• Home
  • »
  • News
  • »
  • lifestyle
  • »
  • Winter Foods: ಚಳಿಗಾಲದಲ್ಲಿ ಆರೋಗ್ಯಕ್ಕೆ ಹಾನಿ ಮಾಡುವ ಆಹಾರ ಪದಾರ್ಥಗಳಿವು

Winter Foods: ಚಳಿಗಾಲದಲ್ಲಿ ಆರೋಗ್ಯಕ್ಕೆ ಹಾನಿ ಮಾಡುವ ಆಹಾರ ಪದಾರ್ಥಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಳಿಗಾಲದಲ್ಲಿ ಕೆಲವು ಪದಾರ್ಥಗಳ ಸೇವನೆ ಜ್ವರ ಮತ್ತು ಸೋಂಕಿನಂತಹ ಅಪಾಯಕಾರಿ ಕಾಯಿಲೆಗೆ ಕಾರಣವಾಗುತ್ತದೆ. ಹಾಗಾಗಿ ಚಳಿಗಾಲದಲ್ಲಿ ಮುಖ್ಯವಾಗಿ ಆಹಾರ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ತಜ್ಞರು ಸೂಚನೆ ನೀಡುತ್ತಾರೆ. ಆಹಾರದಲ್ಲಿ ಈ ಹಾನಿಕಾರಕ ಆಹಾರ ಪದಾರ್ಥ ಸೇರಿಸುವುದನ್ನು ಸಂಪೂರ್ಣವಾಗಿ ತಪ್ಪಿಸಿ ಅಂತಾರೆ ತಜ್ಞರು.

ಮುಂದೆ ಓದಿ ...
  • Share this:

    ಚಳಿಗಾಲದಲ್ಲಿ (Winter) ಸ್ವಲ್ಪ ಎಚ್ಚರ ತಪ್ಪಿದರೂ ಅನಾರೋಗ್ಯ (Unhealth) ಕಾಡುತ್ತದೆ. ಚಳಿಗಾಲದಲ್ಲಿ ಹಲವು ಆರೋಗ್ಯ ಸಮಸ್ಯೆಗಳು (Health Problems) ಬಾಧಿಸುತ್ತವೆ. ತ್ವಚೆಯ ಸಮಸ್ಯೆಯಿಂದ (Skin Problem) ಹಿಡಿದು, ಉಸಿರಾಟ, ಅಸ್ತಮಾ, ಶೀತ, ನೆಗಡಿ ಸೇರಿದಂತೆ ಕೆಲವೊಮ್ಮೆ ಹೊಟ್ಟೆ ಸಂಬಂಧಿತ ಸಮಸ್ಯೆ ಕೂಡ ಕಾಡುತ್ತವೆ. ಹಾಗಾಗಿ ಚಳಿಗಾಲದಲ್ಲಿ ಕೆಲವು ಪ್ರಮುಖ ಆರೋಗ್ಯ ಸಲಹೆ ಫಾಲೋ ಮಾಡುವುದು ತುಂಬಾ ಮುಖ್ಯ. ಶೀತ ವಾತಾವರಂ ಮತ್ತು ವ್ಯಕ್ತಿ ನೆಗಡಿ ಮತ್ತು ಶೀತದಿಂದ ಬಳಲುತ್ತಿದ್ದರೆ, ಕೆಲವು ಪದಾರ್ಥಗಳ ಸೇವನೆ ಜ್ವರ ಮತ್ತು ಸೋಂಕಿನಂತಹ ಅಪಾಯಕಾರಿ ಕಾಯಿಲೆಗೆ ಕಾರಣವಾಗುತ್ತದೆ. ಹಾಗಾಗಿ ನಿಮ್ಮ ಆಹಾರದಲ್ಲಿ ಈ ಹಾನಿಕಾರಕ ಆಹಾರ ಪದಾರ್ಥ ಸೇರಿಸುವುದನ್ನು ಸಂಪೂರ್ಣವಾಗಿ ತಪ್ಪಿಸಿ ಅಂತಾರೆ ತಜ್ಞರು.


    ಚಳಿಗಾಲದಲ್ಲಿ ದೇಹದ ಆರೋಗ್ಯಕ್ಕೆ ಅಪಾಯಕಾರಿ ಈ ಪದಾರ್ಥಗಳು!


    ಚಳಿಗಾಲದಲ್ಲಿ ಮುಖ್ಯವಾಗಿ ಆಹಾರ  ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ತಜ್ಞರು ಸೂಚನೆ ನೀಡುತ್ತಾರೆ. ಚಳಿಗಾಲದಲ್ಲಿ ನಿಮ್ಮ ಆಹಾರ ಪದ್ಧತಿಯನ್ನು ಏಕೆ ಬದಲಾಯಿಸಬೇಕು ಎಂಬ ಪ್ರಶ್ನೆ ನಿಮ್ಮ ಮನಸ್ಸಲ್ಲಿದ್ದರೆ ಅದಕ್ಕೆ ತಜ್ಞರ ಉತ್ತರ ಹೀಗಿದೆ.


    ಪ್ರತಿ ಋತುವಿಗೆ ತನ್ನದೇ ಆದ ವಿಶಿಷ್ಟತೆ ಇದೆ. ಇದಕ್ಕೆ ವಿರುದ್ಧವಾಗಿ ತಿನ್ನುವ ಅಭ್ಯಾಸವು ನಿಮ್ಮನ್ನು ಅಸ್ವಸ್ಥಗೊಳಿಸಲು ಕಾರಣವಾಗುತ್ತದೆ ಅಂತಾರೆ ತಜ್ಞರು. ಹಾಗಾಗಿ ಶೀತ ಋತುವಿನಲ್ಲಿ ಕೆಲವು ಆಹಾರ ಪದಾರ್ಥ ತಿನ್ನುವುದನ್ನು ತಪ್ಪಿಸಬೇಕು. ಇದು ತಂಪಾಗಿಸುವ ಪರಿಣಾಮ ಹೊಂದಿದೆ. ಹಾಗಾಗಿ ಈ ಆಹಾರ ಪದಾರ್ಥಗಳ ಬದಲು ನೀವು ಬೇರೆ ಆಹಾರ ಸೇವಿಸುವುದು ಉತ್ತಮ. ಅದು ದೇಹಕ್ಕೆ ಶಾಖವನ್ನು ನೀಡುತ್ತದೆ.




    ಚಳಿಗಾಲದಲ್ಲಿ ಆದಷ್ಟು ಮೊಸರು ಸೇವನೆ ತಪ್ಪಿಸಿ


    ಚಳಿಗಾಲದಲ್ಲಿ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ನಿಧಾನವಾಗುತ್ತದೆ. ಹೀಗಾಗಿ ನೀವು ಸೋಂಕುಗಳಿಗೆ ಸುಲಭವಾಗಿ ತುತ್ತಾಗುತ್ತೀರಿ. ಅಂತಹ ವೇಳೆ ನೀವು ಮೊಸರು ಅಥವಾ ತಣ್ಣನೆಯ ಆಹಾರ ಸೇವನೆ ತಪ್ಪಿಸಿ. ಶ್ವಾಸಕೋಶದ ಕಾಯಿಲೆಗೆ ತುತ್ತಾಗಬಹುದು. ಇದು ಕೆಮ್ಮು, ನೆಗಡಿ ಮತ್ತು ತಲೆನೋವು ಉಂಟು ಮಾಡುತ್ತದೆ.


    ಹಾಲಿನ ಉತ್ಪನ್ನಗಳು


    ಆಯುರ್ವೇದದ ಪ್ರಕಾರ, ಹಾಲು ಅಥವಾ ಅದರಿಂದ ತಯಾರಿಸಿದ ಡೈರಿ ಉತ್ಪನ್ನಗಳು ಲೋಳೆ ಉತ್ಪತ್ತಿ ಮಾಡುತ್ತವೆ. ಹಾಗಾಗಿ ನಿಮ್ಮ ಶ್ವಾಸಕೋಶಗಳು ದುರ್ಬಲವಾಗಿದ್ದರೆ ಅಥವಾ ನೀವು ಆಗಾಗ್ಗೆ ಕೆಮ್ಮು ಮತ್ತು ಶೀತ ಹೊಂದಿದ್ದರೆ ಈ ಉತ್ಪನ್ನಗಳನ್ನು ಸೀಮಿತ ಪ್ರಮಾಣದಲ್ಲಿ ಸೇವನೆ ಮಾಡಿ.


    ಸಲಾಡ್ ಮತ್ತು ಹಸಿ ತರಕಾರಿ ಸೇವನೆ


    ಸಲಾಡ್‌ಗಳು ಮತ್ತು ಹಸಿ ತರಕಾರಿಗಳು ತಂಪಾಗಿಸುವ ಪರಿಣಾಮ ಹೊಂದಿವೆ. ಇದು ನಿಮ್ಮ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಈ ಆಹಾರಗಳು ಅಸಿಡಿಟಿ ಮತ್ತು ವಾಯು ಮುಂತಾದ ಸಮಸ್ಯೆ ಉಂಟು ಮಾಡುತ್ತವೆ.


    ನೀವು ಸಲಾಡ್ ತಿನ್ನಲು ಬಯಸಿದರೆ, ಮೂಲಂಗಿ, ಕ್ಯಾರೆಟ್, ಕಾಲೋಚಿತ ತರಕಾರಿ ಸೇರಿಸಿ. ಇವು ಚಳಿಗಾಲದ ಪದಾರ್ಥಗಳಾಗಿವೆ.


    ಐಸ್ ಮತ್ತು ತಂಪು ಪಾನೀಯಗಳು


    ಹವಾಮಾನ ತಂಪಾಗಿರುವಾಗ ನೀವು ಐಸ್ ಜ್ಯೂಸ್ ಅಥವಾ ತಂಪು ಪಾನೀಯ ಸೇವಿಸಿದರೆ ಅದು ಹಾನಿ ಉಂಟು ಮಾಡುತ್ತದೆ. ಅದೇ ವೇಳೆ ಬಾಟಲ್ ಮತ್ತು ಕಾರ್ಬೊನೇಟೆಡ್ ಪಾನೀಯಗಳು ರಕ್ತದ ಸಕ್ಕರೆ ಪ್ರಮಾಣ ಹೆಚ್ಚಿಸುತ್ತವೆ. ಇದು ನಂತರ ಮಧುಮೇಹಕ್ಕೆ ಕಾರಣವಾಗಬಹುದು. ಹಣ್ಣಿನ ರಸದ ಬದಲಿಗೆ ತಾಜಾ ಹಣ್ಣು ಸೇವಿಸಿ.


    ಸಿಹಿ ಪದಾರ್ಥ ಸೇವನೆ ಬಿಟ್ಟು ಬಿಡಿ


    ಸಿಹಿ ತಿಂಡಿ ಸೇವನೆ ಮಾಡುವುದು ರೋಗ ನಿರೋಧಕ ಶಕ್ತಿ ದುರ್ಬಲವಾಗಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ಪುಡಿಂಗ್ ಅಥವಾ ಸಿಹಿ ತಿಂಡಿ ಸೇವನೆ ಕಡಿಮೆ ಮಾಡಿ ಇಲ್ಲವೇ ಬಿಟ್ಟು ಬಿಡಿ. ಸಕ್ಕರೆ ಸೇವನೆ ದೇಹದಲ್ಲಿ ಉರಿಯೂತ ಉಂಟು ಮಾಡುತ್ತದೆ. ಇದು ನೋವುಂಟು ಮಾಡುತ್ತದೆ.


    ಇದನ್ನೂ ಓದಿ: ಅಸ್ತಮಾ ಸಮಸ್ಯೆ, ಯಕೃತ್ತಿನ ಆರೋಗ್ಯಕ್ಕೆ ಸೇವಿಸಿ ಗ್ರೀನ್ ಆ್ಯಪಲ್!


    ಕೆಂಪು ಮಾಂಸ ಸೇವನೆ


    ಕೆಂಪು ಮಾಂಸ ತಿನ್ನುವುದು ಟೇಸ್ಟಿ ಮತ್ತು ಬಿಸಿಯಾಗಿರುತ್ತದೆ. ಆದರೆ ಇದು ಹೃದಯಕ್ಕೆ ಮತ್ತು ಆರೋಗ್ಯಕ್ಕೆ ಹಾನಿಕರ. ಯಾವುದೇ ಋತುವಿನಲ್ಲಿ ಸೇವಿಸಬೇಡಿ.

    Published by:renukadariyannavar
    First published: