ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯ (Environment Pollution) ಹೆಚ್ಚುತ್ತಿದೆ. ವಾತಾವರಣದಲ್ಲಿ (Weather) ಉಂಟಾಗುವ ಬದಲಾವಣೆಯಿಂದ ಜನರು (People) ಹಲವು ಕಾಯಿಲೆಗಳಿಗೆ (Disease) ತುತ್ತಾಗುತ್ತಾರೆ. ಅದರಲ್ಲೂ ವಾಯು ಮಾಲಿನ್ಯದಿಂದ ವ್ಯಕ್ತಿಯ ಶ್ವಾಸಕೋಶ ಹಾಳಾಗುತ್ತದೆ. ದೆಹಲಿ ಮತ್ತು ಮುಂಬೈ ಸೇರಿದಂತೆ ದೇಶದ ಬಹುತೇಕ ನಗರಗಳಲ್ಲಿ ವಾಯು ಮಾಲಿನ್ಯ ಹೆಚ್ಚಿದೆ. ಕೈಗಾರಿಕೆ, ಸುಟ್ಟ ವಾಸನೆ, ಹೊಗೆ, ಧೂಳು ಸೇರಿದಂತೆ ಹಲವು ವಿಷಯಗಳು ಉಸಿರಾಟಕ್ಕೆ ತೊಂದರೆ ಉಂಟು ಮಾಡುತ್ತದೆ. ಕಲುಷಿತ ಗಾಳಿಯ ಉಸಿರಾಟದಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ. ಜನರು ಉಸಿರಾಡುವುದೇ ಕಷ್ಟವಾಗಿದೆ. ದೊಡ್ಡ ನಗರಗಳಲ್ಲಿ ಮಾಲಿನ್ಯವು ವೇಗವಾಗಿ ಹೆಚ್ಚಳವಾಗ್ತಿದೆ. ಕೆಲವು ನಗರಗಳಲ್ಲಿ ಮಾಲಿನ್ಯದ ಮಟ್ಟವು ಅಪಾಯದ ಮುನ್ಸೂಚನೆ ನೀಡುತ್ತಿದೆ.
ವಾಯುಮಾಲಿನ್ಯದಿಂದ ಶ್ವಾಸಕೋಶ ಸಂಬಂಧಿ ಕಾಯಿಲೆ ಹೆಚ್ಚಳ
ಮಾಲಿನ್ಯ ಹೆಚ್ಚಾಗುತ್ತಿರುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದು ಆರೋಗ್ಯಕ್ಕೆ ಎಲ್ಲ ರೀತಿಯಿಂದಲೂ ಅಪಾಯಕಾರಿಯಾಗಿ ಪರಿಣಮಿಸಿದೆ. ಚಳಿಗಾಲದಲ್ಲಿ ವಾಯು ಮಾಲಿನ್ಯ ಬೇಗ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಯಾಕಂದ್ರೆ ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ದುರ್ಬಲವಾಗುತ್ತದೆ.
ಹಾಗಾಗಿ ವ್ಯಕ್ತಿಯು ಸುಲಭವಾಗಿ ಸೋಂಕಿಗೆ ಬಲಿಯಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಚಳಿಗಾಲದಲ್ಲಿ ತುಂಬಾ ಜನರು ಮಾಲಿನ್ಯ ಮತ್ತು ಶೀತ, ನೆಗಡಿ, ಜ್ವರದಿಂದ ಬಳಲುತ್ತಾರೆ. ವಾಯು ಮಾಲಿನ್ಯ ಶ್ವಾಸಕೋಶ ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಅನೇಕ ಗಂಭೀರ ಸಮಸ್ಯೆ ಉಂಟು ಮಾಡುತ್ತೆ ಅಂತಾರೆ ಆಹಾರ ತಜ್ಞ ಲ್ಯೂಕ್ ಕೌಟಿನ್ಹೋ.
ಅವರ ಪ್ರಕಾರ ಶೀತ ಮತ್ತು ಮಾಲಿನ್ಯವು ಶ್ವಾಸಕೋಶದ ಆರೋಗ್ಯಕ್ಕೆ ಹೆಚ್ಚು ಅಪಾಯ ತಂದೊಡ್ಡುತ್ತದೆ. ಕಲುಷಿತ ಗಾಳಿಯ ಉಸಿರಾಟದಿಂದ ಶ್ವಾಸಕೋಶದಲ್ಲಿ ಕೊಳೆ ತುಂಬಿ ಉಸಿರಾಟ ತೊಂದರೆಯಾಗುತ್ತದೆ.
ಇದರ ಬಗ್ಗೆ ಸೂಕ್ತ ಕಾಳಜಿ ವಹಿಸದೇ ಹೋದ್ರೆ, ಅಸ್ತಮಾ, ನ್ಯುಮೋನಿಯಾ, ಶ್ವಾಸಕೋಶದ ಕ್ಯಾನ್ಸರ್, ಶ್ವಾಸಕೋಶದ ಸೋಂಕು ಮತ್ತು ಶ್ವಾಸಕೋಶದಲ್ಲಿ ನೀರು ತುಂಬುವ ಆರೋಗ್ಯ ಸಮಸ್ಯೆ ಕಾಡುತ್ತವೆ. ಹಾಗಾದ್ರೆ ಶ್ವಾಸಕೋಶವನ್ನು ಹೇಗೆ ಸ್ವಚ್ಛಗೊಳಿಸಬೇಕು ಎಂಬುದನ್ನು ಇಲ್ಲಿ ತಿಳಿಯೋಣ.
ಶ್ವಾಸಕೋಶವನ್ನು ಹೇಗೆ ಸ್ವಚ್ಛಗೊಳಿಸಬೇಕು?
ಶ್ವಾಸಕೋಶದ ಆರೋಗ್ಯದ ಬಗ್ಗೆ ಎಲ್ಲರೂ ವಿಶೇಷ ಕಾಳಜಿ ತೆಗೆದುಕೊಳ್ಳಬೇಕು. ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿ. ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಿ. ಉತ್ತಮವಾಗಿ ದಿನವೂ ನಿಯಮಿತವಾಗಿ ವ್ಯಾಯಾಮ ಮಾಡಿ.
ಶ್ವಾಸಕೋಶದ ಆರೋಗ್ಯ ಮತ್ತು ಬಲವಾಗಿಡಲು ಬೆಲ್ಲದ ಸೇವನೆ ನಿಮಗೆ ಸಹಾಯ ಮಾಡುತ್ತೆ ಅಂತಾರೆ ತಜ್ಞರು. ಆಹಾರದಲ್ಲಿ ಬೆಲ್ಲ ಸೇರಿಸಿ. ಇದು ಶ್ವಾಸಕೋಶದ ಆರೋಗ್ಯ ಕಾಪಾಡುತ್ತದೆ. ಮತ್ತು ಶ್ವಾಸಕೋಶಕ್ಕೆ ರಕ್ಷಾಕವಚವಾಗಿ ಕೆಲಸ ಮಾಡುತ್ತದೆ.
ಬೆಲ್ಲ ನೈಸರ್ಗಿಕ ಸಿಹಿಕಾರಕವಾಗಿದೆ. ಬೆಲ್ಲವನ್ನು ನಿಯಮಿತವಾಗಿ ಸೇವಿಸಿದರೆ ಸಾಕಷ್ಟು ಆರೋಗ್ಯ ಪ್ರಯೋಜನ ಸಿಗುತ್ತದೆ. ಉಸಿರಾಟ ಅಥವಾ ಶ್ವಾಸಕೋಶಕ್ಕೆ ಸಂಬಂಧಿಸಿದ ಅಸ್ವಸ್ಥತೆ ತೆಗೆದು ಹಾಕಲು ಬೆಲ್ಲ ಸಹಕಾರಿ.
ಬೆಲ್ಲದ ಸೇವನೆ ಶ್ವಾಸಕೋಶವನ್ನು ಸ್ವಚ್ಛಗೊಳಿಸುತ್ತದೆ
ಬೆಲ್ಲದ ಸೇವನೆ ಮಾಡಿದ್ರೆ ಶ್ವಾಸಕೋಶ ಒಳಗಿನಿಂದ ಶುದ್ಧವಾಗುತ್ತದೆ ಅಂತಾರೆ ಆಹಾರ ತಜ್ಞರು. ಶ್ವಾಸಕೋಶದ ಅಲ್ವಿಯೋಲಿಯಲ್ಲಿ ಸಿಕ್ಕಿಹಾಕಿಕೊಳ್ಳುವ ಕಾರ್ಬನ್ ಕಣಗಳನ್ನು ಬೆಲ್ಲವು ಬದಲಿಸುವ ಸಾಮರ್ಥ್ಯ ಹೊಂದಿದೆ. ಇದು ಶ್ವಾಸಕೋಶದಲ್ಲಿ ಸಂಗ್ರಹವಾಗಿರುವ ಮಾಲಿನ್ಯ ತೊಡೆದು ಹಾಕುತ್ತದೆ.
ಶ್ವಾಸಕೋಶದ ಕಾಯಿಲೆಗಳಿಂದ ರಕ್ಷಿಸುತ್ತದೆ
ಬೆಲ್ಲವು ಶ್ವಾಸಕೋಶವನ್ನು ಸ್ವಚ್ಛಗೊಳಿಸುವ ಮೂಲಕ ಬ್ರಾಂಕೈಟಿಸ್, ಉಬ್ಬಸ, ಆಸ್ತಮಾ ಮತ್ತು ಇತರ ಉಸಿರಾಟದ ಅಸ್ವಸ್ಥತೆಗಳಿಂದ ಕಾಪಾಡುತ್ತದೆ. ಕಲ್ಲಿದ್ದಲು ಗಣಿಗಾರಿಕೆ ಅಥವಾ ಧೂಳು-ಮಣ್ಣಿನಂತಹ ಸ್ಥಳಗಳಲ್ಲಿ ಕೆಲಸ ಮಾಡುವವರು ಬೆಲ್ಲ ಸೇವಿಸುವಂತೆ ತಿಳಿಸಲಾಗುತ್ತದೆ.
ಇದನ್ನೂ ಓದಿ: ಹೂಕೋಸು ಹೆಚ್ಚು ಸೇವಿಸಿದ್ರೆ ಕಾಡುತ್ತೆ ಗ್ಯಾಸ್ ಸಮಸ್ಯೆ, ಮಿತವಾಗಿ ಹೀಗೆ ಬಳಸಿ!
ಶ್ವಾಸಕೋಶದ ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಬೆಲ್ಲವನ್ನು ಹೇಗೆ ತಿನ್ನಬೇಕು?
ಬೆಲ್ಲದ ಚಹಾ ಕುಡಿಯಿರಿ. ಬೆಲ್ಲ, ತುಪ್ಪ ಮತ್ತು ಕರಿಮೆಣಸಿನ ಮಿಶ್ರಣದ ಉಂಡೆ ತಯಾರಿಸಿ ದಿನವೂ ನಿಯಮಿತವಾಗಿ ಸೇವಿಸಿ. ನೇರವಾಗಿ ಬೆಲ್ಲ ತಿನ್ನುವುದು ಉತ್ತಮ. ಯಾವಾಗಲೂ ರಾಸಾಯನಿಕ ಮುಕ್ತ ಬೆಲ್ಲ ಬಳಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ