• Home
  • »
  • News
  • »
  • lifestyle
  • »
  • Winter Drink: ಚಳಿಗಾಲದಲ್ಲಿ ಈ ಜ್ಯೂಸ್​ ಇದ್ರೆ ಸಾಕಂತೆ, ಆರೋಗ್ಯ ಸಮಸ್ಯೆ ಬರಲ್ಲ

Winter Drink: ಚಳಿಗಾಲದಲ್ಲಿ ಈ ಜ್ಯೂಸ್​ ಇದ್ರೆ ಸಾಕಂತೆ, ಆರೋಗ್ಯ ಸಮಸ್ಯೆ ಬರಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯಾವುದೇ ರೋಗ ತಡೆಗಟ್ಟುವಲ್ಲಿ ರೋಗ ನಿರೋಧಕ ಶಕ್ತಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಉತ್ತಮ ಆಹಾರ ಮತ್ತು ವ್ಯಾಯಾಮದ ಜೊತೆಗೆ ಜೀವನಶೈಲಿಯನ್ನು ಚೆನ್ನಾಗಿ ಇಟ್ಟುಕೊಂಡರೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಬಹುದು. ಹಾಗಾಗಿ ಇಂದು ನಾವು ಪ್ರತಿರಕ್ಞಣಾ ವ್ಯವಸ್ಥೆ ಬಲಪಡಿಸುವ ಎರಡು ಆರೋಗ್ಯಕರ ಪಾನೀಯಗಳನ್ನು ಮನೆಯಲ್ಲೇ ಮಾಡಿ ಸೇವಿಸುವ ಬಗ್ಗೆ ತಿಳಿಯೋಣ.

ಮುಂದೆ ಓದಿ ...
  • Share this:

    ಬದಲಾಗುತ್ತಿರುವ ಋತುವಿನಲ್ಲಿ (Season) ಶೀತ ಮತ್ತು ಕೆಮ್ಮು (Cold And Cough) ಬರುವುದು ತುಂಬಾ ಸಾಮಾನ್ಯ ಸಂಗತಿ ಆಗಿದೆ. ಚಳಿಗಾಲದಲ್ಲಿ (Winter) ಪದೇ ಪದೇ ಅನಾರೋಗ್ಯ (Unhealth) ಕಾಡುತ್ತದೆ. ಈ ಸಮಸ್ಯೆ (Problem) ಹೆಚ್ಚಾಗಿ ಕಡಿಮೆ ರೋಗ ನಿರೋಧಕ ಶಕ್ತಿ ಹೊಂದಿರುವ ಜನರಿಗೆ ಬಾಧಿಸುತ್ತದೆ. ತ್ವರಿತವಾಗಿ ಕಾಯಿಲೆಗಳು ಅಂಟಿಕೊಳ್ಳುತ್ತವೆ. ಯಾವುದೇ ರೋಗ ತಡೆಗಟ್ಟುವಲ್ಲಿ ರೋಗ ನಿರೋಧಕ ಶಕ್ತಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಉತ್ತಮ ಆಹಾರ ಮತ್ತು ವ್ಯಾಯಾಮದ ಜೊತೆಗೆ ಜೀವನಶೈಲಿಯನ್ನು ಚೆನ್ನಾಗಿ ಇಟ್ಟುಕೊಂಡರೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಬಹುದು. ಹಾಗಾಗಿ ಇಂದು ನಾವು ಪ್ರತಿರಕ್ಞಣಾ ವ್ಯವಸ್ಥೆ ಬಲಪಡಿಸುವ ಎರಡು ಆರೋಗ್ಯಕರ ಪಾನೀಯಗಳನ್ನು ಮನೆಯಲ್ಲೇ ಮಾಡಿ ಸೇವಿಸುವ ಬಗ್ಗೆ ತಿಳಿಯೋಣ.


    ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಬಲಪಡಿಸುವ ಡ್ರಿಂಕ್


    ಬದಲಾಗುತ್ತಿರುವ ಋತುವಿನಲ್ಲಿ ರೋಗ ನಿರೋಧಕ ಶಕ್ತಿ ಬಲಪಡಿಸುವ ಮೂಲಕ ನೀವು ಆರೋಗ್ಯವಾಗಿರಬಹುದು. ಹಾಗಾದ್ರೆ ರೋಗ ನಿರೋಧಕ ಶಕ್ತಿ ಬಲಪಡಿಸುವ ಡ್ರಿಂಕ್ ಮಾಡುವುದು ಹೇಗೆ ಅಂತಾ ನೋಡೋಣ.


    ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಎರಡು ಆರೋಗ್ಯಕರ ಪಾನೀಯಗಳು


    ಆಮ್ಲಾ ಕ್ಯಾರೆಟ್ ಜ್ಯೂಸ್


    ಆಮ್ಲಾ ಮತ್ತು ಕ್ಯಾರೆಟ್ ಜ್ಯೂಸ್ ಸೇವಿಸಿದರೆ ಶಕ್ತಿ ಹೆಚ್ಚುತ್ತದೆ. ದೇಹವು ಆರೋಗ್ಯವಾಗಿರುತ್ತದೆ. ಮತ್ತು ಈ ಜ್ಯೂಸ್ ನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.




    ಬೆಟ್ಟದ ನೆಲ್ಲಿಕಾಯಿ ಮತ್ತು ಅರ್ಧ ಕಪ್ ಕ್ಯಾರೆಟ್ ತೆಗೆದುಕೊಳ್ಳಿ. ಒಂದು ಲೋಟ ನೀರು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ. ಈ ಕ್ಯಾರೆಟ್ ಮತ್ತು ಬೆಟ್ಟದ ನೆಲ್ಲಿಕಾಯಿ ರಸವನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚುತ್ತದೆ.


    ಆಮ್ಲಾ, ಬೀಟ್ರೂಟ್, ಶುಂಠಿ ಪುದೀನಾ ಜ್ಯೂಸ್


    ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ರಸ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮತ್ತು ರೋಗಗಳ ಅಪಾಯ ಕಡಿಮೆ ಮಾಡುತ್ತದೆ.


    ಬೆಟ್ಟದ ನೆಲ್ಲಿಕಾಯಿ ಎರಡು, ಬೀಟ್ರೂಟ್ ಅರ್ಧ ಕಪ್, ಕಿತ್ತಳೆ ಒಂದು, ಶುಂಠಿ ಒಂದು ಇಂಚು, ಪುದೀನ ಅರ್ಧ ಕಪ್, ನೀರು ಒಂದು ಗ್ಲಾಸ್. ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸಿಯಲ್ಲಿ ರುಬ್ಬಿ. ರಸವನ್ನು ಸ್ಟ್ರೈನರ್ನಲ್ಲಿ ಫಿಲ್ಟರ್ ಮಾಡಿ. ಗ್ಲಾಸ್ ಗೆ ಹಾಕಿ ಸೇವಿಸಿ.


    ಎರಡೂ ಪಾನೀಯಗಳ ಪ್ರಯೋಜನಗಳು


    ಬೆಟ್ಟದ ನೆಲ್ಲಿಕಾಯಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಹೊಂದಿದೆ. ಪೌಷ್ಠಿಕಾಂಶ ಸಮೃದ್ಧವಾಗಿದ್ದು, ಒಳಗಿನಿಂದ ಬಲಪಡಿಸುತ್ತದೆ. ರೋಗಗಳಿಂದ ರಕ್ಷಿಸುತ್ತದೆ.


    ರೋಗ ನಿರೋಧಕ ಶಕ್ತಿ ಹೆಚ್ಚಳ


    ಆಮ್ಲಾ ಪ್ರತಿರಕ್ಷಣಾ ಕಾರ್ಯವನ್ನು ಬಲಪಡಿಸುತ್ತದೆ. ವಿಟಮಿನ್ ಸಿ ಉತ್ಕರ್ಷಣ ನಿರೋಧಕವಾಗಿದೆ. ಜೀವಕೋಶದ ಹಾನಿ ಮತ್ತು ಉರಿಯೂತ ತಡೆಯುತ್ತದೆ. ಪ್ರತಿಕಾಯಗಳು ಮತ್ತು ಪ್ರತಿರಕ್ಷಣಾ ಕೋಶಗಳ ಅಭಿವೃದ್ಧಿ ಮಾಡುತ್ತದೆ.


    ಕೂದಲನ್ನು ಪೋಷಿಸುತ್ತದೆ


    ವಿಟಮಿನ್ ಸಿ, ಅಮೈನೋ ಆಮ್ಲಗಳು, ಟ್ಯಾನಿನ್‌ಗಳು ಆಮ್ಲಾದಲ್ಲಿವೆ. ಇದು ಕೂದಲಿನ ಪೋಷಣೆಗೆ ಅಗತ್ಯವಾದ ಕೊಬ್ಬಿನಾಮ್ಲದಿಂದ ಕೂಡಿದೆ. ಆಮ್ಲಾ ಎಣ್ಣೆಯು ಕೂದಲು ಕಿರುಚೀಲ ಬಲಪಡಿಸಿ, ತಲೆಹೊಟ್ಟು ಕಡಿಮೆ ಮಾಡುತ್ತದೆ.


    ನೈಸರ್ಗಿಕ ಕಂಡಿಷನರ್


    ಇದು ನೈಸರ್ಗಿಕ ಕಂಡೀಷನರ್ ಆಗಿದೆ. ಕೂದಲಿನ ಬೆಳವಣಿಗೆ ಉತ್ತೇಜಿಸುತ್ತದೆ. ಮತ್ತು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ.


    ಇದನ್ನೂ ಓದಿ: ಕೂದಲ ಆರೋಗ್ಯಕ್ಕೆ ಎಣ್ಣೆ ಹಚ್ಚುವ ಸರಿಯಾದ ವಿಧಾನ ಯಾವುದು?


    ಆರೋಗ್ಯಕರ ಚರ್ಮಕ್ಕೆ ಬೇಕು


    ಆಮ್ಲಾ ಅತ್ಯುತ್ತಮ ವಯಸ್ಸಾದ ವಿರೋಧಿ ಗುಣ ಹೊಂದಿದೆ. ಹೆಚ್ಚಿನ ಪ್ರಮಾಣದ ಕಾಲಜನ್ ಪ್ರೋಟೀನ್ ಇದೆ. ಚರ್ಮವನ್ನು ಬಿಗಿ ಮತ್ತು ಮೃದುವಾಗಿಸುತ್ತದೆ. ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.

    Published by:renukadariyannavar
    First published: