• Home
  • »
  • News
  • »
  • lifestyle
  • »
  • Vitamin C Foods: ಚಳಿಗಾಲ ಆರಂಭವಾಗ್ತಾ ಇದೆ, ಈ ಪದಾರ್ಥಗಳನ್ನು ತಪ್ಪದೇ ಸೇವಿಸಿ

Vitamin C Foods: ಚಳಿಗಾಲ ಆರಂಭವಾಗ್ತಾ ಇದೆ, ಈ ಪದಾರ್ಥಗಳನ್ನು ತಪ್ಪದೇ ಸೇವಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಳಿಗಾಲದಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುವುದು ತುಂಬಾ ಮುಖ್ಯ. ಹಾಗಾದ್ರೆ ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುವುದು ಹೇಗೆ ಎಂದು ನೀವು ಕೇಳಬಹುದು. ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಆದಷ್ಟು ಆರೋಗ್ಯಕರ, ವಿಟಮಿನ್ ಸಿ ಸಮೃದ್ಧ ಪದಾರ್ಥ ಸೇರಿಸಿ. ದೇಹವನ್ನು ಚೆನ್ನಾಗಿ ಹೈಡ್ರೀಕರಿಸಿ.

ಮುಂದೆ ಓದಿ ...
  • Share this:

    ಚಳಿಗಾಲದಲ್ಲಿ (Winter) ಅನಾರೋಗ್ಯ (Unhealthy) ಮತ್ತು ಅಸ್ವಸ್ಥತೆ ಉಂಟಾಗುವ ಅಪಾಯ (Dangerous) ಹೆಚ್ಚು. ಚಳಿಯಿಂದಾಗಿ ಆರೋಗ್ಯ ಸಮತೋಲನ ತಪ್ಪುತ್ತದೆ. ದೇಹವನ್ನು (Body) ಇಂತಹ ಸಮಯದಲ್ಲಿ (Time) ಬೆಚ್ಚಗೆ ಇರಿಸುವುದು ತುಂಬಾ ಮುಖ್ಯ. ಚಳಿಗಾಲದಲ್ಲಿ ಜನರು ಸಾಕಷ್ಟು ಬೆಚ್ಚಗೆ ಇರಲು ಪ್ರಯತ್ನಿಸುತ್ತಾರೆ. ಹಾಗೆಯೇ ಈ ಸಮಯದಲ್ಲಿ ರೋಗ ನಿರೋಧಕ ಶಕ್ತಿ (Immunity System) ಹೆಚ್ಚಿಸುವ ಪದಾರ್ಥಗಳ ಸೇವನೆ ಮಾಡುವುದು ಮುಖ್ಯ. ಯಾಕಂದ್ರೆ ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ದುರ್ಬಲವಾಗುವ ಅಪಾಯ ಹೆಚ್ಚು. ಹೀಗಾಗಿ ಹೆಚ್ಚಿನ ಜನರು ಶೀತ, ಕೆಮ್ಮು, ಜ್ವರ, ನೆಗಡಿ, ಗಂಟಲು ನೋವು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾರೆ.


    ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುವುದು ಹೇಗೆ?


    ಇನ್ನು ಕಳೆದ ಕೆಲವು ದಿನಗಳಿಂದ ಕರೋನಾ ಕಾಟ ಮತ್ತೆ ಹೆಚ್ಚಿದೆ. ಹಾಗಾಗಿ ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುವುದು ತುಂಬಾ ಮುಖ್ಯ. ಹಾಗಾದ್ರೆ ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುವುದು ಹೇಗೆ ಎಂದು ನೀವು ಕೇಳಬಹುದು. ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಆದಷ್ಟು ಆರೋಗ್ಯಕರ ಪದಾರ್ಥ ಸೇರಿಸಿ.


    ದೇಹವನ್ನು ಚೆನ್ನಾಗಿ ಹೈಡ್ರೀಕರಿಸಿ. ನೀರು ಮತ್ತು ನಾರು ಸಮೃದ್ಧ ಪದಾರ್ಥಗಳ ಸೇವನೆ ಮಾಡಿ. ಹುರಿದ ಮತ್ತು ಕರಿದ ಪದಾರ್ಥಗಳ ಸೇವನೆ ತಪ್ಪಿಸಿ. ಈ ಮೂಲಕ ನೀವು ಆರೋಗ್ಯ ಕಾಪಾಡಲು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು.


    ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಯಾಕೆ ಬೇಕು? ಯಾವ ಪದಾರ್ಥಗಳು ಮೂಳೆಗಳನ್ನು ಬಲಿಷ್ಠಗೊಳಿಸುತ್ತವೆ?


    ಆರೋಗ್ಯಕರ ಆಹಾರ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಕೆಲವು ರೀತಿಯ ಹಣ್ಣುಗಳು ಮತ್ತು ತರಕಾರಿಗಳು ವಿಟಮಿನ್ ಸಿ ನಲ್ಲಿ ಸಮೃದ್ಧವಾಗಿವೆ. ಈ ವಿಟಮಿನ್ ಸಿ ಸಮೃದ್ಧ ಪದಾರ್ಥಗಳು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸಲು ಸಹಾಯ ಮಾಡುತ್ತವೆ.


    ಹಾಗಾದ್ರೆ ನಾವು ಇಲ್ಲಿ ನಿಮ್ಮ ಆಹಾರದಲ್ಲಿ ವಿಟಮಿನ್ ಸಿ ಸಮೃದ್ಧ ಯಾವ ಆಹಾರ ಸೇರಿಸುವುದು ಪ್ರಯೋಜನ ನೀಡುತ್ತದೆ ಎಂದು ತಿಳಿಯೋಣ.


    ಕಿತ್ತಳೆ


    100 ಗ್ರಾಂ ಕಿತ್ತಳೆ ಹಣ್ಣಿನಲ್ಲಿ ಸುಮಾರು 53.2 ಮಿಲಿಗ್ರಾಂ ವಿಟಮಿನ್ ಸಿ ಇದೆ. ಇದು ಜೀವಕೋಶಗಖು ಹಾನಿಯಾಗದಂತೆ ರಕ್ಷಿಸಲು ಸಹಕಾರಿ ಆಗಿದೆ. ದೇಹದಲ್ಲಿ ಕಾಲಜನ್ ನ್ನು ಹೆಚ್ಚಿಸುತ್ತದೆ. ಹಾಗೂ ಚರ್ಮವನ್ನು ಸುಧಾರಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.


    ಬ್ರೊಕೊಲಿ


    100 ಗ್ರಾಂ ಬ್ರೊಕೋಲಿಯಲ್ಲಿ 89.2 ಮಿಲಿಗ್ರಾಂ ವಿಟಮಿನ್ ಸಿ ಇದೆ. ವಿಟಮಿನ್ ಸಿ ಅರ್ಧ ಕಪ್ ಬೇಯಿಸಿದ ಕೋಸುಗಡ್ಡೆಯಲ್ಲಿ ಸಹ ಕಂಡು ಬರುತ್ತದೆ. ದೈನಂದಿನ ಅವಶ್ಯಕತೆಯ 57 ಪ್ರತಿಶತ ವಿಟಮಿನ್ ಸಿ ಇರುತ್ತದೆ. ಇದು ಫೈಬರ್, ಪ್ರೋಟೀನ್ ಮತ್ತು ಪೊಟ್ಯಾಸಿಯಮ್‌ ಸೇರಿ ಇತರೆ ಪ್ರಮುಖ ಪೋಷಕಾಂಶ ಹೊಂದಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.


    ದೊಡ್ಡ ಮೆಣಸಿನಕಾಯಿ


    ಕ್ಯಾಪ್ಸಿಕಂನ ಹಲವು ಆರೋಗ್ಯ ಪ್ರಯೋಜನ ನೀಡುತ್ತದೆ. ಇದರಲ್ಲಿ ಅತಿ ಹೆಚ್ಚು ವಿಟಮಿನ್ ಸಿ ಇದೆ. ಒಂದು ಕ್ಯಾಪ್ಸಿಕಂ ನಿಮ್ಮ ದೈನಂದಿನ ಅವಶ್ಯಕತೆಯ 169 ಪ್ರತಿಶತ ವಿಟಮಿನ್ ಸಿ ಪೂರೈಕೆ ಮಾಡುತ್ತದೆ. ವಿವಿಧ ಪೋಷಕಾಂಶ ಹೊಂದಿದೆ. ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.


    ಎಲೆಕೋಸು


    ಎಲೆಕೋಸು ವಿಟಮಿನ್ ಸಿ ಯ ಅತ್ಯುತ್ತಮ ಮೂಲಗಳಲ್ಲಿ ಒಂದು. 100 ಗ್ರಾಂ ಎಲೆಕೋಸು 120 ಮಿಲಿಗ್ರಾಂ ವಿಟಮಿನ್ ಸಿ ಹೊಂದಿದೆ. ಈ ತರಕಾರಿ ವಿಟಮಿನ್ ಎ ಮತ್ತು ಕೆ, ಮತ್ತು ಫೋಲೇಟ್ ಹೊಂದಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.


    ಸ್ಟ್ರಾಬೆರಿ


    ಸ್ಟ್ರಾಬೆರಿ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಇತರ ಉತ್ಕರ್ಷಣ ನಿರೋಧಕಗಳಿವೆ. ಇದು ಗಂಭೀರ ಆರೋಗ್ಯ ಪರಿಸ್ಥಿತಿಗಳ ಅಪಾಯ ಕಡಿಮೆ ಮಾಡುತ್ತದೆ. ಒಂದು ಕಪ್ ಸ್ಟ್ರಾಬೆರಿಯಲ್ಲಿ ಸುಮಾರು 90 ಮಿಲಿಗ್ರಾಂ ವಿಟಮಿನ್ ಸಿ ಇದೆ. ಮೆಗ್ನೀಸಿಯಮ್, ರಂಜಕ ಹೊಂದಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.


    ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಯಾವ ಗಿಡಮೂಲಿಕೆ ಸೂಕ್ತ? ಇಲ್ಲಿದೆ ಮಾಹಿತಿ


    ಟೊಮ್ಯಾಟೊ


    ಒಂದು ಮಧ್ಯಮ ಗಾತ್ರದ ಟೊಮೆಟೊ ಸುಮಾರು 28 ಪ್ರತಿಶತ ವಿಟಮಿನ್ ಸಿ ಒದಗಿಸುತ್ತದೆ. ಪೊಟ್ಯಾಸಿಯಮ್, ವಿಟಮಿನ್ ಬಿ ಮತ್ತು ಇ ಮತ್ತು ಇತರ ಪೋಷಕಾಂಶ ಹೊಂದಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

    Published by:renukadariyannavar
    First published: