Weight Loss: ವ್ಯಾಯಾಮ ಮಾಡದೇ 51 ಕೆಜಿ ತೂಕ ಇಳಿಕೆ! ಈಕೆಯ ಆಹಾರ ಕ್ರಮ ಹೇಗಿದೆ ಗೊತ್ತಾ?

ಮಹಿಳೆಯೊಬ್ಬರು 51 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಮಹಿಳೆಯ ತೂಕ ಮೊದಲು ಸುಮಾರು 111 ಕೆಜಿ ಇತ್ತು. ಮಹಿಳೆ ಯಾವುದೇ ವ್ಯಾಯಾಮ ಚಟುವಟಿಕೆ ಇಲ್ಲದೆ 51 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

 ತೂಕ ಇಳಿಸಿಕೊಂಡ ಮಹಿಳೆ ಆಲಿಸ್ ಬೈಲಿ

ತೂಕ ಇಳಿಸಿಕೊಂಡ ಮಹಿಳೆ ಆಲಿಸ್ ಬೈಲಿ

  • Share this:
    ಇಂದಿನ ದಿನಗಳಲ್ಲಿ (Now a Days) ನಾವು ತಿನ್ನುವ ಆಹಾರ (Food) ಮತ್ತು ನಮ್ಮ ಲೈಫ್ ಸ್ಟೈಲ್ (Lifestyle), ಚಟುವಟಿಕೆ ಇದೆಲ್ಲವೂ ನಮ್ಮ ಆರೋಗ್ಯದ (Health) ಮೇಲೆ ಹೆಚ್ಚು ಪರಿಣಾಮ (Effect) ಬೀರುತ್ತದೆ. ಹೆಚ್ಚೆಚ್ಚು ತಿನ್ನುವುದು, ಸಿಕ್ಕಿದ್ದನ್ನೆಲ್ಲಾ ತಿನ್ನುವುದು, ಚಟುವಟಿಕೆ ರಹಿತ ಜೀವನ ಇದು ದೇಹದ (Body) ಕೊಬ್ಬನ್ನು ಹೆಚ್ಚು ಮಾಡುತ್ತದೆ. ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡೋದು ಸವಾಲಿನ ಕೆಲಸವಿದ್ದಂತೆ. ವಿಜ್ಞಾನದ ಪ್ರಕಾರ, ತೂಕ ಇಳಿಸಲು ದೇಹಕ್ಕೆ ಅಗತ್ಯಕ್ಕಿಂತ ಕಡಿಮೆ ಕ್ಯಾಲೋರಿ ಸೇವನೆ ಮಾಡುವುದು ಮತ್ತು ದೈಹಿಕ ಚಟುವಟಿಕೆ ಹೆಚ್ಚಿಸುವುದು ಅತೀ ಅವಶ್ಯಕ ಆಗಿದೆ. ಆದರೆ ಇಂದು ನಾವು ಸೇವಿಸುವ ಅನೇಕ ಆಧುನಿಕ ಆಹಾರ ಪದ್ಧತಿ ತೂಕ ಹೆಚ್ಚಳಕ್ಕೆ ಕಾರಣ ಆಗುತ್ತಿವೆ.

    ಇಂದು ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ಆಹಾರ ಪದ್ಧತಿ ಅನುಸರಿಸುತ್ತಿದ್ದಾರೆ. ನೀವು ಹೆಚ್ಚುತ್ತಿರುವ ತೂಕ ಕಡಿಮೆ ಮಾಡಲು ಬಯಿಸಿದರೆ, ಇಲ್ಲಿ ಹೇಳಲಾಗುವ ಕೆಲವು ಆಹಾರಗಳು ನಿಮ್ಮ ವೇಟ್ ಲಾಸ್ ಜರ್ನಿಗೆ ಸಹಾಯ ಮಾಡುತ್ತವೆ. ಕೆಲ ಸಮಯದ ಹಿಂದೆ ಮಹಿಳೆಯೊಬ್ಬರು 51 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ.

    ಮಹಿಳೆಯ ತೂಕ ಮೊದಲು ಸುಮಾರು 111 ಕೆಜಿ ಇತ್ತು. ಮದುವೆಗೂ ಮುನ್ನ ಡ್ರೆಸ್ ಹಾಕಿದಾಗ ಸರಿ ಕಾಣುತ್ತಿಲ್ಲ ಎಂದು ತೂಕ ಇಳಿಸುವ ನಿರ್ಧಾರಕ್ಕೆ ಬಂದರು. ಮಹಿಳೆ ಯಾವುದೇ ವ್ಯಾಯಾಮ, ಚಟುವಟಿಕೆ ಇಲ್ಲದೆ ತಾವು 51 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಆಕೆ ತೂಕ ಕಡಿಮೆ ಮಾಡಲು ಯಾವ ವಿಧಾನ ಮತ್ತು ಆಹಾರ ಕ್ರಮ ಫಾಲೋ ಮಾಡಿದ್ದರು ಎಂಬುದನ್ನು ನಾವು ಇಲ್ಲಿ ತಿಳಿಯೋಣ.

    ಇದನ್ನೂ ಓದಿ: ಉತ್ತಮ ಆರೋಗ್ಯಕ್ಕಾಗಿ ಸೂಪರ್ ಫುಡ್ ಗಳ ಉಪಾಹಾರ ಸೇವಿಸಿ, ಪ್ರಯೋಜನ ಪಡೆಯಿರಿ

    ವ್ಯಾಯಾಮವಿಲ್ಲದೆ 51 ಕೆಜಿ ತೂಕ ಕಳೆದುಕೊಂಡ ಮಹಿಳೆ ಯಾರು?

    ತೂಕ ಇಳಿಸಿಕೊಂಡ ಮಹಿಳೆಯ ಹೆಸರು ಆಲಿಸ್ ಬೈಲಿ, ಕೆನಡಾದ ಒಂಟಾರಿಯೊದಿಂದ ಬಂದವರು. ಜುಲೈ 2020 ರಲ್ಲಿ ಆಕೆಯ ತೂಕ ಸುಮಾರು 111 ಕೆ.ಜಿ ಇತ್ತು. ಆದರೆ ಆ ವೇಳೆಗೆ ತೂಕ ನಿಯಂತ್ರಣ ತಪ್ಪಿದ ಕಾರಣ ತೂಕ ಇಳಿಸಿಕೊಳ್ಳುವ ಬಗ್ಗೆ ಯೋಚನೆ ಮಾಡಿ, ಗಟ್ಟಿ ನಿರ್ಧಾರಕ್ಕೆ ಬಂದಿದ್ದರು ಆಲಿಸ್.

    39 ವರ್ಷದ ಆಲಿಸ್ ತನ್ನ ತೂಕ ಕಡಿಮೆ ಮಾಡಲು ಸಾಕಷ್ಟು ಆಧುನಿಕ ಆಹಾರ ಕ್ರಮ ಫಾಲೋ ಮಾಡಿದರು. ಆದರೆ ಅದರಿಂದ ತೂಕದಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.

    ಯಾವ ಆಹಾರದಿಂದ ತೂಕ ನಷ್ಟ ಆಗುತ್ತದೆ

    ಆಲಿಸ್ ತೂಕ ಕಡಿಮೆ ಮಾಡಿಕೊಳ್ಳಲು ಕಿಟೋ ಆಹಾರ ಕ್ರಮ ಫಾಲೋ ಮಾಡಲು ಮುಂದಾದರು. ಆಲಿಸ್ ಪ್ರಕಾರ, ತೂಕ ಕಳೆದುಕೊಳ್ಳಲು ಸಹಾಯ ಮಾಡುವ ಯಾವುದೇ ಆಹಾರ ಇರಲಿಲ್ಲ. ಆದರೆ ಕಿಟೊ ಆಹಾರ ಕ್ರಮವು ತೂಕ ಇಳಿಕೆಗೆ ಸಹಾಯ ಮಾಡಿತು. ಇದರಲ್ಲಿ ಹೆಚ್ಚಿನ ಕೊಬ್ಬು, ಕಡಿಮೆ ಕಾರ್ಬ್ ಮತ್ತು ಮಧ್ಯಮ ಪ್ರೋಟೀನ್ ಆಹಾರ ಕ್ರಮ ಇದೆ.

    ಆಲಿಸ್ ಮಾತನಾಡಿ, ನಾನು ಕೀಟೋ ಡಯಟ್‌ಗಿಂತ ಮೊದಲು ಅನೇಕ ಡಯಟ್‌ ಫಾಲೋ ಮಾಡಿದ್ದೆ. ಆದರೆ ಕೊನೆಗೆ ಅಂತರ್ಜಾಲದಲ್ಲಿ ಕಿಟೋ ಡಯಟ್ ಬಗ್ಗೆ ನೋಡಿದೆ. ಅದನ್ನು ಅನುಸರಿಸಲು ನಿರ್ಧರಿಸಿದೆ. ನಾನು ಇತರ ಆಹಾರದ ಜೊತೆ ತೂಕ ಕಡಿಮೆ ಮಾಡಿಕೊಳ್ಳುತ್ತಿದ್ದೆ. ಆದರೆ ತೂಕ ಮತ್ತೆ ಹೆಚ್ಚಾಗುತ್ತಿತ್ತು.

    ನಾನು ಕೀಟೋ ಡಯಟ್ ಫಾಲೋ ಮಾಡಲು ಆರಂಭಿಸಿದಾಗಿನಿಂದ ನಿರಂತರವಾಗಿ ತೂಕ ಕಳೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

    ಯಾವ ಆಹಾರಗಳನ್ನು ಕೀಟೋ ಆಹಾರ ಕ್ರಮದಲ್ಲಿ ಸೇರಿಸಲಾಗಿದೆ

    ಆಲಿಸ್ ಪ್ರಕಾರ, ಕೀಟೊ ಡಯಟ್ ಅನುಸರಿಸುವಾಗ ಅನೇಕ ರುಚಿಕರ ಆಹಾರವನ್ನು ಊಟದಲ್ಲಿ ಸೇರಿಸಲಾಗುತ್ತದೆ. ಅವುಗಳನ್ನು ತಿಂದ ನಂತರ ಮತ್ತೆ ತಿನ್ನುವ ಹಂಬಲ ಇರಲಿಲ್ಲ. ಏನು ತಿನ್ನಬೇಕೋ ಅದನ್ನು ತಿನ್ನುತ್ತಿದ್ದೆ.

    ಆದರೆ ಆಹಾರ ಪದಾರ್ಥಗಳಲ್ಲಿ ಕೊಬ್ಬಿನಂಶ ಹೆಚ್ಚಿರುವಂತೆ ನೋಡಿಕೊಳ್ಳಲಾಯಿತು. ನನ್ನ ಆಹಾರವು ಆವಕಾಡೊ, ಚೀಸ್, ಚಿಕನ್, ಮೀನು, ಮೊಸರು ಮತ್ತು ನನ್ನ ನೆಚ್ಚಿನ ಡಾರ್ಕ್ ಚಾಕೊಲೇಟ್ ಒಳಗೊಂಡಿತ್ತು ಎಂದಿದ್ದಾರೆ.

    ಇದನ್ನೂ ಓದಿ: Ramadan ಹಬ್ಬದ ನಂತರ ನೀವು ನಿಮ್ಮ ಸಾಮಾನ್ಯ ಆಹಾರ ಕ್ರಮಕ್ಕೆ ಮರಳುವುದು ಹೇಗೆ..?

    ಆಲಿಸ್ ವ್ಯಾಯಾಮ, ದೈಹಿಕ ಚಟುವಟಿಕೆ ಮಾಡುವುದಿಲ್ಲ

    ಆಲಿಸ್ ಸಂದರ್ಶನವೊಂದರಲ್ಲಿ ಹೇಳಿರುವ ಪ್ರಕಾರ, ಆಕೆ ಕೀಟೋ ಡಯಟ್ ಮಾಡಲು ಪ್ರಾರಂಭಿಸಿದಾಗಿನಿಂದ ವ್ಯಾಯಾಮ ಮಾಡಿಲ್ಲ. ಆದರೆ ತೂಕ ಕಡಿಮೆ ಮಾಡಿಕೊಂಡಿದ್ದಾಳಂತೆ. ನಾನು ವ್ಯಾಯಾಮ ಮಾಡುವುದಿಲ್ಲ ಎಂದು ಹೇಳಿದರೆ ನನ್ನ ಸ್ನೇಹಿತರು ನಂಬುವುದಿಲ್ಲ ಎನ್ನುತ್ತಾಳೆ ಆಲಿಸ್.
    Published by:renukadariyannavar
    First published: