news18-kannada Updated:March 2, 2021, 2:14 PM IST
ಪ್ರಾತಿನಿಧಿಕ ಚಿತ್ರ.
ತನ್ನನ್ನು ಪ್ರೀತಿಸುವುದು ಇತರರನ್ನು ಇಷ್ಟಪಡುವ ಮೊದಲ ಹೆಜ್ಜೆಯಾಗಿದೆ ಮತ್ತು ಅಮೆರಿಕದ ಮಹಿಳೆಯೊಬ್ಬರು ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದಾರೆ. ಜಾರ್ಜಿಯಾದ ಅಟ್ಲಾಂಟಾದ ಮೇಗ್ ಟೇಲರ್ ಮಾರಿಸನ್ ಎಂಬ ಮಹಿಳೆ 2020 ರ ಅಕ್ಟೋಬರ್ 31 ರಂದು ತನ್ನ ಗೆಳೆಯನನ್ನು ಮದುವೆಯಾಗಲು ಸಜ್ಜಾಗಿದ್ದರು. ಆದರೆ 2020 ರ ಜೂನ್ನಲ್ಲಿ ಇವರಿಬ್ಬರ ಸಂಬಂಧ ಬಿರುಕು ಬಿಟ್ಟಿತು. ಲೈಫ್ ಕೋಚ್ ಮತ್ತು ಬ್ಯುಸಿನೆಸ್ ಕೋಚ್ ಆಗಿರುವ ಮೇಗ್ ಆ ವೇಳೆಗಾಗಲೇ, ಯುಎಸ್ನ ಕೊಲೊರಾಡೋದ ಡೆನ್ವರ್ನಲ್ಲಿ ವಿವಾಹಕ್ಕೆ ವ್ಯವಸ್ಥೆ ಮಾಡಿದ್ದರು. ಆದ್ದರಿಂದ, ಬುಕ್ಕಿಂಗ್ ಅನ್ನು ರದ್ದುಗೊಳಿಸುವ ಬದಲು, ತನ್ನನ್ನು ತಾನೇ ಮದುವೆಯಾಗಲು ನಿರ್ಧರಿಸಿದಳು.
ಬ್ರೇಕಪ್ ಬಳಿಕ ಮೇಗ್ ಮದುವೆಯೊಂದಿಗೆ ಮುಂದುವರಿಯಲು ಬೇರೆಯವರ ಅಗತ್ಯವಿಲ್ಲ ಎಂದು ನಿರ್ಧರಿಸಿ, ಸ್ವ-ವಿವಾಹ ಸಮಾರಂಭದ ಕಲ್ಪನೆಯನ್ನು ಕಂಡಳು. ಮೆಗ್ ಸ್ವಯಂ-ವಿವಾಹವಾಗಲು ಸಂಭ್ರಮದಿಂದಲೇ ಸಿದ್ಧತೆ ಮಾಡಿಕೊಂಡಳು. ತಿಂಗಳುಗಳವರೆಗೆ ತನ್ನ ವಿಶೇಷ ದಿನವನ್ನು ಪ್ಲ್ಯಾನ್ ಮಾಡಿ, ಕಸ್ಟಮ್ ಮೇಡ್ ವಿವಾಹದ ಕೇಕ್ ಅನ್ನು ಸಹ ಆರ್ಡರ್ ಮಾಡಿದ್ದಳು. ಅವರ ವಿವಾಹದ ಡ್ರೆಸ್ ಅನ್ನು ಸಹ ಸೆಲೆಕ್ಟ್ ಮಾಡಿಕೊಂಡರು ಮತ್ತು ಹೊಳೆಯುವ ವಜ್ರದ ಉಂಗುರವನ್ನು ತೆಗೆದುಕೊಂಡರು ಎಂದು ಡೈಲಿ ಮೇಲ್ ವರದಿ ಮಾಡಿದೆ.
ತನ್ನ ಆಲೋಚನೆಗಳ ಬಗ್ಗೆ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಯಾವ ರೀತಿ ತೆಗೆದುಕೊಳ್ಳುತ್ತಾರೆ. ತಾನು ಪತಿ ಜತೆ ಇರುವುದಿಲ್ಲ ಎಂಬುದರ ಬಗ್ಗೆ ಬೇರೆಯವರು ಏನೆಂದುಕೊಳ್ಳುತ್ತಾರೋ ಎಂದು ಆಗಾಗ್ಗೆ ಮೇಗ್ ಚಿಂತಿಸುತ್ತಿದ್ದರು. ಮೇಗ್ ಅವರ ತಾಯಿ ಆರಂಭದಲ್ಲಿ ಸಾಕಷ್ಟು ಭಯಭೀತರಾಗಿದ್ದರು ಮತ್ತು ಅವರ ಮಗಳ ನಿರ್ಧಾರವು ಅಹಂಕಾರದಿಂದ ಕೂಡಿರಬಹುದು ಎಂದು ಡೈಲಿ ಮೇಲ್ ವರದಿ ಮಾಡಿದೆ.
ಇದನ್ನು ಓದಿ: 2045 ರ ಬಳಿಕ ನಾಶವಾಗಲಿದ್ಯಾ ಮಾನವ ಕುಲ: ಈ ತಜ್ಞೆಯ ಎಚ್ಚರಿಕೆಯ ಹಿಂದಿರುವ ಕಾರಣ ನೀವ್ ನೋಡ್ಲೇಬೇಕು..!
ಆದರೂ, ಇತರ ಜನರನ್ನು ಮೆಚ್ಚಿಸಲು ಪ್ರಯತ್ನಿಸುವುದನ್ನು ಬಿಟ್ಟು ತನ್ನ ಆಲೋಚನೆ ಹಾಗೂ ಇಚ್ಛೆಗೆ ಆದ್ಯತೆ ನೀಡುವುದರತ್ತ ಗಮನಹರಿಸುವ ಕಾರಣದಿಂದ ಮೇಗ್ ತನ್ನನ್ನು ತಾನೇ ಮದುವೆಯಾಗಲು ನಿರ್ಧರಿಸಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮೇಗ್ ಅಂತಿಮವಾಗಿ ತನ್ನಿಷ್ಟದಂತೆ ಮದುವೆಯಾದಳು. ಮದುವೆಗೆ ಬಂದಿದ್ದ ಅತಿಥಿಗಳು ಬಬ್ಬಲ್ಸ್ ಅನ್ನು ಊದಿದ್ದಲ್ಲದೆ, ಷಾಂಪೇನ್ ಅನ್ನು ಕುಡಿದರು. ತಾನೇ ಬರೆದಿದ್ದ ಶಪಥವನ್ನು ಓದಿದಳು. ಜತೆಗೆ, ಮದುವೆಯ ಉಂಗುರವನ್ನು ಹಾಕಿಕೊಂಡು, ಕನ್ನಡಿಯಲ್ಲಿ ತನಗೆ ತಾನೇ ಕಿಸ್ ಮಾಡಿಕೊಂಡಳು. ನಂತರ ಮೇಗ್ ಅವರ ಸ್ನೇಹಿತರು ಮತ್ತು ಕುಟುಂಬವು ಅವಳಿಗೆ ಕಸ್ಟಮೈಸ್ ಮಾಡಿದ ವಿವಾಹದ ಕೇಕ್ ಅನ್ನು ತಿನ್ನಿಸಿದರು. ನಂತರ ಡ್ಯಾನ್ಸ್ ಮಾಡಿದರು, ಹಾಗೂ ಥಾಯ್ ಆಹಾರದ ರುಚಿಯನ್ನು ಸವಿದರು.
Published by:
HR Ramesh
First published:
March 2, 2021, 2:14 PM IST