ಲೈಂಗಿಕ ಕ್ರಿಯೆಯ ಪರಾಕಾಷ್ಠೆ ಮಹಿಳೆಯನ್ನು ಆಸ್ಪತ್ರೆ ಸೇರುವಂತೆ ಮಾಡಿತು..!

ಹ್ಯೂಮನ್​ ಪ್ಯಾಪಿಲೋಮ ವೈರಸ್​ (ಎಚ್​ಪಿವಿ) ಎಂಬುದು ಒಂದು ಕ್ಯಾನ್ಸರ್​ ಕಾರಕ. ಅತಿಯಾಗಿ ಸಿಗರೇಟ್​ ಸೇದುವುದರಿಂದ ಹೇಗೆ ಬಾಯಿ ಕ್ಯಾನ್ಸರ್​ ಬರುತ್ತದೆಯೋ, ಹಾಗೆಯೇ ಎಚ್​ಪಿವಿ ಇನ್​ಫೆಕ್ಷನ್​ನಿಂದ ಬಾಯಿ ಕ್ಯಾನ್ಸರ್​ ಬರುತ್ತದೆ.

zahir | news18
Updated:March 14, 2019, 7:10 PM IST
ಲೈಂಗಿಕ ಕ್ರಿಯೆಯ ಪರಾಕಾಷ್ಠೆ ಮಹಿಳೆಯನ್ನು ಆಸ್ಪತ್ರೆ ಸೇರುವಂತೆ ಮಾಡಿತು..!
ಸಾಂದರ್ಭಿಕ ಚಿತ್ರ
  • News18
  • Last Updated: March 14, 2019, 7:10 PM IST
  • Share this:
ಪ್ರೇಮಿಯೊಂದಿಗೆ ಓರಲ್ ಸೆಕ್ಸ್​ ನಡೆಸಿದ ಯುವತಿಯೊಬ್ಬಳು ಆಸ್ಪತ್ರೆಗೆ ದಾಖಲಾದ ಘಟನೆ ಸ್ಪೇನ್​ನಲ್ಲಿ ನಡೆದಿದೆ. 31 ವರ್ಷದ ಮಹಿಳೆಯು ಕೆಲ ದಿನಗಳ ಹಿಂದೆ ತನ್ನ ಪ್ರಿಯತಮನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ತನ್ನ ಇನಿಯನನ್ನು ಮೆಚ್ಚಿಸಲು ಓರಲ್​ ಸೆಕ್ಸ್ ನಡೆಸಿದ್ದಾರೆ.

ಓರಲ್​ ಸೆಕ್ಸ್​ ಮಾಡಿದ್ದರಿಂದ ಗೆಳೆಯನ ವೀರ್ಯವನ್ನು ಯುವತಿ ನುಂಗಿದ್ದಳು. ಇದರಿಂದ ಆಕೆಯಲ್ಲಿ ವಾಂತಿ ಮತ್ತು ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ಪ್ರಿಯತಮೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಲೈಂಗಿಕ ಬಂಧದಲ್ಲಿ ಏರ್ಪಡುವುದಕ್ಕಿಂತ ಕೆಲ ಗಂಟೆಗಳ ಮೊದಲು ಆಕೆಯ ಬಾಯ್​ ಫ್ರೆಂಡ್ ಅಮೊಕ್ಸಿಸಿಲಿನ್ ಕ್ಲಾವುಲಾನಿಕ್ ಆಸಿಡ್​ ಪೆನ್ಸಿಲಿನ್ ಮಾತ್ರೆಗಳನ್ನು ಸೇವಿಸಿದ್ದನು. ಹಾಗೆಯೇ ಮಹಿಳೆಗೆ ಪೆನ್ಸಿಲಿನ್ ಅಲರ್ಜಿ ಸಮಸ್ಯೆಯಿತ್ತು. ಇದರಿಂದ ಸೆಕ್ಸ್​ ಸಂದರ್ಭದಲ್ಲಿ ವೀರ್ಯವು ಹೊಟ್ಟೆ ಸೇರಿದ್ದರಿಂದ ವಾಂತಿ ಕಾಣಿಸಿಕೊಂಡಿದೆ. ಸದ್ಯ ಮಹಿಳೆಯು ಚೇತರಿಸಿಕೊಂಡಿದ್ದು, ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಮುನ್ನ ಎಚ್ಚರವಹಿಸುವಂತೆ ತಿಳಿಸಿದ್ದಾರೆ.

ಓರಲ್ ಸೆಕ್ಸ್​ ಅನ್ನು ಕೂಡ ಅಸುರಕ್ಷಿತ ಲೈಂಗಿಕ ಕ್ರಿಯೆ ಎಂದು ಇತ್ತೀಚೆಗೆ ಸಂಶೋಧನೆಯೊಂದು ಪ್ರತಿಪಾದಿಸಿರುವುದು ಇಲ್ಲಿ ಗಮನ ಹರಿಸಬಹುದು. ಏಕೆಂದರೆ ಓರಲ್​ ಸೆಕ್ಸ್​ನಿಂದಲೂ ಏಡ್ಸ್​ ಅಪಾಯ ಎದುರಾಗುವ ಸಾಧ್ಯತೆ ಇದೆ ಹೊಸ ಅಧ್ಯಯನಯಿಂದ ತಿಳಿದು ಬಂದಿದೆ.

ಹ್ಯೂಮನ್​ ಪ್ಯಾಪಿಲೋಮ ವೈರಸ್​ (ಎಚ್​ಪಿವಿ) ಎಂಬುದು ಒಂದು ಕ್ಯಾನ್ಸರ್​ ಕಾರಕ. ಅತಿಯಾಗಿ ಸಿಗರೇಟ್​ ಸೇದುವುದರಿಂದ ಹೇಗೆ ಬಾಯಿ ಕ್ಯಾನ್ಸರ್​ ಬರುತ್ತದೆಯೋ, ಹಾಗೆಯೇ ಎಚ್​ಪಿವಿ ಇನ್​ಫೆಕ್ಷನ್​ನಿಂದ ಬಾಯಿ ಕ್ಯಾನ್ಸರ್​ ಬರುತ್ತದೆ. ವ್ಯಕ್ತಿಯಲ್ಲಿ ಈ ವೈರಸ್​ ಇರುವ ವಿಚಾರ ಬಹುಬೇಗ ತಿಳಿಯುವುದಿಲ್ಲ. ಬಹುತೇಕ ಪ್ರಕರಣಗಳಲ್ಲಿ ಈ ವೈರಸ್​ ದೇಹ ಪ್ರವೇಶಿಸಿದರೂ ನಮ್ಮ ರಕ್ಷಣಾ ವ್ಯವಸ್ಥೆ ಅದನ್ನು ನಾಶ ಮಾಡಿ ಬಿಡುತ್ತದೆ. ಒಂದೊಮ್ಮೆ ನಾಶವಾಗದಿದ್ದರೆ, ಅದು ಕ್ಯಾನ್ಸರ್​ ಆಗಿ ಮಾರ್ಪಾಡಾಗುತ್ತದೆ. ಓರಲ್​ ಸೆಕ್ಸ್​ ವೇಳೆ ಈ ವೈರಸ್​ ಸಂಗಾತಿಯ ದೇಹ ಪ್ರವೇಶಿಸುವ ಸಾಧ್ಯತೆ ಇರುತ್ತದೆ ಎಂದು ಅಧ್ಯಾಯನವೊಂದು ತಿಳಿಸಿದೆ.

ಇದನ್ನೂ ಓದಿ: ಪಬ್​ಜಿ ಗೇಮ್ ಆಡುತ್ತಿದ್ದ 10 ಮಂದಿ ಬಂಧನ: ನೀವು ಆಡುತ್ತೀರಾ ಹಾಗಿದ್ರೆ ಎಚ್ಚರ..!

ಓರ್ವ ವ್ಯಕ್ತಿ ಆರು ಅಥವಾ ಆರಕ್ಕಿಂತ ಹೆಚ್ಚು ಮಹಿಳೆಯರ ಜೊತೆ ಲೈಂಗಿಕ ಸಂಪರ್ಕ ಹೊಂದಿ, ಅವರ ಜೊತೆ ಓರಲ್​ ಸೆಕ್ಸ್​​ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಿಳಿಸಲಾಗಿದೆ. ಗುಪ್ತಾಂಗಕ್ಕೆ ಬಾಯಿ ಸ್ಪರ್ಶ ಮಾಡುವುದು ಲೈಂಗಿಕ ಪ್ರಕ್ರಿಯೆ ಎಂದು ಪರಿಗಣಿಸಲಾಗುವುದಿಲ್ಲ. ಇದರಿಂದ ಅನೇಕ ರೀತಿಯ ಅಪಾಯಗಳು ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ವೈದ್ಯರು.ಇದನ್ನೂ ಓದಿ: ಕ್ಯಾಲಿಫೋರ್ನಿಯಾದಲ್ಲೂ ಕೆ.ಜಿ.ಎಫ್ ಕ್ರೇಜ್? ಕೆಟಿಎಂ ಡ್ಯೂಕ್​ ಆಯ್ತು ರಾಕಿ ಬೈಕ್

First published: March 14, 2019, 7:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading