ತೂಕ ಇಳಿಕೆ (Weight Loss) ದೀರ್ಘಕಾಲದ ತಪಸ್ಸು. ತೂಕ ಕಳೆದುಕೊಳ್ಳುವುದು ಕಷ್ಟದ ಕೆಲಸ (Work). ವಿಶೇಷವಾಗಿ ಚಳಿಗಾಲದಲ್ಲಿ (Winter) ತೂಕ ಇಳಿಸುವುದು ತುಂಬಾ ಕಷ್ಟ. ಯಾಕಂದ್ರೆ ಶೀತದ ದಿನಗಳಲ್ಲಿ ಹಸಿವು ಹೆಚ್ಚಾಗುತ್ತದೆ. ಜೊತೆಗೆ ಸಿಕ್ಕಿದ್ದೆಲ್ಲಾ ತಿನ್ನುವ ಬಯಕೆ ಉಂಟಾಗುತ್ತದೆ. ತೂಕ ಇಳಿಸಲು ಜನರು (People) ಜಿಮ್, ವಾಕಿಂಗ್ (Walking), ಯೋಗ ಮಾಡಲು, ಬೆಳಗ್ಗೆ (Morning) ಬೇಗ ಏಳಲು ಆಲಸ್ಯ ತೋರುತ್ತಾರೆ. ಚಳಿಯಿದೆ ಹೇಗಪ್ಪಾ ಏಳುವುದು ಅಂತಾ ರಗ್ಗು ಹೊದ್ದು ಮಲಗುತ್ತಾರೆ. ಮತ್ತು ಜನರು ಬಹಳಷ್ಟು ತಿನ್ನುತ್ತಾರೆ. ತಂಪು ವಾತಾವರಣದಲ್ಲಿ ಜನರು ಹೆಚ್ಚಿನ ಕ್ಯಾಲೋರಿ ಅಂಶ ಹೊಂದಿರುವ ಹೆಚ್ಚಿನ ಪದಾರ್ಥ ಸೇವನೆ ಮಾಡುತ್ತಾರೆ. ಇದು ತೂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಚಳಿಗಾಲದಲ್ಲಿ ತೂಕ ಇಳಿಸಲು ಸಿಂಪಲ್ ಟಿಪ್ಸ್
ಚಳಿಗಾಲದಲ್ಲಿ ಹೆಚ್ಚಾಗಿ ಜನರು ಎಣ್ಣೆಯಿಂದ ಮಾಡಿ ಮತ್ತು ಕರಿದ ಪದಾರ್ಥ ಸೇವನೆ ಮಾಡ್ತಾರೆ. ಕ್ಯಾರೆಟ್ ಹಲ್ವಾ, ಬೆಣ್ಣೆ ದೋಸೆ, ಸಕ್ಕರೆ ಪದಾರ್ಥಗಳು, ಗುಲಾಬ್ ಜಾಮೂನ್, ಸಮೋಸಾ, ಚೋಲೆ ಭಟೂರ್, ಜಿಲೇಬಿ ಮುಂತಾದವನ್ನು ಸೇವನೆ ಮಾಡ್ತಾರೆ. ಇದನ್ನು ಹೆಚ್ಚಾಗಿ ನಿಯಮಿತವಾಗಿ ಸೇವನೆ ಮಾಡುತ್ತಾರೆ.
ಹೀಗಾಗಿ ತೂಕ ಹೆಚ್ಚುತ್ತಾ ಹೋಗುತ್ತದೆ. ಸಾಮಾನ್ಯವಾಗಿ ಇಂತಹ ಪದಾರ್ಥ ತಿನ್ನುವ ಬಯಕೆ ಶೀತ ದಿನಗಳಲ್ಲಿ ಹೆಚ್ಚಾಗುತ್ತದೆ. ಆದರೆ ಸ್ಥೂಲಕಾಯದ ಅಪಾಯ ಇರುವವರು ಈ ಪದಾರ್ಥಗಳಿಂದ ದೂರವಿರುವುದು ತುಂಬಾ ಉತ್ತಮ. ಚಳಿಗಾಲದಲ್ಲಿ ತಿನ್ನುವ ಸಿಹಿ ಅಥವಾ ಮಸಾಲೆಯುಕ್ತ ಆಹಾರವು ಕೊಬ್ಬನ್ನು ಹೆಚ್ಚಿಸುತ್ತದೆ.
ಹೊಟ್ಟೆಯ ಕೊಬ್ಬು ಹೆಚ್ಚಿಸುತ್ತದೆ. ಇದು ಸಾಮಾನ್ಯ ಸಮಸ್ಯೆ ಆಗಿದೆ. ಹಾಗಾದ್ರೆ ಚಳಿಗಾಲದಲ್ಲಿ ತೂಕ ಇಳಿಸಲು ಏನು ತಿನ್ನಬೇಕು ಎಂಬ ಬಗ್ಗೆ ನೀವು ಯೋಚನೆ ಮಾಡ್ತಿದ್ದರೆ, ಇಲ್ಲಿ ಕೆಲವು ಪದಾರ್ಥಗಳ ಬಗ್ಗೆ ಹೇಳಲಾಗಿದೆ. ಈ ಪದಾರ್ಥಗಳ ಸೇವನೆ ಆರೋಗ್ಯಕರ ಮತ್ತು ಕೊಬ್ಬನ್ನು ಹೆಚ್ಚಿಸುವುದಿಲ್ಲ.
ತೂಕ ಇಳಿಕೆ ಜರ್ನಿಯಲ್ಲಿ ಸೇರಿಸಬೇಕಾದ ಕೆಲವು ಪದಾರ್ಥಗಳು
ಪೌಷ್ಟಿಕ ತಜ್ಞರಾದ ಶಿಖಾ ಅಗರ್ವಾಲ್ ಶರ್ಮಾ ಅವರು ಚಳಿಗಾಲದಲ್ಲಿ ತೂಕ ಇಳಿಕೆ ಜರ್ನಿಯಲ್ಲಿ ಸೇರಿಸಬೇಕಾದ ಕೆಲವು ಪದಾರ್ಥಗಳ ಬಗ್ಗೆ ಹೇಳಿದ್ದಾರೆ. ದೇಹವನ್ನು ಕೊಬ್ಬು-ಮುಕ್ತ ಮಾಡುವ ಹಾಗೂ ದೇಹವನ್ನು ಹೈಡ್ರೀಕರಿಸಲು ಸಹಕಾರಿ ಆಗುವ ಕೆಲ ತರಕಾರಿಗಳ ಬಗ್ಗೆ ಹೇಳಿದ್ದಾರೆ.
ಇವುಗಳು ಕಡಿಮೆ ಕೊಬ್ಬಿನ ಆಹಾರಗಳು ಆಗಿವೆ. ಹೀಗಾಗಿ ದೀರ್ಘಕಾಲ ಹೊಟ್ಟೆ ತುಂಬಿಸಿಡುತ್ತವೆ. ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಹಾಗೂ ತೂಕ ನಷ್ಟಕ್ಕೂ ಸಹಕಾರಿ ಆಗಿವೆ. ಹಾಗಾದ್ರೆ ಆ ಪದಾರ್ಥಗಳು ಯಾವುವು ಎಂಬುದರ ಬಗ್ಗೆ ಇಲ್ಲಿ ತಿಳಿಯೋಣ.
ಬೀಟ್ರೂಟ್
ಒಂದು ವರದಿ ಪ್ರಕಾರ, ನೂರು ಗ್ರಾಂ ಬೀಟ್ರೂಟ್ ಸೇವನೆಯಿಂದ ಕೇವಲ 43 ಕ್ಯಾಲೋರಿ ಮತ್ತು 0.2 ಗ್ರಾಂ ಕೊಬ್ಬು ಮತ್ತು 10 ಗ್ರಾಂ ಕಾರ್ಬೋಹೈಡ್ರೇಟ್ ಸಿಗುತ್ತದೆ. ಇದು ತೂಕ ಕಡಿಮೆ ಮಾಡುತ್ತದೆ. ಹಾಗೂ ದೇಹಕ್ಕೆ ಹಲವು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಕ್ಯಾರೆಟ್
ಚಳಿಗಾಲದ ಸೂಪರ್ ಫುಡ್ ಆಗಿದೆ ಕ್ಯಾರೆಟ್. ಉತ್ತಮ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಕ್ಯಾರೆಟ್ ತರಕಾರಿಯು ಸಾಕಷ್ಟು ಪ್ರಮಾಣದಲ್ಲಿ ಫೈಬರ್ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಹೊಂದಿದೆ. ಇದು ತೂಕ ಇಳಿಕೆಗೆ ಸಹಕಾರಿ. ಮತ್ತು ಉತ್ತಮ ಆಯ್ಕೆ ಆಗಿದೆ.
ಹಸಿರು ಸೊಪ್ಪಿನ ತರಕಾರಿ ಸೇವನೆ
ತೂಕ ಇಳಿಕೆಗೆ ಆಹಾರದಲ್ಲಿ ಫೈಬರ್ ಪ್ರಮಾಣ ಹೆಚ್ಚಿಸಬೇಕು. ಇದಕ್ಕಾಗಿ ಹಸಿರು ಎಲೆಗಳ ತರಕಾರಿ, ಹೆಚ್ಚಿನ ಫೈಬರ್ ಆಹಾರ ಸೇವನೆ ಮಾಡಿ. ಪಾಲಕ್, ಸಾಸಿವೆ ಎಲೆಗಳು ಮತ್ತು ಮೆಂತ್ಯ ಎಲೆ ತರಕಾರಿಗಳು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅವುಗಳು ಕಡಿಮೆ ಕ್ಯಾಲೊರಿ ಹೊಂದಿವೆ.
ಮೂಲಂಗಿ
ಕಡಿಮೆ ಕ್ಯಾಲೋರಿ ಹೊಂದಿರುವ ತರಕಾರಿ ಮೂಲಂಗಿ. ಅದು ಸಾಕಷ್ಟು ಫೈಬರ್ ಒದಗಿಸುತ್ತದೆ. ಫೈಬರ್, ಉತ್ತಮ ಜೀರ್ಣಕ್ರಿಯೆಗೆ ಸಹಕಾರಿ ಆಗಿದೆ. ಜೊತೆಗೆ ಹೊಟ್ಟೆಯ ಕೊಬ್ಬು ಕಡಿಮೆ ಮಾಡುತ್ತದೆ. ಮೂಲಂಗಿ ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಲಬದ್ಧತೆ, ಅಜೀರ್ಣ ಸಮಸ್ಯೆ ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಜೋಳದ ರೊಟ್ಟಿ ಮಾತ್ರ ಅಲ್ಲ, ದೋಸೆ ಕೂಡ ಬಹಳ ರುಚಿಕರ - ಇಲ್ಲಿದೆ ನೋಡಿ ರೆಸಿಪಿ
ಪೇರಳೆ ಹಣ್ಣು
ಪೇರಳೆ ಹಣ್ಣು ನಾರಿನ ಪ್ರಮಾಣ ಹೊಂದಿದೆ. ಈ ಹಣ್ಣನ್ನು ಸೇವಿಸಿದ್ರೆ ತೂಕ ಕಡಿಮೆ ಮಾಡಲು ಸಹಕಾರಿ. ಕಡಿಮೆ ಕ್ಯಾಲೋರಿ ಆಹಾರವು ಜೀರ್ಣಕ್ರಿಯೆ ಮತ್ತು ಚಯಾಪಚಯ ಸುಧಾರಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ