• Home
  • »
  • News
  • »
  • lifestyle
  • »
  • Skin Health: ಚಳಿಗಾಲದಲ್ಲಿ ಕಾಡುವ ಒಣ ತ್ವಚೆ ಸಮಸ್ಯೆ ತೊಡೆದು ಹಾಕಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

Skin Health: ಚಳಿಗಾಲದಲ್ಲಿ ಕಾಡುವ ಒಣ ತ್ವಚೆ ಸಮಸ್ಯೆ ತೊಡೆದು ಹಾಕಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಳಿಗಾಲದಲ್ಲಿ ತಂಪು ವಾತಾವರಣ. ಹೀಗಿದ್ದಾಗ ಸಾಕಷ್ಟು ನೀರು ಕುಡಿಯುವುದನ್ನು ತುಂಬಾ ಜನರು ತಪ್ಪಿಸುತ್ತಾರೆ. ಹೆಚ್ಚು ಬಾರಿ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ ಎಂದು ಎಷ್ಟೋ ಜನರು ಚಳಿಗಾಲದಲ್ಲಿ ಸಾಕಷ್ಟು ನೀರು ಕುಡಿಯುವುದಿಲ್ಲ. ಇನ್ನು ಚಳಿಗಾಲದಲ್ಲಿ ಹೆಚ್ಚು ಬಾಯಾರಿಕೆ ಆಗಲ್ಲ. ಇದು ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಮುಂದೆ ಓದಿ ...
  • Share this:

    ದೇಹದ ಆರೋಗ್ಯ (Body Health) ಮತ್ತು ಚರ್ಮದ ಆರೋಗ್ಯ (Skin Health) ಕಾಪಾಡಲು ಹೈಡ್ರೀಕರಿಸುವುದು (Hydration) ತುಂಬಾ ಮುಖ್ಯ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಸಹ ತುಂಬಾ ಜನರು (People) ಹೆಚ್ಚು ನೀರು (Water) ಕುಡಿಯುವುದಿಲ್ಲ. ದ್ರವ ಪದಾರ್ಥ ಸೇವನೆ ಮಾಡಲ್ಲ. ಇದು ಬದಲಾಗುವ ಋತುಮಾನದಲ್ಲಿ ಹಲವು ಸಮಸ್ಯೆ ತಂದೊಡ್ಡುತ್ತದೆ. ಅದರಲ್ಲೂ ಚಳಿಗಾಲದಲ್ಲಿ ತಂಪು ವಾತಾವರಣ. ಹೀಗಿದ್ದಾಗ ಸಾಕಷ್ಟು ನೀರು ಕುಡಿಯುವುದನ್ನು ತುಂಬಾ ಜನರು ತಪ್ಪಿಸುತ್ತಾರೆ. ಹೆಚ್ಚು ಬಾರಿ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ ಎಂದು ಎಷ್ಟೋ ಜನರು ಚಳಿಗಾಲದಲ್ಲಿ ಸಾಕಷ್ಟು ನೀರು ಕುಡಿಯುವುದಿಲ್ಲ. ಇನ್ನು ಚಳಿಗಾಲದಲ್ಲಿ ಹೆಚ್ಚು ಬಾಯಾರಿಕೆ ಆಗಲ್ಲ.


    ಸಾಕಷ್ಟು ನೀರು ಕುಡಿಯದಿದ್ದರೆ ಕಾಡುತ್ತದೆ ಒಣ ಚರ್ಮ ಸಮಸ್ಯೆ


    ಇದು ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆಗ ಮಾತ್ರ ನಮ್ಮ ಚರ್ಮವು ಚಳಿಗಾಲದಲ್ಲಿ ಹೆಚ್ಚು ಒಣಗುತ್ತದೆ. ಚಳಿಗಾಲದಲ್ಲಿ ಉಂಟಾಗುವ ಒಣ ಚರ್ಮ ಸಮಸ್ಯೆ ತುರಿಕೆಗೂ ಕಾರಣವಾಗುತ್ತದೆ. ಇದನ್ನು ಹೇಗೆ ಸರಿಪಡಿಸುವುದು ಎಂದು ಗೊತ್ತಾಗುವುದಿಲ್ಲ. ಆದರೆ ನೀವು ಈ ಬಗ್ಗೆ ಚಿಂತಿಸಬೇಕಾಗಿಲ್ಲ.


    ಯಾಕಂದ್ರೆ ಚರ್ಮವನ್ನು ನೈಸರ್ಗಿಕವಾಗಿ ಹೈಡ್ರೀಕರಿಸುವಲ್ಲಿ ಸಹಾಯ ಮಾಡುವ ಕೆಲವು ವಿಧಾನಗಳನ್ನು ಇಂದು ನಾವು ತಿಳಿಯೋಣ. ಇದು ನಿಮ್ಮ ಚರ್ಮಕ್ಕೆ ಸೂಕ್ತ ಹೈಡ್ರೇಟ್ ಮಾಡುತ್ತದೆ. ಚರ್ಮದ ಆರೋಗ್ಯದ ಬಗ್ಗೆಯೂ ನೋಡೋಣ.




    ಚರ್ಮವು ಸಾಕಷ್ಟು ಜಲಸಂಚಯನ ಪಡೆಯದಿದ್ದರೆ ಏನಾಗುತ್ತದೆ?


    ಚರ್ಮದ ಹೊರ ಪದರ ಸಮರ್ಪಕವಾಗಿ ತೇವವಾದ್ರೆ ವಿಷಕಾರಿ ಅಂಶಗಳು ಹೊರ ಹೋಗುತ್ತವೆ. ಮತ್ತು ಪೋಷಕಾಂಶಗಳು ಚರ್ಮದ ಕೋಶಗಳನ್ನು ತಲುಪುತ್ತವೆ. ಹಾಗೂ ಚರ್ಮವು ಚೆನ್ನಾಗಿ ಹೈಡ್ರೀಕರಿಸಿದರೆ ಕಿರಿಕಿರಿ ಕಡಿಮೆ ಆಗುತ್ತದೆ.


    ಚರ್ಮವು ಜಲಸಂಚಯನ ಹೊಂದಿರದಿದ್ದರೆ ಚಿಪ್ಪು, ಫ್ಲಾಕಿ, ಕೆಂಪು ಮತ್ತು ಊತ ಉಂಟಾಗುತ್ತದೆ. ಸೂಕ್ಷ್ಮ ರೇಖೆಗಳು ಮತ್ತು ಸುಕ್ಕು ತ್ವರಿತವಾಗಿ ಆಗುತ್ತವೆ. ನಿಮ್ಮ ಚರ್ಮದ ಜಲಸಂಚಯನ ಮಟ್ಟವನ್ನು ಕಾಪಾಡಿಕೊಳ್ಳುವುದು ಹೇಗೆ ಎಂದು ನೋಡೋಣ.


    ತೈಲ ಮಸಾಜ್


    ಮುಖದ ಮೇಲೆ ನೈಸರ್ಗಿಕ ತೈಲ ಬಳಸುವುದು ಪ್ರಯೋಜನಕಾರಿ. ಇದು ನಿಮ್ಮ ಚರ್ಮದಲ್ಲಿ ತೇವಾಂಶ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಯಾವಾಗಲೂ ರಾತ್ರಿಯಲ್ಲಿ ತೆಂಗಿನ ಎಣ್ಣೆಯನ್ನು ಚರ್ಮಕ್ಕೆ ಮಸಾಜ್ ಮಾಡಿ.


    ಕಠಿಣ ಕ್ಲೆನ್ಸರ್‌ಗಳಿಂದ ದೂರವಿರಿ


    ಕಠಿಣವಾದ ಕ್ಲೆನ್ಸರ್‌ಗಳು, ಫೇಸ್ ವಾಶ್‌ಗಳು ತ್ವಚೆಯ ನೈಸರ್ಗಿಕ ತೇವಾಂಶ ತೆಗೆದು ಹಾಕುತ್ತದೆ. ಇದರ ಪರಿಣಾಮವಾಗಿ ಚರ್ಮದ ಮೇಲಿನ ಪದರದಲ್ಲಿ ಬಿರುಕು ಉಂಟಾಗುತ್ತವೆ. ಚರ್ಮವು ಶುಷ್ಕ, ಬಿರುಕು, ಕೆಂಪು ಕಾಣಿಸಿಕೊಳ್ಳಬಹುದು. ಆಲ್ಫಾ ಹೈಡ್ರಾಕ್ಸಿ ಆಸಿಡ್ ಮತ್ತು ಸ್ಯಾಲಿಸಿಲಿಕ್ ಆಮ್ಲ ರಾಸಾಯನಿಕ ಎಕ್ಸ್‌ಫೋಲಿಯಂಟ್‌ ತಪ್ಪಿಸಬೇಕು. ಸೌಮ್ಯವಾದ ಕ್ಲೆನ್ಸರ್‌ ಬಳಸಬೇಕು.


    ಹೆಚ್ಚು ನೀರು ಕುಡಿಯುವುದು


    ಚಳಿಗಾಲದಲ್ಲಿ ಸಾಕಷ್ಟು ನೀರು ಕುಡಿಯಿರಿ. ದೈಹಿಕ ಆರೋಗ್ಯ ಮತ್ತು ತ್ವಚೆಯ ಆರೋಗ್ಯಕ್ಕೆ ಅತ್ಯಂತ ಮುಖ್ಯ. ನೀರು ರಕ್ತಪ್ರವಾಹಕ್ಕೆ ಪ್ರವೇಶಿಸಿದ ನಂತರ, ಅದು ಜೀವಕೋಶಗಳನ್ನು ಹೈಡ್ರೇಟ್ ಮಾಡುತ್ತದೆ. ನೈಸರ್ಗಿಕವಾಗಿ ಚರ್ಮವನ್ನು ಹೈಡ್ರೇಟ್ ಮಾಡಲು ಇದು ಅತ್ಯುತ್ತಮ ಮಾರ್ಗ.


    ಕೆಫೀನ್ ಮತ್ತು ಆಲ್ಕೋಹಾಲ್ ತಪ್ಪಿಸಿ, ನೈಸರ್ಗಿಕ ಪಾನೀಯ ಸೇವಿಸಿ


    ಕೆಫೀನ್ ಮತ್ತು ಆಲ್ಕೋಹಾಲ್, ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅದರ ಬದಲು ಹರ್ಬಲ್ ಟೀ, ನಿಂಬೆ ಪಾನಕ, ತೆಂಗಿನ ನೀರು ಇತ್ಯಾದಿ ಸೇವಿಸಿ.


    ಇದನ್ನೂ ಓದಿ: ಅಜೀರ್ಣ ಸಮಸ್ಯೆ, ಶೀತ ನೆಗಡಿಗೆ ರಾಮಬಾಣ ಕರ್ಪೂರ


    ನೀರಿನಲ್ಲಿ ಸಮೃದ್ಧ ಆಹಾರ ಸೇವಿಸಿ


    ದೇಹ ಮತ್ತು ಚರ್ಮದ ನೀರಿನ ಪ್ರಮಾಣವು ಆಹಾರ ಸೇವನೆ ಮೇಲೆ ಪರಿಣಾಮ ಬೀರುತ್ತದೆ. ಚರ್ಮವನ್ನು ಹೈಡ್ರೇಟ್ ಮಾಡಲು ನೀರು ಭರಿತ ಆಹಾರ ಸೇವಿಸಿ. ಸ್ಟ್ರಾಬೆರಿ ಮತ್ತು ಕಿತ್ತಳೆ, ಬಾಟಲ್ ಸೋರೆಕಾಯಿ ಮತ್ತು ಚೀನೀಕಾಯಿ ತಿನ್ನಿರಿ.

    Published by:renukadariyannavar
    First published: