• Home
  • »
  • News
  • »
  • lifestyle
  • »
  • Face Wash: ಚಳಿಗಾಲದಲ್ಲಿ ತ್ವಚೆಯ ಸಮಸ್ಯೆ ತಡೆಯಲು ಮುಖ ತೊಳೆಯುವಾಗ ಈ ಸಲಹೆ ಪಾಲಿಸಿ!

Face Wash: ಚಳಿಗಾಲದಲ್ಲಿ ತ್ವಚೆಯ ಸಮಸ್ಯೆ ತಡೆಯಲು ಮುಖ ತೊಳೆಯುವಾಗ ಈ ಸಲಹೆ ಪಾಲಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಣ್ಣನೆಯ ಗಾಳಿಯಿಂದ ಉಂಟಾಗುವ ಚರ್ಮದ ಹಾನಿಯು ಚರ್ಮವನ್ನು ಶುಷ್ಕ ಮತ್ತು ಫ್ಲಾಕಿ ಮಾಡುತ್ತದೆ. ಚಳಿಗಾಲದಲ್ಲಿ ಪದೇ ಪದೇ ಮಾಯಿಶ್ಚರೈಸರ್ ಬಳಸಬೇಕು ಎಂದೆನಿಸುತ್ತದೆ. ಸರಿಯಾಗಿ ದೇಹವನ್ನು ಹೈಡ್ರೇಟ್ ಮಾಡಿದ ನಂತರವೂ ಚರ್ಮವು ನಿರ್ಜೀವವಾಗಿ ಕಾಣುತ್ತಿದ್ದರೆ, ಸಮಸ್ಯೆ ಉಂಟಾಗುತ್ತಿದ್ದರೆ ಅದಕ್ಕೆ ಕಾರಣ ಮತ್ತು ಚಿಕಿತ್ಸೆ ಬಗ್ಗೆ ಗಮನ ಹರಿಸಬೇಕಾಗುತ್ತದೆ.

ಮುಂದೆ ಓದಿ ...
  • Share this:

    ಚಳಿಗಾಲದಲ್ಲಿ (Winter) ಯಾವುದೇ ಉತ್ಪನ್ನವನ್ನು (Product) ತ್ವಚೆಗೆ ಬಳಸುವ ಮೊದಲು ತುಂಬಾ ಕಾಳಜಿ (Care) ವಹಿಸಬೇಕು. ಯಾಕಂದ್ರೆ ತ್ವಚೆಗೆ (Skin) ಬಳಸುವ ಉತ್ಪನ್ನಗಳು ಬೇಗ ಅಲರ್ಜಿ ಸಮಸ್ಯೆ (Allergy Problem) ಉಂಟು ಮಾಡುತ್ತದೆ. ಚಳಿಗಾಲದಲ್ಲಿ ತ್ವಚೆಗೆ ಬಳಸುವ ವಸ್ತುಗಳು ನಿಮ್ಮ ತ್ವಚೆಯನ್ನು ಅತ್ಯಂತ ಬೇಗ ಹಾಳು ಮಾಡುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಸಮಸ್ಯೆಯನ್ನು ತುಂಬಾ ಜನರು ಅನುಭವಿಸಿರಬಹುದು. ಇದು ನಿಮ್ಮ ಚರ್ಮವನ್ನು ಶುಷ್ಕ, ಮಂದ ಮತ್ತು ಫ್ಲಾಕಿಯನ್ನಾಗಿ ಮಾಡಿ ಬಿಡುತ್ತದೆ. ಇದು ಹೊರಗೆ ಜನರ ಜೊತೆಗೆ ಓಡಾಡುವಾಗ ತುಂಬಾ ಮುಜುಗರ ಉಂಟು ಮಾಡುತ್ತದೆ. ತಂಪಾದ ಗಾಳಿಯು ಒಣ ತ್ವಚೆಗೆ ಕಾರಣ ಆಗುತ್ತದೆ.


    ಚಳಿಗಾಲದಲ್ಲಿ ಚರ್ಮದ ಹಾನಿ


    ತಣ್ಣನೆಯ ಗಾಳಿಯಿಂದ ಉಂಟಾಗುವ ಚರ್ಮದ ಹಾನಿಯು ಚರ್ಮವನ್ನು ಶುಷ್ಕ ಮತ್ತು ಫ್ಲಾಕಿ ಮಾಡುತ್ತದೆ. ಚಳಿಗಾಲದಲ್ಲಿ ಪದೇ ಪದೇ ಮಾಯಿಶ್ಚರೈಸರ್ ಬಳಸಬೇಕು ಎಂದೆನಿಸುತ್ತದೆ. ಸರಿಯಾಗಿ ದೇಹವನ್ನು ಹೈಡ್ರೇಟ್ ಮಾಡಿದ ನಂತರವೂ ಚರ್ಮವು ನಿರ್ಜೀವವಾಗಿ ಕಾಣುತ್ತಿದ್ದರೆ, ಸಮಸ್ಯೆ ಉಂಟಾಗುತ್ತಿದ್ದರೆ ಅದಕ್ಕೆ ಕಾರಣ ಮತ್ತು ಚಿಕಿತ್ಸೆ ಬಗ್ಗೆ ಗಮನ ಹರಿಸಬೇಕಾಗುತ್ತದೆ.


    ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ಸ್ವಚ್ಛವಾಗಿಡಲು ಕೆಲವು ಸಲಹೆ ಮತ್ತು ತಂತ್ರಗಳನ್ನು ನಾವು ಇಂದು ಇಲ್ಲಿ ನೋಡೋಣ. ಇದು ಚರ್ಮದ ಸೌಂದರ್ಯ ಕಾಪಾಡಲು ನಿಮಗೆ ಸಹಾಯ ಮಾಡುತ್ತದೆ. ನೀವು ಚರ್ಮದ ಶುಷ್ಕತೆ ಸಮಸ್ಯೆ ತಪ್ಪಿಸಲು ಬಯಸಿದರೆ ಮುಖ ತೊಳೆಯುವಾಗ ಹೆಚ್ಚು ಕಾಳಜಿ ವಹಿಸಿ. ಈ ಪ್ರಮುಖ ಹಂತಗಳನ್ನು ಫಾಲೋ ಮಾಡಿ.




    ಮುಖವನ್ನು ತೊಳೆಯುವಾಗ ಈ ಸಲಹೆ ಅನುಸರಿಸಿ  


    ಸೌಮ್ಯವಾದ ಕ್ಲೆನ್ಸರ್ ಬಳಸಿ


    ಚಳಿಗಾಲದಲ್ಲಿ ನಿಮ್ಮ ತ್ವಚೆಗೆ ಹೊಂದುವ ಸೌಮ್ಯವಾದ ಕ್ಲೆನ್ಸರ್ ನ್ನು ಬಳಸುವುದು ಉತ್ತಮ. ಕಠಿಣ ರಾಸಾಯನಿಕ ವಸ್ತುಗಳು ಚರ್ಮಕ್ಕೆ ಹಾನಿ ಮಾಡುತ್ತವೆ. ಮತ್ತು ನಿಮ್ಮ ಚರ್ಮದ ನೈಸರ್ಗಿಕ ಟೋನ್ ಅನ್ನು ತೆಗೆದು ಹಾಕುತ್ತವೆ. ಹಾಗಾಗಿ ಸೌಮ್ಯವಾದ ಫೇಸ್ ವಾಶ್ ನಿಂದ ಮುಖ ತೊಳೆಯಿರಿ.


    ತುಂಬಾ ಬಿಸಿ ನೀರು ಬಳಸುವುದು ಬೇಡ


    ಪ್ರತಿಯೊಬ್ಬರೂ ಚಳಿಗಾಲದಲ್ಲಿ ಬಿಸಿ ನೀರು ಬಳಸುತ್ತಾರೆ. ಆಮೇಲೆ ಸ್ನಾನ ಮಾಡುವುದಕ್ಕೋ ಅಥವಾ ಮುಖ ತೊಳೆಯುವುದಕ್ಕೋ. ತುಂಬಾ ಬಿಸಿ ನೀರು ಬಳಕೆ ಬೇಡ. ಚರ್ಮದಲ್ಲಿ ಶುಷ್ಕತೆ ಉಂಟಾಗುತ್ತದೆ. ಹಾಗಾಗಿ ಉಗುರು ಬೆಚ್ಚಗಿನ ನೀರನ್ನು ಬಳಸಿ.


    ಆಲ್ಕೋಹಾಲ್ ಆಧಾರಿತ ಟೋನರ್ ಬಳಕೆ ಬೇಡ


    ನೀವು ಚರ್ಮವನ್ನು ಸ್ವಚ್ಛಗೊಳಿಸಲು ಟೋನರ್ ಬಳಕೆ ಮಾಡುತ್ತಿದ್ದರೆ, ಆಲ್ಕೊಹಾಲು ಆಧಾರಿತ ಟೋನರ್ ಬಳಕೆ ಬೇಡ. ಚಳಿಗಾಲದಲ್ಲಿ ಚರ್ಮವು ಈಗಾಗಲೇ ಸೂಕ್ಷ್ಮ ಆಗಿರುತ್ತದೆ. ಇಂತಹ ವೇಳೆ ಆಲ್ಕೋಹಾಲ್ ಆಧಾರಿತ ಟೋನರ್ ಬಳಕೆ ಮಾಡಿದ್ರೆ ಅದು ಚರ್ಮವನ್ನು ಕೆರಳಿಸಬಹುದು.


    ಲಘುವಾಗಿ ಕೈಗಳಿಂದ ಸ್ಕ್ರಬ್ ಮಾಡುವುದು


    ಚರ್ಮವನ್ನು ಶುದ್ಧೀಕರಿಸಲು ಸ್ಕ್ರಬ್ ಉತ್ತಮ ಮಾರ್ಗ. ಇದು ಚರ್ಮವನ್ನು ಒಳಗಿನಿಂದ ಸ್ವಚ್ಛಗೊಳಿಸುತ್ತದೆ. ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕುತ್ತದೆ. ಹಾಗಾಗಿ ಚರ್ಮವನ್ನು ಯಾವುದೇ ಶುಷ್ಕತೆ ಇಲ್ಲದೆ ಸುಧಾರಿಸಲು ನೀವು ಬಯಸಿದರೆ ಕಡಿಮೆ ಸ್ಕ್ರಬ್ ಎಕ್ಸ್ಫೋಲಿಯಂಟ್ ನ್ನು ಬಳಸಿ. ಮತ್ತು ಅವುಗಳನ್ನು ಹಗುರವಾದ ಕೈಗಳಿಂದ ಅನ್ವಯಿಸಿ.


    ಇದನ್ನೂ ಓದಿ: ಮೇಕಪ್ ಮಾಡೋ ಮುನ್ನ ಗ್ಲಿಸರಿನ್ ಹಚ್ಚಿದ್ರೆ ಲುಕ್ ಸೂಪರ್ ಆಗಿ ಇರುತ್ತಂತೆ


    ಚರ್ಮದ ಪ್ರಕಾರ ಮಾಯಿಶ್ಚರೈಸರ್ ಬಳಸಿ


    ಚರ್ಮವನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ನಂತರ ಇದು ಮಾಯಿಶ್ಚರೈಸರ್ ಮಾಡಿ. ಚರ್ಮವನ್ನು ಶುದ್ಧೀಕರಿಸಿದ ನಂತರ ಮಾಯಿಶ್ಚರೈಸರ್ ಮಾಡುವುದ ತುಂಬಾ ಮುಖ್ಯ. ಇಲ್ಲದೇ ಹೋದ್ರೆ ಅದು ಒಣಗಿ ನಿರ್ಜೀವವಾಗಿ ಕಾಣುತ್ತದೆ. ಹಾಗಾಗಿ ಮಾಯಿಶ್ಚರೈಸರ್ ಅನ್ನು ಅನ್ವಯಿಸಿ. ಆದರೆ ಅದರ ಸ್ಥಿರತೆ ಬಗ್ಗೆ ಕಾಳಜಿ ವಹಿಸಿ.

    Published by:renukadariyannavar
    First published: