ಎರಡು ಯೋನಿ, ಎರಡು ಗರ್ಭಾಶಯ ಹೊಂದಿರುವ ಮಹಿಳೆ: ವೈದ್ಯಲೋಕಕ್ಕೆ ಈಕೆ ವಿಸ್ಮಯ

ಇವೆಲಿನ್ ಎಂಬ 31 ವರ್ಷದ ಮಹಿಳೆಯು ಎರಡು ಯೋನಿ ಹಾಗೂ ಎರಡು ಗರ್ಭಾಶಯ ಹೊಂದಿದ್ದು, ಇವೆರಡಕ್ಕೂ ತನ್ನದೇ ಆದ ಪ್ರತ್ಯೇಕ ಫಾಲೋಪಿಯನ್ ಟ್ಯೂಬ್ ಮತ್ತು ಅಂಡಾಶಯ ಹೊಂದಿದೆ.

ಇವೆಲಿನ್

ಇವೆಲಿನ್

  • Share this:

ಇತ್ತೀಚಿನ ದಿನಗಳಲ್ಲಿ ಅವಳಿ, ತ್ರಿವಳಿ ಮಕ್ಕಳ ಜನನ ಹೆಚ್ಚಾಗುತ್ತಿದೆ. ಜೊತೆಗೆ ಎರಡು ತಲೆಯ, ಮೂರು ಕೈ ಹೊಂದಿರುವ, ಎರಡು ದೇಹ ಒಂದು ತಲೆ ಹೊಂದಿರುವ ಹೀಗೆ ವಿಚಿತ್ರ ರೀತಿಯ ಮಕ್ಕಳ ಜನನವಾಗುತ್ತಿವೆ. ಇಂತಹ ಮಕ್ಕಳನ್ನು ವೈದ್ಯಕೀಯ ಲೋಕಕ್ಕೆ ಸವಾಲು ಎನಿಸುತ್ತದೆ. ಈ ಮಕ್ಕಳು ಬೆಳೆದ ಮೇಲೆ ಅವುಗಳ ಆರೋಗ್ಯ ಮತ್ತು ಬೆಳವಣಿಗೆ ಆಶ್ಚರ್ಯಕರವೆನಿಸುತ್ತದೆ.ಇದೀಗ ಎರಡು ಯೋನಿ ಹಾಗೂ ಎರಡು ಗರ್ಭಾಶಯ ಹೊಂದಿರುವ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದು, ಮಗು ಆರೋಗ್ಯವಾಗಿದೆ ಎಂದು ತಿಳಿಸಿದ ವೈದ್ಯರು ಇದು ಅಪರೂಪ ಹಾಗೂ ನಂಬಲು ಅಸಾಧ್ಯವಾದ ಘಟನೆ ಎಂದು ಹೇಳಿದ್ದಾರೆ.ಈ ಘಟನೆ ನಡೆದದ್ದು ಆಸ್ಟ್ರೇಲಿಯಾದಲ್ಲಿ. ಇವೆಲಿನ್ ಎಂಬ 31 ವರ್ಷದ ಮಹಿಳೆಯು ಎರಡು ಯೋನಿ ಹಾಗೂ ಎರಡು ಗರ್ಭಾಶಯ ಹೊಂದಿದ್ದು, ಇವೆರಡಕ್ಕೂ ತನ್ನದೇ ಆದ ಪ್ರತ್ಯೇಕ ಫಾಲೋಪಿಯನ್ ಟ್ಯೂಬ್ ಮತ್ತು ಅಂಡಾಶಯ ಹೊಂದಿದೆ. ಅಂದರೆ ಇದರರ್ಥ ಈ ಮಹಿಳೆಯು ಏಕಕಾಲದಲ್ಲಿ ಎರಡು ಮಗು ಪಡೆಯಬಹುದು.


ಆಕೆಯ ಅಂಡಾಶಯವು ಪ್ರತಿ ತಿಂಗಳು ಮೊಟ್ಟೆಯನ್ನು ಬಿಡುಗಡೆ ಮಾಡುತ್ತದೆಯೇ ಅಥವಾ ಪರ್ಯಾಯವಾಗಿದೆಯೆ ಎಂದು ವೈದ್ಯರು ನಿರ್ಧರಿಸಲು ಸಾಧ್ಯವಿಲ್ಲದ ಕಾರಣ ಆಕೆಯ ಅಂಡೋತ್ಪತ್ತಿ ಪತ್ತೆಹಚ್ಚಲು ಸಾಧ್ಯವಿಲ್ಲ. ಹೆಚ್ಚುವರಿ ಸಂತಾನೋತ್ಪತ್ತಿ ಪ್ರದೇಶ ಎಂದರೆ ಭ್ರೂಣ ಬೆಳೆಯಲು ಕಿಬ್ಬೊಟ್ಟೆಯ ಕುಹರದ ಬಳಿ ಸಾಕಷ್ಟು ಸ್ಥಳವಿಲ್ಲ.


ಇವೆಲಿನ್ ಅವರ ಬಾಳ ಸಂಗಾತಿಯ ವೀರ್ಯ ಸಂಖ್ಯೆ ತುಂಬಾ ಕಡಿಮೆ ಇದ್ದ ಕಾರಣ, ಮಗು ಪಡೆಯುವುದು ಅಸಾಧ್ಯ ಎಂದು ಹೇಳಿದ್ದರು ಮತ್ತು ಕೃತಕ ಗರ್ಭಧಾರಣೆ ಮೂಲಕ (ಐವಿಎಫ್) ಮಗು ಪಡೆಯಲು ಸಲಹೆ ನೀಡಿದ್ದರು. ಜೊತೆಗೆ ಮಗುವು ಅವಧಿಪೂರ್ವ ಜನನವಾಗುತ್ತದೆ. ಇದಕ್ಕೆ ಮಾನಸಿಕವಾಗಿ ಸಿದ್ಧರಾಗಬೇಕು ಎಂದೂ ಹೇಳಿದ್ದರು. ಆದರೆ ಇವೆಲಿನ್ ಕೆಲವು ತಿಂಗಳ ಪ್ರಯತ್ನದ ನಂತರ ಸ್ವಾಭಾವಿಕವಾಗಿಯೇ ಗರ್ಭಿಣಿಯಾದಳು.


ಒಮ್ಮೆ ಈಕೆ ತನ್ನ 20ನೇ ವಯಸ್ಸಿನಲ್ಲಿ ಗರ್ಭಪಾತಕ್ಕೆಂದು ಆಸ್ಪತ್ರೆಗೆ ಹೋದಾಗ ವೈದ್ಯರಿಗೆ ಭ್ರೂಣ ಎಲ್ಲಿ ಇದೆ ಎಂದು ತಿಳಿಯಲು ಸಾಧ್ಯವಾಗಲಿಲ್ಲ. ನಂತರ ಕೆಲವು ಪರೀಕ್ಷೆಗಳ ನಂತರ ಆಕೆಗೆ ಎರಡು ಸಂತಾನೋತ್ಪತ್ತಿಯ ವ್ಯವಸ್ಥೆ ಅಂದರೆ ಎರಡು ಯೋನಿ ಹಾಗೂ ಎರಡು ಗರ್ಭಾಶಯ ಇರುವುದು ಪತ್ತೆಯಾಗಿದೆ.


ಇದನ್ನು ಓದಿ: ಸತ್ತ ನಂತರ ಮಾನವನ ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ನಿಮಗೆಷ್ಟು ಗೊತ್ತು?

ಈ ಅಪರೂಪದ ಸ್ಥಿತಿಯನ್ನು ಗರ್ಭಾಶಯದ ಡಿಡೆಲ್ಫಿಸ್ ಎಂದು ಕರೆಯಲಾಗುತ್ತದೆ. ಈ ರೀತಿ ವಿಶ್ವಾದ್ಯಂತ 3,000 ಮಹಿಳೆಯರಲ್ಲಿ ಒಬ್ಬರಿಗೆ ಮಾತ್ರ ಕಾಣಿಸಿಕೊಳ್ಳುತ್ತದೆ


ಇವೆಲಿನ್ ಈ ಮೊದಲು ಲೈಂಗಿಕ ಕಾರ್ಯಕರ್ತೆಯಾಗಿದ್ದರು. ಆದ್ದರಿಂದ ತುಂಬ ಮುಜುಗರಕ್ಕೊಳಗಾಗಿ ಈ ಸ್ಥಿತಿಯನ್ನು ದೀರ್ಘಕಾಲದವರೆಗೆ ರಹಸ್ಯವಾಗಿಯೇ ಇರಿಸಿದ್ದಳು. ಆಕೆಯ ಗ್ರಾಹಕರಲ್ಲಿ ಒಬ್ಬರು ಸ್ತ್ರೀರೋಗ ತಜ್ಞರಾಗಿದ್ದರು. ನಂತರ ಅವರ ಸಲಹೆಯ ಮೇರೆಗೆ ವೈದ್ಯರ ಬಳಿ ತೆರಳಿ ಪರೀಕ್ಷೆಗೆ ಒಳಪಟ್ಟಿದ್ದಳು.


ಎರಡು ಗರ್ಭಾಶಯವು ಯಾವಾಗಲೂ ಫಲವತ್ತತೆಯ ಮೇಲೆ ಪರಿಣಾಮ ಬೀರುವುದಿಲ್ಲ, ಆದರೆ, ಇದು ಗರ್ಭಪಾತ, ಅವಧಿಪೂರ್ವ ಜನನ ಮತ್ತು ಫ್ಲೇಸೆಂಟಲ್ ಅಪಾಯವನ್ನು ಹೆಚ್ಚಿಸುತ್ತದೆ.


ಇವೆಲಿನ್ ಪ್ರತಿ ಬಾರಿಯು ಗರ್ಭಿಣಿಯಾಗಲು ಪ್ರಯತ್ನಿಸುವಾಗ ಇವೆಲಿನ್ ಹಾಗೂ ಈಕೆಯ ಬಾಳಸಂಗಾತಿ ಬಲಭಾಗದ ಯೋನಿಯನ್ನು ಬಳಸುತ್ತಿದ್ದರು ಎಂದು ಪರೀಕ್ಷೆಯಿಂದ ತಿಳಿದು ಬಂದಿದೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
First published: