Tea With Snacks: ಯಾವ ಚಹಾದ ಜೊತೆ ಯಾವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು?

ಹಸಿರು ಚಹಾ ಮತ್ತು ಕಪ್ಪು ಚಹಾದಿಂದ ಕ್ಯಾಮೊಮೈಲ್ ಮತ್ತು ದಾಸವಾಳ ಚಹಾ ಸೇರಿದಂತೆ ಅನೇಕ ವಿಧದ ಚಹಾಗಳು ಇವೆ. ಕೆಲವರು ಚಹಾ ಜೊತೆ ಬಿಸ್ಕತ್ತು ತಿನ್ನಲು ಇಷ್ಟ ಪಡುತ್ತಾರೆ. ಕೆಲವರು ಡಂಪ್ಲಿಂಗ್ಗಳನ್ನು ಇಷ್ಟ ಪಡುತ್ತಾರೆ. ಆದರೆ ಚಹಾ ಜೊತೆ ಎಂದಿಗೂ ತಿನ್ನಬಾರದ ಕೆಲವು ಪದಾರ್ಥಗಳಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಜನರು (People) ತಮ್ಮ ದಿನವನ್ನು (Day) ಶುರು ಮಾಡುವಾಗ ಒಂದು ಕಪ್ (Cup) ತಾಜಾ ಮತ್ತು ಸ್ಟ್ರಾಂಗ್ ಚಹಾ (Strong Tea) ಕುಡಿದು ಪ್ರಾರಂಭ ಮಾಡುತ್ತಾರೆ. ಚಹಾ ಕುಡಿದ ನಂತರ ದೇಹವು ಚೈತನ್ಯ ಪಡೆಯುತ್ತದೆ. ಮತ್ತು ದೇಹವು  ತಾಜಾತನ ಅನುಭವಿಸಲು ಚಹಾ ಉತ್ತಮ ಅನುಭವ ನೀಡುತ್ತದೆ. ನೀವು ಸಹ ಚಹಾ ಪ್ರಿಯರು ಆಗಿದ್ದರೆ, ನೀವು ದಿನಕ್ಕೆ ಹಲವು ಬಾರಿ ಚಹಾ ಕುಡಿಯುತ್ತೀರಿ. ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಅಥವಾ ಇನ್ಯಾವುದೇ ಸಮಯ ಆಗಿರಲಿ ಪ್ರತಿಯೊಂದು ಕಪ್ ಚಹಾವು ನಿಮಗೆ ವಿಶ್ರಾಂತಿ ನೀಡುತ್ತದೆ. ಹಾಲಿನ ಚಹಾ ಹೊರತುಪಡಿಸಿ ಪ್ರಪಂಚದಾದ್ಯಂತ ಜನರು ವಿವಿಧ ರೀತಿಯ ಚಹಾ ಸೇವನೆ ಮಾಡುತ್ತಾರೆ.

    ಅನೇಕ ವಿಧದ ಚಹಾಗಳು ಇವೆ

    ಹಸಿರು ಚಹಾ ಮತ್ತು ಕಪ್ಪು ಚಹಾದಿಂದ ಕ್ಯಾಮೊಮೈಲ್ ಮತ್ತು ದಾಸವಾಳ ಚಹಾ ಸೇರಿದಂತೆ ಅನೇಕ ವಿಧದ ಚಹಾಗಳು ಇವೆ. ಕೆಲವರು ಚಹಾ ಜೊತೆ ಬಿಸ್ಕತ್ತು ತಿನ್ನಲು ಇಷ್ಟ ಪಡುತ್ತಾರೆ. ಮತ್ತು ಕೆಲವರು ಡಂಪ್ಲಿಂಗ್ಗಳನ್ನು ಇಷ್ಟ ಪಡುತ್ತಾರೆ. ಆದರೆ ಚಹಾ ಜೊತೆ ಎಂದಿಗೂ ತಿನ್ನಬಾರದ ಕೆಲವು ಪದಾರ್ಥಗಳಿವೆ.

    ಹೀಗೆ ಮಾಡಿದರೆ ನಿಮ್ಮ ಆರೋಗ್ಯ ಹಾಳಾಗುವ ಸಾಧ್ಯತೆ ಇದೆ. ಹಾಗಾದರೆ ಚಹಾ ಜೊತೆ ಯಾವ ಯಾವ ಪದಾರ್ಥಗಳನ್ನು ಸೇವಿಸಬಾರದು ಎಂದು ಇಲ್ಲಿ ನಾವು ತಿಳಿಯೋಣ.

    ಇದನ್ನೂ ಓದಿ: ಮೂವತ್ತರ ಹರೆಯದ ನಂತರ ಕೈ- ಕಾಲುಗಳ ಆರೈಕೆ ಹೇಗೆ ಮಾಡುವುದು?

    ಬೀಜಗಳನ್ನು ಚಹಾ ಸೇವಿಸುವುದು ತಪ್ಪಿಸಿ

    ಹಾಲಿನೊಂದಿಗೆ ಕಬ್ಬಿಣಾಂಶ ಇರುವ ಪದಾರ್ಥ ಸೇವನೆ ಮಾಡುವುದನ್ನು ತಪ್ಪಿಸಿ. ಬೀಜಗಳು ಕಬ್ಬಿಣದ ಅಂಶ ಹೊಂದಿವೆ. ಹಾಗಾಗಿ ಚಹಾ ಜೊತೆ ನಟ್ಸ್ ತಿನ್ನುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಚಹಾ ಜೊತೆ ನಟ್ಸ್ ತಿನ್ನಬೇಡಿ.

    ಕಬ್ಬಿಣಾಂಶ ಭರಿತ ತರಕಾರಿಗಳು

    ಕಬ್ಬಿಣದಂಶ ಇರುವ ಪದಾರ್ಥಗಳನ್ನು ಚಹಾದ ಜೊತೆ ಸೇವನೆ ಮಾಡಬಾರದು. ಯಾಕೆಂದರೆ ಚಹಾ ಟ್ಯಾನಿನ್‌ಗಳು ಮತ್ತು ಆಕ್ಸಲೇಟ್‌ಗಳನ್ನು ಹೊಂದಿದೆ. ಅದು ಕಬ್ಬಿಣ ಅಂಶವಿರುವ ಪದಾರ್ಥ ಹೀರಿಕೊಳ್ಳುವುದನ್ನು ತಡೆಯುತ್ತದೆ. ಹಾಗಾಗಿ ಬೀಜಗಳು, ಹಸಿರು ಎಲೆ ತರಕಾರಿಗಳು, ಧಾನ್ಯಗಳು, ಬೇಳೆಕಾಳು ಮತ್ತು ಧಾನ್ಯದಂತಹ ಕಬ್ಬಿಣಂಶ ಸಮೃದ್ಧ ಆಹಾರ ಪದಾರ್ಥಗಳನ್ನು ಚಹಾ ಜೊತೆ ಸೇವನೆ ಮಾಡದಿರುವುದು ಉತ್ತಮ.

    ನಿಂಬೆಹಣ್ಣು

    ಫಿಟ್‌ನೆಸ್ ಉದ್ಯಮದಲ್ಲಿ ನಿಂಬೆ ಚಹಾ ಕುಡಿಯುವುದು ಹೆಚ್ಚು ಶಿಫಾರಸು ಮಾಡಲಾಗುತ್ತದೆ. ಇದು ತ್ವರಿತ ತೂಕ ನಷ್ಟಕ್ಕೆ ಕಾರಣ ಆಗುತ್ತದೆ ಎಂಬ ನಂಬಿಕೆ ಇದೆ. ಜನರು ನಿಂಬೆ ರಸದ ಜೊತೆ ಚಹಾ ಬೆರೆಸಿ ಕುಡಿಯುವುದು ಅದನ್ನು ಆಮ್ಲೀಯ ಆಗಿಸುತ್ತದೆ. ಮತ್ತು ದೇಹದಲ್ಲಿ ಉರಿಯೂತ ಉಂಟು ಮಾಡಬಹುದು.

    ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಲೆಮನ್ ಟೀ ಸೇವನೆ ಮಾಡುವುದು ಆಸಿಡ್ ರಿಫ್ಲಕ್ಸ್, ಎದೆಯುರಿ ಮುಂತಾದ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಚಹಾವನ್ನು ಸೇವನೆ ಮಾಡುವಾಗ ಜಾಗ್ರತೆ ವಹಿಸುವುದು ಉತ್ತಮ.

    ಕಡಲೆ ಹಿಟ್ಟು

    ಭಾರತದಲ್ಲಿ ಪಕೋರಸ್ ಅಥವಾ ಉಪ್ಪಿನಂಶ ಹೊಂದಿರುವ ಪದಾರ್ಥಗಳ ಜೊತೆ ಚಹಾ ಕುಡಿಯುವುದು ಸಾಮಾನ್ಯ. ಚಹಾ ಜೊತೆ ಕಡಲೆ ಹಿಟ್ಟಿನಿಂದ ಮಾಡಿದ ಪದಾರ್ಥಗಳನ್ನು ಸೇವನೆ ಮಾಡುವುದು ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಮತ್ತು ಪೋಷಕಾಂಶ ಹೀರಿಕೊಳ್ಳುವ ದೇಹದ ಸಾಮರ್ಥ್ಯ ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಚಹಾ ಜೊತೆ ಕಡಲೆಬೇಳೆ ಹಿಟ್ಟಿನಿಂದ ಮಾಡಿದ ಪದಾರ್ಥ ಸೇವನೆ ಮಾಡದಿರುವುದು ಉತ್ತಮ.

    ಅರಿಶಿನ

    ಚಹಾ ಕುಡಿಯುವಾಗ ಅರಿಶಿನ ಹೊಂದಿರುವ ಆಹಾರ ಸೇವನೆ ಮಾಡಬಾರದು. ಯಾಕೆಂದರೆ ಇದು ಹೊಟ್ಟೆಯಲ್ಲಿ ಗ್ಯಾಸ್, ಅಸಿಡಿಟಿ ಅಥವಾ ಮಲಬದ್ಧತೆ ಸಮಸ್ಯೆ ಉಂಟು ಮಾಡಬಹುದು. ಅರಿಶಿನ ಮತ್ತು ಚಹಾ ಎಲೆಗಳು ಒಂದಕ್ಕೊಂದು ಹೊಂದಿಕೆಯಾಗಲ್ಲ. ಚಹಾ ಜೊತೆ ಅರಿಶಿನ ಹೊಂದಿರುವ ಪದಾರ್ಥ ಸೇವನೆ ಮಾಡಬೇಡಿ.

    ಇದನ್ನೂ ಓದಿ: ಮಹಿಳೆಯರನ್ನು ಸಾವಿನ ಕೂಪಕ್ಕೆ ತಳ್ಳುವ ಗರ್ಭಕಂಠದ ಕ್ಯಾನ್ಸರ್! ಲಕ್ಷಣಗಳ ಬಗ್ಗೆ ಎಚ್ಚರಿಕೆ ವಹಿಸಿ

    ತಣ್ಣನೆಯ ಆಹಾರಗಳು

    ಬಿಸಿ ಚಹಾ ಜೊತೆ ಅಥವಾ ಚಹಾ ಸೇವನೆ ನಂತರ ತಣ್ಣನೆಯ ಪದಾರ್ಥ ಸೇವಿಸಬೇಡಿ. ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಉಂಟಾಗುತ್ತದೆ. ಇದಕ್ಕೆ ಕಾರಣ ವಿಭಿನ್ನ ತಾಪಮಾನದ ಆಹಾರವನ್ನು ಒಟ್ಟಿಗೆ ಸೇವಿಸುವುದು ಜೀರ್ಣಕ್ರಿಯೆಯನ್ನು ದುರ್ಬಲ ಮಾಡುತ್ತದೆ. ವಾಕರಿಕೆ ಉಂಟಾಗುತ್ತದೆ. ಬಿಸಿ ಚಹಾ ಸೇವನೆ ನಂತರ 30 ನಿಮಿಷಗಳ ಕಾಲ ತಣ್ಣನೆ ಆಹಾರ ಸೇವಿಸಬೇಡಿ.
    Published by:renukadariyannavar
    First published: