ಚಳಿಗಾಲದಲ್ಲಿ (Winter) ಆಹಾರ (Food) ಪದ್ಧತಿ ಸಾಕಷ್ಟು ಬದಲಾಗುತ್ತದೆ. ಚಳಿಗಾಲದಲ್ಲಿ ದೇಹವನ್ನು (Body) ಬೆಚ್ಚಗಿಡುವ ಪದಾರ್ಥಗಳ (Ingredients) ಸೇವನೆ ಮಾಡುವುದು ತುಂಬಾ ಮುಖ್ಯ. ಹಾಗೂ ಋತುಮಾನದ ಕಾಯಿಲೆ ತಡೆಯುವ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಸಹ ಮುಖ್ಯವಾಗುತ್ತದೆ. ಪ್ರತಿಯೊಂದು ಮನೆಗಳಲ್ಲಿ ಮಸಾಲಾ ಪದಾರ್ಥ ಬಳಕೆ ಮಾಡ್ತಾರೆ. ಈ ಮಸಾಲಾ ಪದಾರ್ಥಗಳು ನೈಸರ್ಗಿಕವಾಗಿ ದೇಹವನ್ನು ಬೆಚ್ಚಗಿಡುತ್ತವೆ. ಮಸಾಲಾ ಪದಾರ್ಥಗಳಲ್ಲಿ ಜೀರಿಗೆಯು (Jeera) ಅಗ್ರ ಸ್ಥಾನ ಪಡೆದಿದೆ. ಸಾಕಷ್ಟು ಪಾಕವಿಧಾನಗಳಲ್ಲಿ ಜೀರಿಗೆಯನ್ನು ಮುಖ್ಯವಾಗಿ ಬಳಕೆ ಮಾಡ್ತಾರೆ. ಒಗ್ಗರಣೆಗೆ ಜೀರಿಗೆ ಇಲ್ಲದಿದ್ದರೆ ಅಡುಗೆಯೇ ಅಪೂರ್ಣವೆನ್ನಿಸುತ್ತದೆ. ಭಾರತೀಯ ಆಹಾರದಲ್ಲಿ ಮತ್ತು ಆಹಾರದ ನಂತರವೂ ಜೀರಿಗೆ ಸೇವನೆ ಮಾಡ್ತಾರೆ.
ಜೀರ್ಣಕ್ರಿಯೆ ಮತ್ತು ಆರೋಗ್ಯಕ್ಕೆ ಜೀರಿಗೆ ಬಳಕೆ
ಇದು ಆಹಾರಕ್ಕೆ ವಿಶಿಷ್ಟ ಪರಿಮಳ ನೀಡುತ್ತದೆ. ಹಾಗೂ ಜೀರ್ಣಕ್ರಿಯೆಗೂ ಸಹಕಾರಿ ಆಗಿದೆ. ಜೊತೆಗೆ ಆಯುರ್ವೇದದಲ್ಲಿ ಅನೇಕ ಜೀರ್ಣಕಾರಿ ಸಮಸ್ಯೆ ಹೋಗಲಾಡಿಸಲು ಜೀರಿಗೆ ಸೇವನೆ ಮಾಡಲು ತಿಳಿಸುತ್ತಾರೆ. ಜೀರಿಗೆಯು ಹಲವು ಆರೋಗ್ಯ ಪ್ರಯೋಜನ ನೀಡುತ್ತದೆ. ಜೀರಿಗೆಯಲ್ಲಿರುವ ಪೋಷಕಾಂಶಗಳು ಆರೋಗ್ಯ ಕಾಪಾಡುತ್ತವೆ.
ಜೀರಿಗೆ ಕಷಾಯವು ಶೀತ ಮತ್ತು ಕೆಮ್ಮು ಹಾಗೂ ನಿರ್ವಿಶೀಕರಣ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ಜೀರಿಗೆಯು ಚಯಾಪಚಯ ಹೆಚ್ಚಿಸಲು ಸಹಾಯ ಮಾಡುತ್ತದೆ. ಜೀರಿಗೆಯಲ್ಲಿ ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಮೈಕ್ರೋಬಿಯಲ್ ಮತ್ತು ಆ್ಯಂಟಿ ಇಂಫ್ಲಮೇಟರಿ ಗುಣವಿದೆ. ಜೀರಿಗೆಯು ಕಡಿಮೆ ಕೊಬ್ಬು, ಸೋಡಿಯಂ ಮತ್ತು ಕಡಿಮೆ ಕೊಲೆಸ್ಟ್ರಾಲ್ ಹೊಂದಿದೆ.
ಚಳಿಗಾಲದಲ್ಲಿ ಜೀರಿಗೆ ಬಳಕೆ ಎಷ್ಟು ಪ್ರಯೋಜನಕಾರಿ?
ಹಾನಿಕಾರಕ ಸ್ವತಂತ್ರ ರಾಡಿಕಲ್ಸ್ ತೆಗೆದು ಹಾಕುತ್ತದೆ
ಚಳಿಗಾಲದಲ್ಲಿ ಜೀರಿಗೆಯನ್ನು ಆಹಾರದಲ್ಲಿ ಮತ್ತು ಆಹಾರದ ನಂತರ ಬಳಕೆ ಮಾಡಿದರೆ ಹಲವು ಪ್ರಯೋಜನ ನೀಡುತ್ತದೆ. ಜೀರಿಗೆಯು ವಿಟಮಿನ್ ಎ, ಸಿ, ತಾಮ್ರ ಮತ್ತು ಮ್ಯಾಂಗನೀಸ್ನ ಉತ್ತಮ ಮೂಲ. ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಹಾಗೂ ದೇಹದಿಂದ ಹಾನಿಕಾರಕ ಸ್ವತಂತ್ರ ರಾಡಿಕಲ್ಸ್ ತೆಗೆದು ಹಾಕಲು ಪ್ರಯೋಜನಕಾರಿ ಆಗಿದೆ ಎಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಬಯೋಟೆಕ್ನಾಲಜಿ ಹೇಳಿದೆ.
ಸ್ಥೂಲಕಾಯ ಕಡಿಮೆ ಮಾಡಲು ಸಹಕಾರಿ
ಚಳಿಗಾಲದಲ್ಲಿ ಜೀರಿಗೆ ಸೇವನೆ ಆರೋಗ್ಯ ಸಮಸ್ಯೆ ಕಡಿಮೆ ಮಾಡುತ್ತದೆ. ಹೊಟ್ಟೆಯ ಅಸ್ವಸ್ಥತೆ ಕಡಿಮೆ ಮಾಡುತ್ತದೆ. ಪ್ರತಿದಿನ ಬೆಳಗ್ಗೆ ಜೀರಿಗೆ ನೀರನ್ನು ಕುಡಿದರೆ ತೂಕ ಇಳಿಕೆ ಸುಲಭವಾಗುತ್ತದೆ. ಜೀರಿಗೆ ಉರಿಯೂತದ ಗುಣಲಕ್ಷಣ ಹೊಂದಿದ್ದು, ದೇಹದಲ್ಲಿ ಉಂಟಾಗುವ ಯಾವುದೇ ರೀತಿಯ ಊತವನ್ನು ತೆಗೆದು ಹಾಕುತ್ತದೆ. ಜೀರಿಗೆ ಕಷಾಯ ಸೇವನೆ ಅಸ್ವಸ್ಥತೆ ತಡೆಯುತ್ತದೆ.
ಜೀರ್ಣಕ್ರಿಯೆ ಸುಧಾರಿಸುತ್ತದೆ
ಜೀರಿಗೆ ನೀರು ಸೇವಿಸಿದರೆ ಜೀರ್ಣಕ್ರಿಯೆಗೆ ಉತ್ತೇಜನ ಸಿಗುತ್ತದೆ. ಕರುಳಿನ ಚಲನೆ ಸುಧಾರಿಸುತ್ತದೆ. ಇದು ಕಿಣ್ವಗಳನ್ನು ಸ್ರವಿಸುತ್ತದೆ. ದೇಹದ ಸಕ್ಕರೆ, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಒಡೆಯುವುದರ ಜೊತೆಗೆ ಕರುಳಿನ ಆರೋಗ್ಯ ಕಾಪಾಡುತ್ತದೆ.
ದೀರ್ಘಕಾಲ ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ
ಜೀರಿಗೆ ನೀರು ಹಸಿವು ಮತ್ತು ಕಡು ಬಯಕೆ ನಿಗ್ರಹಿಸುತ್ತದೆ. ತೂಕ ಇಳಿಕೆಗೆ ದೀರ್ಘಕಾಲ ಹೊಟ್ಟೆ ತುಂಬಿಸಿದ ಭಾವನೆ ಇರುತತ್ದೆ. ಬೆಳಗ್ಗೆ ಜೀರಿಗೆ ನೀರಿನ ಸೇವನೆ ಆರೋಗ್ಯ ಹೆಚ್ಚಿಸುತ್ತದೆ.
ಇದನ್ನೂ ಓದಿ: ಚಳಿಗಾಲಕ್ಕೆ ರುಚಿರುಚಿ ಜಿಲೇಬಿ ಸವಿಯಿರಿ; ಇಲ್ಲಿದೆ ಸುಲಭ ರೆಸಿಪಿ
ಮುಟ್ಟಿನ ನೋವಿನಿಂದ ಪರಿಹಾರ ನೀಡುತ್ತದೆ
ಆಯುರ್ವೇದದ ಪ್ರಕಾರ, ಜೀರಿಗೆ ಮುಟ್ಟಿನ ಸೆಳೆತ ಕಡಿಮೆ ಮಾಡುತ್ತದೆ. ಒಂದು ಚಮಚ ಜೀರಿಗೆಯನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ದಿನದಲ್ಲಿ ಒಮ್ಮೆ ಸೇವಿಸಿದರೆ ರಿಲೀಫ್ ಸಿಗುತ್ತೆ. ಜೀರಿಗೆಯ ಅತಿಯಾದ ಸೇವನೆ ತಪ್ಪಿಸಿ. ಇದು ಅತಿಸಾರ ಮತ್ತು ಅಜೀರ್ಣ, ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ