• Home
  • »
  • News
  • »
  • lifestyle
  • »
  • Lungs Health: ಈ ಹಣ್ಣುಗಳನ್ನು ಸೇವಿಸಿದ್ರೆ ಚಳಿಗಾಲದಲ್ಲಿ ಶ್ವಾಸಕೋಶ ಸಮಸ್ಯೆ ಬರಲ್ಲ!

Lungs Health: ಈ ಹಣ್ಣುಗಳನ್ನು ಸೇವಿಸಿದ್ರೆ ಚಳಿಗಾಲದಲ್ಲಿ ಶ್ವಾಸಕೋಶ ಸಮಸ್ಯೆ ಬರಲ್ಲ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದಿನವೂ ಒಂದು ಹಣ್ಣು ತಿಂದರೆ ಅನಾರೋಗ್ಯ ತಪ್ಪಿಸಬಹುದು ಅನ್ನೋ ಮಾತಿದೆ. ಸೇಬು ಹಣ್ಣು ಸೇವನೆ ಮಾಡಿದೆ ಸಾಕಷ್ಟು ಆರೋಗ್ಯ ಲಾಭ ಪಡೆಯಬಹುದು. ಸೇಬು ಹಣ್ಣು ಖನಿಜಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಸೇಬು ಹಣ್ಣು ಬಹುತೇಕ ಎಲ್ಲಾ ರೀತಿಯ ರೋಗಗಳಿಂದ ವ್ಯಕ್ತಿಯನ್ನು ರಕ್ಷಣೆ ಮಾಡುತ್ತದೆ.

ಮುಂದೆ ಓದಿ ...
  • Share this:

    ಕಾಯಿಲೆ (Disease) ಬರಬಾರದು ಅಂದ್ರೆ ಹಲವು ರೀತಿಯಲ್ಲಿ ಆರೋಗ್ಯ (Health) ಕಾಪಾಡಿಕೊಳ್ಳಬೇಕಾಗುತ್ತದೆ. ಆರೋಗ್ಯವೇ ಭಾಗ್ಯ ಎಂಬ ಮಾತು ಸಾರ್ವಕಾಲಿಕವಾಗಿದೆ. ಯಾಕಂದ್ರೆ ಆರೋಗ್ಯ ಕೆಟ್ಟರೆ ಯಾವುದೇ ಉತ್ಸಾಹ ಇರಲ್ಲ ಪದೇ ಪದೇ ಕಾಡುವ ಅನಾರೋಗ್ಯ ವ್ಯಕ್ತಿಯನ್ನು (Person) ಹೈರಾಣಾಗಿಸುತ್ತದೆ. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಬೆಳಗ್ಗೆ ಬೇಗ ಏಳುವುದು, ಹೆಚ್ಚು ನೀರು ಕುಡಿಯುವುದು (Drinking Water), ಉತ್ತಮ ಆಹಾರ ಸೇವಿಸುವುದು, ವ್ಯಾಯಾಮ, ಯೋಗ ಚಟಿವಟಿಕೆ ಮಾಡುವುದು ವ್ಯಕ್ತಿಯನ್ನು ಆರೋಗ್ಯವಾಗಿ ಇಡಲು ಸಹಕಾರಿ. ಅವುಗಳಲ್ಲಿ ಮುಖ್ಯವಾಗಿ ಹಣ್ಣುಗಳನ್ನೂ ಸಹ ತಿನ್ನುವುದು. ಹಣ್ಣುಗಳು ಸಾಕಷ್ಟು ಪೋಷಕಾಂಶಗಳಿಂದ ಕೂಡಿವೆ. ಅವುಗಳ ಸೇವನೆ ಆರೋಗ್ಯಕ್ಕೆ ಸಹಕಾರಿ.


    ಶ್ವಾಸಕೋಶ ಆರೋಗ್ಯಕ್ಕೆ ಹಣ್ಣು ಸೇವನೆ ಸಹಕಾರಿ


    ದಿನವೂ ಒಂದು ಹಣ್ಣು ತಿಂದರೆ ಅನಾರೋಗ್ಯ ತಪ್ಪಿಸಬಹುದು ಅನ್ನೋ ಮಾತಿದೆ. ಸೇಬು ಹಣ್ಣು ಸೇವನೆ ಮಾಡಿದೆ ಸಾಕಷ್ಟು ಆರೋಗ್ಯ ಲಾಭ ಪಡೆಯಬಹುದು. ಸೇಬು ಹಣ್ಣು ಇದು ವಿಟಮಿನ್ಗಳು, ಪ್ರೋಟೀನ್ಗಳು, ಫೈಬರ್ ಖನಿಜಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಸೇಬು ಹಣ್ಣು ಬಹುತೇಕ ಎಲ್ಲಾ ರೀತಿಯ ರೋಗಗಳಿಂದ ವ್ಯಕ್ತಿಯನ್ನು ರಕ್ಷಣೆ ಮಾಡುತ್ತದೆ.


    ಮಾರುಕಟ್ಟೆಯಲ್ಲಿ ಕೆಂಪು ಮತ್ತು ಹಸಿರು ಸೇಬು ಹಣ್ಣು ನೋಡಿ ಯಾವುದನ್ನ ಖರೀದಿ ಮಾಡ್ಬೇಕು ಅಂತಾ ಯೋಚನೆ ಮಾಡ್ತೀರಿ. ಕೆಂಪು ಮತ್ತು ಗ್ರೀನ್ ಯಾವ ಸೇಬು ಹಣ್ಣು ಹೆಚ್ಚು ಲಾಭ ತಂದು ಕೊಡುತ್ತದೆ? ಈ ಬಗ್ಗೆ ಪೌಷ್ಟಿಕ ತಜ್ಞ ಲವ್ನೀತ್ ಬಾತ್ರಾ ಏನ್ ಹೇಳಿದ್ದಾರೆ ನೋಡೋಣ.




    ಚಳಿಗಾಲದಲ್ಲಿ ಸೇಬು ಸೇವನೆ ಆರೋಗ್ಯಕ್ಕೆ ಹಿತ


    ಚಳಿಗಾಲದಲ್ಲಿ ಹಸಿರು ಸೇಬು ಹಣ್ಣು ಸೇವಿಸಲು ತಜ್ಞರು ಸೂಚಿಸುತ್ತಾರೆ. ಸಾಮಾನ್ಯ ಕೆಂಪು ಸೇಬು ಹಣ್ಣು ಪ್ರಯೋಜನಗಳು ಎಲ್ಲರಿಗೂ ತಿಳಿದಿದೆ. ಹಸಿರು ಸೇಬು ಹಣ್ಣು ಪ್ರಯೋಜನ ತಿಳಿಯಬೇಕು. ಹಸಿರು ಸೇಬು ಹಣ್ಣು ಸೇವನೆಯು ಕೆಂಪು ಸೇಬಿಗಿಂತ ಹೆಚ್ಚಿನ ಆರೋಗ್ಯ ಪ್ರಯೋಜನ ನೀಡುತ್ತದೆ.


    ಕರುಳಿನ ಆರೋಗ್ಯ ಹೆಚ್ಚಿಸುತ್ತದೆ


    ಹಸಿರು ಸೇಬುಗಳು ಪೆಕ್ಟಿನ್ ಎಂಬ ಅಂಶ ಹೊಂದಿದೆ. ಇದು ಪ್ರಿಬಯಾಟಿಕ್ ಆಗಿ ಕಾರ್ಯ ನಿರ್ವಹಿಸುವ ಒಂದು ರೀತಿಯ ಫೈಬರ್ ಆಗಿದೆ. ಇದು ನಿಮ್ಮ ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾದ ಮೈಕ್ರೋಬಯೋಟಾಕ್ಕೆ ಆಹಾರವಾಗಿ ಕೆಲಸ ಮಾಡುತ್ತದೆ. ಮತ್ತು ಅವುಗಳನ್ನು ಹೆಚ್ಚಿಸುತ್ತದೆ. ಇದು ಮೈಕ್ರೋಬಯೋಟಾಗಳನ್ನು ರೂಪಿಸುತ್ತವೆ. ಸೇಬು ಹಣ್ಣು ನಿಮ್ಮ ಜೀರ್ಣಕ್ರಿಯೆ, ಪ್ರತಿರಕ್ಷಣಾ ವ್ಯವಸ್ಥೆ, ಮನಸ್ಥಿತಿ, ಅರಿವಿನ ಕಾರ್ಯ, ಚಯಾಪಚಯ ದರ ಹೆಚ್ಚು ಮಾಡುತ್ತವೆ.


    ಶ್ವಾಸಕೋಶದ ಆರೋಗ್ಯಕ್ಕೆ ಸಹಕಾರಿ


    ಚಳಿಗಾಲದಲ್ಲಿ ಹಸಿರು ಸೇಬು ಹಣ್ಣು ಸೇವಿಸಿದರೆ ಮಾಲಿನ್ಯ, ಧೂಳು ಮತ್ತು ಗಾಳಿಯಿಂದ ಶ್ವಾಸಕೋಶಕ್ಕೆ ಉಂಟಾಗುವ ಹಾನಿ ತಪ್ಪಿಸಬಹುದು. ಹಾಗಾಗಿ ಚಳಿಗಾಲದಲ್ಲಿ ಹಸಿರು ಸೇಬು ಹಣ್ಣು ತಿನ್ನಲು ಸೂಚಿಸಲಾಗುತ್ತದೆ. ಚಳಿಗಾಲದಲ್ಲಿ ಉಸಿರಾಟ ಮತ್ತು ಆರೋಗ್ಯ ಸಂಬಂಧಿ ಸಮಸ್ಯೆ ಹೆಚ್ಚು. ಇದನ್ನು ತಪ್ಪಿಸಲು ಗ್ರೀನ್ ಆಪಲ್ ಸೇವಿಸಿ. ಹಸಿರು ಸೇಬುಗಳು ಆಸ್ತಮಾದಿಂದ ಚೇತರಿಸಿಕೊಳ್ಳಲು ಸಹಕಾರಿ. ಉಸಿರಾಟ ತೊಂದರೆ ಮತ್ತು ಶ್ವಾಸಕೋಶದ ಸಾಮಾನ್ಯ ಕಾರ್ಯ ನಿರ್ವಹಣೆ ಸುಧಾರಿಸುತ್ತದೆ.


    ಮಧುಮೇಹ ಅಪಾಯ ಕಡಿಮೆ ಮಾಡುತ್ತದೆ


    ಹಸಿರು ಸೇಬುಗಳು ಕರಗುವ ಫೈಬರ್‌ ನಿಂದ ತುಂಬಿವೆ. ಇದು ರಕ್ತದ ಮಟ್ಟದ ಅಸಮತೋಲನ ನಿಯಂತ್ರಿಸುತ್ತದೆ. ಸೇಬುಗಳಲ್ಲಿ ಹೆಚ್ಚಿನ ಕರಗುವ ಫೈಬರ್ ಜೊತೆಗೆ ಪೆಕ್ಟಿನ್ ಇದೆ. ಸಕ್ಕರೆ ಸಣ್ಣ ಪ್ರಮಾಣದಲ್ಲಿ ರಕ್ತಕ್ಕೆ ಬಿಡುಗಡೆ ಮಾಡಲು ಕೆಲಸ ಮಾಡುತ್ತದೆ. ಹಸಿರು ಸೇಬುಗಳು ತುಲನಾತ್ಮಕವಾಗಿ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಮತ್ತು ಗ್ಲೈಸೆಮಿಕ್ ಲೋಡ್ ಹೊಂದಿವೆ. ಟೈಪ್ 2 ಮಧುಮೇಹದ ಅಪಾಯ ತಡೆಯುತ್ತದೆ.


    ಇದನ್ನೂ ಓದಿ: ದೇಶದಲ್ಲಿ ಕಾಣಿಸಿಕೊಂಡಿದೆ ಲೈಮ್ ಕಾಯಿಲೆ! ಇದರ ಲಕ್ಷಣ, ಇದಕ್ಕೆ ಪರಿಹಾರವೇನು?


    ಚರ್ಮಕ್ಕೆ ಸಾಕಷ್ಟು ಪೋಷಣೆ ನೀಡುತ್ತದೆ


    ಹಸಿರು ಸೇಬು ವಿಟಮಿನ್ ಎ, ಬಿ ಮತ್ತು ಸಿ ನಲ್ಲಿ ಸಮೃದ್ಧವಾಗಿವೆ. ಇದು ಸ್ವತಂತ್ರ ರಾಡಿಕಲ್‌ ಹಾನಿಕಾರಕ ಪರಿಣಾಮದಿಂದ ಚರ್ಮವನ್ನು ರಕ್ಷಿಸುತ್ತದೆ. ಚರ್ಮವನ್ನು ಹೊಳೆಯುವಂತೆ ಮತ್ತು ಒಳಗಿನಿಂದ ಸ್ವಚ್ಛವಾಗಿಡುತ್ತದೆ.

    Published by:renukadariyannavar
    First published: