ದೇಹದಲ್ಲಿ (Body) ಹಲವು ಅಂಗಗಳು (Parts) ಹಲವು ರೀತಿಯ ಕೆಲಸ (Work) ಮಾಡುತ್ತವೆ. ಪ್ರತಿಯೊಂದು ಅಂಗಗಳು ಸರಿಯಾಗಿ ಕೆಲಸ ಮಾಡಿದರೆ ಮಾತ್ರ ಆರೋಗ್ಯ (Health) ಚೆನ್ನಾಗಿರಲು ಸಾಧ್ಯ. ಆರೋಗ್ಯವನ್ನು ಸುಧಾರಿಸಲು ಮತ್ತು ಆರೋಗ್ಯ ಸಮಸ್ಯೆಯಿಂದ (Problem) ದೂರವಿರಲು ಅನೇಕ ಜನರು (People) ಅನೇಕ ರೀತಿಯ ಪ್ರಯತ್ನ ಮಾಡುತ್ತಾರೆ. ಕೆಲವರು ಆಹಾರ ಕ್ರಮ ಪಾಲಿಸಿದರೆ, ಕೆಲವರು ಯೋಗ, ವ್ಯಾಯಾಮ ಮಾಡುತ್ತಾರೆ. ಇದೆಲ್ಲದರ ಹೊರತಾಗಿಯೂ ಕೆಲವೊಮ್ಮೆ ಆರೋಗ್ಯ ಕೈಕೊಡುತ್ತದೆ. ಕೆಲವು ಕಾಯಿಲೆ ಅಥವಾ ಆರೋಗ್ಯ ಸಮಸ್ಯೆ ಹೇಗೆ ಬರುತ್ತವೆ ಎಂಬುದೇ ಗೊತ್ತಾಗಲ್ಲ. ಅದರಲ್ಲಿ ಒಂದು ಯೂರಿಕ್ ಆ್ಯಸಿಡ್ ಸಮಸ್ಯೆ ಆಗಿದೆ.
ದೇಹದಲ್ಲಿ ಯೂರಿಕ್ ಆ್ಯಸಿಡ್ ಸಮಸ್ಯೆ ಹೇಗೆ ಉಂಟಾಗುತ್ತದೆ?
ಮೂತ್ರಪಿಂಡಗಳು ಯೂರಿಕ್ ಆಮ್ಲ ಹೊರಗೆ ಹಾಕಲು ಸಾಧ್ಯ ಆಗದೇ ಹೋದಾಗ ಅದು ಗೌಟ್ ಎಂಬ ಕಾಯಿಲೆ ಉಂಟು ಮಾಡುತ್ತದೆ. ಸಾಮಾನ್ಯವಾಗಿ ಯೂರಿಕ್ ಆಮ್ಲ ಮೂತ್ರದ ಮೂಲಕ ದೇಹದಿಂದ ಹೊರಕ್ಕೆ ಹೋಗುತ್ತದೆ. ಆದರೆ ಅದು ದೇಹದಿಂದ ಹೊರಗೆ ಹೋಗಲು ಸಾಧ್ಯವಾಗದೇ ಹೋದಾಗ ಆರೋಗ್ಯ ಸಮಸ್ಯೆ ಹುಟ್ಟು ಹಾಕುತ್ತದೆ.
ದೇಹದಲ್ಲಿ ಯೂರಿಕ್ ಆ್ಯಸಿಡ್ ಹೇಗೆ ರೂಪುಗೊಳ್ಳುತ್ತದೆ?
ನಮ್ಮ ದೇಹದಲ್ಲಿ ಆಹಾರವನ್ನು ಫ್ಯೂರಿನ್ ಚಯಾಪಚಯಗೊಳಿಸುತ್ತದೆ. ಆಗ ಸಾಮಾನ್ಯ ಎಂಬಂತೆ ಯೂರಿಕ್ ಆಮ್ಲ ರೂಪುಗೊಳ್ಳುತ್ತದೆ. ಪ್ರತಿಯೊಬ್ಬರ ದೇಹದಲ್ಲಿ ಫ್ಯೂರಿನ್ ಎಂಬುದು ನೈಸರ್ಗಿಕವಾಗಿ ಕಂಡು ಬರುವ ವಸ್ತು ಆಗಿದೆ. ಫ್ಯೂರಿನ ಅಂಶವು ಅನೇಕ ರೀತಿಯ ಆಹಾರ ಪದಾರ್ಥಗಳಲ್ಲಿ ಇರುತ್ತದೆ.
ಹಾಗಾದ್ರೆ ನಾವು ಇಲ್ಲಿ ಇಂದು ದೇಹದಲ್ಲಿ ಹೆಚ್ಚಾಗುವ ಮೂಲಕ ಅನೇಕ ಸಮಸ್ಯೆ ತಂದೊಡ್ಡುವ ಯೂರಿಕ್ ಆಮ್ಲವನ್ನು ಕಡಿಮೆ ಮಾಡುವುದು ಹೇಗೆ? ಹಾಗೂ ಹೆಚ್ಚಿನ ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಯಾವೆಲ್ಲಾ ನೈಸರ್ಗಿಕ ಮಾರ್ಗಗಳು ಇವೆ ಎಂಬುದನ್ನು ತಿಳಿಯೋಣ.
ದೇಹದಲ್ಲಿ ಹೆಚ್ಚಾಗುವ ಯೂರಿಕ್ ಆಮ್ಲ ಸಮಸ್ಯೆ ಕಡಿಮೆ ಮಾಡಲು ಚಳಿಗಾಲದಲ್ಲಿ ಯಾವ ಪದಾರ್ಥ ಸೇವನೆ ಮಾಡಬಾರದು?
ಸಕ್ಕರೆ ಪಾನೀಯ ಸೇವನೆಯಿಂದ ದೂರವಿರಿ
ಚಳಿಗಾಲದಲ್ಲಿ ಅನೇಕ ಬಿಸಿ ಪದಾರ್ಥಗಳಲ್ಲಿ ಸಕ್ಕರೆ ಬಳಕೆ ಮಾಡಲಾಗುತ್ತದೆ. ಹಾಗೂ ಕೆಲವರು ಸಕ್ಕರೆ ಪಾನೀಯ ಸೇವಿಸುತ್ತಾರೆ. ಹೀಗಾಗಿ ಎಲ್ಲಾ ರೀತಿಯ ಸಕ್ಕರೆ ಪಾನೀಯಗಳು ಯೂರಿಕ್ ಆ್ಯಸಿಡ್ ಸಮಸ್ಯೆ ಉಂಟು ಮಾಡುತ್ತವೆ.
ಹಾಗಾಗಿ ಅದರಿಂದ ದೂರವಿರಿ. ಹೆಚ್ಚಿನ ಹಣ್ಣುಗಳು ಗಮನಾರ್ಹ ಪ್ರಮಾಣದ ಫ್ರಕ್ಟೋಸ್ ಹೊಂದಿವೆ. ಅವುಗಳನ್ನು ಮಿತವಾಗಿ ಸೇವಿಸುವುದರಿಂದ ಅಗತ್ಯವಾದ ಪೌಷ್ಟಿಕಾಂಶ ಪ್ರಯೋಜನ ಪಡೆಯಬಹುದು. ಮತ್ತು ಒಟ್ಟಾರೆ ಫ್ರಕ್ಟೋಸ್ ಸೇವನೆ ಸೀಮಿತಗೊಳಿಸಿ.
ಮದ್ಯ ಸೇವನೆಯಿಂದ ದೂರವಿರಿ
ಆಲ್ಕೋಹಾಲ್ ಫ್ಯೂರಿನ್ ನ ಉತ್ತಮ ಮೂಲ. ಹಾಗಾಗಿ ನೀವು ನಿಯಮಿತವಾಗಿ ಮದ್ಯ ಸೇವನೆ ಮಾಡಿದರೆ ದೇಹದಲ್ಲಿ ಯೂರಿಕ್ ಆಮ್ಲವು ಹೆಚ್ಚಾಗುತ್ತದೆ. ಜೊತೆಗೆ ಅದು ರೋಗ ಲಕ್ಷಣ ಉಂಟು ಮಾಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ಮದ್ಯಪಾನ ತಪ್ಪಿಸಿ ಇಲ್ಲವೇ ಕಡಿಮೆ ಮಾಡಿ.
ಕೆಲವು ಮಾಂಸ ಮತ್ತು ಸಮುದ್ರಾಹಾರ ಸೇವನೆ ಕಡಿಮೆ ಮಾಡಿ
ಹೆಚ್ಚಿನ ಜನರು ಕೆಂಪು ಮಾಂಸ, ಆರ್ಗನ್ ಮಾಂಸ, ಸಾರ್ಡೀನ್, ಆಂಚೊವಿ, ಮ್ಯಾಕೆರೆಲ್ ಸೇರಿದಂತೆ ಅನೇಕ ರೀತಿಯ ಸಮುದ್ರಾಹಾರ ಸೇವಿಸುತ್ತಾರೆ. ಇವುಗಳಲ್ಲಿ ಪ್ಯೂರಿನ್ ಹೆಚ್ಚಿರುತ್ತದೆ. ಹಾಗಾಗಿ ಅವುಗಳ ಸೇವನೆ ಕಡಿಮೆ ಮಾಡಿ.
ಇದನ್ನೂ ಓದಿ: ಚಳಿಗಾಲದಲ್ಲಿ ಬರುವ ಶೀತ, ಗಂಟಲು ನೋವು ನಿವಾರಣೆಗೆ ಇಲ್ಲಿದೆ ಸೂಪರ್ ಮನೆಮದ್ದು!
ಯಾವ ಪದಾರ್ಥಗಳು ಗೌಟ್ ಸಮಸ್ಯೆ ಉತ್ತೇಜಿಸುತ್ತವೆ?
ಶತಾವರಿ, ಪಾಲಕ್, ಹೂಕೋಸು, ಅಣಬೆ, ಹಸಿರು ಬಟಾಣಿ ತರಕಾರಿಗಳು ಮಾಂಸದಷ್ಟು ಹೆಚ್ಚಿನ ಪ್ಯೂರಿನ್ ಅಂಶ ಹೊಂದಿಲ್ಲ. ಆದರೂ ಸಹ ಅವುಗಳು ಗೌಟ್ ಸಮಸ್ಯೆ ಹೆಚ್ಚಲು ಕಾರಣವಾಗುವಷ್ಟು ಪ್ಯೂರಿನ್ ಹೊಂದಿವೆ. ಹಾಗಾಗಿ ಇವುಗಳ ಸೇವನೆ ಮಿತಿಗೊಳಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ