• Home
  • »
  • News
  • »
  • lifestyle
  • »
  • Skin Care: ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಈ ಫೇಸ್ ಪ್ಯಾಕ್ ಹಾಕಿ ಸಾಫ್ಟ್ ಸ್ಕಿನ್ ಪಡೆಯಿರಿ!

Skin Care: ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಈ ಫೇಸ್ ಪ್ಯಾಕ್ ಹಾಕಿ ಸಾಫ್ಟ್ ಸ್ಕಿನ್ ಪಡೆಯಿರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚರ್ಮದ ಆರೈಕೆಗೆ ನೀವು ಹಾಲಿನ ಪುಡಿ ಬಳಸಬಹುದು. ಪ್ರತಿಯೊಬ್ಬರ ಮನೆಯಲ್ಲಿ ಸುಲಭವಾಗಿ ಹಾಲಿನ ಪುಡಿ ಸಿಗುತ್ತೆ. ಇದು ಹಾಲಿನ ಪೋಷಕಾಂಶಗಳ ಜೊತೆಗೆ ಚರ್ಮದ ಆರೈಕೆ ಮಾಡುತ್ತದೆ. ಇದು ನಿಮ್ಮ ಸೌಂದರ್ಯವನ್ನು ದ್ವಿಗುಣಗೊಳಿಸುತ್ತದೆ. ಅನೇಕ ಚರ್ಮದ ಸಮಸ್ಯೆ ನಿವಾರಿಸುತ್ತದೆ.

  • Share this:

    ಚಳಿಗಾಲದಲ್ಲಿ (Winter) ಬಹುತೇಕ ಜನರು (People) ಚರ್ಮದ ಸಮಸ್ಯೆ (Skin Problem) ಅನುಭವಿಸುತ್ತಾರೆ. ಅನೇಕರಿಗೆ ಚರ್ಮದ ಆರೈಕೆ (Care) ಜೀವನಶೈಲಿಯ (Lifestyle) ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ತ್ವಚೆಯನ್ನು ಆರೋಗ್ಯವಾಗಿಡಲು ಹಚ್ಚುವ ದುಬಾರಿ ಕ್ರೀಮ್‌ಗಳು, ಸ್ಕಿನ್ ಸಪ್ಲಿಮೆಂಟ್‌ಗಳು ಮತ್ತು ಸಲೂನ್ ಟ್ರೀಟ್‌ಮೆಂಟ್‌ಗಳು ಯಾವುದೇ ಫಲಿತಾಂಶ ನೀಡುವುದಿಲ್ಲ. ಅದಕ್ಕಾಗಿ ತ್ವಚೆಯ ಆರೈಕಗೆ ಅಷ್ಟೊಂದಯ ಸಮಯ ಮತ್ತು ಹಣ ವ್ಯಯಿಸುವ ಬದಲು ಸರಳವಾಗಿ ಕೆಲವು ಮನೆ ಮದ್ದುಗಳನ್ನು ಮಾಡಿ ನೋಡಿ. ಇದು ಚರ್ಮದ ಆರೈಕೆಗೆ ಸಹಾಯ ಮಾಡುತ್ತದೆ. ಚರ್ಮದ ಆರೋಗ್ಯ ಕಾಪಾಡಲು ಮನೆಮದ್ದು ಟ್ರೈ ಮಾಡುವುದು ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಮುಖಕ್ಕೆ ಹಾಲಿನ ಕೆನೆ, ಮೊಸರು ಬಳಸುವುದು ಹೆಚ್ಚು ಉತ್ತಮ.


    ತ್ವಚೆಯ ಆರೋಗ್ಯಕ್ಕೆ ಹಾಲಿನ ಪುಡಿ


    ಚರ್ಮದ ಆರೈಕೆಗೆ ನೀವು ಹಾಲಿನ ಪುಡಿ ಬಳಸಬಹುದು. ಪ್ರತಿಯೊಬ್ಬರ ಮನೆಯಲ್ಲಿ ಸುಲಭವಾಗಿ ಹಾಲಿನ ಪುಡಿ ಸಿಗುತ್ತೆ. ಇದು ಹಾಲಿನ ಪೋಷಕಾಂಶಗಳ ಜೊತೆಗೆ ಚರ್ಮದ ಆರೈಕೆ ಮಾಡುತ್ತದೆ. ಇದು ನಿಮ್ಮ ಸೌಂದರ್ಯವನ್ನು ದ್ವಿಗುಣಗೊಳಿಸುತ್ತದೆ.


    ಹಾಲಿನ ಪುಡಿ ಜೊತೆಗೆ ಕೆಲವು ನೈಸರ್ಗಿಕ ಪದಾರ್ಥಗಳನ್ನು ಸಂಯೋಜಿಸಿದಾಗ ಹಾಲಿನ ಪುಡಿ ಅದ್ಭುತ ಫಲಿತಾಂಶ ನೀಡುತ್ತದೆ. ಅನೇಕ ಚರ್ಮದ ಸಮಸ್ಯೆ ನಿವಾರಿಸುತ್ತದೆ. ಹಾಗಾದ್ರೆ ಹಾಲಿನ ಪುಡಿಯನ್ನು ತ್ವಚೆಯ ಆರೈಕೆಗೆ ಹೇಗೆ ಬಳಸಬೇಕು?


    ಇದನ್ನೂ ಓದಿ: ವಿಭಿನ್ನ ರುಚಿ ಹಾಗೂ ಆರೋಗ್ಯಕರ ಸೀತಾಫಲ ಹಣ್ಣು ಯಾವೆಲ್ಲಾ ಆರೋಗ್ಯ ಪ್ರಯೋಜನ ನೀಡುತ್ತದೆ?


    ಹಾಲಿನ ಪುಡಿ ಚರ್ಮಕ್ಕೆ ಹೇಗೆ ಪ್ರಯೋಜನಕಾರಿ?


    ತಜ್ಞ ದಿಲೀಪ್ ಕುಂಡಾಲಿಯಾ ಪ್ರಕಾರ, ಹಾಲಿನ ಪುಡಿಯು ಲ್ಯಾಕ್ಟಿಕ್ ಆಮ್ಲ ಹೊಂದಿದೆ. ಇದು ನೈಸರ್ಗಿಕವಾಗಿ ಚರ್ಮವನ್ನು ಸ್ಪಷ್ಟ ಮತ್ತು ಹೊಳೆಯುವಂತೆ ಮಾಡುತ್ತದೆ. ಚರ್ಮವನ್ನು ಹಗುರಗೊಳಿಸುತ್ತದೆ. ಚರ್ಮವನ್ನು ಶುದ್ಧೀಕರಿಸುತ್ತದೆ. ಬ್ಲ್ಯಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ನಂತಹ ಚರ್ಮದ ಕಲ್ಮಶ ತೆಗೆಯುತ್ತದೆ.


    ಚರ್ಮದ ಆರೈಕೆಗೆ ಓಟ್ ಮೀಲ್ ಮತ್ತು ಹಾಲಿನ ಪುಡಿ


    ಓಟ್ ಮೀಲ್ ಸತ್ತ ಚರ್ಮ ತೆಗೆದು ಹಾಕುತ್ತದೆ. ಹಾಲಿನ ಪುಡಿ ನಿಮ್ಮ ಚರ್ಮವನ್ನು ತೇವಗೊಳಿಸುತ್ತದೆ. ಜೊತೆಗೆ ಹೈಡ್ರೇಟ್ ಮಾಡಿ, ಕಾಂತಿಯುತಗೊಳಿಸುತ್ತದೆ.


    ಕಿತ್ತಳೆ ರಸ ಎರಡು ಟೀಸ್ಪೂನ್, ಓಟ್ಮೀಲ್ ಪೌಡರ್ ಒಂದು ಟೀಸ್ಪೂನ್, ಹಾಲಿನ ಪುಡಿ ಒಂದು ಟೀಸ್ಪೂನ್ ತೆಗದುಕೊಳ್ಳಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ನಯವಾದ ಪೇಸ್ಟ್ ತಯಾರಿಸಿ. ಇದನ್ನು ಮುಖದ ಮೇಲೆ ಹಚ್ಚಿರಿ. 15 ನಿಮಿಷದ ನಂತರ ಮೃದುವಾಗಿ ಮಸಾಜ್ ಮಾಡಿ ಸರಳ ನೀರಿನಿಂದ ತೊಳೆಯಿರಿ.


    ಮೊಡವೆ ಹೋಗಲಾಡಿಸಲು ಹಾಲಿನ ಪುಡಿ ಮತ್ತು ನಿಂಬೆ


    ನಿಂಬೆ ಹಣ್ಣು, ಕಲೆ ಮತ್ತು ಕಪ್ಪು ಕಲೆ ಕಡಿಮೆ ಮಾಡುತ್ತದೆ. ಹಾಲಿನ ಪುಡಿ ಚರ್ಮವನ್ನು ಹಗುರಗೊಳಿಸುತ್ತದೆ. ಮೊಡವೆಗಳಿಗೆ ಚಿಕಿತ್ಸೆ ನೀಡುತ್ತದೆ. ಚರ್ಮವನ್ನು ಮೃದುಗೊಳಿಸುತ್ತದೆ.


    ಹಾಲಿನ ಪುಡಿ ಎರಡು ಟೀಸ್ಪೂನ್, ಮೊಸರು ಎರಡು ಟೀಸ್ಪೂನ್, ನಿಂಬೆ ರಸ ಅರ್ಧ ಟೀಸ್ಪೂನ್ ತೆಗೆದುಕೊಂಡು ಬಟ್ಟಲಿನಲ್ಲಿ ಎಲ್ಲಾ ಪದಾರ್ಥ ಬೆರೆಸಿ ದಪ್ಪ ಪೇಸ್ಟ್ ಮಾಡಿ ಮುಖ ಮತ್ತು ಕುತ್ತಿಗೆಗೆ ಹಚ್ಚಿರಿ. 20 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.


    ಎಣ್ಣೆಯುಕ್ತ ಚರ್ಮ ನಿವಾರಣೆಗೆ ಹಾಲಿನ ಪುಡಿ ಮತ್ತು ಮುಲ್ತಾನಿ ಮಿಟ್ಟಿ


    ಮುಲ್ತಾನಿ ಮಿಟ್ಟಿ ಮತ್ತು ಹಾಲಿನ ಪುಡಿ ನಿಮ್ಮ ತ್ವಚೆಯಿಂದ ಹೆಚ್ಚುವರಿ ಎಣ್ಣೆ ತೆಗೆದು ಹಾಕುತ್ತದೆ. ಮುಲ್ತಾನಿ ಮಿಟ್ಟಿ ಒಂದು ಟೀಸ್ಪೂನ್, ಹಾಲಿನ ಪುಡಿ ಒಂದು ಟೀಸ್ಪೂನ್ ತೆಗೆದುಕೊಂಡು ಬೆರೆಸಿ ಪೇಸ್ಟ್ ತಯಾರಿಸಿ. ನಯವಾದ ಪೇಸ್ಟ್ ಮಾಡಲು ರೋಸ್ ವಾಟರ್ ಸೇರಿಸಿ. ಮುಖದ ಮೇಲೆ ಹಚ್ಚಿರಿ. ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.


    ಇದನ್ನೂ ಓದಿ: ಮೂಳೆಗಳ ಸಮಸ್ಯೆ ಹಾಗೂ ಶೀತ ತಡೆಯಲು ಈ ಪದಾರ್ಥಗಳ ಸೇವನೆ ಪ್ರಯೋಜನಕಾರಿ!


    ಸುಕ್ಕು ತೆಗೆದು ಹಾಕಲು ಜೇನುತುಪ್ಪ ಮತ್ತು ಹಾಲಿನ ಪುಡಿ


    ಜೇನುತುಪ್ಪ ಮತ್ತು ಹಾಲಿನ ಪುಡಿ ವಯಸ್ಸಾದ ವಿರೋಧಿ ಪ್ರಕ್ರಿಯೆಗೆ ಸಹಕಾರಿ. ಸುಕ್ಕುಗಳನ್ನು ತಡೆಯುತ್ತದೆ. ಅರಿಶಿನ ಒಂದು ಟೀ ಸ್ಪೂನ್, ಹಾಲಿನ ಪುಡಿ 2 ಟೀಸ್ಪೂನ್, ಜೇನುತುಪ್ಪ ಒಂದು ಟೀಸ್ಪೂನ್ ತೆಗೆದುಕೊಂಡು ಪೇಸ್ಟ್ ಮಾಡಿ ಅನ್ವಯಿಸಿ. ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ.

    Published by:renukadariyannavar
    First published: