• Home
  • »
  • News
  • »
  • lifestyle
  • »
  • Winter Drink: ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆ ತಡೆಯಲು ಈ ಬಿಸಿ ಪಾನೀಯ ಸೇವಿಸಿ!

Winter Drink: ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆ ತಡೆಯಲು ಈ ಬಿಸಿ ಪಾನೀಯ ಸೇವಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಳಿಗಾಲದ ಶೀತದಿಂದ ದೇಹದ ರಕ್ಷಣೆಗೆ ಜನರು ಕೆಲವು ಡ್ರಿಂಕ್ ಸೇವಿಸುತ್ತಾರೆ. ಬೆಚ್ಚಗಿನ ಬಟ್ಟೆ ಧರಿಸುತ್ತಾರೆ. ಬಿಸಿ ಆಹಾರ ಸೇವಿಸುತ್ತಾರೆ. ಫ್ಯಾಟ್ ಟು ಸ್ಲಿಮ್‌ನ ನಿರ್ದೇಶಕಿ ಶಿಖಾ ಅಗರ್ವಾಲ್ ಶರ್ಮಾ ಅವರು, ಚಳಿಗಾಲದ ಶೀತದಿಂದ ರಕ್ಷಣೆ ಪಡೆಯಲು ಕೆಲವು ಬಿಸಿ ಪಾನೀಯಗಳ ಬಗ್ಗೆ ಹೇಳಿದ್ದಾರೆ.

ಮುಂದೆ ಓದಿ ...
  • Share this:

    ಹೆಚ್ಚಿನ ಜನರು (People) ಚಳಿಗಾಲದಲ್ಲಿ (Winter) ಸಾಕಷ್ಟು ಪದಾರ್ಥ (Ingredients) ತಿನ್ನುತ್ತಾರೆ. ಬಿಸಿಯಾಗಿರುವ ಪದಾರ್ಥ ಸೇವಿಸಲು ಹೆಚ್ಚು ಇಷ್ಟ ಪಡ್ತಾರೆ. ಜನರು ಚಳಿಗಾಲದ ಮಜ ಅನುಭವಿಸಲು ಟ್ರಿಪ್ ಮಾಡ್ತಾರೆ. ಬೇರೆ ಬೇರೆ ಪ್ರದೇಶದ ಸ್ಥಳಗಳ ವೀಕ್ಷಣೆ ಜೊತೆಗೆ ಅಲ್ಲಿನ ಪಾನೀಯ (Drink) ಹಾಗೂ ವಿಶೇಷ ಆಹಾರ (Food) ಪದಾರ್ಥ ಸೇವಿಸಿ ಖುಷಿ ಪಡ್ತಾರೆ. ಚಳಿಗಾಲದಲ್ಲಿ ಬಿಸಿ ಪಾನೀಯ ಮಾಡಿ ಕುಡಿಯಲು ಹೆಚ್ಚಿನ ಜನರು ಇಷ್ಟ ಪಡ್ತಾರೆ. ಟೀ, ಕಾಫಿ ಜೊತೆಗೆ ಬಾದಾಮಿ ಹಾಲು ಸೇರಿದಂತೆ ಹಲವು ಪದಾರ್ಥಗಳನ್ನು ಸೇವನೆ ಮಾಡ್ತಾರೆ. ಅದಾಗ್ಯೂ ಚಳಿಗಾಲದಲ್ಲಿ ಬರುವ ಅನಾರೋಗ್ಯ ಸಮಸ್ಯೆ ತಡೆಯಲು ಕೆಲವು ಆರೋಗ್ಯಕರ ಬಿಸಿ ಪಾನೀಯ ಮಾಡಿ ಸೇವಿಸಬಹುದು.


    ಚಳಿಗಾಲದಲ್ಲಿ ಆರೋಗ್ಯ ವರ್ಧಕ ಪಾನೀಯಗಳು


    ಚಳಿಗಾಲದ ಶೀತದಿಂದ ದೇಹದ ರಕ್ಷಣೆಗೆ ಜನರು ಕೆಲವು ಡ್ರಿಂಕ್ ಸೇವಿಸುತ್ತಾರೆ. ಬೆಚ್ಚಗಿನ ಬಟ್ಟೆ ಧರಿಸುತ್ತಾರೆ. ಬಿಸಿ ಆಹಾರ  ಸೇವಿಸುತ್ತಾರೆ. ಫ್ಯಾಟ್ ಟು ಸ್ಲಿಮ್‌ನ ನಿರ್ದೇಶಕಿ ಶಿಖಾ ಅಗರ್ವಾಲ್ ಶರ್ಮಾ ಅವರು, ಚಳಿಗಾಲದ ಶೀತದಿಂದ ರಕ್ಷಣೆ ಪಡೆಯಲು ಕೆಲವು ಬಿಸಿ ಪಾನೀಯಗಳ ಬಗ್ಗೆ ಹೇಳಿದ್ದಾರೆ.


    ಇದು ತುಂಬಾ ಆರೋಗ್ಯಕರ ಮತ್ತು ರುಚಿಕರ. ಇದು ಶೀತದಿಂದ ಪರಿಹಾರ ನೀಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಕಾಲೋಚಿತ ರೋಗಗಳಿಂದ ಕಾಪಾಡುತ್ತದೆ. ಹಾಲು, ಬಿಸಿ ಚಾಕೊಲೇಟ್ ಮತ್ತು ಕಾಫಿ, ಟೇಸ್ಟಿ ಪಾನೀಯ ಸೇರಿವೆ. ಇವು ಮಕ್ಕಳಿಂದ ಹಿರಿಯರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. ಚಹಾ ಮತ್ತು ಕಾಫಿ ಬದಲಿಗೆ ಬೇರೆ ಪದಾರ್ಥ ಸೇವಿಸಬಹುದು.




    ಬಾದಾಮಿ ಹಾಲು ಸೇವಿಸಿ


    ಚಳಿಗಾಲದಲ್ಲಿ ಬಾದಾಮಿ ಹಾಲು ಸೇವನೆ ಆರೋಗ್ಯಕರ ಪದಾರ್ಥ ಆಗಿದೆ. ಹಾಲು ಮತ್ತು ಬಾದಾಮಿಯಲ್ಲಿರುವ ಅನೇಕ ರೀತಿಯ ಪೋಷಕಾಂಶಗಳು ದೇಹಕ್ಕೆ ಪ್ರಯೋಜನ ನೀಡುತ್ತದೆ. ರುಬ್ಬಿ ಪುಡಿ ಮಾಡಿದ ಬಾದಾಮಿಯನ್ನು ಹಾಲಿನಲ್ಲಿ ಬೆರೆಸಿ, ಕುದಿಸಿ ಸೇವಿಸಿ.


    ಅರಿಶಿನ ಹಾಲು ಸೇವಿಸಿ


    ಚಳಿಗಾಲದ ಅನಾರೋಗ್ಯಕ್ಕೆ ಅರಿಶಿನ ಹೊಂದಿರುವ ಹಾಲನ್ನು ಕುಡಿಯುವುದು ಸರಳ ಮನೆ ಮದ್ದು ಆಗಿದೆ. ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನ ನೀಡುತ್ತದೆ. ಈ ಪಾನೀಯವು ನಿಮ್ಮನ್ನು ಬೆಚ್ಚಗಿಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಶೀತ ಮತ್ತು ಕೆಮ್ಮು ಕಡಿಮೆ ಮಾಡುತ್ತದೆ.


    ಕಾಶ್ಮೀರಿ ಕಾಫಿ ಸೇವಿಸಿ


    ಆರೋಗ್ಯಕರ ಮತ್ತು ಟೇಸ್ಟಿ ಕಾಶ್ಮೀರಿ ಕಾಫಿ ಸೇವಿಸಿ ಇದು ಹಸಿರು-ಚಹಾ, ಕೇಸರಿ, ದಾಲ್ಚಿನ್ನಿ, ಜೇನುತುಪ್ಪ ಮತ್ತು ಏಲಕ್ಕಿ ಸೇರಿ ಅನೇಕ ಆರೋಗ್ಯಕರ ಮತ್ತು ಪ್ರಯೋಜನಕಾರಿ ವಸ್ತು ಹೊಂದಿದೆ. ಕಾಶ್ಮೀರಿ ಕಹ್ವಾ, ನೆಲದ ಬಾದಾಮಿ ಹೊಂದಿದೆ. ದೇಹವನ್ನು ಬೆಚ್ಚಗಿಡುತ್ತದೆ.


    ಬಿಸಿ ಚಾಕೊಲೇಟ್ ಸೇವನೆ


    ಹಾಟ್ ಚಾಕಲೇಟ್ ಹಲವು ಪ್ರಯೋಜನ ನೀಡುತ್ತದೆ. ದೇಹವನ್ನು ಬೆಚ್ಚಗಿಡುತ್ತದೆ. ಶಕ್ತಿಯ ಮಟ್ಟ ಹೆಚ್ಚಿಸುತ್ತದೆ. ಇದಕ್ಕೆ ದಾಲ್ಚಿನ್ನಿ ಸೇರಿಸಿದರೆ ರುಚಿ, ಆರೋಗ್ಯ ಹೆಚ್ಚುತ್ತದೆ.


    ಕಷಾಯ ಸೇವಿಸುವುದು


    ಕಷಾಯ ಸೇವನೆ ರುಚಿಯ ಜೊತೆಗೆ ದೇಹಕ್ಕೆ ಸಾಕಷ್ಟು ಪೋಷಣೆ ನೀಡುತ್ತದೆ. ರೋಗಗಳಿಂದ ದೂರವಿರಿಸುತ್ತದೆ. ಏಲಕ್ಕಿ, ದಾಲ್ಚಿನ್ನಿ, ಶುಂಠಿ, ಕರಿಮೆಣಸು ಮತ್ತು ಕೆಲವು ತುಳಸಿ ಎಲೆಗಳ ಮಿಶ್ರಣ ಫಿಲ್ಟರ್ ಮಾಡಿ ಮತ್ತು ಚಹಾದಂತೆ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.


    ಇದನ್ನೂ ಓದಿ: ಹೊಟ್ಟೆ ಉಬ್ಬುವಿಕೆ ಸಮಸ್ಯೆ ತಡೆಗೆ ಪರಿಣಾಮಕಾರಿ ಪರಿಹಾರ ಹೀಗಿದೆ!


    ಕಂಜಿ ನೀರು ಸೇವನೆ


    ಕಾಂಜಿ ಟೇಸ್ಟಿ ಮಾತ್ರವಲ್ಲದೇ ತುಂಬಾ ಆರೋಗ್ಯಕರ. ಸಿಪ್ಪೆ ಸುಲಿದ ಕ್ಯಾರೆಟ್ ಅನ್ನು ನೀರಿನಲ್ಲಿ ಹಾಕಿ ಕುದಿಸಿ. ಇದಕ್ಕೆ ಸ್ವಲ್ಪ ಸಾಸಿವೆ ಪುಡಿ ಮತ್ತು ಉಪ್ಪು ಸೇರಿಸಿ. ನಾಲ್ಕು ದಿನ ಬಿಸಿಲಿನಲ್ಲಿ ಇರಿಸಿ. ಸಾಸಿವೆ ಕಾಳು ಸೇರಿಸಿ ಸೇವಿಸಿ.

    Published by:renukadariyannavar
    First published: