• Home
  • »
  • News
  • »
  • lifestyle
  • »
  • Weight Loss: ಡಯಟ್, ವರ್ಕೌಟ್ ಮಾಡದೇ ತೂಕ ಇಳಿಯುತ್ತಿದ್ದರೆ ಕಡೆಗಣಿಸಬೇಡಿ, ಎಚ್ಚರ!

Weight Loss: ಡಯಟ್, ವರ್ಕೌಟ್ ಮಾಡದೇ ತೂಕ ಇಳಿಯುತ್ತಿದ್ದರೆ ಕಡೆಗಣಿಸಬೇಡಿ, ಎಚ್ಚರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತೂಕ ನಷ್ಟ ಇದ್ದಕ್ಕಿದ್ದಂತೆ ಆಗಲು ಶುರುವಾದರೆ ಅಂದ್ರೆ ನೀವು ಡಯಟ್ ಮಾಡದೇ ವರ್ಕೌಟ್ ಮಾಡದೇ ತೂಕ ಇಳಿಯುತ್ತಿದೆ ಅಂದ್ರೆ ಅದಕ್ಕೆ ಖುಷಿ ಪಡುವ ಮೊದಲು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಯಾಕಂದ್ರೆ ವೇಗವಾಗಿ ತೂಕ ಇಳಿಕೆಯಾಗುವುದು ಹಲವು ಕಾಯಿಲೆಗಳ ಸಂಕೇತವಾಗಿದೆ. ಯಾವುದೇ ಪ್ರಯತ್ನವಿಲ್ಲದೆ ತೂಕ ನಷ್ಟ ಆಗುವುದು ಪ್ರಮುಖ ರೋಗ ಲಕ್ಷಣವೂ ಆಗಿದೆ.

ಮುಂದೆ ಓದಿ ...
  • Share this:

    ತುಂಬಾ ಜನರು (People) ಕೇವಲ ತೂಕ ಇಳಿಸುವತ್ತ (Weight Loss) ಗಮನ ಹರಿಸುತ್ತಾರೆ. ದಿನವೂ ತೂಕ ಇಳಿಕೆ ಬಗ್ಗೆ ಸರ್ಚ್ (Search) ಮಾಡ್ತಾರೆ, ಹೊಸ ಹೊಸ ಯೋಜನೆಗಳನ್ನು (Plan) ತಿಳಿದುಕೊಳ್ತಾರೆ. ತೂಕ ಇಳಿಕೆ ಮತ್ತು ನಿಯಂತ್ರಣ ತುಂಬಾ ದಿನಗಳವರೆಗೆ ನಡೆಯುವ ಪ್ರಕ್ರಿಯೆ. ನಮಗೆಲ್ಲಾ ತೂಕ ಇಳಿಸೋಕೆ ಹಲವು ವಿಚಾರಗಳು ಗೊತ್ತು. ದಿನವೂ ತೂಕ ಇಳಿಸೋಕೆ ಮತ್ತು ತೂಕ ನಿಯಂತ್ರಣಕ್ಕೆ ಏನ್ ಮಾಡ್ಬೇಕು ಅನ್ನೋದನ್ನೇ ತಿಳಿದುಕೊಳ್ತೀವಿ. ಆದ್ರೆ ಇವತ್ತು ಹಠಾತ್ ತೂಕ ಇಳಿಕೆ ಯಾವೆಲ್ಲಾ ಕಾಯಿಲೆಯ (Disease) ಸಂಕೇತ ಮತ್ತು ಅವುಗಳ ಲಕ್ಷಣಗಳು ಹೇಗಿರುತ್ತವೆ ಅನ್ನೋದನ್ನ ನೋಡೋಣ. ವೇಗವಾಗಿ ಅತಿಬೇಗ ತೂಕ ಇಳಿಕೆಯೂ ಹಲವು ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ.


    ಹಠಾತ್ ತೂಕ ಇಳಿಕೆಯಿಂದಾಗುವ ಅಸ್ವಸ್ಥತೆಗಳು


    ತೂಕ ನಷ್ಟ ಇದ್ದಕ್ಕಿದ್ದಂತೆ ಆಗಲು ಶುರುವಾದರೆ ಅಂದ್ರೆ ನೀವು ಡಯಟ್ ಮಾಡದೇ, ವರ್ಕೌಟ್ ಮಾಡದೇ ತೂಕ ಇಳಿಯುತ್ತಿದೆ ಅಂದ್ರೆ ಅದಕ್ಕೆ ಖುಷಿ ಪಡುವ ಮೊದಲು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಯಾಕಂದ್ರೆ ವೇಗವಾಗಿ ತೂಕ ಇಳಿಕೆಯಾಗುವುದು ಹಲವು ಕಾಯಿಲೆಗಳ ಸಂಕೇತವಾಗಿದೆ. ಯಾವುದೇ ಪ್ರಯತ್ನವಿಲ್ಲದೆ ತೂಕ ನಷ್ಟ ಆಗುವುದು ಪ್ರಮುಖ ರೋಗ ಲಕ್ಷಣವೂ ಆಗಿದೆ.


    ತ್ವರಿತ ತೂಕ ನಷ್ಟಕ್ಕೆ ಕಾರಣವಾಗುವ ಕಾಯಿಲೆಗಳು ಮತ್ತು ಲಕ್ಷಣಗಳು ಹೀಗಿವೆ


    ಮಧುಮೇಹ


    ಮಧುಮೇಹ ಚಯಾಪಚಯ ಸಮಸ್ಯೆಯಾಗಿದೆ. ದೇಹದ ರಕ್ತದ ಸಕ್ಕರೆ ಮಟ್ಟ ಅಧಿಕವಾಗುತ್ತದೆ. ಆಗಾಗ್ಗೆ ಮೂತ್ರ ವಿಸರ್ಜನೆ, ಅತಿಯಾದ ಬಾಯಾರಿಕೆ, ಹೆಚ್ಚಿದ ಹಸಿವು, ತೂಕ ಇಳಿಕೆ, ಆಯಾಸ, ಗಾಯ ಗುಣವಾಗದಿರುವುದು ಕೈ ಮತ್ತು ಕಾಲುಗಳಲ್ಲಿ ಮರಗಟ್ಟುವಿಕೆ ಆಗುತ್ತದೆ.




    ಖಿನ್ನತೆ


    ಖಿನ್ನತೆ ಒಂದು ಮಾನಸಿಕ ಅಸ್ವಸ್ಥತೆ ಆಗಿದೆ. ದುಃಖ, ಆತಂಕ, ಕಿರಿಕಿರಿ ಉಂಟಾಗುವ ಸ್ಥಿತಿ ಆಗಿದೆ. ಕಡಿಮೆ ನಿದ್ರೆ, ಏಕಾಗ್ರತೆ ತೊಂದರೆ, ನಕಾರಾತ್ಮಕ ಆಲೋಚನೆ, ಹತಾಶತೆ ಭಾವನೆಗಳು, ಅಸಹಾಯಕ ಭಾವನೆ, ಕಿರಿಕಿರಿ, ಭಾರೀ ತೂಕ ನಷ್ಟ ಲಕ್ಷಣಗಳಾಗಿವೆ.


    ಅತಿಯಾದ ಥೈರಾಯ್ಡ್ ಸಮಸ್ಯೆ


    ಥೈರಾಯ್ಡ್ ಗ್ರಂಥಿಗಳು ಥೈರಾಯ್ಡ್ ಹಾರ್ಮೋನುಗಳನ್ನು ಉತ್ಪಾದಿಸುತ್ತವೆ. ಹೈಪರ್ ಥೈರಾಯ್ಡಿಸಮ್ ಉಂಟಾಗುತ್ತದೆ. ಆಗ ಅನಿಯಮಿತ ಹೃದಯ ಬಡಿತ, ಅತಿಯಾದ ಬೆವರು, ಹಠಾತ್ ತೂಕ ನಷ್ಟ, ತ್ವರಿತ ಉಸಿರಾಟ, ಪ್ಯಾನಿಕ್ ಅಟ್ಯಾಕ್, ಮನಸ್ಥಿತಿ ಬದಲಾವಣೆ ಆಗುತ್ತದೆ.


    ಕ್ಷಯರೋಗ ಅಂದರೆ ಟಿಬಿ


    ಟಿಬಿ ರೋಗ ಬ್ಯಾಕ್ಟೀರಿಯಾದಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆ. ಈ ರೋಗವು ಮೂತ್ರಪಿಂಡ, ಬೆನ್ನುಹುರಿ ಅಥವಾ ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ. ಕೆಮ್ಮು ರಕ್ತ, ಎದೆ ನೋವು, ಆಯಾಸ, ತೂಕ ನಷ್ಟ ಆಗುತ್ತದೆ.


    ಕರುಳಿನ ಉರಿಯೂತ


    ಉರಿಯೂತ ಕರುಳಿನ ಕಾಯಿಲೆ, ಕರುಳುಗಳಲ್ಲಿ ಉರಿ ಉಂಟು ಮಾಡುತ್ತದೆ. ಹೊಟ್ಟೆ ನೋವು ಬರುತ್ತದೆ. ಅಪೌಷ್ಟಿಕತೆ ಸಮಸ್ಯೆ ಉಂಟಾಗುತ್ತದೆ. ಅತಿಸಾರ, ಹೊಟ್ಟೆ ನೋವು ಮತ್ತು ಸೆಳೆತ, ಹಸಿವಿನ ನಷ್ಟ, ತೂಕ ನಷ್ಟ ಆಗುತ್ತದೆ.


    ಹಾರ್ಮೋನುಗಳ ಅಸ್ವಸ್ಥತೆ


    ಅಡಿಸನ್ ಕಾಯಿಲೆ ಹಾರ್ಮೋನುಗಳ ಅಸ್ವಸ್ಥತೆ ಆಗಿದೆ. ಇದು ಎಲ್ಲಾ ವಯಸ್ಸಿನ ಜನರಿಗೆ ಮತ್ತು ಪುರುಷರು ಮತ್ತು ಮಹಿಳೆಯರಲ್ಲಿ ಸಂಭವಿಸಬಹುದು. ತೂಕ ನಷ್ಟ, ಆಯಾಸ, ಕಡಿಮೆ ರಕ್ತದೊತ್ತಡ ಮತ್ತು ಸ್ನಾಯು ದೌರ್ಬಲ್ಯ ಆಗುತ್ತದೆ.


    ಕ್ಯಾನ್ಸರ್


    ಕ್ಯಾನ್ಸರ್ ದೇಹದ ಯಾವುದೇ ಭಾಗದಲ್ಲಿ ಅಸಹಜ ಜೀವಕೋಶಗಳು ಬೆಳವಣಿಗೆಗೆ ಕಾರಣವಾಗಿದೆ. ಚರ್ಮ ಅಥವಾ ಜೀವಕೋಶಗಳಲ್ಲಿ ಪ್ರಾರಂಭವಾಗಬಹುದು. ಮೆದುಳು ಮತ್ತು ಬೆನ್ನುಹುರಿಯಲ್ಲಿ ಕ್ಯಾನ್ಸರ್ ಸಂಭವಿಸಿದಾಗ ಅದನ್ನು ಕೇಂದ್ರ ನರಮಂಡಲದ ಕ್ಯಾನ್ಸರ್ ಎಂದು ಕರೆಯುತ್ತಾರೆ. ತೂಕ ನಷ್ಟ, ಆಯಾಸ, ಸ್ನಾಯುಗಳು ಮತ್ತು ಕೀಲುಗಳಲ್ಲಿ ನಿರಂತರ ನೋವು ಇರುತ್ತದೆ.


    ಎಚ್ಐವಿ ಅಥವಾ ಏಡ್ಸ್


    ಎಚ್‌ಐವಿ ರೋಗ ನಿರೋಧಕ ವ್ಯವಸ್ಥೆಯು ಇತರ ವೈರಸ್‌ಗಳನ್ನು ನಾಶಪಡಿಸುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸುತ್ತದೆ. ಜ್ವರ, ಗಂಟಲು ನೋವು, ಸ್ನಾಯು ನೋವು, ದುಗ್ಧರಸ ಗ್ರಂಥಿಗಳ ಊತ, ಸುಸ್ತು, ಹಠಾತ್ ತೂಕ ನಷ್ಟ ಮತ್ತು ಉಸಿರಾಟದ ತೊಂದರೆ ಆಗುತ್ತದೆ.


    ಇದನ್ನೂ ಓದಿ: ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಈ ಸರಳ ಮನೆಮದ್ದುಗಳನ್ನು ಟ್ರೈ ಮಾಡಿ


    ನರಮಂಡಲದ ಕಾಯಿಲೆ


    ಪಾರ್ಕಿನ್ಸನ್ ಕಾಯಿಲೆ ನರಮಂಡಲದ ಕಾಯಿಲೆ ಆಗಿದೆ. ದೇಹ ಮತ್ತು ಮುಖದಲ್ಲಿ ಬಿಗಿತ ಮತ್ತು ಸಡಿಲತೆ ಉಂಟು ಮಾಡುತ್ತದೆ. ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ ಆದರೆ ಔಷಧಿಗಳ ಮೂಲಕ ನಿವಾರಿಸಬಹುದು.

    Published by:renukadariyannavar
    First published: