• Home
  • »
  • News
  • »
  • lifestyle
  • »
  • Joint Pain: ಚಳಿಗಾಲದಲ್ಲಿ ಕೀಲುನೋವು ಬಾಧಿಸುತ್ತಿದೆಯೇ? ಹಾಗಾದ್ರೆ ಈ ಪದಾರ್ಥ ತಪ್ಪದೇ ಸೇವಿಸಿ

Joint Pain: ಚಳಿಗಾಲದಲ್ಲಿ ಕೀಲುನೋವು ಬಾಧಿಸುತ್ತಿದೆಯೇ? ಹಾಗಾದ್ರೆ ಈ ಪದಾರ್ಥ ತಪ್ಪದೇ ಸೇವಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೀಲು ನೋವು ಆರೋಗ್ಯಕ್ಕೆ ಕಂಟಕವಾಗಿ ಕಾಡುತ್ತದೆ. ಇದು ಚಳಿಗಾಲದಲ್ಲಿ ಕಂಡು ಬರುವ ಸಾಮಾನ್ಯ ಕಾಯಿಲೆ ಆಗಿದೆ. ಕೀಲು ನೋವು ಯಾವಾಗ ಬೇಕಾದ್ರೂ ಬರಬಹುದು. ತಂಪಾದ ಹವಾಮಾನದಲ್ಲಿ ಕೀಲು ನೋವು ಹೆಚ್ಚು ಬಾಧಿಸುತ್ತದೆ. ಹಾಗಿದ್ರೆ ಇದಕ್ಕೆ ಪರಿಹಾರವೇನು?

  • Share this:

    ಚಳಿಗಾಲದಲ್ಲಿ (Winter) ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ (Health Problem) ಕೀಲು ನೋವು (Joint Pain) ಸಹ ಒಂದು. ತುಂಬಾ ಜನರು (People) ವಯಸ್ಸಾಗುತ್ತಿದ್ದಂತೆ ಕೀಲು ನೋವು ಕಾಯಿಲೆ (Disease) ಎದುರಿಸುತ್ತಾರೆ. ಕೀಲು ನೋವು ಮೊಣಕಾಲನ್ನು ಹೆಚ್ಚು ಬಾಧಿಸುತ್ತದೆ. ಇದು ವ್ಯಕ್ತಿಯ ಆರೋಗ್ಯ ಮತ್ತು ಉತ್ಸಾಹ ಎರಡನ್ನೂ ಕಸಿಯುತ್ತದೆ. ಮೊಣಕಾಲು ನೋವು ಎದ್ದು ಹೆಚ್ಚು ಓಡಾಡಲು ಮತ್ತು ನಡೆಯಲು ಸಾಧ್ಯವಾಗದ ಸ್ಥಿತಿಗೆ ಕಾರಣವಾಗುತ್ತದೆ. ಕೀಲು ನೋವು ಇರುವವರು ಹಲವು ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ತುಂಬಾ ತಜ್ಞರು ಆರೋಗ್ಯಕರ ತೂಕ ಹಾಗೂ ನಿಯಮಿತ ವ್ಯಾಯಾಮ ಮಾಡುವಂತೆ ಸಲಹೆ ನೀಡುತ್ತಾರೆ. ಆರೋಗ್ಯವೇ ದೊಡ್ಡ ಸಂಪತ್ತು ಎಂಬ ಮಾತಿದೆ.   


    ಚಳಿಗಾಲದಲ್ಲಿ ಕೀಲುಗಳಲ್ಲಿ ಬಿಗಿತ ಮತ್ತು ನೋವಿನ ಸಮಸ್ಯೆ


    ಕೀಲು ನೋವು ಆರೋಗ್ಯಕ್ಕೆ ಕಂಟಕವಾಗಿ ಕಾಡುತ್ತದೆ. ಇದು ಚಳಿಗಾಲದಲ್ಲಿ ಕಂಡು ಬರುವ ಸಾಮಾನ್ಯ ಕಾಯಿಲೆ ಆಗಿದೆ. ಕೀಲು ನೋವು ಎಲ್ಲರ ಜೀವನದ ಭಾಗ ಆಗಿದೆ. ಕೀಲು ನೋವು ಯಾವಾಗ ಬೇಕಾದ್ರೂ ಬರಬಹುದು. ಅದಕ್ಕೆ ವಯಸ್ಸು, ಆಹಾರ ಮತ್ತು ಜೀವನಶೈಲಿ ಹಾಗೂ


    ಅನುವಂಶಿಕತೆ ಕಾರಣವಾಗಿದೆ. ಅದರಲ್ಲೂ ತಂಪಾದ ಹವಾಮಾನದಲ್ಲಿ ಕೀಲು ನೋವು ಹೆಚ್ಚು ಬಾಧಿಸುತ್ತದೆ. ಅನೇಕ ಜನರು ಇದರಿಂದ ಹೆಚ್ಚು ತೊಂದರೆ ಪಡುತ್ತಾರೆ. ಕೈಕಾಲು ಚಲಿಸಲು, ನಡೆಯಲು ತೊಂದರೆ ಮತ್ತು ನೋವು ಬಾಧಿಸುತ್ತದೆ.




    ತಂಪಾದ ವಾತಾವರಣದಲ್ಲಿ ಕೀಲು ನೋವು ಯಾಕೆ ಬಾಧಿಸುತ್ತದೆ?


    ತಾಪಮಾನದ ಬದಲಾವಣೆ, ತಂಪು ವಾತಾವರಣವು ಕೀಲು ನೋವಿಗೆ ಕಾರಣ ಎನ್ನಲಾಗುತ್ತದೆ. ವಾಯುಮಂಡಲದ ಒತ್ತಡದ ಕುಸಿತ ಸ್ನಾಯುರಜ್ಜುಗಳಲ್ಲಿ ನೋವುಂಟು ಮಾಡುತ್ತದೆ. ತಂಪು ವಾತಾವರಣದಲ್ಲಿ ಸ್ನಾಯು ಮತ್ತು ಸುತ್ತಮುತ್ತಲಿನ ಅಂಗಾಂಶ ಹಿಗ್ಗುತ್ತವೆ. ಕೀಲುಗಳಲ್ಲಿ ದೇಹದ ಸೀಮಿತ ಸ್ಥಳದ ಕಾರಣದಿಂದ ನೋವುಂಟಾಗುತ್ತದೆ ಎನ್ನಲಾಗಿದೆ.


    ಸಂಧಿವಾತ ರೋಗಿಗಳು ಮತ್ತು ವಯಸ್ಸಾದ ಜನರಲ್ಲಿ ಚಳಿಗಾಲದ ತಂಪು ವಾತಾವರಣದಲ್ಲಿ ಹೆಚ್ಚು ತೀವ್ರ ಕೀಲು ನೋವು ಬಾಧಿಸುವ ದೂರು ನೀಡುತ್ತಾರೆ. ಹಾಗಾಗಿ ಇಂತಹ ವೇಳೆ ಆಹಾರ ಮತ್ತು ವ್ಯಯಾಮದಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳಬೇಕು ಅಂತಾರೆ ತಜ್ಞರು. ಅಂತಹ ಕೆಲವು ಆಹಾರ ಪದಾರ್ಥಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಇವುಗಳ ಸೇವನೆ ಕೀಲು ನೋವು ಕಡಿಮೆ ಮಾಡಲು ಸಹಕಾರಿ.


    ಮೀನು ಸೇವನೆ


    ವರದಿಯೊಂದರ ಪ್ರಕಾರ, ಒಮೆಗಾ 3 ಕೊಬ್ಬಿನಾಮ್ಲ ಮತ್ತು ವಿಟಮಿನ್ ಡಿ ಯಲ್ಲಿ ಸಮೃದ್ಧ ಮೀನು ಸೇವನೆ ಕೀಲು ನೋವು ಸಮಸ್ಯೆ ಕಡಿಮೆ ಮಾಡಲು ಸಹಕಾರಿ ಎನ್ನಲಾಗಿದೆ. ಸಾಲ್ಮನ್ ಮತ್ತು ಮ್ಯಾಕೆರೆಲ್‌ ಸೇರಿ ಕೆಲವು ಕೊಬ್ಬಿನ ಮೀನುಗಳ ಸೇವನೆ ಕೀಲು ನೋವಿನ ಉರಿಯೂತ ಸಮಸ್ಯೆ ಮತ್ತು ನೋವನ್ನು ನಿವಾರಿಸಲು ಸಹಕಾರಿ ಆಗಿದೆ.


    ಸೋಯಾಬೀನ್ ಸೇವನೆ ಮಾಡಿ


    ಸಸ್ಯಾಹಾರಿಗಳು ಆಹಾರದಲ್ಲಿ ಒಮೆಗಾ 3 ಕೊಬ್ಬಿನಾಮ್ಲ ಹೊಂದಿರುವ ಸೋಯಾಬೀನ್ ಪದಾರ್ಥ ಸೇರಿಸಿ. ಇದು ಕೀಲು ನೋವಿನ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೋಯಾ ಉತ್ತಮ ಪೋಷಕಾಂಶಗಳಿಂದ ಕೂಡಿರುವ ಆಹಾರ ಪದಾರ್ಥವಾಗಿದೆ. ದೇಹದೊಳಗೆ ಉರಿಯೂತ ಕಡಿಮೆ ಮಾಡಿ, ನೋವು ಕಡಿಮೆ ಮಾಡುತ್ತದೆ.


    ಸಾಂದರ್ಭಿಕ ಚಿತ್ರ


    ಆಲಿವ್ ಎಣ್ಣೆ ಆಹಾರದಲ್ಲಿ ಸೇರಿಸಿ


    ಆಲಿವ್ ಎಣ್ಣೆಯು ಒಲಿಯೊಕಾಥಾಲ್ ಹೊಂದಿದ್ದು, ಇದು ಉರಿಯೂತ ನಿವಾರಿಸುತ್ತದೆ. ಅಡುಗೆಗೆ ಒಂದು ಚಮಚ ಆಲಿವ್ ಎಣ್ಣೆ ಬಳಸಿ. ಇದು ಕೀಲು ನೋವು ಕಡಿಮೆ ಮಾಡಲು ಸಹಕಾರಿ.


    ಬೆಳ್ಳುಳ್ಳಿ ಸೇವನೆ ಮಾಡಿ


    ಅಧ್ಯಯನವೊಂದರ ಪ್ರಕಾರ, ಬೆಳ್ಳುಳ್ಳಿ ಡಯಾಲಿಲ್ ಡೈಸಲ್ಫೈಡ್ ಹೊಂದಿದೆ. ಇದು ಉರಿಯೂತ ನಿವಾರಣೆಗೆ ಸಹಕಾರಿ. ಬೆಳ್ಳುಳ್ಳಿ ಸೇವನೆ ಮಾಡಿದಾಗ ಅದು ಮೂಳೆಗಳು ದುರ್ಬಲವಾಗುವ ಆಸ್ಟಿಯೊಪೊರೋಸಿಸ್‌ ಸಮಸ್ಯೆ ಕಡಿಮೆ ಮಾಡುತ್ತದೆ. ಇದು ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಉಂಟಾಗುವ ಕೀಲು ನೋವು ಕಡಿಮೆ ಮಾಡುತ್ತದೆ. ಇದು ಆರೋಗ್ಯ ಕಾಪಾಡುತ್ತದೆ.


    ಇದನ್ನೂ ಓದಿ: ತೂಕ ಇಳಿಕೆ ಮತ್ತು ನಿಯಂತ್ರಣ: ದೇಹ ಡಿಟಾಕ್ಸ್ ಮಾಡಲು ಮೊನೋ ಡಯಟ್ ಹೇಗೆ ಸಹಕಾರಿ?


    ಶುಂಠಿ ಆಹಾರದಲ್ಲಿ ಸೇರಿಸಿ


    ಹಸಿ ಅಥವಾ ಒಣ ಶುಂಠಿಯನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸಿ. ಇದು ಕೀಲು ನೋವು ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಉರಿಯೂತ ನೋವು ನಿವಾರಕ ಗುಣಲಕ್ಷಣ ಹೊಂದಿದ್ದು, ಕೀಲು ನೋವು ಕಡಿಮೆ ಮಾಡುತ್ತದೆ.

    Published by:renukadariyannavar
    First published: