ತಂಪು ವಾತಾವರಣ (Cold Weather) ಕಾಯಿಲೆಗಳು (Disease) ಬೇಗ ಹರಡಲು ಕಾರಣವಾಗುತ್ತದೆ. ಶೀತವು ಬಾಧಿಸಿದಾಗ ಸಾಕಷ್ಟು ತೊಂದರೆ (Problem) ಉಂಟಾಗುತ್ತದೆ. ಚಳಿಗಾಲದಲ್ಲಿ ಕಫ, ಕೆಮ್ಮು, ನೆಗಡಿ ಸಮಸ್ಯೆ ಬಾಧಿಸುತ್ತವೆ. ಇದರ ಜೊತೆಗೆ ಇನ್ನೂ ಕೆಲವು ಆರೋಗ್ಯ ಸಮಸ್ಯೆಗಳು (Health Problems) ಕಾಡುತ್ತವೆ. ಶೀತ ದಿನಗಳಲ್ಲಿ ತಾಪಮಾನ ಕಡಿಮೆ ಆಗುತ್ತದೆ. ಹೀಗಾಗಿ ಚಳಿಗೆ ಜನರು ನಡುಗುತ್ತಾರೆ. ಹೀಗೆ ತಂಪಾದ ಗಾಳಿ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗೆ ಕಾರಣವಾಗುತ್ತದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳೆಂದರೆ ನೆಗಡಿ, ಕಫ, ಕೆಮ್ಮು, ಜ್ವರ. ಜೊತೆಗೆ ಸಂಧಿವಾತ ಸಮಸ್ಯೆ ಕೂಡ ಹಲವರನ್ನು ಕಾಡುತ್ತದೆ.
ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳು
ಕೆಲವೊಮ್ಮೆ ಹಳೆಯ ಗಾಯಗಳು, ಮೂಳೆಗಳ ನೋವು ಸಹ ಚಳಿಗಾಲದ ತಂಪು ವಾತಾವರಣದಲ್ಲಿ ಬಾಧಿಸುತ್ತದೆ. ಸಂಧಿವಾತ ಪ್ರಮುಖ ಸಮಸ್ಯೆ ಆಗಿದೆ. ಇದು ಜನರನ್ನು ಹಿಂಡಿ ಹಿಪ್ಪೆ ಮಾಡುತ್ತದೆ.
ಹಳೆಯ ಗಾಯಗಳಲ್ಲಿ ನೋವು ಮತ್ತು ಕೀಲು ನೋವು ಉಂಟಾಗುತ್ತದೆ. ಈ ಸಮಸ್ಯೆ ತಂಪು ವಾತಾವರಣದಲ್ಲಿ ಮತ್ತಷ್ಟು ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಯಾವ ಸಮಸ್ಯೆಗಳು ಹೆಚ್ಚಾಗುತ್ತವೆ? ಅದನ್ನು ತಪ್ಪಿಸಲು ಏನ್ ಮಾಡ್ಬೇಕು ಅನ್ನೋದನ್ನು ಇಲ್ಲಿ ನೋಡೋಣ.
ಶೀತ, ಕಫ ಮತ್ತು ಜ್ವರದ ಸಮಸ್ಯೆ
ಚಳಿಗಾಲವನ್ನು ಸಾಮಾನ್ಯವಾಗಿ ಶೀತ, ಕಫ, ಕೆಮ್ಮು, ನೆಗಡಿ ಯಾರನ್ನು ಬೇಕಾದ್ರೂ ಬಾಧಿಸಬಹುದು. ಈ ತಂಪು ವಾತಾವರಣದಲ್ಲಿ ಫ್ಲೂ ವೈರಸ್ಗಳು ಗಾಳಿಯ ಮೂಲಕ ಹರಡುತ್ತವೆ. ಚಳಿಗಾಲದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯು ಸಾಮಾನ್ಯಕ್ಕಿಂತ ಸ್ವಲ್ಪ ನಿಧಾನವಾಗಿರುತ್ತದೆ. ಹೀಗಾಗಿ ಈ ವೈರಸ್ ಗಳು ನಿಮಗೆ ಸೋಂಕು ತಗುಲಿಸುವ ಸಾಧ್ಯತೆ ಹೆಚ್ಚು.
ಈ ಸಮಸ್ಯೆ ತಪ್ಪಿಸಲು ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ ಸೇವಿಸಿ. ಸಾಕಷ್ಟು ನೀರು ಕುಡಿಯಿರಿ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಿ. ಇದು ಸೀಸನಲ್ ಆರೋಗ್ಯ ಸಮಸ್ಯೆಗಳಿಂದ ದೂರವಿಡಲು ಸಹಕಾರಿ.
ಒಣ ಚರ್ಮ ಸಮಸ್ಯೆ
ಇದು ಚಳಿಗಾಲದಲ್ಲಿ ಕಂಡು ಬರುವ ಅತ್ಯಂತ ಸಾಮಾನ್ಯ ಸಮಸ್ಯೆ. ಚರ್ಮ ಒಣಗುವುದು, ಬಿರುಕು ಬಿಡುವುದು, ತುರಿಕೆ, ರಕ್ತಸ್ರಾವ, ನೋವು ಮತ್ತು ಸೋಂಕು ಉಂಟಾಗುತ್ತದೆ. ಹಾಗಾಗಿ ಈ ಸಮಸ್ಯೆ ತೊಡೆದು ಹಾಕಲು ಚಳಿಗಾಲದಲ್ಲಿ ಮಾಯಿಶ್ಚರೈಸರ್ ಹಚ್ಚಿರಿ. ತ್ವಚೆಯ ಬಗ್ಗೆ ಕಾಳಜಿ ವಹಿಸಿ. ತೇವಾಂಶ ಚರ್ಮದಲ್ಲಿ ಇರುವಂತೆ ನೋಡಿಕೊಳ್ಳಿ. ಸೌಮ್ಯವಾದ ಆರ್ಧ್ರಕ ಸೋಪ್, ಕೈ ಲೋಷನ್ ಅಥವಾ ಪೆಟ್ರೋಲಿಯಂ ಜೆಲ್ಲಿ ತ್ವಚೆಗೆ ಅನ್ವಯಿಸಿ.
ಕೀಲು ನೋವು ಸಮಸ್ಯೆ
ಸಂಧಿವಾತ, ಕೀಲು ನೋವು ಸಮಸ್ಯೆ ರೋಗಿಗಳನ್ನು ಕಾಡುತ್ತದೆ. ತಾಪಮಾನ ಇಳಿಕೆಯು ಕೀಲು ನೋವಿಗೆ ಕಾರಣವಾಗುತ್ತದೆ. ಬೆಚ್ಚಗಿನ ಬಟ್ಟೆ ಧರಿಸಿ. ಚಳಿಗಾಲದಲ್ಲಿ ದೇಹ ಬೆಚ್ಚಗಿರಲು ಆಹಾರ ಮತ್ತು ಚೆನ್ನಾಗಿ ವ್ಯಾಯಾಮ ಮಾಡಿ.
ಶೀತದಿಂದ ಒಣ ತುಟಿ ಸಮಸ್ಯೆ
ಶುಷ್ಕ ಮತ್ತು ತಂಪಾದ ಗಾಳಿಯಿಂದಾಗಿ ತುಟಿಗಳು ಒಣಗುತ್ತವೆ. ಬಿರುಕು ಬಿಡುವುದು, ಸಿಪ್ಪೆ ಕೀಳುವ ಸಮಸ್ಯೆ ಉಂಟಾಗುತ್ತದೆ. ಇದಕ್ಕಾಗಿ ಸಾಕಷ್ಟು ಪೋಷಣೆ ನೀಡುವುದು ಮುಖ್ಯ. ನಿಯಮಿತ ವ್ಯಾಯಾಮ ಮಾಡಿ. ಮನೆಮದ್ದು ಮತ್ತು ವಿಶ್ರಾಂತಿ ತೆಗೆದುಕೊಳ್ಳಿ.
ಅಸ್ತಮಾ ಸಮಸ್ಯೆ
ಶೀತ ಹವಾಮಾನದಲ್ಲಿ ಅಸ್ತಮಾ ಸಮಸ್ಯೆ ಕಾಡುತ್ತದೆ. ಶ್ವಾಸಕೋಶ ಸಮಸ್ಯೆ ಉಂಟಾಗುತ್ತದೆ. ಚಳಿಗಾಲದಲ್ಲಿ ಉಸಿರಾಟ ಸಮಸ್ಯೆ ಉಂಟಾಗುತ್ತದೆ. ಗಾಳಿಯಲ್ಲಿ ಬಹಳಷ್ಟು ಅಲರ್ಜಿನ್ ಗಳಿವೆ. ಇದು ಅಸ್ತಮಾ ಉಂಟಾಗಲು ಮುಖ್ಯ ಕಾರಣವಾಗಿದೆ. ವಿಷಕಾರಿ ಅಂಶಗಳನ್ನು ಉಸಿರಾಡುವುದನ್ನು ತಪ್ಪಿಸಿ. ಮಾಸ್ಕ್ ಧರಿಸಿ. ಉತ್ತಮ ಆಹಾರ ಮತ್ತು ವ್ಯಾಯಾಮ ಮಾಡಿ.
ಇದನ್ನೂ ಓದಿ: ಎದೆಯುರಿ ಅಥವಾ ಆಸಿಡ್ ರಿಫ್ಲಕ್ಸ್ ಕಡಿಮೆ ಮಾಡಲು ಯಾವ ಭಂಗಿಯಲ್ಲಿ ಮಲಗಬೇಕು?
ಒತ್ತಡ ಸಮಸ್ಯೆ
ಅನೇಕ ಜನರು ಚಳಿಗಾಲದಲ್ಲಿ ಒತ್ತಡ ಸಮಸ್ಯೆ ಅನುಭವಿಸುತ್ತಾರೆ. ಇದನ್ನು ಸೀಸನಲ್ ಎಫೆಕ್ಟಿವ್ ಡಿಸಾರ್ಡರ್ ಎಂದು ಕರೆಯುತ್ತಾರೆ. ಒತ್ತಡ ಸಂಬಂಧಿ ಕಾಯಿಲೆಗಳು ಕಡಿಮೆ ಮಾಡಲು ಕ್ರಿಯಾಶೀಲರಾಗಿರಿ. ಏಕಾಗ್ರತೆ ಸಾಧಿಸಲು ಧ್ಯಾನ, ಯೋಗ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ