• Home
  • »
  • News
  • »
  • lifestyle
  • »
  • Weight Loss Story: ಮಗನ ಕಣ್ಮುಂದೆ ಅವಮಾನವಾಗಿ ಬರೋಬ್ಬರಿ 62 ಕೆಜಿ ತೂಕ ಇಳಿಸಿಕೊಂಡ ಮಹಿಳೆಯ ಕಥೆ

Weight Loss Story: ಮಗನ ಕಣ್ಮುಂದೆ ಅವಮಾನವಾಗಿ ಬರೋಬ್ಬರಿ 62 ಕೆಜಿ ತೂಕ ಇಳಿಸಿಕೊಂಡ ಮಹಿಳೆಯ ಕಥೆ

ತೂಕ ಇಳಿಸಿಕೊಂಡ ಮಹಿಳೆ

ತೂಕ ಇಳಿಸಿಕೊಂಡ ಮಹಿಳೆ

Women Weight Loss Story: ಒಮ್ಮೆ ನನ್ನ ಮಗ ತನ್ನಷ್ಟಕ್ಕೆ ತಾನೇ ಸ್ಲೈಡ್ ನಲ್ಲಿ ಕೂರಲು ತುಂಬಾ ಹೆದರುತ್ತಿದ್ದನು ಮತ್ತು ಕೊನೆಗೆ ನಾನು ಮತ್ತು ನನ್ನ ಮಗ ಹೋಗಿ ಅಲ್ಲಿ ಕುಳಿತುಕೊಂಡೆವು" ಎಂದು ಸಾರಾ ಲಾಕೆಟ್ ಅವರು ಕೇಟರ್ಸ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

  • Share this:

ದೇಹದಲ್ಲಿನ (Body) ಅತಿಯಾದ ತೂಕ (Heavy Weight) ಅನೇಕರನ್ನು ಅನೇಕ ವಿಧಗಳಲ್ಲಿ ತೊಂದರೆಗೀಡು ಮಾಡುತ್ತಿರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.ಎಷ್ಟೋ ಜನರಿಗೆ ಅವರ ದೇಹದಲ್ಲಿನ ಅಧಿಕ ತೂಕ ಅನೇಕ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಿದರೆ, ಇನ್ನೂ ಕೆಲವರಿಗೆ ಯಾವುದೇ ಕಾರ್ಯಕ್ರಮಗಳಿಗೆ ಹೋದರೂ ಮುಜುಗರಕ್ಕೀಡು ಮಾಡುವ ಘಟನೆಗಳು ನಡೆಯುತ್ತಿರುತ್ತವೆ ಅಂತ ಹೇಳಬಹುದು. ಇಲ್ಲಿಯೂ ಸಹ ಒಬ್ಬ ಮಹಿಳೆಯು (Women)  ಅಧಿಕ ತೂಕವನ್ನು ಹೊಂದಿದ್ದು, ತನ್ನ ಮಗನ ಕಣ್ಮುಂದೆ ಒಂದು ಸ್ಲೈಡ್ ನಲ್ಲಿ ಕುಳಿತು ಆಟವಾಡುತ್ತಿದ್ದಾಗ ಅಲ್ಲಿಯೇ ಸಿಲುಕಿಕೊಂಡಿದ್ದು ಆಕೆಗೆ ತುಂಬಾನೇ ಮುಜುಗರವಾಗುವಂತೆ ಮಾಡಿತು ಎಂದು ಹೇಳಲಾಗುತ್ತಿದೆ. ನಂತರ ಆ ಮಹಿಳೆ ತನ್ನ ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿದ್ದು ತುಂಬಾನೇ ಸ್ಲಿಮ್ ಆಗಿ ಕಾಣಿಸುತ್ತಿದ್ದಾರೆ ಎಂದು ಹೇಳಬಹುದು.


ಮಹಿಳೆಯ ಜೊತೆ ನಡೆದ ಆ ಘಟನೆ ಏನು?


ವಾಷಿಂಗ್ಟನ್ ನ 25 ವರ್ಷ ವಯಸ್ಸಿನ ಮಹಿಳೆಯೊಬ್ಬಳು ತನ್ನ ಮಗನ ಕಣ್ಣ ಮುಂದೆಯೇ ಒಂದು ಸ್ಲೈಡ್ ನಲ್ಲಿ ಕುಳಿತುಕೊಂಡು ಆಟವಾಡುತ್ತಿದ್ದಾಗ ಅದರಲ್ಲಿ ಸಿಕ್ಕಿಹಾಕಿಕೊಂಡಾಗ ತುಂಬಾನೇ ಮುಜುಗರವನ್ನು ಮತ್ತು ಅವಮಾನವನ್ನು ಅನುಭವಿಸಿದರು. ನಂತರ ಅವಳ ಗಂಡ ಬಂದು ಅವಳನ್ನು ಆ ಸ್ಲೈಡ್ ನಿಂದ ಮೇಲಕ್ಕೆ ಎತ್ತಬೇಕಾಯಿತು. ಇದೆಲ್ಲಾ ನಡೆದ ನಂತರ ಮಹಿಳೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಒಂದಲ್ಲ, ಎರಡಲ್ಲ ಬರೋಬ್ಬರಿ 62 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ ನೋಡಿ.


"ಒಮ್ಮೆ ನನ್ನ ಮಗ ತನ್ನಷ್ಟಕ್ಕೆ ತಾನೇ ಸ್ಲೈಡ್ ನಲ್ಲಿ ಕೂರಲು ತುಂಬಾ ಹೆದರುತ್ತಿದ್ದ, ಕೊನೆಗೆ ನಾನು ಮತ್ತು ನನ್ನ ಮಗ ಅಲ್ಲಿ ಕುಳಿತುಕೊಂಡೆವು" ಎಂದು ಸಾರಾ ಲಾಕೆಟ್ ಅವರು ಕೇಟರ್ಸ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು


"ಆದ್ದರಿಂದ, ನಾನು ಅವನೊಂದಿಗೆ ಸ್ಲೈಡ್ ನಲ್ಲಿ ಕೂರಲು ಹೋದೆ, ಸ್ಲೈಡ್ ಮುಂದೆ ಹೋಗಿ ತಿರುವು ತೆಗೆದುಕೊಂಡಾಗ, ನಾನು ಅಲ್ಲಿಯೇ ಸಿಕ್ಕಿಹಾಕಿಕೊಂಡೆ. ಈ ವೇಳೆ ನನಗೆ ಮುಂದೆ ಹೋಗಲು ಸಾಧ್ಯವಾಗಲಿಲ್ಲ. ಅಲ್ಲೇ ಇದ್ದ ನನ್ನ ಪತಿ ಕೂಡಲೇ ನನ್ನ ಬಳಿಗೆ ಬಂದು ನನ್ನನ್ನು ಆ ಸ್ಲೈಡ್ ನಿಂದ ಹೊರಗೆ ಎಳೆಯಬೇಕಾಯಿತು. ಆ ಒಂದು ಘಟನೆಯು ನನ್ನ ಮನಸ್ಸಿನ ಮೇಲೆ ತುಂಬಾನೇ ಪರಿಣಾಮ ಬೀರಿತು. ನನ್ನ ಹಳೆಯ ಜೀವನವನ್ನು ಮರಳಿ ಪಡೆಯಲು ನಾನು ಬೇರೆ ಏನನ್ನಾದರೂ ಪ್ರಯತ್ನಿಸಬೇಕು ಎಂದು ನಾನು ಆ ದಿನವೇ ನಿರ್ಧರಿಸಿದೆ” ಎಂದು ಹೇಳಿದರು.


ಗರ್ಭಧಾರಣೆಯ ಸಮಯದಲ್ಲಿ ಸಾರಾಗೆ ತೂಕ ಹೆಚ್ಚಾಗಲು ಶುರುವಾಗಿತ್ತಂತೆ!


ಅಧಿಕ ರಕ್ತದೊತ್ತಡ ಮತ್ತು ಗರ್ಭಾವಸ್ಥೆಯ ಮಧುಮೇಹದಿಂದ ಬಳಲುತ್ತಿದ್ದ ಇಬ್ಬರು ಮಕ್ಕಳ ತಾಯಿ ತನ್ನ ಗರ್ಭಧಾರಣೆಯ ಸಮಯದಲ್ಲಿ ದೇಹದ ತೂಕ ಹೆಚ್ಚಾಗಿತ್ತು ಎಂದು ಹೇಳಿದರು.


ಇದನ್ನೂ ಓದಿ: ಸ್ಟೀಮ್ ತೆಗೆದುಕೊಳ್ಳುವಾಗ ನೀರಿಗೆ ಈ ವಸ್ತುಗಳನ್ನು ಹಾಕಿದ್ರೆ 1 ದಿನದಲ್ಲಿ ಶೀತಕ್ಕೆ ಪರಿಹಾರ ಸಿಗುತ್ತೆ


ಸಾರಾ ಲಾಕೆಟ್ ಕೂಡ ಅತಿಯಾಗಿ ತಿನ್ನುವುದನ್ನು ಒಪ್ಪಿಕೊಂಡರು. "ನಾನು ಉತ್ತಮ ಆಹಾರ ಕ್ರಮವನ್ನು ಹೊಂದಿರಲಿಲ್ಲ ಮತ್ತು ಸಿಕ್ಕಾಪಟ್ಟೆ ತಿನ್ನುತ್ತಿದ್ದೆ. ನಾನು ಹಗಲು ಹೊತ್ತಿನಲ್ಲಿ ನನ್ನ ಕೈಲಾದಷ್ಟು ತಿನ್ನುತ್ತಿದ್ದೆ ಮತ್ತು ನಂತರ ಸಂಜೆ ಎರಡು ರಾತ್ರಿ ಊಟ ಮತ್ತು ಸಾಕಷ್ಟು ತಿಂಡಿಗಳನ್ನು ಸೇವಿಸುತ್ತಿದ್ದೆ" ಎಂದು ಹೇಳಿದರು.


ಅವಳು ದಿನಕ್ಕೆ 3,000 ಕ್ಯಾಲೋರಿಗಳನ್ನು ಸೇವಿಸುತ್ತಿದ್ದರಂತೆ. ಬರ್ಗರ್, ಚಿಕನ್ ನಗೆಟ್ಸ್ ಮತ್ತು ಮಧ್ಯಾಹ್ನದ ಊಟದ ಜೊತೆಗೆ ಸೋಡಾವನ್ನು ಕುಡಿಯುವ ಮೊದಲು ಅವರು ಬೆಳಗಿನ ಉಪಾಹಾರಕ್ಕಾಗಿ ಪಾಪ್-ಟಾರ್ಟ್ಸ್ ಅನ್ನು ಸಹ ತಿನ್ನುತ್ತಿದ್ದರಂತೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ರಾತ್ರಿಯೂಟಕ್ಕೆ, ಲಾಕೆಟ್ ಆಗಾಗ್ಗೆ ಮ್ಯಾಕರೋನಿ ಮತ್ತು ಚೀಸ್ ನೊಂದಿಗೆ ಹುರಿದ ಚಿಕನ್ ಅನ್ನು ಸೇವಿಸುತ್ತಿದ್ದರು.
ಸ್ಲೈಡ್ ನ ಆ ಘಟನೆಯ ನಂತರ, ಲಾಕೆಟ್ ತನ್ನ ಆಹಾರ ಕ್ರಮವನ್ನು ಬದಲಾಯಿಸುವ ಮೂಲಕ ಮತ್ತು ವ್ಯಾಯಾಮ ಮಾಡುವ ಮೂಲಕ ತೂಕ ಇಳಿಸಿಕೊಳ್ಳಲು ಪ್ರಯತ್ನಿಸಿದರು ಎಂದು ಹೇಳಿದರು. ಆದಾಗ್ಯೂ, ಫಲಿತಾಂಶಗಳು ನಿರಾಶಾದಾಯಕವಾಗಿದ್ದವು ಮತ್ತು ಶೀಘ್ರದಲ್ಲಿಯೇ ಅವರು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಅಥವಾ ಪಿಸಿಒಎಸ್ ನಿಂದ ಬಳಲುತ್ತಿದ್ದರು, ಇದು ತೂಕವನ್ನು ಕಳೆದುಕೊಳ್ಳುವುದನ್ನು ಇನ್ನಷ್ಟು ಕಷ್ಟಕರವಾಗಿಸಿತು.


ಲಾಕೆಟ್ 2021 ರ ಸೆಪ್ಟೆಂಬರ್ ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು..


ನಂತರ ಅವರು ತೂಕ ನಷ್ಟ ಮತ್ತು ಹಾರ್ಮೋನುಗಳ ಸಮಸ್ಯೆಗಳಿಗೆ ಒಂದು ಸಾಧನವಾಗಿ ಗ್ಯಾಸ್ಟ್ರಿಕ್ ಸ್ಲೀವ್ ಅನ್ನು ಪಡೆಯಲು ನಿರ್ಧರಿಸಿದರು. ಲಾಕೆಟ್ 2021 ರ ಸೆಪ್ಟೆಂಬರ್ ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.


"ಶಸ್ತ್ರಚಿಕಿತ್ಸೆಯ ಬಗ್ಗೆ ನನಗೆ ಮಿಶ್ರ ಭಾವನೆಗಳು ಇದ್ದವು. ನಾನು ತುಂಬಾ ಉತ್ಸುಕಳಾಗಿದ್ದೆ, ಆದರೆ ಇದು ನನ್ನ ಜೀವನಶೈಲಿ ಮತ್ತು ಆಹಾರದೊಂದಿಗಿನ ನನ್ನ ಸಂಬಂಧವನ್ನು ಸಮತೋಲನಗೊಳಿಸಲು ಕೆಲಸ ಮಾಡಬೇಕಾದ ಮಾನಸಿಕ ಪ್ರಯಾಣ ಎಂದು ನನಗೆ ತಿಳಿದಿತ್ತು" ಎಂದು ಅವರು ಹೇಳಿದರು.


ಇದನ್ನೂ ಓದಿ: ವಾರಕ್ಕೊಮ್ಮೆ ಎಣ್ಣೆಯಲ್ಲಿ ಬಾಯಿ ತೊಳಿಬೇಕಂತೆ, ಹಲ್ಲಿನ ಸಮಸ್ಯೆಗೆ ಇದೇ ಪರಿಹಾರ


ಲಾಕೆಟ್ ತನ್ನ ತೂಕವು ಸುಮಾರು 70 ಕೆಜಿ ಇರಬೇಕೆಂದು ಬಯಸಿದ್ದರು, ಆದರೆ ಈಗ ಅವರ ಆರೋಗ್ಯಕರ ಅಭ್ಯಾಸಗಳಿಂದಾಗಿ ಅದನ್ನು 53 ಕೆಜಿಗೆ ಇಳಿಸಿದ್ದಾರೆ. ಅವಳು ಈಗ ನಿಯಮಿತವಾಗಿ ವರ್ಕೌಟ್ ಮಾಡುತ್ತಾಳೆ ಮತ್ತು ಬೆಳಗಿನ ಉಪಾಹಾರಕ್ಕಾಗಿ ಟೊಮೆಟೊ ಮತ್ತು ಪಾಲಕ್ ನೊಂದಿಗೆ ಮೊಟ್ಟೆಯ ಬಿಳಿ ಭಾಗವನ್ನು ತಿನ್ನುತ್ತಾರೆ. ಮಧ್ಯಾಹ್ನದ ಊಟಕ್ಕಾಗಿ, ಅವರು ಅನ್ನ, ಹಬೆಯಲ್ಲಿ ಬೇಯಿಸಿದ ತರಕಾರಿಗಳು ಮತ್ತು ಟರ್ಕಿ ಮತ್ತು ಚಿಕನ್ ಅನ್ನು ತಿನ್ನುತ್ತಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

Published by:Sandhya M
First published: