ದೇಹವು (Body) ಪ್ಯೂರಿನ್ ಎಂಬ ವಸ್ತುವನ್ನು ಚಯಾಪಚಯ ಮಾಡಿದಾಗ ದೇಹದಲ್ಲಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಆಗ ಯೂರಿಕ್ ಆಮ್ಲವು (Uric Acid) ರೂಪುಗೊಳ್ಳುತ್ತದೆ. ಪ್ಯೂರಿನ್ ಎಂಬುದು ದೇಹದಲ್ಲಿ ನೈಸರ್ಗಿಕವಾಗಿ (Naturally) ಕಂಡು ಬರುವ ವಸ್ತು ಆಗಿದೆ. ಇದರ ಚಯಾಪಚಯದಿಂದ ಯೂರಿಕ್ ಆ್ಯಸಿಡ್ ಸಾಮಾನ್ಯವಾಗಿ ರೂಪುಗೊಳ್ಳುತ್ತದೆ. ನಾವು ಸೇವಿಸುವ ವಿವಿಧ ಆಹಾರಗಳಲ್ಲಿ (Foods) ಫ್ಯೂರಿನ್ ಅಂಶ ಕಂಡು ಬರುತ್ತದೆ. ಹೀಗೆ ರೂಪುಗೊಳ್ಳುವ ಯೂರಿಕ್ ಆಮ್ಲವು ಮೂತ್ರ ಮಾಡಿದಾಗ ಹೊರಗೆ ಹೋಗುತ್ತದೆ. ಒಂದು ವೇಳೆ ಮೂತ್ರ ವಿಸರ್ಜನೆಯಲ್ಲಿ ಯೂರಿಕ್ ಆಮ್ಲ ಹೊರಗೆ ಹೋಗದಿದ್ದರೆ, ಯೂರಿಕ್ ಆಮ್ಲವನ್ನು ಮೂತ್ರಪಿಂಡಗಳು ಹೊರಗೆ ಹಾಕಲು ಸಾಧ್ಯವಾಗದೇ ಹೋದ್ರೆ ದೇಹದಲ್ಲಿ ಅದರ ಮಟ್ಟ ಹೆಚ್ಚಾಗುತ್ತದೆ.
ದೇಹದಲ್ಲಿ ಹೆಚ್ಚಿನ ಯೂರಿಕ್ ಆಮ್ಲವು ಹಲವು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ದೇಹದಲ್ಲಿ ಹೆಚ್ಚಾಗುವ ಯೂರಿಕ್ ಆ್ಯಸಿಡ್ ಸಮಸ್ಯೆಯು, ಗೌಟ್, ಮೂತ್ರಪಿಂಡದಲ್ಲಿ ಕಲ್ಲು ಸೇರಿದಂತೆ ಹಲವು ಸಮಸ್ಯೆ ಉಂಟು ಮಾಡುತ್ತದೆ.
ಚಳಿಗಾಲದಲ್ಲಿ ಯೂರಿಕ್ ಆಮ್ಲದಿಂದ ಆರೋಗ್ಯ ಸಮಸ್ಯೆ ಹೆಚ್ಚುತ್ತದೆ
ಯೂರಿಕ್ ಆಮ್ಲ ಸಮಸ್ಯೆಯು ಚಳಿಗಾಲದಲ್ಲಿ ಹೆಚ್ಚು ಆರೋಗ್ಯ ಸಮಸ್ಯೆ ತಂದೊಡ್ಡುತ್ತದೆ. ಯಾಕಂದ್ರೆ ಯೂರಿಕ್ ಆಮ್ಲವು ದೇಹದಲ್ಲಿ ಹಲವು ತೊಂದರೆ ಉಂಟು ಮಾಡುತ್ತದೆ. ಮೈಯಲ್ಲಿ ನೋವು, ಬಿಗಿತ, ಶೀತ, ಸಂಧಿವಾತ, ಕೈಕಾಲು ನೋವು ಸೇರಿದಂತೆ ಹಲವು ತೊಂದರೆಗಳು ಕಾಣಿಸುತ್ತವೆ.
ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ
ಚಳಿಗಾಲದಲ್ಲಿ ಯೂರಿಕ್ ಆಮ್ಲದ ಹೆಚ್ಚಳ ಆರೋಗ್ಯ ಸಮಸ್ಯೆಯನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಅನಾರೋಗ್ಯ ಹೊಂದಿರುವವರು ಮತ್ತು ಯೂರಿಕ್ ಆಮ್ಲ ತೊಂದರೆ ಅನುಭವಿಸುತ್ತಿರುವವರು ಚಳಿಗಾಲದಲ್ಲಿ ಆಹಾರ ಮತ್ತು ಪಾನೀಯದ ಬಗ್ಗೆ ಹೆಚ್ಚಿನ ಹಾಗೂ ವಿಶೇಷ ಕಾಳಜಿ ವಹಿಸಬೇಕು. ನಾವು ತಿನ್ನುವ ಹಲವು ಆಹಾರ ಪದಾರ್ಥಗಳು ಯೂರಿಕ್ ಆಮ್ಲ ಸಮಸ್ಯೆ ಹೆಚ್ಚಿಸುತ್ತವೆ.
ಯೂರಿಕ್ ಆಮ್ಲದಿಂದ ಯಾವೆಲ್ಲಾ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ?
ಗೌಟ್ ಕಾಯಿಲೆ ಅಪಾಯ
ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚುತ್ತಾ ಹೋದ್ರೆ ಇದು ಗೌಟ್ ಕಾಯಿಲೆ ಅಪಾಯ ಹೆಚ್ಚಿಸುತ್ತದೆ. ಯೂರಿಕ್ ಆಮ್ಲವು ಕೀಲುಗಳ ಸುತ್ತಲೂ ಸಂಗ್ರಹವಾಗುತ್ತದೆ. ಯೂರಿಕ್ ಆಮ್ಲದ ಸಮಸ್ಯೆಯು ಸಣ್ಣ ಹರಳು ರೂಪುಗೊಳ್ಳಲು ಕಾರಣವಾಗುತ್ತದೆ. ಮೂತ್ರಪಿಂಡ ಮತ್ತು ಹೃದಯ ತಲುಪಿ ಸಮಸ್ಯೆ ಹೆಚ್ಚಿಸುತ್ತವೆ.
ತರಕಾರಿಗಳು ಆರೋಗ್ಯಕ್ಕೆ ಹಾನಿಕಾರಕ
ಚಳಿಗಾಲದಲ್ಲಿ ವಿವಿಧ ತರಕಾರಿಗಳಾದ ಶತಾವರಿ, ಪಾಲಕ, ಹೂಕೋಸು, ಅಣಬೆಗಳು, ಬಟಾಣಿಗಳಲ್ಲಿ ಫ್ಯೂರಿನ್ ಹೆಚ್ಚಿದೆ. ಅವುಗಳ ಸೇವನೆಯಿಂದ ದೂರವಿರಿ.
ಬಿಯರ್ ಅಥವಾ ವೈನ್
ಚಳಿಗಾಲದಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷದ ಪಾರ್ಟಿ ಬರುತ್ತೆ. ಆಗ ಹೆಚ್ಚು ಮದ್ಯ, ವೈನ್ ಕುಡಿದು ಜನರು, ಎಂಜಾಯ್ ಮಾಡ್ತಾರೆ. ಆಲ್ಕೋಹಾಲ್ ಹೆಚ್ಚಿನ ಪ್ಯೂರಿನ್ ಅಂಶ ಹೊಂದಿದ್ದು, ಇದು ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ. ಆಗಾಗ್ಗೆ ಆಲ್ಕೊಹಾಲ್ ಸೇವಿಸಿದರೆ, ಯೂರಿಕ್ ಆಮ್ಲವು ಹೆಚ್ಚಾಗುತ್ತದೆ.
ಸಿಹಿಯಾದ ಪಾನೀಯ ಸೇವನೆ ಸಮಸ್ಯೆ ಹೆಚ್ಚಿಸುತ್ತದೆ
ಸಿಹಿಯಾದ ಪಾನೀಯವು ಹೆಚ್ಚು ಫ್ರಕ್ಟೋಸ್ ಹೊಂದಿದೆ. ಇದು ಗೌಟ್ ಅಪಾಯ ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಎಲ್ಲಾ ರೀತಿಯ ಸಕ್ಕರೆ ಪಾನೀಯಗಳಿಂದ ದೂರವಿರುವುದು ಉತ್ತಮ. ಕೆಲವು ಹಣ್ಣುಗಳ ಸೇವನೆ ಗೌಟ್ ಸಮಸ್ಯೆ ಹೆಚ್ಚಿದುತ್ತವೆ.
ಇದನ್ನೂ ಓದಿ: ತುಟಿ ಮೇಲಿನ ಕೂದಲು ತೆಗೆಯಲು ಪಾರ್ಲರ್ವರೆಗೆ ಹೋಗಬೇಕಿಲ್ಲ, ಮನೆಯಲ್ಲೇ ಇದೆ ಪರಿಹಾರ
ಮಾಂಸ ಮತ್ತು ಸಮುದ್ರಾಹಾರ ಸೇವನೆಯಿಂದ ತೊಂದರೆ
ನೀವು ಯೂರಿಕ್ ಆಮ್ಲದಿಂದ ಬಳಲುತ್ತಿದ್ದರೆ, ಮಾಂಸ ಮತ್ತು ಸಮುದ್ರಾಹಾರದಿಂದ ದೂರವಿರಿ. ಕೆಂಪು ಮಾಂಸ, ಆರ್ಗನ್ ಮಾಂಸ, ಸಾರ್ಡೀನ್ , ಆಂಚೊವಿ, ಮ್ಯಾಕೆರೆಲ್ ಸಮುದ್ರಾಹಾರ ಸೇವನೆ ಕಡಿಮೆ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ