇರಿಯನ್‌ ಸುಲಭ ಕೂಡ. ಸಿಸೇರಿಯನ್ ಆದರೇ ನೋವೇ ಇರಲ್ಲ ಎಂದು ಕೆಲವರು ಹೇಳುತ್ತಾರೆ, ಆದರೆ ಸಿಸೇರಿಯನ್ ಆದ ಬಳಿಕ ಕಾಡುವ ತಲೆನೋವು ಎಷ್ಟು ಭಯಾನಕವಾಗಿರುತ್ತೆ ಎಂಬುವುದು ಸಿಸೇರಿಯನ್‌ ಆದವರಿಗಷ್ಟೇ ಗೊತ್ತು. ಆದರೆ ಇನ್ನು ಕೆಲವು ಪರಿಸ್ಥಿತಿಗಳಲ್ಲಿ ಮಹಿಳೆಯರಿಗೆ ಹೆರಿಗೆ ಸಮಯದಲ್ಲಿ ಮಾನಸಿಕ ಸ್ಥಿಮಿತ ಇಲ್ಲದೇ ಅಸ್ವಸ್ಥರಾಗುವ ಸಂಭವ ಹೆಚ್ಚಿರುತ್ತದೆ.


ಮಹಿಳೆ ಮಾನಸಿಕ ಅಸ್ವಸ್ಥೆಯಾದಾಗ ಸಿಸೇರಿಯನ್‌ ಮಾಡಬಹುದು ಎಂದು ಆದೇಶ ಹೊರಡಿಸಿರುವ ನ್ಯಾಯಾಲಯ
ಇಂತಹ ಸಂದರ್ಭದಲ್ಲಿ ಮಹಿಳೆಯು ತನ್ನ ಮಗು ಹೇಗೆ ಜನಿಸಬೇಕು ಎಂಬುದರ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುವ ಮಾನಸಿಕ ಆರೋಗ್ಯ ಸಮಸ್ಯೆ ಇರುವ ಮಹಿಳೆಗೆ ಯಾರ ಒಪ್ಪಿಗೆಯಿಲ್ಲದೇ ಸಿಸೇರಿಯನ್ ಮಾಡಲು ನ್ಯಾಯಾಧೀಶರು ವೈದ್ಯರಿಗೆ ಅನುಮತಿ ನೀಡುವ ಮೂಲಕ ಆದೇಶವನ್ನು ಹೊರಡಿಸಿದ್ದಾರೆ.


ಇದನ್ನೂ ಓದಿ:  Vegan Diet: ವೀಗನ್ ಡಯೆಟ್​ ಮಾಡೋದ್ರಿಂದ ತೂಕ ಇಳಿಕೆ ಮಾತ್ರ ಅಲ್ಲ ಈ ಆರೋಗ್ಯ ಪ್ರಯೋಜನಗಳು ಸಿಗುತ್ತೆ


“ಹೆರಿಗೆ ಸಮಯದಲ್ಲಿ ಮಹಿಳೆಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಾನಸಿಕ ಸಾಮರ್ಥ್ಯವಿಲ್ಲದ್ದರೆ ಸಿಸೇರಿಯನ್ ಅನ್ನು ಆಯ್ಕೆ ಮಾಡುವುದು ಅವರಿಗೆ ಬಿಟ್ಟ ವಿಷಯವಾಗಿರುತ್ತದೆ. ನಮಗೆ ಸಿಸೇರಿಯನ್‌ ಅನ್ನು ಮಾಡಿ ಎಂದು ಅವರೇ ವೈದ್ಯರಿಗೆ ಹೇಳಬಹುದು” ಎಂದು ಶ್ರೀಮತಿ ಜಸ್ಟೀಸ್ ಹೇಡನ್ ಅಭಿಪ್ರಾಯ ಪಟ್ಟಿದ್ದಾರೆ.


ಶ್ರೀಮತಿ ಜಸ್ಟೀಸ್ ಮೋರ್ಗಾನ್ ಅವರು ಲಂಡನ್‌ನ ಕೋರ್ಟ್ ಆಫ್ ಪ್ರೊಟೆಕ್ಷನ್‌ನಲ್ಲಿ ನಡೆದ ವಿಚಾರಣೆಯಲ್ಲಿ ಮಹಿಳೆಯ ಆರೈಕೆಯ ಜವಾಬ್ದಾರಿಯುತ ಆಸ್ಪತ್ರೆಯ ಮೇಲಧಿಕಾರಿಗಳ ಅರ್ಜಿಯನ್ನು ಅನುಮೋದಿಸಿದರು, ಅಲ್ಲಿ ಸ್ವತಃ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಾನಸಿಕ ಸಾಮರ್ಥ್ಯದ ಕೊರತೆಯಿರುವ ಜನರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ವಿಂಗಡಿಸಲಾಗುತ್ತದೆ.


ಪ್ರಕರಣ
30 ರ ಹರೆಯದ ಒಬ್ಬ ಮಹಿಳೆಗೆ ಸ್ಕಿಜೋಫ್ರೇನಿಯಾ ಎಂಬ ಕಾಯಿಲೆ ಇದೆ ಮತ್ತು ಈ ಪ್ರಕರಣವನ್ನು ಮಾಧ್ಯಮ ವರದಿಗಳಲ್ಲಿ ಕಾನೂನುಬದ್ಧವಾಗಿ ಗುರುತಿಸಲು ಸಾದ್ಯವಾಗಿಲ್ಲ ಎಂದು ವೈದ್ಯರು ಹೇಳಿಕೊಂಡಿದ್ದಾರೆ. ಅಂತಹ ಸಂದರ್ಭದಲ್ಲಿಯೂ ಸಹ ಆ ಮಹಿಳೆಗೆ ವೈದ್ಯರು ನೀವು ಸ್ವತಃ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಾನಸಿಕ ಸಾಮರ್ಥ್ಯವನ್ನು ಹೊಂದಿದ್ದೀರಿ ಎಂದು ಮಹಿಳೆಗೆ ಹೇಳಿದಾಗ ಅದಕ್ಕೆ ಈ ಮಹಿಳೆಯು ಸಿಸೇರಿಯನ್‌ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವೈದ್ಯರು ನ್ಯಾಯಾಲಯಕ್ಕೆ ಹೇಳಿಕೊಂಡಿದ್ದಾರೆ. ಈ ಪ್ರಕರಣವನ್ನೆ ನ್ಯಾಯಾಧೀಶರು ಆಧಾರವಾಗಿಟ್ಟುಕೊಂಡು ಈ ಖಡಕ್‌ ಆದೇಶವನ್ನು ಹೊರಡಿಸಿದ್ದಾರೆ.


ಆದರೆ ಕೆಲವು ಮಹಿಳೆಯರು ಹೆರಿಗೆಗೆ ಹೋದಾಗ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ವೈದ್ಯರು ನ್ಯಾಯಾಧೀಶರಿಗೆ ಸಾಕ್ಷಿ ಹೇಳಿದರು. ಶ್ರೀಮತಿ ಜಸ್ಟಿಸ್ ಮೋರ್ಗಾನ್ ಅವರು ತಜ್ಞರ ಮೌಲ್ಯಮಾಪನದಲ್ಲಿ ಅವರು, ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದರೆ ಮಾತ್ರ ಮಹಿಳೆಯ ಅನುಮೋದನೆಯಿಲ್ಲದೆ ವೈದ್ಯರು ಸಿ-ಸೆಕ್ಷನ್‌ ಅಥವಾ ಸಿಸೇರಿಯನ್‌ ಮಾಡಬಹುದು ಎಂದು ಹೇಳಿದರು.


ಇದನ್ನೂ ಓದಿ:  Life Lesson: ಜಗಳ ದೊಡ್ಡದಾಗುವ ಮುನ್ನ ನಿಲ್ಲಿಸಲು ಇಷ್ಟು ಮಾಡಿ ಸಾಕು


ಇದಕ್ಕೆ ವೈದ್ಯರು ಈ ಮಹಿಳೆಯು, ಮಾನಸಿಕವಾಗಿ ಸಮರ್ಥವಾಗಿರುವಾಗ ಅಂದರೆ ಮುಂಚಿತವಾಗಿಯೇ, ಸಿ-ಸೆಕ್ಷನ್ ಅಥವಾ ಸಿಸೇರಿಯನ್‌ ಮೂಲಕ ಹೆರಿಗೆಗೆ ಆದ್ಯತೆ ನೀಡಿದ್ದಳು ಎಂದು ನ್ಯಾಯಾಧೀಶರಿಗೆ ತಿಳಿಸಿದರು. ರೊಥರ್‌ಹ್ಯಾಮ್ ಎನ್‌ಎಚ್‌ಎಸ್ ಫೌಂಡೇಶನ್ ಟ್ರಸ್ಟ್ ಮತ್ತು ರೊಥರ್‌ಹ್ಯಾಮ್ ಡಾನ್‌ಕಾಸ್ಟರ್ ಮತ್ತು ಸೌತ್ ಹಂಬರ್ ಎನ್‌ಎಚ್‌ಎಸ್ ಫೌಂಡೇಶನ್ ಟ್ರಸ್ಟ್‌ನ ಮೇಲಧಿಕಾರಿಗಳು ಮಹಿಳೆಯ ಆರೈಕೆಯ ಜವಾಬ್ದಾರಿಯನ್ನು ಹೊಂದಿರುವ ಅಧಿಕಾರಿಗಳಾಗಿದ್ದರು.


ಮಹಿಳೆಯು ಹೆರಿಗೆ ಸಮಯದಲ್ಲಿ ಮಾನಸಿಕ ಅಸ್ವಸ್ಥತೆ ಹೊಂದಿದಾಗ ಅಥವಾ ಇತರ ಆರೋಗ್ಯ ಸಂದರ್ಭಗಳಲ್ಲಿ ಅವರ ಉತ್ತಮ ಹಿತಾಸಕ್ತಿಗಳಿಗೆ ಯಾವ ಕ್ರಮಗಳನ್ನು ಜರುಗಿಸಬೇಕೆಂದು ವೈದ್ಯರು ನ್ಯಾಯಾಧೀಶರ ಮೊರೆ ಹೋಗಿದ್ದರು.

Published by:Ashwini Prabhu
First published: