ಬದಲಾಗುತ್ತಿರುವ ಚಳಿಗಾಲದ ಋತುವಿನಲ್ಲಿ (Winter Season) ಶೀತ ಮತ್ತು ಕೆಮ್ಮು (Cold And Cough) ಉಂಟಾಗುವುದು ಸಾಮಾನ್ಯ ಸಂಗತಿ. ಈ ಚಳಿ ಮತ್ತು ನೆಗಡಿ ಸೋಂಕಿಗೆ ಮಕ್ಕಳು (Children’s) ಮತ್ತು ವಯಸ್ಸಾದವರು ಬೇಗ ತುತ್ತಾಗುತ್ತಾರೆ. ಇದರಿಂದ ತಾಪಮಾನದಲ್ಲಿ ಉಂಟಾಗುವ ಬದಲಾವಣೆಯು ಜನರ ಆರೋಗ್ಯದಲ್ಲಿ (Health) ಸಾಕಷ್ಟು ಏರುಪೇರು ಉಂಟು ಮಾಡುತ್ತದೆ. ವಿಶೇಷವಾಗಿ ಚಳಿಗಾಲದ ಋತುವಿನಲ್ಲಿ ಮಕ್ಕಳು ಮತ್ತು ವೃದ್ಧರಿಗೆ ತುಂಬಾ ಅಪಾಯಕಾರಿ ಎಂದು ತಜ್ಞರು ಹೇಳ್ತಾರೆ. ಈ ಎಲ್ಲಾ ಸಮಸ್ಯೆಗಳ ವಿರುದ್ಧ ಹೋರಾಡಲು ಪ್ರತಿರಕ್ಷಣಾ ವ್ಯವಸ್ಥೆ ಬಲಿಷ್ಠಗೊಳಿಸುವುದು ತುಂಬಾ ಮುಖ್ಯವಾಗುತ್ತದೆ. ಯಾಕಂದ್ರೆ ರೋಗ ನಿರೋಧಕ ಶಕ್ತಿ ಕಡಿಮೆಯಾದ್ರೆ ಸೋಂಕು ಬೇಗ ದೇಹ ಸೇರುತ್ತದೆ. ಹಾಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೆಲವು ಆಹಾರ ಪದಾರ್ಥಗಳ ಸೇವನೆ ಮಾಡಬೇಕು.
ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸೂಪರ್ ಫುಡ್ಸ್
ದೇಹದಲ್ಲಿ ಉತ್ಕರ್ಷಣ ನಿರೋಧಕ ಮತ್ತು ವಿಟಮಿನ್ ಸಿ ಸೇರಿ ಕೆಲವು ಅಗತ್ಯ ಪೋಷಕಾಂಶ ಹೊಂದುವುದು ತುಂಬಾ ಮುಖ್ಯ. ರೋಗ ನಿರೋಧಕ ಶಕ್ತಿ ಕಡಿಮೆಯಾದ್ರೆ ರೋಗಗಳು ಬೇಗ ಬರುತ್ತವೆ. ಮತ್ತು ಬೇಗ ವಾಸಿಯಾಗಲ್ಲ. ಹಾಗಾಗಿ ಇಂದು ನಾವು ಚಳಿಗಾಲದಲ್ಲಿ ಲಭ್ಯವಿರುವ ವಿಶೇಷ ಸೂಪರ್ ಫುಡ್ ಗಳ ಮತ್ತು ಪೋಷಕಾಂಶಗಳು ಮತ್ತು ಪ್ರಯೋಜನಗಳ ಬಗ್ಗೆ ತಿಳಿಯೋಣ.
ಈ ಆಹಾರ ಪದಾರ್ಥಗಳಲ್ಲಿರುವ ಪೋಷಕಾಂಶಗಳು ದೇಹದಲ್ಲಿನ ಪ್ರಮುಖ ಪೋಷಕಾಂಶಗಳ ಕೊರತೆ ನಿವಾರಣೆ ಮಾಡಲು ಸಹಕಾರಿ ಆಗಿದೆ. ಜೊತೆಗೆ ರೋಗ ನಿರೋಧಕ ಶಕ್ತಿ ಪೂರೈಸುವ ಮೂಲಕ ಶಕ್ತಿ ಮತ್ತು ಆರೋಗ್ಯ ನೀಡುತ್ತವೆ. ಹಾಗಾದ್ರೆ ನಾವು ಈ ಸೂಪರ್ ಫುಡ್ಗಳ ಬಗ್ಗೆ ತಿಳಿಯೋಣ.
ಕಿವಿ ಹಣ್ಣು
ಕಿವ ಹಣ್ಣು ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ ಪೋಷಕಾಂಶ ಹೊಂದಿದೆ. ಈ ಎಲ್ಲಾ ಪೋಷಕಾಂಶಗಳು ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಕಿವಿ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕ ಸ್ವತಂತ್ರ ರಾಡಿಕಲ್ಗಳಿಂದ ರಕ್ಷಣೆ ನೀಡುತ್ತವೆ. ಇದು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುತ್ತದೆ.
ಪೇರಲ ಹಣ್ಣು
ಪೇರಲ ಹಣ್ಣು ರುಚಿಕರ ಪೋಷಕಾಂಶಗಳಿಂದ ಕೂಡಿದೆ. ಪೇರಲ ಹಣ್ಣು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲ. ರೋಗ ನಿರೋಧಕ ಆರೋಗ್ಯ ಕಾಪಾಡುತ್ತದೆ. ಹಾಗೂ ಶೀತ ಮತ್ತು ಕೆಮ್ಮನ್ನು ಉಂಟು ಮಾಡುವ ಬ್ಯಾಕ್ಟೀರಿಯಾದಿಂದ ರಕ್ಷಣೆ ನೀಡುತ್ತದೆ.
ಇದು ದೇಹದ ಮೇಲೆ ಸ್ವತಂತ್ರ ರಾಡಿಕಲ್ಗಳ ಪರಿಣಾಮ ಕಡಿಮೆ ಮಾಡುತ್ತದೆ. ಜೀವಕೋಶ ಹಾನಿ ತಡೆಯುತ್ತದೆ. ಇದರಲ್ಲಿರುವ ಫೈಬರ್ ಹೃದಯದ ಆರೋಗ್ಯ ಮತ್ತು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ.
ದಾಳಿಂಬೆ ಹಣ್ಣು
ದಾಳಿಂಬೆ ಹಣ್ಣು ಉರಿಯೂತದ ಸಂಯುಕ್ತ ಮತ್ತು ವಿಟಮಿನ್ ಸಿ ಪ್ರತಿಕಾಯ ಉತ್ಪಾದನೆ ಹೆಚ್ಚಿಸುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುತ್ತದೆ. ಬಲವಾದ ಪ್ರತಿರಕ್ಷಣಾ ವ್ಯವಸ್ಥೆ ದೇಹವು ಸೋಂಕು, ರೋಗಗಳಿಂದ ದೂರವಿಡುತ್ತದೆ. ದಾಳಿಂಬೆ ಸೇವನೆ ಹಾಗೂ ರಸ ತುಂಬಾ ಪ್ರಯೋಜನಕಾರಿ.
ಶುಂಠಿ
ಚಳಿಗಾಲದಲ್ಲಿ ಬಳಸುವ ಪ್ರಮುಖ ಪದಾರ್ಥಗಳಲ್ಲಿ ಶುಂಠಿ ಒಂದಾಗಿದೆ. ಪರಿಣಾಮವು ಬಿಸಿ. ಶೀತ ಮತ್ತು ಕೆಮ್ಮು ಸೋಂಕಿನ ಹರಡುವಿಕೆ ತಡೆಯುತ್ತದೆ. ಶುಂಠಿ ಉರಿಯೂತ ಗುಣಲಕ್ಷಣ ಹೊಂದಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇತರ ಪ್ರಮುಖ ಪೋಷಕಾಂಶ ಹೊಂದಿದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಚರ್ಮ ಫಳ ಫಳ ಹೊಳೆಯಲು ಈ ಗಿಡಮೂಲಿಕೆ ಬಳಸಿ
ಸ್ಟ್ರಾಬೆರಿ ಹಣ್ಣು
ಸ್ಟ್ರಾಬೆರಿ ಚಳಿಗಾಲದ ಹಣ್ಣು ಆಗಿದೆ. ಸ್ಟ್ರಾಬೆರಿ ಉತ್ಕರ್ಷಣ ನಿರೋಧಕ ಅಂಶ ಹೊಂದಿದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಚರ್ಮಕ್ಕೆ ಉತ್ತಮ ಪೋಷಣೆ ನೀಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ