HOME » NEWS » Lifestyle » WOMAN TELLS HOW SHE GOT PREGNANT WITHOUT EVER HAVING SEX DUE TO RARE VAGINAL CONDITION STG LG

ಲೈಂಗಿಕ ಕ್ರಿಯೆ ನಡೆಸದೇ ಗರ್ಭಿಣಿಯಾದ ಮಹಿಳೆ..! ಇದಕ್ಕೆ ಕಾರಣ ಏನು ಗೊತ್ತಾ..?

ಇಂಗ್ಲೆಂಡ್‌ನ ಹ್ಯಾಂಪ್‌ಶೈರ್‌ನ 28 ವರ್ಷದ ಮಹಿಳೆ ಕನ್ಯೆಯಾಗಿದ್ದರೂ ತಾನು ಗರ್ಭಿಣಿಯಾಗಿದ್ದೆ, ಅದು ಹೇಗೆ ಎಂಬುದನ್ನು ಬಹಿರಂಗಪಡಿಸಿದ್ದಾಳೆ. ಹೌದು, ಹ್ಯಾಂಪ್‌ಶೈರ್‌ನ ಪೋರ್ಟ್ಸ್‌ಮೌತ್‌ನ ನಿಕೋಲ್ ಮೂರ್ ಎಂಬ ಮಹಿಳೆ ಲೈಂಗಿಕ ಕ್ರಿಯೆಯನ್ನೇ ನಡೆಸದೆ ಗರ್ಭಿಣಿಯಾಗಿದ್ದಳು. ಅದಕ್ಕೆ ಕಾರಣ ವೆಜಿನಿಸ್ಮಸ್‌ (vaginismus).

news18-kannada
Updated:March 12, 2021, 2:26 PM IST
ಲೈಂಗಿಕ ಕ್ರಿಯೆ ನಡೆಸದೇ ಗರ್ಭಿಣಿಯಾದ ಮಹಿಳೆ..! ಇದಕ್ಕೆ ಕಾರಣ ಏನು ಗೊತ್ತಾ..?
ಸಾಂದರ್ಭಿಕ ಚಿತ್ರ
  • Share this:
ಹಲವು ವರ್ಷಗಳ ಕಾಲ ಲೈಂಗಿಕ ಕ್ರಿಯೆ ನಡೆಸಿದ್ರೂ ಮಕ್ಕಳಾಗೋಲ್ಲ ಅಂತ ಹಲವರು ಕೊರಗುತ್ತಲೇ ಇರುತ್ತಾರೆ, ಹಾಗೂ ವೈದ್ಯರ ಮೊರೆ ಹೋಗುತ್ತಿರುತ್ತಾರೆ. ನಾನಾ ವಿಧದ ಔಷಧಿಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ಆದರೆ, ಇಂಗ್ಲೆಂಡ್‌ನ ಮಹಿಳೆಯೊಬ್ಬಳು 'ಕನ್ಯೆ'ಯಾಗಿದ್ದಾಗಲೇ ಅಂದರೆ ಲೈಂಗಿಕ ಕ್ರಿಯೆ ನಡೆಸದೇ ಗರ್ಭಿಣಿಯಾಗಿದ್ದಾರಂತೆ. ಅದು ಹೇಗಪ್ಪಾ ಅಂತೀರಾ.. ಅದೂ ಒಂದು ಕಾಯಿಲೆ..!

ಇಂಗ್ಲೆಂಡ್‌ನ ಹ್ಯಾಂಪ್‌ಶೈರ್‌ನ 28 ವರ್ಷದ ಮಹಿಳೆ ಕನ್ಯೆಯಾಗಿದ್ದರೂ ತಾನು ಗರ್ಭಿಣಿಯಾಗಿದ್ದೆ, ಅದು ಹೇಗೆ ಎಂಬುದನ್ನು ಬಹಿರಂಗಪಡಿಸಿದ್ದಾಳೆ. ಹೌದು, ಹ್ಯಾಂಪ್‌ಶೈರ್‌ನ ಪೋರ್ಟ್ಸ್‌ಮೌತ್‌ನ ನಿಕೋಲ್ ಮೂರ್ ಎಂಬ ಮಹಿಳೆ ಲೈಂಗಿಕ ಕ್ರಿಯೆಯನ್ನೇ ನಡೆಸದೆ ಗರ್ಭಿಣಿಯಾಗಿದ್ದಳು. ಅದಕ್ಕೆ ಕಾರಣ ವೆಜಿನಿಸ್ಮಸ್‌ (vaginismus). ಇಂತಹ ಸ್ಥಿತಿಗೊಳಗಾದ ಮಹಿಳೆ ಯೋನಿಯ ಗೋಡೆಗಳ ಸ್ನಾಯುಗಳು ಅನೈಚ್ಛಿಕ ಸಂಕೋಚನ (involuntary constrict)ದ ನಿರ್ಬಂಧಕ್ಕೆ ಒಳಪಡಿಸುತ್ತದೆ. ಇದರಿಂದಾಗಿ ಆ ಮಹಿಳೆ ಎಂದಿಗೂ ಲೈಂಗಿಕ ಸಂಬಂಧ ಹೊಂದಲು ಅಥವಾ ಟ್ಯಾಂಪೂನ್ ಬಳಸಲು ಸಾಧ್ಯವಾಗುವುದಿಲ್ಲ.

ಎಂಟು ವರ್ಷಗಳ ಹಿಂದೆ ನಿಕೋಲ್ ಮೂರ್ ಗರ್ಭಿಣಿಯಾದಾಗ, ಇದನ್ನು ತಿಳಿದು ಆಕೆ ಆಘಾತಕ್ಕೊಳಗಾಗಿದ್ದಳು. ಅಲ್ಲದೆ, ಐದು ತಿಂಗಳ ಗರ್ಭಿಣಿಯಾಗಿದ್ದಾಗ ಭೌತಚಿಕಿತ್ಸೆಯ ಸಹಾಯದಿಂದ ಮೂರ್ ಅಂತಿಮವಾಗಿ ಮೊದಲ ಬಾರಿಗೆ ಲೈಂಗಿಕ ಸಂಬಂಧ ಹೊಂದಲು ಸಾಧ್ಯವಾಯಿತು. ಈ ಬಗ್ಗೆ ಮಹಿಳೆ ಡೈಲಿ ಮೇಲ್‌ನೊಂದಿಗೆ ಹೇಳಿಕೊಂಡಿದ್ದಾಳೆ.

''ಟ್ಯಾಂಪೂನ್ ಅನ್ನು ಎಂದಿಗೂ ಯೋನಿಯೊಳಗೆ ಸೇರಿಸಲು ಸಾಧ್ಯವಾಗದ ನಂತರ, ಏನೋ ತಪ್ಪಾಗಿದೆ ಎಂದು ನಾನು ಅರಿತುಕೊಂಡೆ. ಆದರೆ, ವೈದ್ಯರು ಎಲ್ಲಾ ಸರಿಯಾಗಿದೆ ಎಂದು ಹೇಳಿದ್ದರು. ನಂತರ, 18 ನೇ ವಯಸ್ಸಿನಲ್ಲಿ, ಡೇಟಿಂಗ್ ಮಾಡಲು ಪ್ರಾರಂಭಿಸಿದೆ. ಆದರೆ, ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಾಗಲಿಲ್ಲ.

"ನಾನು ಅದನ್ನು ವಿವರಿಸುವ ಏಕೈಕ ಮಾರ್ಗವೆಂದರೆ ಅವನು ಇಟ್ಟಿಗೆ ಗೋಡೆಗೆ ಹೊಡೆದಿದ್ದಾನೆಂದು ಭಾವಿಸಿದಂತೆ" ಎಂದು ಆಕೆ ವಿವರಿಸಿದ್ದಾಳೆ. ಗೊಂದಲಕ್ಕೊಳಗಾದ ಮಹಿಳೆ ನಂತರ ಮತ್ತೆ ವೈದ್ಯರ ಬಳಿಗೆ ಹೋಗಿದ್ದು, ಯೋನಿ ತುಂಬಾ ಬಿಗಿಯಾಗಿದೆ ಎಂದು ಹೇಳಿದ್ದಾಳೆ.

Netflix: ನೀವು ನೆಟ್‌ಫ್ಲಿಕ್ಸ್ ಬಳಕೆದಾರರೇ..! ದಯವಿಟ್ಟು ಗಮನಿಸಿ

ನಂತರ ಈ ಜೋಡಿ, ಲೈಂಗಿಕ ಕ್ರಿಯೆ ನಡೆಸದೆ ಬೇರೆ ರೀತಿಯಲ್ಲಿ ಆತ್ಮೀಯರಾಗುವ ಇತರ ಮಾರ್ಗಗಳನ್ನು ಕಂಡುಕೊಂಡರು. ಅದು ಅವಳನ್ನು ಗರ್ಭಿಣಿಯನ್ನಾಗಿ ಮಾಡಿತು. ಇನ್ನು, ತಾನು ಗರ್ಭಿಣಿಯಾಗಿರುವುದನ್ನು ಅರಿತುಕೊಂಡಿದ್ದೂ ಬಹಳ ವಿಚಿತ್ರವಾಗಿ ಎಂದ ಮೂರ್, ''ಎದೆಯುರಿ ಹೆಚ್ಚಾಗಿತ್ತು ಹಾಗೂ ಸ್ತನಗಳು ನೋಯುತ್ತಿದ್ದವು. ಇದನ್ನು ತಿಳಿದ ಬಾಸ್‌, ನೀನು ಗರ್ಭಿಣಿಯಾಗಿರಬಹುದೆಂದು ಹೇಳಿದರು. ಅದನ್ನು ಕೇಳಿ ನನಗೆ ನಗು ಬಂತು. ಹಾಗೂ, ನಾನು ಇನ್ನೂ ಕನ್ಯೆ ಎಂದು ಹೇಳಿದೆ'' ಎಂದೂ ಡೈಲಿ ಮೇಲ್‌ಗೆ ಹೇಳಿದ್ದಾರೆ.ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಾಗದಿದ್ದಾಗ, ತಾನು ಮಗುವನ್ನು ಹೇಗೆ ಹೆರಲು ಸಾಧ್ಯ ಎಂದು ಚಿಂತೆಗೀಡಾಗಿದ್ದೆ. ಅಲ್ಲದೆ, ನಾನು ಮೋಸ ಮಾಡುತ್ತಿದ್ದೀನೆಂದು ನನ್ನ ಪಾರ್ಟ್‌ನರ್‌ ನನ್ನ ಬಗ್ಗೆ ಅನುಮಾನ ಪಡಬಹುದು. ಆದರೆ, ಜನರು ನನ್ನನ್ನು ವರ್ಜಿನ್‌ ಮೇರಿ ಎಂದು ಕರೆಯುತ್ತಿದ್ದಾಗ ನಾನು ನಗುತ್ತಿದ್ದೆ ಎಂದೂ ಆಕೆ ಹೇಳಿಕೊಂಡಿದ್ದಾಳೆ.

ಆದರೆ, ನಾನು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಗ, ಈ ಬಗ್ಗೆ ಕೆಲವು ಉತ್ತರಗಳನ್ನು ಪಡೆಯಲು ಹೆಣಗಾಡಿದೆ. ಈ ವೇಳೆ ವೆಜಿನಿಸ್ಮಸ್‌ ಕಾಯಿಲೆ ಎಂದು ವೈದ್ಯರು ನಿರ್ಣಯಿಸಿದರು. ಅಲ್ಲದೆ, ಯೋನಿ ಪ್ರದೇಶಕ್ಕೆ ದ್ರವಗಳನ್ನು ಪರಿಚಯಿಸಿದರೆ ಪೆನಿಟ್ರೇಟೀವ್‌ ಲೈಂಗಿಕತೆಯಿಲ್ಲದೆ ಗರ್ಭಿಣಿಯಾಗಲು ಸಾಧ್ಯವಿದೆ ಎಂದು ವೈದ್ಯರು ದೃಢಪಡಿಸಿದರು.

ತಾನು ಗರ್ಭಿಣಿಯಾಗಿದ್ದಾಗ, ನನ್ನ ಸ್ಥಿತಿಯ ಬಗ್ಗೆ ಹೇಳಲು ವೈದ್ಯ ವೃತ್ತಿಪರರು ನಂಬುವಂತೆ ಮಾಡಲು ತಾನು ಹೆಣಗಾಡುತ್ತಿದ್ದೆ. ತಪಾಸಣೆಯ ಸಮಯದಲ್ಲಿ ನರ್ಸ್ ತನ್ನ ಬೆರಳನ್ನು ಸೇರಿಸಲು ಸಾಧ್ಯವಾಗದ ಕಾರಣ ತನ್ನನ್ನು ಆಂತರಿಕವಾಗಿ ಪರೀಕ್ಷಿಸಲಾಗಲು ಸಾಧ್ಯವಾಗಲಿಲ್ಲ ಎಂದೂ ಮೂರ್‌ ಹೇಳಿದರು.

ನಂತರ ವೆಜಿನಿಸ್ಮಸ್‌ನಲ್ಲಿ ಪರಿಣತಿ ಹೊಂದಿರುವ ಚಿಕಿತ್ಸಕನಿಗೆ ಮೂರ್ ಅವರನ್ನು ರೆಫರ್‌ ಮಾಡಲಾಯಿತು. ಅವರು ತಮ್ಮ ಸ್ಥಿತಿಯನ್ನು ನಿವಾರಿಸಲು ಕಲಿಸಿದರು ಮತ್ತು ಅಂತಿಮವಾಗಿ ಐದು ತಿಂಗಳ ಗರ್ಭಿಣಿಯಾಗಿದ್ದಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗಿದೆ. ನಂತರ ಯಾವುದೇ ತೊಂದರೆಗಳಿಲ್ಲದೆ ಹೆರಿಗೆ ಮಾಡಲಾಯಿತು. ಈಗ ತನ್ನ ಮಗಳು ಟಿಲ್ಲಿಗೆ 8 ವರ್ಷ. ಅಲ್ಲದೆ, ತಾನು ವೆಜಿನಿಸ್ಮಸ್‌ ಬಗ್ಗೆ ಜಾಗೃತಿ ಮೂಡಿಸಲು ಕೆಲಸ ಮಾಡುತ್ತಿರುವುದಾಗಿಯೂ ನಿಕೋಲ್ ಮೂರ್ ಹೇಳಿಕೊಂಡಿದ್ದಾಳೆ.
Published by: Latha CG
First published: March 12, 2021, 2:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories