800 ಕಿ.ಮೀ ದೂರ ಪ್ರಯಾಣಿಸಿ ತನ್ನ ತಂದೆಗಿಂತ ಹಿರಿಯ ವ್ಯಕ್ತಿಯೊಂದಿಗೆ ಕನ್ಯತ್ವ ಕಳೆದುಕೊಂಡ ಯುವತಿ..!

ಗೇಬ್ರಿಯೆಲ್ ಮೂರು ತಿಂಗಳ ಕಾಲ ಜಾಕೋಬ್ ಮತ್ತು ಮೇಗನ್ ಅವರೊಂದಿಗೆ ಆನ್‌ಲೈನ್‌ನಲ್ಲಿ ಮಾತನಾಡುತ್ತಿದ್ದರು. ಈ ಸ್ನೇಹ ಗಾಢವಾಗಿ ಬೆಳೆದಿದೆ.

news18-kannada
Updated:January 8, 2020, 7:25 PM IST
800 ಕಿ.ಮೀ ದೂರ ಪ್ರಯಾಣಿಸಿ ತನ್ನ ತಂದೆಗಿಂತ ಹಿರಿಯ ವ್ಯಕ್ತಿಯೊಂದಿಗೆ ಕನ್ಯತ್ವ ಕಳೆದುಕೊಂಡ ಯುವತಿ..!
Gabby-Reese-poly
  • Share this:
ಪ್ರೀತಿಗೆ ಕಣ್ಣಿಲ್ಲ. ಪ್ರೀತಿ-ಪ್ರೇಮದಲ್ಲಿ ಉಳಿದೆಲ್ಲವೂ  ನಶ್ವರ ಎಂಬ ಮಾತು ಆಗಾಗ್ಗೆ ಕೇಳಿಬರುತ್ತಿತ್ತದೆ. ಇದು ಕೂಡ ಅಂತಹದ್ದೇ ಮತ್ತೊಂದು ಕಥೆ. ಆಕೆ ಗೇಬ್ರಿಯಲ್ ರೀಸ್. ಸಾಮಾಜಿಕ ಜಾಲತಾಣದಲ್ಲಿ ಪರಿಚಿತನಾದ ವ್ಯಕ್ತಿಯೊಬ್ಬನೊಂದಿಗೆ ಆಕೆ ಲೈಂಗಿಕ ಸುಖಕ್ಕಾಗಿ ತೆರಳಿದ್ದಳು. ಅದು ಕೂಡ 804 ಕಿ.ಮೀ ದೂರ. ಅಷ್ಟೇ ಅಲ್ಲ ಆತ ಈಕೆಗಿಂತ 24 ವರ್ಷ ಹಿರಿಯ ವ್ಯಕ್ತಿ ಬೇರೆ.

ಕೇಳಲು ವಿಚಿತ್ರ ಎನಿಸಿದರು, ಇಂತಹದೊಂದು ಘಟನೆ ಅಮೆರಿಕದಲ್ಲಿ ನಡೆದಿದೆ. 18 ರ ಹರೆಯದಲ್ಲಿ ಗೇಬ್ರಿಯಲ್​ಗೆ ಸುಗರ್ ಡ್ಯಾಡಿ ಎಂಬ ವೆಬ್​ಸೈಟ್​ನಲ್ಲಿ ಸಾಫ್ಟ್‌ವೇರ್ ಡೆವಲಪರ್‌ಗಳಾದ ಜೇಕಬ್ ಬೋಸ್‌ವೆಲ್ ಮತ್ತು ಮೇಗನ್ ಮುಯಿರ್‌ಹೆಡ್ ದಂಪತಿ ಪರಿಚಿತರಾಗಿದ್ದರು.

ಗೇಬ್ರಿಯೆಲ್ ಮೂರು ತಿಂಗಳ ಕಾಲ ಜೇಕಬ್ ಮತ್ತು ಮೇಗನ್ ಅವರೊಂದಿಗೆ ಆನ್‌ಲೈನ್‌ನಲ್ಲಿ ಮಾತನಾಡುತ್ತಿದ್ದರು. ಈ ಸ್ನೇಹ ಗಾಢವಾಗಿ ಬೆಳೆದಿತ್ತು. ಅಲ್ಲದೆ ಅವರೊಂದಿಗೆ ಪ್ರೇಮಾಂಕುರವಾಗಿತ್ತು. ಈ ವಿಷಯವನ್ನು ಗೇಬ್ರಿಯೆಲ್ ತನ್ನ ಹೆತ್ತವರಿಗೆ ತಿಳಿಸಿದ್ದಳು. ಮೊದಲಿಗೆ ಮಗಳು ತಮಾಷೆಗೆ ಮಾಡುತ್ತಿದ್ದಾಳೆ ಎಂದೇ ಪೋಷಕರು ಭಾವಿಸಿದ್ದರು.

ಆದರೆ ಬೈಸೆಕ್ಸುವಲ್ ಆಗಿದ್ದ ಗೇಬ್ರಿಯಲ್ ತನಗಿಂತ ಹಿರಿಯ ವ್ಯಕ್ತಿ ಹಾಗೂ ಆತನ ಪತ್ನಿಯನ್ನು ಪ್ರೀತಿಸುತ್ತಿದ್ದಳು. ಹೀಗಾಗಿ ಮನೆಯವರನ್ನು ಎದುರು ಹಾಕಿಕೊಳ್ಳಲು ನಿರ್ಧರಿಸಿದ್ದಳು. ಅದರಂತೆ ತನ್ನ ತಂದೆಗಿಂತ 2 ವರ್ಷ ಹಿರಿಯ ವ್ಯಕ್ತಿಯಾದ ಜೇಕಬ್ (46) ಮತ್ತು ಮೇಗನ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಳು.

ಈ ವಿಷಯ ಕುಟುಂಬಕ್ಕೆ ತಿಳಿಸಿದಾಗ ಅವರು ಒಪ್ಪಿರಲಿಲ್ಲ. ಆದರೂ ನಾನು ಮಾತ್ರ ನನ್ನ ಪ್ರೀತಿಯಲ್ಲಿ ಪ್ರಾಮಾಣಿಕಳಾಗಿದ್ದೆ. ಹೀಗಾಗಿ ನನ್ನ ಲವರ್ಸ್​ಗಳನ್ನು ಭೇಟಿಯಾಗಲು ಅಮೆರಿಕ ಸಾಲ್ಟ್ ಲೇಕ್ ಸಿಟಿ ಪ್ರಯಾಣ ಬೆಳೆಸಿದೆ. ನಾನು ಯಾವಾಗಲೂ ಹಿರಿಯ ಪುರುಷ ಹಾಗೂ ಹಿರಿಯ ಮಹಿಳೆಯರನ್ನು ಇಷ್ಟಪಡುತ್ತಿದ್ದೆ ಎಂದು ಗೇಬ್ರಿಯಲ್ ಹೇಳಿದ್ದಾಳೆ.

ತಮ್ಮ ಮೊದಲ ಭೇಟಿಯ ಅನುಭವ ಹಂಚಿಕೊಂಡ ಗೇಬ್ರಿಯಲ್, ನಾವು ಪ್ರಥಮ ಬಾರಿ ಭೇಟಿಯಾದಾಗ ಬಹಳ ಅನೋನ್ಯವಾಗಿದ್ದೆವು. ಅಂದು ರಾತ್ರಿ ಮೇಗನ್ ಅವರಿಗೆ ಬೇರೆ ಕೆಲಸವಿತ್ತು. ನಾನು ಮತ್ತು ಜೇಕಬ್ ಮಾತ್ರ ಮನೆಯಲ್ಲಿದ್ದವು. ಟಿವಿ ನೋಡುತ್ತಾ , ಡಿನ್ನರ್ ಮುಗಿಸಿದೆವು. ಮೇಗನ್ ಹಿಂತಿರುಗಿದ ಬಳಿಕ ನಾನು ಅವರಿಬ್ಬರೊಂದಿಗೆ ದೈಹಿಕ ಸಂಪರ್ಕ ಹೊಂದಿದೆ. ನಾವು ಮೂವರೂ ಥ್ರಿಪಲ್ ಖುಷಿಯನ್ನು ಅನುಭವಿಸಿದೆವು. ಅದುವೇ ನನ್ನ ಮೊದಲ ಲೈಂಗಿಕ ಸಂಪರ್ಕ ಕೂಡ ಆಗಿತ್ತು ಎಂದು ತಿಳಿಸಿದ್ದಾರೆ.

ಆ ಎರಡು ರಾತ್ರಿಗಳ ಪ್ರವಾಸದ ಬಳಿಕ ನಾನು ನನ್ನ ಮನೆಗೆ ಹಿಂತಿರುಗಿದೆ. ಅವರೊಂದಿಗೆ ಅದಾಗಲೇ ಪ್ರಣಯ ಮೂಡಿತ್ತು. ಅವರಿಗೂ ನಾನು ಇಷ್ಟವಾಗಿದ್ದೆ. ಹೀಗಾಗಿ ನನ್ನನ್ನು ಅವರ ಬಳಿ ಕರೆಸಿಕೊಳ್ಳಲು ಉತ್ಸುಕರಾಗಿದ್ದರು. ಅದರಂತೆ ನಾವು ಮೂವರು ಸಂಬಂಧದಲ್ಲಿರಲು ಬಯಸಿದೆವು.ಇದನ್ನೂ ಓದಿ: ರಾಧಿಕಾ ಕುಮಾರಸ್ವಾಮಿ ಜೆಡಿಎಸ್ ಪಕ್ಷದಿಂದಲೇ ರಾಜಕೀಯಕ್ಕೆ ಇಳಿಯುತ್ತಾರಾ? ಇಲ್ಲಿದೆ ಉತ್ತರ

ಕೆಲವರಿಗೆ ಇದು ವಿಲಕ್ಷಣ ಎನಿಸಿದರೂ, ನಾವು ಮಾತ್ರ ಉತ್ತಮ ಸಂಬಂಧದ ಜೀವನನ್ನು ಮುಂದುವರೆಸುತ್ತಿದ್ದೇವೆ. ಯಾರು ಏನೇ ಹೇಳಿದರೂ ಅದೆಲ್ಲವನ್ನು ನಾನು ತಲೆಗೆ ಹಾಕಿಕೊಳ್ಳುವುದಿಲ್ಲ ಎಂದು ಗೇಬ್ರಿಯಲ್ ಹೇಳಿದ್ದಾರೆ.

ಇನ್ನು 11 ವರ್ಷಗಳಿಂದ ಜೇಕಬ್‌ನೊಂದಿಗೆ ಸಂಬಂಧ ಹೊಂದಿರುವ ಮೇಗನ್, ದಂಪತಿಗಳು ಇತರ ಮಹಿಳೆಯರೊಂದಿಗೆ ಡೇಟಿಂಗ್ ನಡೆಸುತ್ತಾರೆ. ಹಾಗೆಯೇ ಗ್ಯಾಬಿ ಅವರು ತಮ್ಮ ಸಂಬಂಧದಲ್ಲಿ ತ್ರಿಕೋನ ಪ್ರೇಮವನ್ನು ರೂಪಿಸಿದ್ದಾರೆ ಎಂದಿದ್ದಾರೆ.

ಒಟ್ಟಿನಲ್ಲಿ ಪ್ರೀತಿ ಪ್ರೇಮಕ್ಕೆ ಕಣ್ಣಿಲ್ಲ ಎಂಬುದಕ್ಕೆ 21ರ ಗೇಬ್ರಿಯಲ್, ಜೇಕಬ್ ಹಾಗೂ ಮೇಗನ್ ಹೊಸ ಉದಾಹರಣೆ ಎನ್ನಬಹುದು.

ಇದನ್ನೂ ಓದಿ: ಮುಗಿಲ್​​ಪೇಟೆಯ ಮೂಗುತಿ ಸುಂದರಿ ಇವರೇ ನೋಡಿ

First published:January 8, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ