• Home
  • »
  • News
  • »
  • lifestyle
  • »
  • Gooseberry Pickle: ಎಣ್ಣೆ ಬಳಸದೇ ತಯಾರಿಸುವ ಬೆಟ್ಟದ ನೆಲ್ಲಿಕಾಯಿ ಉಪ್ಪಿನಕಾಯಿ ಮಾಡುವ ವಿಧಾನ

Gooseberry Pickle: ಎಣ್ಣೆ ಬಳಸದೇ ತಯಾರಿಸುವ ಬೆಟ್ಟದ ನೆಲ್ಲಿಕಾಯಿ ಉಪ್ಪಿನಕಾಯಿ ಮಾಡುವ ವಿಧಾನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಟ್ಟದ ನೆಲ್ಲಿಕಾಯಿ ಉಪ್ಪಿನಕಾಯಿ ಜೀರ್ಣಾಂಗ ವ್ಯವಸ್ಥೆ ಆರೋಗ್ಯವಾಗಿರಿಸುತ್ತದೆ. ಬೆಟ್ಟದ ನೆಲ್ಲಿಕಾಯಿ ಸಾಕಷ್ಟು ಆರೋಗ್ಯ ಪ್ರಯೋಜನ ಹೊಂದಿದೆ. ಶೀತ ವಾತಾವರಣದಲ್ಲಿ ಬೆಟ್ಟದ ನೆಲ್ಲಿಕಾಯಿ ತುಂಬಾ ಪ್ರಾಮುಖ್ಯತೆ ಪಡೆದಿದೆ. ಚರ್ಮ ಮತ್ತು ಕೂದಲ ಆರೈಕೆಗೆ ಹೆಚ್ಚಾಗಿ ಬೆಟ್ಟದ ನೆಲ್ಲಿಕಾಯಿ ಬಳಕೆ ಮಾಡಲಾಗುತ್ತದೆ. ತಜ್ಞರು ಬೆಟ್ಟದ ನೆಲ್ಲಿಕಾಯಿಯನ್ನು ಆಹಾರದಲ್ಲಿ ಸೇರಿಸುವಂತೆ ಸಲಹೆ ನೀಡುತ್ತಾರೆ.

ಮುಂದೆ ಓದಿ ...
  • Share this:

    ಭಾರತೀಯ ಆಹಾರದ (Indian Food) ಅವಿಭಾಜ್ಯ ಅಂಗವೆಂದು (Part) ಉಪ್ಪಿನಕಾಯಿಯನ್ನು (Pickle) ಕರೆಯಲಾಗುತ್ತದೆ. ಊಟಕ್ಕೆ ಉಪ್ಪಿನಕಾಯಿ ಅನ್ನೋ ಮಾತೇ ಇದೆ. ಊಟಕ್ಕೆ (Food) ನಂಚಿಕೊಳ್ಳಲು ಸೈಡ್ ಗೆ ಉಪ್ಪಿನಕಾಯಿ ಇದ್ರೆ, ಊಟದ ಗಮ್ಮತ್ತೇ ಬೇರೆ. ಯಾರಾದ್ರೂ ಊಟಕ್ಕೆ ಬಂದಾಗ ಎಲ್ಲವನ್ನೂ ಬಡಿಸಿ, ಕೊನೆಗೆ ಉಪ್ಪಿನಕಾಯಿ ಇಲ್ಲ ಅಂದ್ರೆ, ಬಂದವರು ಉಪ್ಪಿನಕಾಯಿ ಇಲ್ವಾ ಅಂತಾ ಕೇಳಿಯೇ ಬಿಡ್ತಾರೆ. ರೈಸ್ ಜೊತೆ ಪಾಪಡ್ ಹಾಗೂ ಚಟ್ನಿ ತಿನ್ನುವುದು ರೂಢಿ. ಈ ಎಲ್ಲಾ ಪಾಕವಿಧಾನಗಳಲ್ಲಿ ಉಪ್ಪಿನಕಾಯಿಗೆ ವಿಶೇಷ ಸ್ಥಾನವಿದೆ. ಅದಾಗ್ಯೂ ಉಪ್ಪಿನಕಾಯಿಯಲ್ಲಿ ಹಲವು ವಿಧಗಳಿವೆ. ಅದರಲ್ಲಿ ಒಂದು ಬೆಟ್ಟದ ನೆಲ್ಲಿಕಾಯಿ ಉಪ್ಪಿನಕಾಯಿ (Gooseberry Pickle). ಬಹುತೇಕರ ಮನೆಯಲ್ಲಿ ಮಾವಿನಕಾಯಿ ಉಪ್ಪಿನಕಾಯಿ ಜೊತೆಗೆ ಬೆಟ್ಟದ ನೆಲ್ಲಿಕಾಯಿ ಉಪ್ಪಿನಕಾಯಿ ಕೂಡ ಇರುತ್ತದೆ.   


    ಬೆಟ್ಟದ ನೆಲ್ಲಿಕಾಯಿ ಉಪ್ಪಿನಕಾಯಿ ರೆಸಿಪಿ


    ಬೆಟ್ಟದ ನೆಲ್ಲಿಕಾಯಿ ಉಪ್ಪಿನಕಾಯಿ ಜೀರ್ಣಾಂಗ ವ್ಯವಸ್ಥೆ ಆರೋಗ್ಯವಾಗಿರಿಸುತ್ತದೆ. ಬೆಟ್ಟದ ನೆಲ್ಲಿಕಾಯಿ ಸಾಕಷ್ಟು ಆರೋಗ್ಯ ಪ್ರಯೋಜನ ಹೊಂದಿದೆ. ಶೀತ ವಾತಾವರಣದಲ್ಲಿ ಬೆಟ್ಟದ ನೆಲ್ಲಿಕಾಯಿ ತುಂಬಾ ಪ್ರಾಮುಖ್ಯತೆ ಪಡೆದಿದೆ. ಚರ್ಮ ಮತ್ತು ಕೂದಲ ಆರೈಕೆಗೆ ಹೆಚ್ಚಾಗಿ ಬೆಟ್ಟದ ನೆಲ್ಲಿಕಾಯಿ ಬಳಕೆ ಮಾಡಲಾಗುತ್ತದೆ.


    ತಜ್ಞರು ಬೆಟ್ಟದ ನೆಲ್ಲಿಕಾಯಿಯನ್ನು ಆಹಾರದಲ್ಲಿ ಸೇರಿಸುವಂತೆ ಸಲಹೆ ನೀಡುತ್ತಾರೆ. ಇಂದು ನಾವು ಎಣ್ಣೆ ಮುಕ್ತ ಉಪ್ಪಿನಕಾಯಿ ಪಾಕವಿಧಾನ ಹೇಳಲಿದ್ದೇವೆ.


    ಬೆಟ್ಟದ ನೆಲ್ಲಿಕಾಯಿ ಉಪ್ಪಿನಕಾಯಿ ತಿನ್ನಲು ತುಂಬಾ ರುಚಿ ಮತ್ತು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬೆಟ್ಟದ ನೆಲ್ಲಿಕಾಯಿ ಉಪ್ಪಿನಕಾಯಿ ಪಾಕವಿಧಾನ ತಿಳಿಯೋಣ.




    ಬೆಟ್ಟದ ನೆಲ್ಲಿಕಾಯಿ ಉಪ್ಪಿನಕಾಯಿ ತಯಾರಿಸಲು ಬೇಕಾಗುವ ಸಾಮಗ್ರಿಗಳು


    ಮಧ್ಯಮ ಗಾತ್ರದ ಹತ್ತು ಬೆಟ್ಟದ ನೆಲ್ಲಿಕಾಯಿ, ಕಲ್ಲು ಉಪ್ಪು ಒಂದು ಚಮಚ, ಅರಿಶಿನ ಪುಡಿ, ನೀರು ಒಂದೂವರೆ ಕಪ್, ಮೆಂತ್ಯ ಬೀಜಗಳು 2 ಟೀಸ್ಪೂನ್, ಜೀರಿಗೆ 1 ಟೀಸ್ಪೂನ್, ಸಾಸಿವೆ ಬೀಜಗಳು 1/4 ಟೀಸ್ಪೂನ್, ಒಣ ಕೆಂಪು ಮೆಣಸಿನಕಾಯಿ 12, ಇಂಗು ಪುಡಿ 1/2 ಟೀಸ್ಪೂನ್ ಬೇಕು.


    ಬೆಟ್ಟದ ನೆಲ್ಲಿಕಾಯಿ ಉಪ್ಪಿನಕಾಯಿ ಮಾಡುವ ವಿಧಾನ


    ಮೊದಲು ಬೆಟ್ಟದ ನೆಲ್ಲಿಕಾಯಿ ತೊಳೆದು ಪಕ್ಕಕ್ಕೆ ಇರಿಸಿ. ಈಗ ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ. ಅದು ಕುದಿಯಲು ಪ್ರಾರಂಭಿಸಿದಾಗ, ಅದರಲ್ಲಿ ಎಲ್ಲಾ ನೆಲ್ಲಿಕಾಯಿ ಮತ್ತು ಉಪ್ಪನ್ನು ಹಾಕಿ. 7 ನಿಮಿಷ ಬೇಯಿಸಲು ಬಿಡಿ.


    ನೆಲ್ಲಿಕಾಯಿ ಅತಿಯಾಗಿ ಬೇಯಿಸಬೇಡಿ ಮತ್ತು ಅರ್ಧ ಬೇಯಿಸಿದಾಗ ಉರಿಯನ್ನು ಆಫ್ ಮಾಡಿ. ನಂತರ ಅದನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.


    ಹುರಿಯಲು ಎಲ್ಲಾ ಪದಾರ್ಥಗಳನ್ನು ಪ್ರತ್ಯೇಕವಾಗಿ ಹುರಿಯಿರಿ. ನಂತರ ಹುರಿದ ಪದಾರ್ಥಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ಪಕ್ಕಕ್ಕೆ ಇಡಿ. ಬೆಟ್ಟದ ನೆಲ್ಲಿಕಾಯಿ ಸಂಪೂರ್ಣವಾಗಿ ತಣ್ಣಗಾದ ನಂತರ, ನಿಮ್ಮ ಸ್ವಚ್ಛವಾದ ಒಣ ಕೈಗಳಿಂದ ಒಂದೊಂದಾಗಿ ತೆಗೆದು ಬೀಜಗಳನ್ನು ತೆಗೆದು ಹಾಕಿ. ಒಣ ಮತ್ತು ಸ್ವಚ್ಛವಾದ ಪಾತ್ರೆ ತೆಗೆದುಕೊಳ್ಳಿ.


    ಈಗ ಮಿಕ್ಸಿ ಜಾರ್‌ನಲ್ಲಿ ನೆಲ್ಲಿಕಾಯಿಯನ್ನು ಬೇಯಿಸಲು ಬಳಸಿದ ನೀರನ್ನು ಸೇರಿಸಿ ಮತ್ತು ಎಲ್ಲವನ್ನೂ ನುಣ್ಣಗೆ ರುಬ್ಬಿ. ಪೇಸ್ಟ್ ಅನ್ನು ನೆಲ್ಲಿಕಾಯಿ ಜೊತೆ ಬೆರೆಸಿ. ನಂತರ ಮುಚ್ಚಳ ಮುಚ್ಚಿ ಮತ್ತು 35 ನಿಮಿಷ ಬಿಟ್ಟು, ಉಪ್ಪಿನಕಾಯಿಯನ್ನು ಫ್ರಿಡ್ಜ್‌ನಲ್ಲಿ ಇರಿಸಿ. ಬೆಟ್ಟದ ನೆಲ್ಲಿಕಾಯಿ ಉಪ್ಪಿನಕಾಯಿ ರೆಡಿಯಾಗಿದೆ. ಊಟಕ್ಕೆ ಬಳಸಿ.


    ಇದನ್ನೂ ಓದಿ: 40ರ ವಯಸ್ಸಿನಲ್ಲಿ ತೂಕ ಇಳಿಸಲು ನೀವು ಮಾಡಬೇಕಾಗಿರುವುದು ಇಷ್ಟೇ


    ಬೆಟ್ಟದ ನೆಲ್ಲಿಕಾಯಿ ಉಪ್ಪಿನಕಾಯಿ ಹೇಗೆ ಪ್ರಯೋಜನಕಾರಿ?


    ಬೆಟ್ಟದ ನೆಲ್ಲಿಕಾಯಿ ಉಪ್ಪಿನಕಾಯಿ ಕೊಲೆಸ್ಟ್ರಾಲ್ ಮುಕ್ತವಾಗಿದೆ. ಎಣ್ಣೆ ಮುಕ್ತವಾಗಿದೆ. ಹುರಿದ ಮಸಾಲೆ ಬಳಸಲಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


    ಇದು ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಪ್ರಯೋಜನಕಾರಿ. ಯಕೃತ್ತಿನ ಆರೋಗ್ಯ ಬಲಪಡಿಸುತ್ತದೆ. ಅಜೀರ್ಣ, ಗ್ಯಾಸ್ ಮತ್ತು ಹೊಟ್ಟೆ ನೋವು ಹೋಗುತ್ತದೆ. ರಕ್ತದೊತ್ತಡ ನಿಯಂತ್ರಿಸುತ್ತದೆ. ಆಹಾರದಲ್ಲಿ ಸೇರಿಸಿ ಮತ್ತು ಮಿತವಾಗಿ ತಿನ್ನಿರಿ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು